ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ.23, 24ರಂದು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ

|
Google Oneindia Kannada News

ಬೆಂಗಳೂರು, ಫೆಬ್ರವರಿ 22 : ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಎರಡು ದಿನದ ವಿಶೇಷ ಶಿಬಿರಗಳನ್ನು ಆಯೋಜನೆ ಮಾಡಿದೆ. ಫೆ.23 ಮತ್ತು 24ರಂದು ರಾಜ್ಯದ 58 ಸಾವಿರ ಮತಗಟ್ಟೆಯಲ್ಲಿ ಶಿಬಿರ ನಡೆಯಲಿದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಹೆಸರು ಮತ್ತು ವಿಳಾಸ ತಿದ್ದುಪಡಿ, ವಿಳಾಸ ಬದಲಾವಣೆಗಾಗಿ ಅರ್ಜಿಗಳನ್ನು ಸಲ್ಲಿಸಲು ಶಿಬಿರ ಆಯೋಜನೆ ಮಾಡಲಾಗಿದೆ.

ಮತದಾರರ ಪಟ್ಟಿಗೆ ಹೆಸರು ನೋಂದಾವಣೆ ಹೇಗೆ ಮತದಾರರ ಪಟ್ಟಿಗೆ ಹೆಸರು ನೋಂದಾವಣೆ ಹೇಗೆ

ರಾಜ್ಯದಲ್ಲಿ 58 ಸಾವಿರ ಮತದಾನ ಕೇಂದ್ರಗಳಿದ್ದು, ಎಲ್ಲಾ ರಾಜಕೀಯ ಪಕ್ಷಗಳಿಂದ ಆಯಾ ಬೂತ್ ಮಟ್ಟದ ಏಜೆಂಟರನ್ನು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ. ಜನರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಯೋಗ ಮನವಿ ಮಾಡಿದೆ.

ನೂತನ ಚುನಾವಣಾ ಆಯುಕ್ತರಾಗಿ ಸುಶಿಲ್ ಚಂದ್ರ ಅಧಿಕಾರ ಸ್ವೀಕಾರ!ನೂತನ ಚುನಾವಣಾ ಆಯುಕ್ತರಾಗಿ ಸುಶಿಲ್ ಚಂದ್ರ ಅಧಿಕಾರ ಸ್ವೀಕಾರ!

ಮತದಾರರು ಯಾವುದೇ ದೂರುಗಳನ್ನು ಸಲ್ಲಿಸಲು ರಾಜ್ಯ ಮಟ್ಟದ ಸಹಾಯವಾಣಿಯನ್ನು ಆರಂಭಿಸಲಾಗಿದೆ. 1800-4255-1950 ಅಥವ ಆಯಾ ಜಿಲ್ಲಾ ಕೇಂದ್ರದ ಸಹಾಯವಾಣಿ ಸಂಖ್ಯೆ, ಜಿಲ್ಲೆಯ ಎಸ್‌ಟಿಡಿ ಕೋಡ್‌ ಸಂಖ್ಯೆ ಸೇರಿಸಿ 1950ಗೆ ಕರೆ ಮಾಡಬಹುದಾಗಿದೆ.

ಲೋಕಸಭೆ ಚುನಾವಣೆ: ಮಾರ್ಚ್ 5ರಂದು ಅಧಿಸೂಚನೆ, ರಾಜ್ಯದಲ್ಲಿ ಏ.11ರಂದು ಮತದಾನ?ಲೋಕಸಭೆ ಚುನಾವಣೆ: ಮಾರ್ಚ್ 5ರಂದು ಅಧಿಸೂಚನೆ, ರಾಜ್ಯದಲ್ಲಿ ಏ.11ರಂದು ಮತದಾನ?

ರಾಜ್ಯದಲ್ಲಿ 5.3 ಕೋಟಿ ಮತದಾರರು

ರಾಜ್ಯದಲ್ಲಿ 5.3 ಕೋಟಿ ಮತದಾರರು

'2019ರ ಜನವರಿ 16ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. 2.54 ಕೋಟಿ ಪುರುಷರು, 2.48 ಕೋಟಿ ಮಹಿಳೆಯರು ಸೇರಿ ರಾಜ್ಯದಲ್ಲಿ ಒಟ್ಟು 5.3 ಕೋಟಿ ಮತದಾರರು ಇದ್ದಾರೆ' ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದರು.

ಹೆಸರು ಸೇರಿಸಲು ಅವಕಾಶ

ಹೆಸರು ಸೇರಿಸಲು ಅವಕಾಶ

ಫೆ.23 ಮತ್ತು 24ರಂದು ರಾಜ್ಯದ 58 ಸಾವಿರ ಮತಗಟ್ಟೆಯಲ್ಲಿ ವಿಶೇಷ ಶಿಬಿರ ನಡೆಯಲಿದ್ದು, ಜನವರಿ 1ಕ್ಕೆ 18 ವರ್ಷ ತುಂಬಿರುವ ಯುವಕ-ಯುವತಿಯರು ಈಗಲೂ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ. ವಿಳಾಸ ಬದಲಾಗಿದ್ದಲ್ಲಿ, ಹಾಲಿ ಕ್ಷೇತ್ರಕ್ಕೆ ವರ್ಗಾಯಿಸಿಕೊಳ್ಳಲು ಅವಕಾಶವಿದ್ದು, ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಎಪಿಕ್ ಕಾರ್ಡ್ ವಿತರಣೆ

ಎಪಿಕ್ ಕಾರ್ಡ್ ವಿತರಣೆ

2018ರ ಅಕ್ಟೋಬರ್‌ನಲ್ಲಿ ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿದ್ದ ಮತದಾರರ ಪೈಕಿ 9.31 ಲಕ್ಷ ಹೊಸ ಮತದಾರರಿಗೆ ಎಪಿಕ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ. ಜನವರಿ 25ರಂದು ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಂದು 6.79 ಲಕ್ಷ ಎಪಿಕ್ ಕಾರ್ಡ್ ವಿತರಿಸಲಾಗಿದೆ. ಫೆ. 23, 24 ಮತ್ತು ಮಾರ್ಚ್ 3 ಮತ್ತು 4ರಂದು ನಡೆಯುವ ವಿಶೇಷ ಶಿಬಿರದಲ್ಲಿ ಉಳಿದ ಮತದಾರರ ಎಪಿಕ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುತ್ತದೆ.

ಸಮೀಪದ ಮತಗಟ್ಟೆಗಳಿಗೆ ಹೋಗಿ

ಸಮೀಪದ ಮತಗಟ್ಟೆಗಳಿಗೆ ಹೋಗಿ

ಫೆ.23 ಮತ್ತು 24 ಮಾತ್ರವಲ್ಲ ಮಾರ್ಚ್ 3 ಮತ್ತು 4ರಂದು ಸಹ ರಾಜ್ಯದ 58 ಸಾವಿರ ಮತಗಟ್ಟೆಯಲ್ಲಿ ಶಿಬಿರ ನಡೆಯಲಿದೆ. ಸಮೀಪದ ಮತಗಟ್ಟೆಗಳಿಗೆ ಜನರು ತೆರಳಿ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.

English summary
Election Commission has organized special enrollment drive on February 23 and 24, 2019 at 58 thousand polling both of Karnataka. People can register name for voter id.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X