ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂ ಕಬಳಿಕೆ ವಿಚಾರಣೆಗೆ ಆ.31ರಂದು ಕೋರ್ಟ್ ಆರಂಭ

|
Google Oneindia Kannada News

ಬೆಂಗಳೂರು, ಆಗಸ್ಟ್ 30 : ಅಕ್ರಮ ಭೂ ಒತ್ತುವರಿ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ರಚನೆ ಮಾಡಿರುವ ವಿಶೇಷ ನ್ಯಾಯಾಲಯ ಆಗಸ್ಟ್ 31ರಂದು ಸ್ಥಾಪನೆಯಾಗಲಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್‍.ನಾರಾಯಣ್‍ ಅವರ ನೇತೃತ್ವದಲ್ಲಿ ಪೀಠ ಸ್ಥಾಪನೆಯಾಗಿದೆ.

ಸೋಮವಾರ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಈ ಕುರಿತು ಮಾಹಿತಿ ನೀಡಿದರು. 'ಅಕ್ರಮ ಭೂ ಒತ್ತುವರಿ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ, ಭೂಗಳ್ಳರಿಗೆ ಶಿಕ್ಷೆ ವಿಧಿಸಲು ಸ್ಥಾಪಿಸಲಾಗಿರುವ 'ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ' ಆಗಸ್ಟ್ 31ರಂದು ಉದ್ಘಾಟನೆಯಾಗಲಿದೆ' ಎಂದರು.[ಭೂಕಬಳಿಕೆ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆ]

Special court for land grab case to start on August 31, 2016

ಬೆಂಗಳೂರಿನ ಕಂದಾಯ ಭವನದ 3ನೇ ಮಹಡಿಯಲ್ಲಿ ಕೋರ್ಟ್ ಸ್ಥಾಪನೆಯಾಗಲಿದೆ. ಈ ವಿಶೇಷ ನ್ಯಾಯಾಲಯ ಬೆಂಗಳೂರನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಕಾರ್ಯನಿರ್ವಹಣೆ ಮಾಡಲಿದೆ. ಇಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ನೋಡಿಕೊಂಡು, ಅಗತ್ಯ ಬಿದ್ದರೆ ಹೆಚ್ಚುವರಿ ನ್ಯಾಯಾಲಯಗಳನ್ನು ಹಾಗೂ ವಿಭಾಗೀಯ ಪೀಠಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ.[ರಾಜಕಾಲುವೆ ಒತ್ತುವರಿ ತೆರವು ಎಂಬ ನಿಗೂಢ ರಹಸ್ಯ]

ಈ ವಿಶೇಷ ನ್ಯಾಯಾಲಯ ಕರ್ನಾಟಕ ಭೂಕಬಳಿಕೆ ತಡೆ ಕಾಯ್ದೆ 2011ರ ಸೆಕ್ಷನ್‌ 7ರ ಅಡಿ ಬರುವ ಎಲ್ಲ ಪ್ರಕರಣಗಳ ವಿಚಾರಣೆ ನಡೆಸಲಿದೆ. ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್‍.ನಾರಾಯಣ್‍ ಅವರ ನೇತೃತ್ವದಲ್ಲಿ ಪೀಠ ಸ್ಥಾಪನೆಯಾಗಲಿದ್ದು, ನಾಲ್ವರು ಸದಸ್ಯರು ಇರುತ್ತಾರೆ.[ಭೂ ಒತ್ತುವರಿ ತೆರವಿಗೆ ಕ್ರಮ]

English summary
Karnataka law department issued order for the setting up of a special court for land-grabbing cases. Court will set up on Kandaya Bhavan Bengaluru on August 31, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X