ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ 'ಮೂಲ'ವೇ ಇದು!

|
Google Oneindia Kannada News

ಬೆಂಗಳೂರು, ಮೇ.26: ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಮಂಗಳವಾರ ಬೆಳಗ್ಗಿನ ಅಂಕಿ-ಅಂಶಗಳ ಪ್ರಕಾರ 2,283ರ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 101 ಮಂದಿಗೆ ಕೊವಿಡ್-19 ಸೋಂಕು ಪತ್ತೆಯಾಗಿದೆ.

Recommended Video

ಲಾಕ್‌ಡೌನ್ ನಂತರ ಹಾರಿದ ಮೊದಲ ವಿಮಾನದಲ್ಲಿನ ಕನ್ನಡದ ಗಗನಸಖಿ| Kannadati Air Hostess Explain Current situation

ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯ ಮೂಲವು ರಾಜ್ಯದ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಭಾರತದಲ್ಲಿ ಲಾಕ್ ಡೌನ್ ನಡುವೆಯೂ ಕಾರ್ಮಿಕರು ಹಾಗೂ ಅತಂತ್ರ ಸ್ಥಿತಿಯಲ್ಲಿರುವ ಜನರ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದೆ.

ಕರ್ನಾಟಕದಲ್ಲಿ ಭರ್ಜರಿ ಶತಕ ಸಿಡಿಸಿದ ಕೊರೊನಾ ವೈರಸ್!ಕರ್ನಾಟಕದಲ್ಲಿ ಭರ್ಜರಿ ಶತಕ ಸಿಡಿಸಿದ ಕೊರೊನಾ ವೈರಸ್!

ರಾಜ್ಯಗಳ ನಡುವಿನ ಸಂಚಾರ ಆರಂಭಿಸಿದ್ದೇ ಕರ್ನಾಟಕದ ಪಾಲಿಗೆ ಮುಳುವಾಯಿತೇ ಎಂಬ ಅನುಮಾನವನ್ನು ಈ ಅಂಕಿ-ಅಂಶಗಳು ಹುಟ್ಟುಹಾಕುತ್ತಿವೆ. 2,282 ಕೊರೊನಾ ವೈರಸ್ ಸೋಂಕಿತರ ಪೈಕಿ ಶೇ.69ಕ್ಕಿಂತಲೂ ಅಧಿಕ ಸೋಂಕಿತರಿಗೆ ನೆರೆ ರಾಜ್ಯ ಮತ್ತು ರಾಷ್ಟ್ರದ ಸಂಪರ್ಕ ಇರುವುದು ಪತ್ತೆಯಾಗಿದೆ.

ಮಹಾರಾಷ್ಟ್ರದ ನಂಟು ಕರುನಾಡಿಗೆ ಮುಳ್ಳು

ಮಹಾರಾಷ್ಟ್ರದ ನಂಟು ಕರುನಾಡಿಗೆ ಮುಳ್ಳು

ಕರ್ನಾಟಕದಲ್ಲಿ ಪತ್ತೆಯಾದ ಕೊರೊನಾ ವೈರಸ್ ಸೋಂಕಿತರ ಪೈಕಿ ಅತಿಹೆಚ್ಚು ಮಂದಿ ಸೋಂಕಿತರಿಗೆ ಮಹಾರಾಷ್ಟ್ರ ನಂಟು ಇರುವುದು ಪತ್ತೆಯಾಗಿದೆ. 2,283 ಕೊವಿಡ್-19 ಸೋಂಕಿತರ ಪೈಕಿ 937 ಜನರು ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ. ಮಂಗಳವಾರ ಕೂಡಾ ರಾಜ್ಯದಲ್ಲಿ ಪತ್ತೆಯಾದ 101 ಕೊರೊನಾ ವೈರಸ್ ಸೋಂಕಿತರ ಪೈಕಿ 46 ಮಂದಿ ಮಹಾರಾಷ್ಟ್ರದಿಂದಲೇ ಬಂದವರಾಗಿದ್ದಾರೆ.

787 ಮಂದಿಗೆ ಸೋಂಕಿತರಿಂದ ಕೊವಿಡ್-19 ಪಾಸಿಟಿವ್

787 ಮಂದಿಗೆ ಸೋಂಕಿತರಿಂದ ಕೊವಿಡ್-19 ಪಾಸಿಟಿವ್

ರಾಜ್ಯದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕಿತರಿಂದ 787 ಮಂದಿಗೆ ಕೊವಿಡ್-19 ಅಂಟಿಕೊಂಡಿರುವುದು ಅಂಕಿ-ಅಂಶಗಳಲ್ಲಿ ಸಾಬೀತಾಗಿದೆ. 87 ಮಂದಿಗೆ ಸೋಂಕು ತಗಲಿರುವುದು ಹೇಗೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. SARI ಮೂಲಕ 57 ಮಂದಿಗೆ ILI ಮೂಲಕ 46 ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.

ಗುಜರಾತ್, ದೆಹಲಿ, ತಮಿಳುನಾಡು ನಂಟಿನ ಶಾಪ

ಗುಜರಾತ್, ದೆಹಲಿ, ತಮಿಳುನಾಡು ನಂಟಿನ ಶಾಪ

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುವಲ್ಲಿ ಮಹಾರಾಷ್ಟ್ರದ ನಂಟು ಒಂದೇ ಕಾರಣವಲ್ಲ. ಬದಲಿಗೆ ಗುಜರಾತ್, ದೆಹಲಿ, ತಮಿಳುನಾಡು, ರಾಜಸ್ಥಾನದ ಜೊತೆಗಿನ ಸಂಪರ್ಕವೂ ಕೂಡಾ ಮಾರಕವಾಗಿದೆ. ಗುಜರಾತ್ ನಿಂದ ಆಗಮಿಸಿದ 57, ದೆಹಲಿಯ 51, ತಮಿಳುನಾಡಿನ 41, ರಾಜಸ್ಥಾನದಿಂದ ಆಗಮಿಸಿದ 39 ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ. ಇಂದು ಒಂದೇ ದಿನ ತಮಿಳುನಾಡಿನಿಂದ ಆಗಮಿಸಿದ 21 ಜನರಲ್ಲೂ ಸೋಂಕು ಇರುವುದು ದೃಢಪಟ್ಟಿದೆ.

ರಾಜ್ಯಕ್ಕೆ ವಿದೇಶದಿಂದ ಆಗಮಿಸಿದ ಜನರಿಗೆ ಸೋಂಕು

ರಾಜ್ಯಕ್ಕೆ ವಿದೇಶದಿಂದ ಆಗಮಿಸಿದ ಜನರಿಗೆ ಸೋಂಕು

ಕರ್ನಾಟಕದ ಪಾಲಿಗೆ ವಿದೇಶಗಳಿಂದ ಆಗಮಿಸಿದ ಪ್ರಜೆಗಳೂ ಡೇಂಜರ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೂ ವಿದೇಶಗಳಿಂದ ಆಗಮಿಸಿದ 102 ಮಂದಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವುದು ದೃಢಪಟ್ಟಿದೆ. ಇದರ ಜೊತೆಗೆ ಜಾರ್ಖಂಡ್ ನಿಂದ ಆಗಮಿಸಿದ 13 ಮಂದಿ ಹಾಗೂ ತೆಲಂಗಾಣದ 10 ಜನರಿಗೆ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಬಂದಿದೆ.

ರಾಜ್ಯದಲ್ಲಿ ಒಂದೇ ದಿನ 101 ಮಂದಿಗೆ ಕೊರೊನಾ ವೈರಸ್

ರಾಜ್ಯದಲ್ಲಿ ಒಂದೇ ದಿನ 101 ಮಂದಿಗೆ ಕೊರೊನಾ ವೈರಸ್

ಕರ್ನಾಟಕದಲ್ಲಿ ಮಂಗಳವಾರ ಒಂದೇ ದಿನ 101 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಚಿತ್ರದುರ್ಗ - 20, ಯಾದಗಿರಿ - 14, ಹಾಸನ - 13, ಬೆಳಗಾವಿ - 13, ದಾವಣಗೆರೆ -11, ಬೀದರ್ - 10, ವಿಜಯಪುರ -6, ಉಡುಪಿ - 3, ಬೆಂಗಳೂರು ನಗರ - 2, ಕೋಲಾರ - 2, ಚಿಕ್ಕಬಳ್ಳಾಪುರ -1, ಬಳ್ಳಾರಿ -1, ಕೊಪ್ಪಳ -1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಟಾಪ್-10 ಕೊರೊನಾ ಸೋಂಕಿತ ಜಿಲ್ಲೆಗಳು

ರಾಜ್ಯದಲ್ಲಿ ಟಾಪ್-10 ಕೊರೊನಾ ಸೋಂಕಿತ ಜಿಲ್ಲೆಗಳು

ಕರ್ನಾಟಕದಲ್ಲಿ ಮಂಗಳವಾರದ ಅಂಕಿ-ಅಂಶಗಳ ಪ್ರಕಾರ 2,283 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. 44 ಮಂದಿ ಮಾರಕ ರೋಗಕ್ಕೆ ಬಲಿಯಾಗಿದ್ದರೆ, 748 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಪೈಕಿ ಜಿಲ್ಲಾವಾರು ಸೋಂಕಿತರ ಸಂಖ್ಯೆ ಭಿನ್ನವಾಗಿದೆ. ರಾಜ್ಯದಲ್ಲಿ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ಟಾಪ್ -10 ಜಿಲ್ಲೆಗಳ ಪಟ್ಟಿ ಮತ್ತು ಸೋಂಕಿತರ ಸಂಖ್ಯೆಯ ವಿವರ ಇಲ್ಲಿದೆ ನೋಡಿ.

ಬೆಂಗಳೂರು ನಗರ-276

ಮಂಡ್ಯ-254

ಕಲಬುರಗಿ-157

ಬೆಳಗಾವಿ-141

ಯಾದಗಿರಿ-140

ದಾವಣಗೆರೆ-137

ಚಿಕ್ಕಬಳ್ಳಾಪುರ-126

ಹಾಸನ-121

ಉಡುಪಿ-102

ಬೀದರ್-100

English summary
Source Wise Break up of Coronavirus Positive Cases in Karnataka. 101 New Cases Found In Past 24 Hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X