• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

IRCTC ವತಿಯಿಂದ "ತೀರ್ಥಯಾತ್ರೆ" ವಿಶೇಷ ಪ್ಯಾಕೇಜ್ ಟೂರ್

By Lekhaka
|

ಮೈಸೂರು, ನವೆಂಬರ್ 3: ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐ.ಆರ್.ಸಿ.ಟಿ.ಸಿ) ವತಿಯಿಂದ ಈ ಬಾರಿ ಕರ್ನಾಟಕದ ಭಕ್ತರು ಹಾಗೂ ಪ್ರವಾಸಿಗರಿಗಾಗಿ "ತೀರ್ಥ ಯಾತ್ರೆ" ಎಂಬ 6 ರಾತ್ರಿ/7 ಹಗಲುಗಳ ವಿಶೇಷ ಪ್ರವಾಸಿ ರೈಲು ಪ್ರವಾಸವನ್ನು ಆಯೋಜಿಸಲಾಗಿದೆ.

ಈ ವಿಶೇಷ ಪ್ರವಾಸಿ ರೈಲು ನವೆಂಬರ್ 26ರಂದು ಬೆಂಗಳೂರಿನ ವೈಟ್ ಫೀಲ್ಡ್ ರೈಲು ನಿಲ್ದಾಣದಿಂದ ಹೊರಡಲಿದ್ದು, ಪುರಿ -ಕೋನಾರ್ಕ್-ಕೊಲ್ಕತ್ತಾದ ದೇವಸ್ಥಾನ ಮತ್ತು ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದಾಗಿದೆ. ಈ ಪ್ರವಾಸಕ್ಕೆ ಒಬ್ಬ ವ್ಯಕ್ತಿಗೆ 6,615 ರೂ. ಇರಲಿದೆ.

ವೈಷ್ಣೋದೇವಿ ದರ್ಶನಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ವಿಶೇಷ ಸೂಚನೆ!

ಈ ವಿಶೇಷ ರೈಲಿನಲ್ಲಿ ಸ್ಲೀಪರ್ ಕ್ಲಾಸ್ ರೈಲು ಪ್ರಯಾಣ, ರಾತ್ರಿ ಉಳಿಯಲು ಧರ್ಮಶಾಲಾ/ಹಾಲ್/ಡಾರ್ಮಿಟೋರೀಸ್ ವ್ಯವಸ್ಥೆಯನ್ನು ಬಹು ಹಂಚಿಕೆ ಆಧಾರದ ಮೇಲೆ ನೀಡಲಾಗುವುದು. ಅಲ್ಲದೆ ಬೆಳಗಿನ ಟೀ, ಕಾಫಿ, ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ, ಜೊತೆಗೆ ದಿನಕ್ಕೆ ಒಂದು ಲೀಟರ್ ಕುಡಿಯುವ ನೀರಿನ ಬಾಟಲ್ ನೀಡಲಾಗುವುದು.

ಪ್ರವಾಸಿ ವ್ಯವಸ್ಥಾಪಕರು ಮತ್ತು ಭದ್ರತೆ ಸಿಬ್ಬಂದಿ ವ್ಯವಸ್ಥೆ ಮಾಡಲಿದ್ದು, 55 ಸೀಟರ್ ಸಾಮಾನ್ಯ ಬಸ್ ಗಳಲ್ಲಿ ಸ್ಥಳೀಯ ಸ್ಥಳಗಳ ವೀಕ್ಷಣೆ ಮಾಡಬಹುದಾಗಿದೆ. ಈ ಪ್ರವಾಸಕ್ಕಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರು ಎಲ್ಟಿಸಿ ಸೌಲಭ್ಯ ಕೂಡ ಪಡೆಯಬಹುದು. ಈ ಪ್ರವಾಸಕ್ಕಾಗಿ ಬುಕ್ಕಿಂಗ್ ಪ್ರಾರಂಭವಾಗಿದ್ದು, ಐಆರ್ಸಿಟಿಸಿ ಕೌಂಟರ್ ಗಳಲ್ಲಿ ಮತ್ತು ಆನ್ ಲೈನ್ ನಲ್ಲಿ www.irctctourism.com ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು.

   ಒಬ್ಬರೇ ಬಸ್ stand ಅಲ್ಲಿ ಇದ್ರೆ ಹುಷಾರು !!! | Oneindia Kannada

   ಬುಕ್ಕಿಂಗ್ ಅಥವಾ ಹೆಚ್ಚಿನ ವಿವರಗಳಿಗಾಗಿ ಬೆಂಗಳೂರಿನ ರಾಜಾಜಿನಗರ ಪ್ರಾದೇಶಿಕ ಕಚೇರಿಯ ಮೊ.ಸಂ. 8595931291, 8595931290, ಬೆಂಗಳೂರು ರೈಲು ನಿಲ್ದಾಣ ಮೊ.ಸಂ. 8595931292, ಮೈಸೂರು ರೈಲು ನಿಲ್ದಾಣ ಮೊ.ಸಂ. 8595931294 ಹಾಗೂ ಹುಬ್ಬಳ್ಳಿ ರೈಲು ನಿಲ್ದಾಣ ಮೊ.ಸಂ. 8595931293 ಸಂಪರ್ಕಿಸುವಂತೆ ಐ.ಆರ್.ಸಿ.ಟಿ.ಸಿ. ಪ್ರಾದೇಶಿಕ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   English summary
   The Indian Railway Catering and Tourism Corporation Limited (IRCTC), which comes under the Ministry of Railways, has organized a special train tour for Karnataka pilgrims and tourists for the 6-night/7-day journey
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X