ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ. 21ರಿಂದ ಕರ್ನಾಟಕದಿಂದ 3 ವಿಶೇಷ ರೈಲು ಸಂಚಾರ; ವೇಳಾಪಟ್ಟಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ನೈಋತ್ಯ ರೈಲ್ವೆ ಸೆಪ್ಟೆಂಬರ್ 21ರಿಂದ ಮೂರು ವಿಶೇಷ ರೈಲುಗಳನ್ನು ಕರ್ನಾಟಕದಿಂದ ಓಡಿಸಲಿದೆ. ದೇಶದ ವಿವಿಧ ನಗರಗಳಿಗೆ ಈ ರೈಲು ಸಂಪರ್ಕ ಕಲ್ಪಿಸಲಿದೆ.

ನೈಋತ್ಯ ರೈಲ್ವೆ ರೈಲ್ವೆ ಬೋರ್ಡ್ ಸೂಚನೆಯಂತೆ ವಿಶೇಷ ರೈಲುಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಿದೆ. ಭಾರತೀಯ ರೈಲ್ವೆ ಇಲಾಖೆ ಘೋಷಣೆ ಮಾಡಿರುವ ಕ್ಲೋನ್ ರೈಲುಗಳು ಇವಾಗಿವೆ.

ಸೆ.21 ರಿಂದ 20 ಜೋಡಿ ಕ್ಲೋನ್ ರೈಲುಗಳ ಸಂಚಾರ; ಮಾರ್ಗಗಳುಸೆ.21 ರಿಂದ 20 ಜೋಡಿ ಕ್ಲೋನ್ ರೈಲುಗಳ ಸಂಚಾರ; ಮಾರ್ಗಗಳು

ಈಗ ಸಂಚಾರ ನಡೆಸುತ್ತಿರುವ 310 ವಿಶೇಷ ರೈಲುಗಳ ಜೊತೆ ಭಾರತೀಯ ರೈಲ್ವೆ ಸೆಪ್ಟೆಂಬರ್ 21ರ ಸೋಮವಾರದಿಂದ 20 ಜೋಡಿ ಕ್ಲೋನ್ ರೈಲುಗಳನ್ನು ಓಡಿಸಲಿದೆ. ಹೆಚ್ಚು ಬೇಡಿಕೆ ಇರುವ ಮಾರ್ಗದಲ್ಲಿ ಮಾತ್ರ ಈ ರೈಲು ಸಂಚಾರ ನಡೆಸಲಿದೆ.

ಮೆಜೆಸ್ಟಿಕ್‌ನಿಂದ ಹೊರಡಲಿದೆ ಯಶವಂತಪುರ-ಕಾರವಾರ ರೈಲು ಮೆಜೆಸ್ಟಿಕ್‌ನಿಂದ ಹೊರಡಲಿದೆ ಯಶವಂತಪುರ-ಕಾರವಾರ ರೈಲು

ಈ ಕ್ಲೋನ್ ರೈಲುಗಳು ಅಧಿಸೂಚಿತ ಸಮಯದಲ್ಲಿ ಮಾತ್ರ ಸಂಚಾರ ನಡೆಸಲಿವೆ. ನಿಲುಗಡೆ ಸಹ ಸೀಮಿತವಾಗಿರುತ್ತದೆ. ವಿಶೇಷ ರೈಲು, ಶ್ರಮಿಕ್ ರೈಲುಗಳಿವೆ ಪರ್ಯಾಯವಾಗಿ ಈ ರೈಲು ಸಂಚಾರ ನಡೆಸಲಿದೆ ಎಂದು ರೈಲ್ವೆ ಪ್ರಕಟಣೆಯಲ್ಲಿ ಹೇಳಿದೆ.

ಬೆಂಗಳೂರು-ಮಂಗಳೂರು ವಿಶೇಷ ರೈಲು ವೇಳಾಪಟ್ಟಿ ಬದಲು ಬೆಂಗಳೂರು-ಮಂಗಳೂರು ವಿಶೇಷ ರೈಲು ವೇಳಾಪಟ್ಟಿ ಬದಲು

ಕೆಎಸ್‌ಆರ್ ಬೆಂಗಳೂರು-ಢಾಣಾಪುರ ರೈಲು

ಕೆಎಸ್‌ಆರ್ ಬೆಂಗಳೂರು-ಢಾಣಾಪುರ ರೈಲು

ಕೆಎಸ್ಆರ್ ಬೆಂಗಳೂರು-ಢಾಣಾಪುರ ವಿಶೇಷ ರೈಲು (06509/06510) ಸೆಪ್ಟೆಂಬರ್ 21ರಿಂದ ಸಂಚಾರ ಆರಂಭಿಸಲಿದೆ. ಸೋಮವಾರ ಬೆಳಗ್ಗೆ 8ಗಂಟೆಗೆ ಬೆಂಗಳೂರಿನಿಂದ ಹೊರಡುವ ರೈಲು ಬುಧವಾರ ಬೆಳಗ್ಗೆ 8ಗಂಟೆಗೆ ಢಾಣಾಪುರ ತಲುಪಲಿದೆ. ಢಾಣಾಪುರದಿಂದ ಸೆಪ್ಟೆಂಬರ್ 23ರ ಬುಧವಾರ ಸಂಜೆ 6.10ಕ್ಕೆ ಹೊರಡಲಿದ್ದು, ಶುಕ್ರವಾರ ಸಂಜೆ 6.20ಕ್ಕೆ ಬೆಂಗಳೂರಿಗೆ ಬರಲಿದೆ.

ಯಶವಂತಪುರ-ಹಜರತ್ ನಿಜಾಮುದ್ದೀನ್

ಯಶವಂತಪುರ-ಹಜರತ್ ನಿಜಾಮುದ್ದೀನ್

ಯಶವಂತಪುರ-ಹಜರತ್ ನಿಜಾಮುದ್ದೀನ್-ಯಶವಂತಪುರ (06523/06524) ರೈಲು ವಾರದಲ್ಲಿ ಎರಡು ಬಾರಿ ಸಂಚಾರ ನಡೆಸಲಿದೆ. ಸೆಪ್ಟೆಂಬರ್ 23ರಿಂದ ಈ ರೈಲು ಸಂಚಾರ ಆರಂಭವಾಗಲಿದೆ. ಬುಧವಾರ ಮತ್ತು ಶನಿವಾರ ಮಧ್ಯಾಹ್ನ 1.55ಕ್ಕೆ ಯಶವಂತರಪುರದಿಂದ ಹೊರಡುವ ರೈಲು ಶುಕ್ರವಾರ ಹಾಗೂ ಸೋಮವಾರ ಮಧ್ಯಾಹ್ನ 1.20ಕ್ಕೆ ಹಜರತ್ ನಿವಾಮುದ್ದೀನ್ ತಲುಪಲಿದೆ.

ಸೆಪ್ಟೆಂಬರ್ 26ರಿಂದ ಶನಿವಾರ ಮತ್ತು ಮಂಗಳವಾರ ಬೆಳಗ್ಗೆ 7 ಗಂಟೆಗೆ ಹಜರತ್ ನಿಜಾಮುದ್ದೀನ್‌ನಿಂದ ಹೊರಡುವ ರೈಲು ಸೋಮವಾರ ಹಾಗೂ ಗುರುವಾರ ಬೆಳಗ್ಗೆ 4.20ಕ್ಕೆ ಯಶವಂತಪುರವನ್ನು ತಲುಪಲಿದೆ.

ವಾಸ್ಕೋ ಡಿ ಗಾಮಾ-ಹಜರತ್ ನಿಜಾಮುದ್ದೀನ್

ವಾಸ್ಕೋ ಡಿ ಗಾಮಾ-ಹಜರತ್ ನಿಜಾಮುದ್ದೀನ್

ವಾಸ್ಕೋ ಡಿ ಗಾಮ-ಹಜರತ್ ನಿಜಾಮುದ್ದೀನ್-ವಾಸ್ಕೋ ಡಿ ಗಾಮ (07379/07380) ರೈಲು ಸೆಪ್ಟೆಂಬರ್ 25ರಿಂದ ಆರಂಭವಾಗಲಿದೆ. ಶುಕ್ರವಾರ ಮಧ್ಯಾಹ್ನ 12.30ಕ್ಕೆ ವಾಸ್ಕೊ ಡಿ ಗಾಮದಿಂದ ಹೊಡುವ ರೈಲು ಭಾನುವಾರ ಬೆಳಗ್ಗೆ 4.20ಕ್ಕೆ ಹಜರತ್ ನಿಜಾಮುದ್ದೀನ್ ತಲುಪಲಿದೆ. ಅಕ್ಟೋಬರ್ 7ರಿಂದ ಪ್ರತಿ ಭಾನುವಾರ ಮಧ್ಯಾಹ್ನ 1 ಗಂಟೆಗೆ ಹಜರತ್ ನಿಜಾಮುದ್ದೀನ್ ನಿಂದ ಹೊರಡುವ ರೈಲು ಮಂಗಳವಾ ಬೆಳಗ್ಗೆ 4.45ಕ್ಕೆ ವಾಸ್ಕೋ ಡಿ ಗಾಮ ತಲುಪಲಿದೆ.

Recommended Video

Corona ಲಸಿಕೆ ಭಾರತದಲ್ಲಿ ಉತ್ಪಾದನೆ ಆದ ಬಳಿಕ ಇರುವ ಸವಾಲುಗಳೇನು ? | Oneindia Kannada

ವಿಶೇಷ ರೈಲಿನ ದರಗಳು

ವಿಶೇಷ ಕ್ಲೋನ್ ರೈಲುಗಳ ದರ ಹಮ್‌ಸಾಫರ್ ಎಕ್ಸ್‌ಪ್ರೆಸ್ ದರಕ್ಕೆ ಸಮನಾಗಿರುತ್ತದೆ. ಆದರೆ, ಲಖನೌ ಮತ್ತು ದೆಹಲಿ ನಡುವಿನ ಕ್ಲೋನ್ ರೈಲಿನ ದರ ಜನಶತಾಬ್ದಿ ರೈಲಿನ ದರಕ್ಕೆ ಸಮಾನಾಗಿರುತ್ತದೆ. ರೈಲುಗಳ ವೇಳಾಪಟ್ಟಿ.

English summary
South Western Railway announced that it will run three clone train connecting Karnataka to other parts of the country. Train will run form September 21, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X