ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್‌ನಲ್ಲಿ ದಕ್ಷಿಣ ಭಾರತ ಭಾಷೆಗಳ ‘ದ್ರಾವಿಡ ಭಾಷಾ ಸಮಾವೇಶ’

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್ 29: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನವೆಂಬರ್ 2018ರಲ್ಲಿ ದ್ರಾವಿಡ ಭಾಷಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ದ್ರಾವಿಡ ಭಾಷಾ ಬಳಗಕ್ಕೆ ಸೇರಿದ ಎಲ್ಲಾ ಭಾಷೆಗಳನ್ನೂ ಒಗ್ಗೂಡಿಸುವ ಸಲುವಾಗಿ ಮತ್ತು ಆಯಾ ಭಾಷೆಗಳ ಅಸ್ಮಿತೆಯನ್ನು ಗೌರವಿಸುವ ಪರಸ್ಪರ ಭಾಷಾ ಸೌಹಾರ್ದತೆಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗುತ್ತಿದೆ.

85ನೇ ಕನ್ನಡ ಸಾಹಿತ್ಯ ಸಮ್ಮೇಳನ: ಅಧ್ಯಕ್ಷ ಸ್ಥಾನಕ್ಕೆ ವೀಣಾ ಶಾಂತೇಶ್ವರ ಹೆಸರು85ನೇ ಕನ್ನಡ ಸಾಹಿತ್ಯ ಸಮ್ಮೇಳನ: ಅಧ್ಯಕ್ಷ ಸ್ಥಾನಕ್ಕೆ ವೀಣಾ ಶಾಂತೇಶ್ವರ ಹೆಸರು

ಸಾವಿರಾರು ವರ್ಷಗಳ ಲಿಪಿ ರೂಪದ ಇತಿಹಾಸಗಳಿರುವ ಈ ದ್ರಾವಿಡ ಭಾಷೆಗಳು ಅವುಗಳ ಮೂಲ ಲಿಪಿ ವಿಕಾಸವಾದಂತೆ ಭಿನ್ನತೆ ಹೊಂದಿದ್ದರೂ ಸಹ ಅವುಗಳ ಸಮಾನ ಸ್ವರೂಪಗಳನ್ನು ಉಳಿಸಿಕೊಂಡಿದ್ದು, ಬಹುತ್ವ ಭಾರತದ ಸಂದರ್ಭದಲ್ಲಿ ಈ ಭಾಷೆಗಳ ಐಕ್ಯತೆ ಮತ್ತು ಅಸ್ತಿತ್ವವನ್ನು ಉಳಿಸುವ ಉದ್ದೇಶದಿಂದ ದ್ರಾವಿಡ ಸಮಾವೇಶವನ್ನು ಭಾಷಾ ಭಾವೈಕ್ಯತೆಯ ಸಮಾವೇಶವಾಗಿ ರೂಪಿಸಲಾಗುತ್ತಿದೆ.

South Indian language conference in November

ಕಸಾಪ ಅಧ್ಯಕ್ಷರ ಅವಧಿ ವಿಸ್ತರಣೆ: ಕಾನೂನು ಹೋರಾಟ ಮುಂದುವರಿಕೆಕಸಾಪ ಅಧ್ಯಕ್ಷರ ಅವಧಿ ವಿಸ್ತರಣೆ: ಕಾನೂನು ಹೋರಾಟ ಮುಂದುವರಿಕೆ

ಈ ಸಮಾವೇಶದಲ್ಲಿ ತುಳು ಹಾಗೂ ಕೊಡವ ಭಾಷೆಗೂ ಸ್ಥಳ ಕಲ್ಪಿಸಲಾಗಿದೆ. ರಾಜ್ಯದ ಭಾಷೆಗಳಾದ ಕನ್ನಡ, ಕೊಡವ, ತುಳು, ಅರೆಭಾಷೆಗಳೂ ಸಹ ತನ್ನದೇ ಅಸ್ತಿತ್ವವನ್ನು ಹೊಂದಿದ್ದು ಅವುಗಳನ್ನೂ ಒಳಗೊಂಡು ಭಾಷಾ ಸಮಾವೇಶವನ್ನು ಪ್ರಾಧಿಕಾರ ರೂಪಿಸಿದೆ.

English summary
Kannada Development Authority organized South Indian languages conference "Dravida language conference' in November. Kodava and Tulu language also will get place in the conference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X