Sankranthi Special: ನೈಋತ್ಯ ರೈಲ್ವೆಯಿಂದ ಹಬ್ಬದ ವಿಶೇಷ ರೈಲುಗಳ ಸೇವೆ
ಮೈಸೂರು, ಡಿಸೆಂಬರ್ 10: ಕ್ರಿಸ್ ಮಸ್, ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಅಂಗವಾಗಿ ನೈಋತ್ಯ ರೈಲ್ವೆಯು ಮೈಸೂರಿನಿಂದ ವಿವಿಧ ಸ್ಥಳಗಳಿಗೆ ಹಬ್ಬದ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ.
ತಮಿಳುನಾಡು, ಕೇರಳ ರಾಜ್ಯಗಳನ್ನು ಸಂಪರ್ಕಿಸುವ ವಿಶೇಷ ರೈಲುಗಳು ಇವಾಗಿದ್ದು, ರೈಲುಗಳಲ್ಲಿ ಸಂಚರಿಸಲು ಟಿಕೆಟ್ ಗಳನ್ನು ಮುಂಗಡ ಬುಕಿಂಗ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ವಾರದ ಎಲ್ಲಾ ದಿನಗಳಲ್ಲಿ ಈ ರೈಲುಗಳು ಸಂಚರಿಸಲಿವೆ. ಇದರೊಂದಿಗೆ ಧಾರವಾಡ-ಮೈಸೂರು ಮಾರ್ಗದ ಹಬ್ಬದ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನೂ ವಿಸ್ತರಿಸಲಾಗಿದೆ.
ಹಬ್ಬದ ವಿಶೇಷ ರೈಲುಗಳ ಅವಧಿ ವಿಸ್ತರಣೆ; ರೈಲುಗಳ ಪಟ್ಟಿ
ವಿಶೇಷ ರೈಲುಗಳ ಪಟ್ಟಿ
* ಕೊಚುವೆಲಿ ಎಕ್ಸ್ ಪ್ರೆಸ್: ಕೊಚುವೆಲಿಯಿಂದ ಮೈಸೂರು ಪ್ರಯಾಣಿಸಲಿದ್ದು, ಡಿ.11ರಿಂದ ಡಿ.31ರವರೆಗೆ ಸಂಚಾರವಿರಲಿದೆ.
* ಕೊಚುವೆಲಿ ಎಕ್ಸ್ ಪ್ರೆಸ್; ಮೈಸೂರಿನಿಂದ ಕೊಚುವೆಲಿ ಪ್ರಯಾಣಿಸಲಿದ್ದು, ಡಿ.12ರಿಂದ ಜ.01, 2021ವರೆಗೆ ಸಂಚಾರವಿರಲಿದೆ.
* ಕಾವೇರಿ ಎಕ್ಸ್ ಪ್ರೆಸ್; ಚೆನ್ನೈನಿಂದ ಮೈಸೂರು, ಡಿ.14ರಿಂದ ಡಿ.31ರವರೆಗೆ ಸಂಚಾರವಿರಲಿದೆ.
* ಕಾವೇರಿ ಎಕ್ಸ್ ಪ್ರೆಸ್: ಮೈಸೂರು ಚೆನ್ನೈ; ಡಿ.15ರಿಂದ ಜ.01, 2021ವರೆಗೆ ಸಂಚಾರವಿರಲಿದೆ.
ಹಬ್ಬದ ವಿಶೇಷ ರೈಲುಗಳ ದರವು ಸಾಮಾನ್ಯ ರೈಲಿಗಿಂತ 1.3 ಪಟ್ಟು ಹೆಚ್ಚಿನದಾಗಿದೆ. ಸಂಚಾರ ಸಮಯದಲ್ಲಿ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ವಿಧಿಸಿರುವ ಕೋವಿಡ್ ನಿಯಮಗಳನ್ನು ಪಾಲಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್
ಹಬ್ಬದ ವಿಶೇಷ ರೈಲು ಸೇವೆ ವಿಸ್ತರಣೆ: ಧಾರವಾಡ ಮೈಸೂರು ಮಾರ್ಗದ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ವಿಸ್ತರಿಸಲಾಗಿದೆ. ಧಾರವಾಡದಿಂದ ಮೈಸೂರು- ಜನವರಿ 15, 2021ರವರೆಗೆ, ಮೈಸೂರಿನಿಂದ ಧಾರವಾಡ ರೈಲು ಸೇವೆಯನ್ನು ಜನವರಿ 16, 2021ವರೆಗೂ ವಿಸ್ತರಿಸಲಾಗಿದೆ. ಸಮಯ, ನಿಲುಗಡೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಕ್ರಿಸ್ ಮಸ್, ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಅಂಗವಾಗಿ ಪ್ರಯಾಣಿಕರ ಅನುಕೂಲಕ್ಕೆ ರೈಲು ಸೇವೆಯನ್ನು ವಿಸ್ತರಿಸಲಾಗಿದೆ.