ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಹೊಸ ಮಾರ್ಗದಲ್ಲಿ ರೈಲು ಓಡಿಸಲಿದೆ ನೈಋತ್ಯ ರೈಲ್ವೆ

|
Google Oneindia Kannada News

ಬೆಂಗಳೂರು, ಆಗಸ್ಟ್ 11 : ಕರ್ನಾಟಕದಿಂದ ದೇಶದ ಬೇರೆ-ಬೇರೆ ನಗರಗಳಿಗೆ ರೈಲು ಸಂಪರ್ಕ ಕಲ್ಪಿಸಲು ನೈಋತ್ಯ ರೈಲ್ವೆ ಹೊಸ ರೈಲು ಓಡಿಸಲಿದೆ. ದೂರದ ರೈಲುಗಳ ಸಂಚಾರ ಆರಂಭಿಸಲು ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Recommended Video

ಯಾರಿಗೆ ಒಲಿಯಲಿದೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಆಗುವ ಅವಕಾಶ | Oneindia Kannada

ದೂರದ ನಗರ ಮತ್ತು ರಾಜ್ಯಗಳಿಗೆ ಹೊಸ ರೈಲು ಓಡಿಸಲು ನೈಋತ್ಯ ರೈಲ್ವೆ ಪ್ರಸ್ತಾವನೆ ಸಿದ್ಧಗೊಳಿಸಿದೆ. ರೈಲ್ವೆ ಇಲಾಖೆ ಒಪ್ಪಿಗೆ ಸಿಕ್ಕಿದ ಬಳಿಕ ರೈಲುಗಳ ಸಂಚಾರ ಆರಂಭವಾಗಲಿದೆ.

ಶಿವಮೊಗ್ಗ-ರಾಣೇಬೆನ್ನೂರು ರೈಲು ಯೋಜನೆ ಅನುಷ್ಠಾನ: ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಭರವಸೆಶಿವಮೊಗ್ಗ-ರಾಣೇಬೆನ್ನೂರು ರೈಲು ಯೋಜನೆ ಅನುಷ್ಠಾನ: ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಭರವಸೆ

ಕರ್ನಾಟಕದ ವಿವಿಧ ಪ್ರದೇಶದಿಂದ ಹೊರಡುವ ರೈಲುಗಳು ಪುನಃ ಇಲ್ಲಿಗೆ ಬಂದು ತಲುಪಲಿವೆ. ಬೆಂಗಳೂರು ವಿಭಾಗದಿಂದಲೂ ಅನೇಕ ಹೊಸ ರೈಲುಗಳು ಸಂಚಾರ ನಡೆಸಲಿವೆ.

ಸೆ.30ರ ತನಕ ರೈಲು ಸಂಚಾರ ರದ್ದು; ಬೋರ್ಡ್ ಸ್ಪಷ್ಟನೆ ಸೆ.30ರ ತನಕ ರೈಲು ಸಂಚಾರ ರದ್ದು; ಬೋರ್ಡ್ ಸ್ಪಷ್ಟನೆ

South Western Railway To Run 10 Pair Of Long Distance Train

ಬೆಂಗಳೂರು ಕಂಟೈನ್ಮೆಂಟ್-ಗೌಹಾತಿ, ಯಶವಂತಪುರ-ಹೌರಾ, ಕೆಎಸ್ಆರ್ ಬೆಂಗಳೂರು-ಸೊಲ್ಲಾಪುರ, ಕೆಎಸ್‌ಆರ್-ಮಂಗಳೂರು, ಯಶವಂತಪುರ-ಕಾರವಾರ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ರೈಲ್ವೆ ಮುಂಗಡ ಟಿಕೆಟ್ ಕೌಂಟರ್ ಕೆಲಸದ ಅವಧಿ ಬದಲಾವಣೆ ರೈಲ್ವೆ ಮುಂಗಡ ಟಿಕೆಟ್ ಕೌಂಟರ್ ಕೆಲಸದ ಅವಧಿ ಬದಲಾವಣೆ

ಹುಬ್ಬಳ್ಳಿ-ಸಿಕಂದರಾಬಾದ್, ಹುಬ್ಬಳ್ಳಿ-ಮೈಸೂರು, ಹುಬ್ಬಳ್ಳಿ-ವಾರಣಾಸಿ, ಹುಬ್ಬಳ್ಳಿ-ಮುಂಬೈ, ವಾಸ್ಕೋಡಾಗಾಮ- ಹೌರಾ ಮಾರ್ಗದಲ್ಲಿಯೂ ರೈಲು ಓಡಿಸುವುದಾಗಿ ನೈಋತ್ಯ ರೈಲ್ವೆ ಹೇಳಿದೆ.

ಈ ಮಾರ್ಗಗಳ ಪೈಕಿ ಕೆಲವು ಮಾರ್ಗದಲ್ಲಿ ವಾರಕ್ಕೆ 2 ಅಥವ 3 ಬಾರಿ ರೈಲು ಸಂಚಾರ ನಡೆಸುತ್ತಿದೆ. ಅದನ್ನು ಪ್ರತಿ ದಿನಕ್ಕೆ ಪರಿವರ್ತನೆ ಮಾಡುವಂತೆ ಮನವಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲ್ವೆ ಇಲಾಖೆ ಒಪ್ಪಿಗೆ ನೀಡಿದ ಬಳಿಕ ಈ ಮಾರ್ಗಗಳಲ್ಲಿ ರೈಲುಗಳ ಸಂಚಾರ ಆರಂಭವಾಗಲಿದೆ. ಈ ಮಾರ್ಗದಲ್ಲಿ ಈಗ ರೈಲುಗಳು ಸಂಚಾರ ನಡೆಸುತ್ತಿದ್ದರೂ ಬೇರೆ ಸಮಯದಲ್ಲಿ ರೈಲುಗಳನ್ನು ಓಡಿಸಲಾಗುತ್ತದೆ.

English summary
South western railway sent a proposal to the railway board to run ten pairs of long-distance special trains. Trains will run from different districts in the Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X