ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ

|
Google Oneindia Kannada News

ಬೆಂಗಳೂರು, ನವೆಂಬರ್ 11 : ಬೆಂಗಳೂರು- ಮೈಸೂರು ನಡುವೆ ಪ್ರಯಾಣಿಸುವ ಜನರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಉಭಯ ನಗರಗಳ ನಡುವೆ ಸಂಚಾರ ನಡೆಸುವ 11 ರೈಲುಗಳ ವೇಗವನ್ನು ಹೆಚ್ಚಿಸಲಾಗಿದ್ದು, ಪ್ರಯಾಣದ ಅವಧಿ ಕಡಿತವಾಗಲಿದೆ.

ನೈಋತ್ಯ ರೈಲ್ವೆ ನವೆಂಬರ್ 13 ರಿಂದ ಜಾರಿಗೆ ಬರುವಂತೆ 11 ರೈಲುಗಳ ವೇಗವನ್ನು ಹೆಚ್ಚಿಸಲಿದೆ. ಇದರಿಂದಾಗಿ ಕನಿಷ್ಠ ಎರಡೂ ಕಾಲು ಗಂಟೆಗಳ ಪ್ರಯಾಣದ ಅವಧಿ ಕಡಿತಗೊಳ್ಳಲಿದ್ದು, ಜನರಿಗೆ ಸಹಾಯಕವಾಗಲಿದೆ.

ಶಿವಮೊಗ್ಗದಿಂದ 3 ಹೊಸ ರೈಲು; ವೇಳಾಪಟ್ಟಿ, ನಿಲ್ದಾಣ ಶಿವಮೊಗ್ಗದಿಂದ 3 ಹೊಸ ರೈಲು; ವೇಳಾಪಟ್ಟಿ, ನಿಲ್ದಾಣ

ಬೆಂಗಳೂರು-ಮೈಸೂರು ನಡುವಿನ ಜೋಡಿ ಹಳಿ ಮಾರ್ಗದ ಕಾಮಗಾರಿ ಪೂರ್ಣಗೊಂಡರೂ ರೈಲುಗಳ ವೇಗ ಹೆಚ್ಚಿಲ್ಲ ಎಂಬ ದೂರುಗಳು ಇದ್ದವು. ರೈಲುಗಳ ವೇಗ ಹೆಚ್ಚಿಸಿ ಇಲ್ಲವೇ ನಿಲ್ದಾಣಗಳನ್ನು ಕಡಿಮೆ ಮಾಡಿ ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು.

ಬೆಳಗಾವಿ-ಹುಬ್ಬಳ್ಳಿ ನೇರ ರೈಲು ಮಾರ್ಗಕ್ಕೆ ಸರ್ಕಾರದ ಒಪ್ಪಿಗೆ ಬೆಳಗಾವಿ-ಹುಬ್ಬಳ್ಳಿ ನೇರ ರೈಲು ಮಾರ್ಗಕ್ಕೆ ಸರ್ಕಾರದ ಒಪ್ಪಿಗೆ

South Western Railway

ನೈಋತ್ಯ ರೈಲ್ವೆ ಈ ಬೇಡಿಕೆಗೆ ಒಪ್ಪಿದ್ದು, ನಿಲ್ದಾಣಗಳನ್ನು ಕಡಿಮೆ ಮಾಡದೆಯೇ 11 ರೈಲುಗಳ ವೇಗವನ್ನು ಹೆಚ್ಚಿಸಿದೆ. ಪ್ರಸ್ತುತ ಪ್ರಯಾಣದ ಅವಧಿ ಎರಡೂವರೆ ಗಂಟೆಯಿಂದ ಮೂರು ಗಂಟೆ ಇಪತ್ತು ನಿಮಿಷವಿತ್ತು. ಈಗ ಅದನ್ನು ಕಡಿತಗೊಳಿಸಲಾಗಿದೆ.

ಬೆಂಗಳೂರು-ಹಿಂದೂಪುರ ಮೆಮು ರೈಲು; ವೇಳಾಪಟ್ಟಿ, ನಿಲ್ದಾಣ ಬೆಂಗಳೂರು-ಹಿಂದೂಪುರ ಮೆಮು ರೈಲು; ವೇಳಾಪಟ್ಟಿ, ನಿಲ್ದಾಣ

ಬೆಂಗಳೂರು-ಮೈಸೂರು ಮಾರ್ಗದ ನಡುವೆ ಜೋಡಿ ಹಳಿ ನಿರ್ಮಾಣ ಪೂರ್ಣಗೊಂಡ ಬಳಿಕ ವೇಗ ಹೆಚ್ಚಳ ಮಾಡಿದರೆ ಯಾವುದೇ ಅಪಾಯವಿಲ್ಲ ಎಂದು ಇಲಾಖೆ ಹೇಳಿದೆ. ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 95 ಕಿ. ಮೀ. ಹೆಚ್ಚಳ ಮಾಡಲಾಗಿದೆ.

ಯಾವ ರೈಲುಗಳು : ಮೈಸೂರಿನಿಂದ ಬೆಂಗಳೂರಿಗೆ ಸಂಚರಿಸುವ ಜೈಪುರ-ಮೈಸೂರು ಎಕ್ಸ್‌ಪ್ರೆಸ್, ಕಾಚಿಗುಡ ಎಕ್ಸ್‌ಪ್ರೆಸ್, ಹಂಪಿ/ಗೋಲಗುಂಬಜ್ ಎಕ್ಸ್‌ಪ್ರೆಸ್, ಮೈಲಾಡುತುರೈ ಎಕ್ಸ್‌ಪ್ರೆಸ್, ಟ್ಯುಟಿಕಾರಿನ್ ಎಕ್ಸ್‌ಪ್ರೆಸ್, ಚಾಮರಾಜನಗರ- ತಿರುಪತಿ ಎಕ್ಸ್‌ಪ್ರೆಸ್ ವೇಗವನ್ನು ಹೆಚ್ಚಳ ಮಾಡಲಾಗಿದೆ.

ಬೆಂಗಳೂರು-ಮೈಸೂರು ನಡುವೆ ಸಂಚಾರ ನಡೆಸುವ ವಾರಣಾಸಿ-ಮೈಸೂರು ಎಕ್ಸ್‌ಪ್ರೆಸ್, ರೇಣಿಗುಂಟ ಎಕ್ಸ್‌ಪ್ರೆಸ್, ಹೌರಾ-ಮೈಸೂರು ಎಕ್ಸ್‌ಪ್ರೆಸ್, ಮೈಲಾಡುತುರೈ ಎಕ್ಸ್‌ಪ್ರೆಸ್, ಜೈಪುರ-ಮೈಸೂರು ಎಕ್ಸ್‌ಪ್ರೆಸ್ ರೈಲುಗಳ ವೇಗವನ್ನು ಹೆಚ್ಚಳ ಮಾಡಲಾಗಿದೆ.

English summary
South western railway increased the speed of 11 train which running between Bengaluru-Mysuru. By this travel time between two city's come down from November 13, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X