ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧ ಹೋರಾಟ; 21 ಸಾವಿರ ಮಾಸ್ಕ್ ತಯಾರಿಸಿದ ನೈಋತ್ಯ ರೈಲ್ವೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 20 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಭಾರತೀಯ ರೈಲ್ವೆ ಎಲ್ಲಾ ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಆದರೆ, ಕೋವಿಡ್ - 19 ಹರಡದಂತೆ ತಡೆಯಲು ರೈಲ್ವೆ ನೌಕರರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ನೈಋತ್ಯ ರೈಲ್ವೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿದೆ. ಇದುವರೆಗೂ 21, 510 ಮಾಸ್ಕ್ ಮತ್ತು 4,317 ಲೀಟರ್ ಸ್ಯಾನಿಟೈಸರ್ ತಯಾರು ಮಾಡಿದೆ. ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು ವಿಭಾಗೀಯ ವರ್ಕ್ ಶಾಪ್‌ಗಳಲ್ಲಿ ಮಾಸ್ಕ್ ತಯಾರಿ ನಡೆದಿದೆ.

ಗದಗ-ವಾಡಿ ರೈಲು ಮಾರ್ಗದ ಅಡೆ-ತಡೆ ನಿವಾರಣೆ; ಯೋಜನೆಗೆ ಒಪ್ಪಿಗೆ ಗದಗ-ವಾಡಿ ರೈಲು ಮಾರ್ಗದ ಅಡೆ-ತಡೆ ನಿವಾರಣೆ; ಯೋಜನೆಗೆ ಒಪ್ಪಿಗೆ

ಇಲಾಖೆಯ ಸಿಬ್ಬಂದಿಗಳ ಕಾರ್ಯ ವೈಖರಿಯಿಂದಾಗಿ ಕೋವಿಡ್ - 19 ಹರಡದಂತೆ ತಡೆಯುವ ಮಾಸ್ಕ್ ಅನ್ನು ವಿಭಾಗೀಯ ವರ್ಕ್ ಶಾಪ್‌ಗಳಲ್ಲಿ ತಯಾರು ಮಾಡಲಾಗುತ್ತಿದೆ. ಮತ್ತೊಂದು ಕಡೆ ಲಾಕ್ ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗದಂತೆ ಗೂಡ್ಸ್ ಮತ್ತು ವಿಶೇಷ ರೈಲುಗಳು ಸಂಚಾರ ನಡೆಸುತ್ತಿವೆ.

ಲಾಕ್ ಡೌನ್; ಬೆಂಗಳೂರಿನಿಂದ ವಿಶೇಷ ಪಾರ್ಸೆಲ್ ರೈಲು ಸೇವೆ ಲಾಕ್ ಡೌನ್; ಬೆಂಗಳೂರಿನಿಂದ ವಿಶೇಷ ಪಾರ್ಸೆಲ್ ರೈಲು ಸೇವೆ

South Western Railway Manufactures 21 Thousand Mask

ನೈಋತ್ಯ ರೈಲ್ವೆಯ ಹುಬ್ಬಳ್ಳಿ ವರ್ಕ್ ಶಾಪ್‌ನಲ್ಲಿ 5,570 ಮಾಸ್ಕ್, 2,530 ಲೀಟರ್ ಸ್ಯಾನಿಟೈಸರ್ ತಯಾರಿಸಲಾಗಿದೆ. ಹುಬ್ಬಳ್ಳಿ ವಿಭಾಗದಲ್ಲಿ 1,915 ಮಾಸ್ಕ್ ಮತ್ತು 520 ಲೀಟರ್ ಸ್ಯಾನಿಟೈಸರ್ ತಯಾರು ಮಾಡಲಾಗಿದೆ.

ಉದ್ಯೋಗಿಗಳ ಓಡಾಟಕ್ಕೆ ವಿಶೇಷ ರೈಲು ಓಡಿಸುತ್ತಿದೆ ನೈರೈತ್ಯ ರೈಲ್ವೆ ಉದ್ಯೋಗಿಗಳ ಓಡಾಟಕ್ಕೆ ವಿಶೇಷ ರೈಲು ಓಡಿಸುತ್ತಿದೆ ನೈರೈತ್ಯ ರೈಲ್ವೆ

ಬೆಂಗಳೂರು ವಿಭಾಗದಲ್ಲಿ 6,410 ಮಾಸ್ಕ್, 765 ಲೀಟರ್ ಸ್ಯಾನಿಟೈಸರ್ ಮತ್ತು ಮೈಸೂರು ವರ್ಕ್ ಶಾಪ್‌ನಲ್ಲಿ 6,030 ಮಾಸ್ಕ್ ಮತ್ತು 480 ಲೀಟರ್ ಸ್ಯಾನಿಟೈಸರ್ ತಯಾರಾಗಿದೆ. ಮೈಸೂರು ವಿಭಾಗದಲ್ಲಿ 1,585 ಮಾಸ್ಕ್ ಮತ್ತು 22 ಲೀಟರ್ ಸ್ಯಾನಿಟೈಸರ್ ತಯಾರು ಮಾಡಿದ್ದಾರೆ.

ಅಗತ್ಯ ವಸ್ತುಗಳ ಪೂರೈಕೆಯಾಗಿ ಗೂಡ್ಸ್ ಮತ್ತು ವಿಶೇಷ ರೈಲುಗಳನ್ನು ಓಡಿಲಾಗುತ್ತಿದೆ. ಈ ರೈಲುಗಳಿಗೆ ಸಾಮಾಗ್ರಿಗಳನ್ನು ತುಂಬಲು ಮತ್ತು ಇಳಿಸಲು ಕಾರ್ಮಿಕರನ್ನು ನಿಯೋಜನೆ ಮಾಡಲಾಗಿದೆ. ಅವರಿಗೆ ಮಾಸ್ಕ್‌ಗಳನ್ನು ವಿತರಣೆ ಮಾಡಲಾಗುತ್ತಿದೆ.

ಜನರ ಸೇವೆಗಾಗಿ ಕೆಲಸ ಮಾಡುವ ಕಾರ್ಮಿಕರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಕೆಲಸ ಮಾಡುವ ಸಂದರ್ಭದಲ್ಲಿ ಅಗತ್ಯ ಎಚ್ಚರಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗುತ್ತಿದೆ.

ರೈಲ್ವೆಯ ಸಿಬ್ಬಂದಿಗಳಾದ ಲೋಕೋ ಪೈಲೆಟ್, ಗಾರ್ಡ್, ಟ್ರಾಕ್ ಮೆನ್ ಮುಂತಾದವರು ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಮೂಲಕ ಲಾಕ್ ಡೌನ್ ಸಮಯದಲ್ಲಿ ಕೆಲಸ ಮಾಡುತ್ತಿದ್ದರೂ ಸುರಕ್ಷತೆ ಬಗ್ಗೆ ಗಮನಹರಿಸಿದ್ದಾರೆ.

English summary
South Western Railways continues its fight against COVID-19. SWR has manufactured as many as 21,510 face masks as well as 4,317 litres of sanitizer so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X