• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೈರುತ್ಯ ರೈಲ್ವೆ ವಿಭಾಗದ 278 ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ

|

ಬೆಂಗಳೂರು, ಆಗಸ್ಟ್ 25: ಸಣ್ಣ ಪುಟ್ಟ ರೈಲ್ವೆ ನಿಲ್ದಾಣಗಳನ್ನು ಹೊರತುಪಡಿಸಿ ನೈಋತ್ಯ ರಲ್ವೆ ವಲಯದ ಬಹುತೇಕ ಎಲ್ಲಾ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ ಒದಗಿಸಲಾಗಿದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ.

ಭಾರತೀಯ ರೈಲ್ವೆಯಲ್ಲಿ ಉಚಿತ ವೈಫೈ ಒದಗಿಸುವ ಯೋಜನೆಯನ್ನು ಸಾಧಿಸಿದ ಮೊದಲ ವಲಯ ಎಂಬ ಹೆಗ್ಗಳಿಕೆಗೆ ನೈಋತ್ಯ ರೈಲ್ವೆ ಪಾತ್ರವಾಗಿದೆ. ಹುಬ್ಬಳ್ಳಿ ವಿಭಾಗದಲ್ಲಿ 98, ಬೆಂಗಳೂರು ವಿಭಾಗದಲ್ಲಿ 95 ಹಾಗೂ ಮೈಸೂರು ವಿಭಾಗದ 85 ರೈಲು ನಿಲ್ದಾಣಗಳಲ್ಲಿ ಈಗ ಉಚಿತ ವೈ-ಫೈ ಸೌಲಭ್ಯ ಲಭ್ಯವಾಗುತ್ತಿದ್ದು, ಪ್ರಯಾಣಿಕರು ಇದನ್ನು ಬಳಸಿಕೊಳ್ಳಬಹುದಾಗಿದೆ.

ಉಚಿತ ವಿದ್ಯುತ್ ಆಯ್ತು ಇದೀಗ ಉಚಿತ ವೈಫೈ ಸೌಲಭ್ಯ ಘೋಷಣೆ

2016-17 ಮತ್ತು 2017-18ರ ಮೊದಲ ಹಂತದಲ್ಲಿ 153 ನಿಲ್ದಾಣಗಳಲ್ಲಿ ಹೈಸ್ಪೀಡ್‌ ವೈಫೈ ಕಲ್ಪಿಸಲಾಗಿತ್ತು. 2ನೇ ಹಂತದಲ್ಲಿ ವಲಯ ವ್ಯಾಪ್ತಿಯ ನಿಲ್ದಾಣ ಹೊರತುಪಡಿಸಿ ಇನ್ನುಳಿದ ಎಲ್ಲ 125 ನಿಲ್ದಾಣಗಳಲ್ಲಿ ವೈಫೈ ಕಲ್ಪಿಸಲು ಗುರಿ ಹೊಂದಲಾಗಿತ್ತು. ಒಟ್ಟಾರೆ, ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ವಲಯದ ಎಲ್ಲ 278 ನಿಲ್ದಾಣಗಳಲ್ಲಿ ವೈಫೈ ಸಂಪರ್ಕ ಕಲ್ಪಿಸಲಾಗುವುದು.

"ರೈಲ್ ವೈರ್ ವೈ ಫೈ ಹೆಚ್ಚೆಚ್ಚು ಜನಪ್ರಿಯಗೊಳ್ಳುತ್ತಿದೆ, ಇನ್ನಷ್ಟು ನಿಲ್ದಾಣಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು" ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.

ಬೆಂಗಳೂರು-ಮೈಸೂರು ಮಾರ್ಗದ ಎಲ್ಲಾ ರೈಲು ನಿಲ್ದಾಣಗಳಲ್ಲೂ ವೈ-ಫೈ

ಯಾವ ಯಾವ ನಿಲ್ದಾಣಗಳಲ್ಲಿ ಸೌಲಭ್ಯ

ಯಾವ ಯಾವ ನಿಲ್ದಾಣಗಳಲ್ಲಿ ಸೌಲಭ್ಯ

ಯಾವ ಯಾವ ನಿಲ್ದಾಣಗಳಲ್ಲಿ ಸೌಲಭ್ಯ: ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ಧಾರವಾಡ, ಹೊಸಪೇಟೆ, ವಾಸ್ಕೋ- ಡಾ-ಗಾಮಾ, ಲೋಂಡಾ, ಗದಗ, ಕೊಪ್ಪಳ, ಘಟಪ್ರಭಾ, ಅಳ್ನಾವರ, ತೋರಣಗಲ್ಲ, ಬಾಗಲಕೋಟೆ, ಕ್ಯಾಸಲರಾಕ್‌, ರಾಯದುರ್ಗ, ಗುಂಜಿ, ದೇಸೂರ, ಖಾನಾಪುರ, ಚಿಕ್ಕೋಡಿ ರಸ್ತೆ, ಶೇಡಬಾಳ, ಉಣಕಲ್ಲ, ಅಮರಗೋಳ, ನವಲೂರ, ಕ್ಯಾರಕೊಪ್ಪ, ಮುಗದ, ಕಂಬಾರಗಣವಿ, ಕಾಶನಟ್ಟಿ, ನಾಗರಹಳ್ಳಿ, ದೇವರಾಯಿ, ಹೊಳೆಆಲೂರು, ಬಾದಾಮಿ, ತವರಗಟ್ಟಿ, ಶಿವಥಾನ, ಕುಡಚಿ, ಪಾಚಾಪುರ, ತಿನೈಘಾಟ, ಗೋಕಾಕ ರಸ್ತೆ, ರಾಯಬಾಗ, ಸುಳಧಾಳ, ಹುಬ್ಬಳ್ಳಿ ಸೌಥ್‌ ಕ್ಯಾಬಿನ್‌, ವಿಜಯಪುರ, ಆಲಮಟ್ಟಿ, ಮುನಿರಾಬಾದ್‌, ಇಂಡಿ ರಸ್ತೆ, ಅಣ್ಣಿಗೇರಿ, ಬಳಗಾನೂರ, ಬನ್ನಿಕೊಪ್ಪ, ಬಸವನ ಬಾಗೇವಾಡಿ ರಸ್ತೆ, ಬೆನ್ನೆಹಳ್ಳಿ, ಭಾನಾಪುರ, ಮಿಂಚಿನಾಳ, ಮುಗಳೊಳ್ಳಿ, ಮುಲವಾಡ, ಚಿಂಚಿಲಿ, ದಾರೋಜಿ, ಗಡಿಗನೂರ, ಗಿಣಿಗೇರಾ, ಗುಳೇದಗುಡ್ಡ ರಸ್ತೆ, ವಿಜಯನಗರ, ವಂದಾಲ, ಹರಪನಹಳ್ಳಿ, ಹರ್ಲಾಪೂರ, ಹೆಬಸೂರ, ಹೊಂಬಳ, ಹುಲಕೋಟಿ, ಜಡ್ರಮಕುಂಟಿ, ಜುಮನಾಳ, ಕಣಗಿನಹಾಳ, ಕೊಟ್ಟೂರು, ಕುಡತಿನಿ, ಲಚ್ಯಾಣ, ಲಖಮಾಪುರ, ಮಲ್ಲಾಪುರ, ಕುಸುಗಲ್ಲ, ಸೋಮ್ಲಾಪುರಂ, ಸೋಮಾಪುರ ರಸ್ತೆ, ಸುಳೇಭಾವಿ, ತಡವಾಲ, ತೆಲಗಿ, ನಿಂಬಾಳ, ಓಬಳಾಪುರಂ, ಸಾಂಬ್ರೆ, ಕಂಸೌಲಿಂ, ಚಂದ್ರಗಾಂವ, ಕಲೇಂ, ಕುಲೇಂ, ಸಂಕವಾಲ, ಸಂವೇರ್ದಂ ಕುರಚೋರೆಂ, ಕಾರಂಜೋಳ, ದೂಧಸಾಗರ, ಸೋನಾಲಿಯಂ, ಬಳ್ಳಾರಿ ಕಂಟೋನ್ಮೆಂಟ್, ಚಿಕ್ಕಬೆನಕಾಳ, ಗಂಗಾವತಿ, ಕಲ್ಯಾಣದುರ್ಗ, ಕದ್ರಿದೇವರಪಲ್ಲಿ, ಬಿಂಕದಕಟ್ಟಿ, ನವಲಗುಂದ ರಸ್ತೆ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಲಾಗಿದೆ.

ಬೆಂಗಳೂರು ವಲಯದಲ್ಲಿ ಎಲ್ಲೆಲ್ಲಿ?

ಬೆಂಗಳೂರು ವಲಯದಲ್ಲಿ ಎಲ್ಲೆಲ್ಲಿ?

ಬೆಂಗಳೂರು ವಲಯದಲ್ಲೇ 153 ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಸಿಕ್ಕಿದೆ. ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ನಿಲ್ದಾಣ ಬೆಂಗಳೂರು, ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್, ಕೆಂಗೇರಿ, ಕೃಷ್ಣರಾಜಪುರಂ, ಯಲಹಂಕ, ಭೈಯಪ್ಪನಹಳ್ಳಿ, ವೈಟ್ ಫೀಲ್ಡ್, ಕಾರ್ಮಲ್ ರಾಮ್, ಹೀಲಳಿಗೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ರಾಜಾನುಕುಂಟೆ, ನಾಯಂಡಹಳ್ಳಿ, ಹೆಜ್ಜಾಳ, ನೆಲಮಂಗಲ.

25 ನಿಲ್ದಾಣಗಳಿಗೆ ಶೀಘ್ರದಲ್ಲೇ ವೈಫೈ ಸೌಲಭ್ಯ

25 ನಿಲ್ದಾಣಗಳಿಗೆ ಶೀಘ್ರದಲ್ಲೇ ವೈಫೈ ಸೌಲಭ್ಯ

25 ನಿಲ್ದಾಣಗಳಿಗೆ ಶೀಘ್ರದಲ್ಲೇ ವೈಫೈ ಸೌಲಭ್ಯ ಸಿಗಲಿದೆ, ಹೊಸೂರು, ಬಾಣಸವಾಡಿ, ಬೆಂಗಳೂರು ಪೂರ್ವ, ಹೆಬ್ಬಾಳ ಹಾಗೂ ಚಿಕ್ಕಬಳ್ಳಾಪುರ ರೈಲು ನಿಲ್ದಾಣಗಳಲ್ಲಿಉಚಿತ ವೈಫೈ ಸೌಲಭ್ಯ ಸಿಗಲಿದೆ.ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ವಲಯದ ಎಲ್ಲ 278 ನಿಲ್ದಾಣಗಳಲ್ಲಿ ವೈಫೈ ಸಂಪರ್ಕ ಕಲ್ಪಿಸಲಾಗುವುದು ಎಂದು ಇಲಾಖೆ ಹೇಳಿದೆ

ರೈಲ್ ವೈರ್ ಜಾಲ ಪಡೆಯುವುದು ಹೇಗೆ?

ರೈಲ್ ವೈರ್ ಜಾಲ ಪಡೆಯುವುದು ಹೇಗೆ?

ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ RailWire WiFi ನೆಟ್ವರ್ಕ್ ಆಯ್ಕೆ ಮಾಡಿಕೊಳ್ಳಿ, ಸಾಮಾನ್ಯವಾಗಿ ವ್ಯಾಪ್ತಿಗೆ ಬಂದಾಗ ಆಟೋಮೆಟಿಕ್ ಆಗಿ ಆಯ್ಕೆಯಾಗುತ್ತದೆ. ನಂತರ ನಿಮ್ಮ ಫೋನ್ ನಂಬರ್ ದಾಖಲಿಸಿದಾಗ ನಿಮ್ಮ ಫೋನ್ ಗೆ ಒಟಿಪಿ ಎಸ್ಎಂಎಸ್ ಬರಲಿದೆ. ಇದನ್ನು RailWire ಮುಖ್ಯಪುಟದಲ್ಲಿ ಒಟಿಪಿ ದಾಖಲಿಸಿದರೆ, ನಿಮಗೆ ವೇಗ ಇಂಟರ್ನೆಟ್ ದೊರಕಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
South Western Railways announced that WiFi facility provided on 153 stations and another 125 stations will soon get the facility before September.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more