ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಪೂಜಿ ಕೇಂದ್ರದಲ್ಲಿ ಬಸ್, ರೈಲ್ವೇ ಟಿಕೆಟ್ ಬುಕ್ ಮಾಡಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 10 : ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಬಾಪೂಜಿ ಸೇವಾ ಕೇಂದ್ರದಲ್ಲಿ ಶೀಘ್ರದಲ್ಲಿಯೇ ಬಸ್ ಮತ್ತು ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ. ಹೌದು ಗ್ರಾಮೀಣಾಭಿವೃದ್ಧಿ ಇಲಾಖೆ ಇದಕ್ಕಾಗಿ ಸಿದ್ಧತೆ ನಡೆಸುತ್ತಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬಾಪೂಜಿ ಸೇವಾ ಕೇಂದ್ರದಲ್ಲಿ ಟಿಕೆಟ್ ಬುಕ್ ಮಾಡಲು ಬೇಕಾದ ತಂತ್ರಾಂಶವನ್ನು ಸಿದ್ಧಪಡಿಸುತ್ತಿದೆ. ಸುಮಾರು ಮೂರು ತಿಂಗಳಿನಲ್ಲಿ ಈ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ.

ಗ್ರಾಮ ಪಂಚಾಯಿತಿಗಳಿಗೂ ಬರಲಿದೆ ಬಸ್ ಬುಕ್ಕಿಂಗ್, ಬಿಲ್ ಪಾವತಿ ಸೇವೆಗ್ರಾಮ ಪಂಚಾಯಿತಿಗಳಿಗೂ ಬರಲಿದೆ ಬಸ್ ಬುಕ್ಕಿಂಗ್, ಬಿಲ್ ಪಾವತಿ ಸೇವೆ

'ಗ್ರಾಮ ಪಂಚಾಯಿತಿಗಳಲ್ಲಿ ಬಸ್ ಮತ್ತು ರೈಲ್ವೆ ಟಿಕೆಟ್ ಬುಕ್ಕಿಂಗ್ ಸೇವೆ ಕಲ್ಪಿಸುವ ಯೋಜನೆ ಕಾರ್ಯ ಪ್ರಗತಿಯಲ್ಲಿದೆ. ತಂತ್ರಾಂಶ ಮತ್ತು ಟಿಕೆಟ್ ಹಣ ಪಾವತಿ ಪೋರ್ಟಲ್ ವಿನ್ಯಾಸ ಮಾಡಬೇಕಿದೆ' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಉಚಿತ ವೈ-ಫೈ ಸೌಲಭ್ಯಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಉಚಿತ ವೈ-ಫೈ ಸೌಲಭ್ಯ

Soon KSRTC bus and Train ticket booking in Bapuji Seva Kendra

ಇಲಾಖೆಯ ಪ್ರಧಾನಿ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಈ ಕುರಿತು ಹೇಳಿಕೆ ನೀಡಿದ್ದು, 'ಬಾಪೂಜಿ ಸೇವಾ ಕೇಂದ್ರದಲ್ಲಿ ಹೆಚ್ಚುವರಿ ಸೇವೆ ಪರಿಚಯಿಸುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಪೂರಕವಾಗಿ ಆನ್‌ಲೈನ್ ಪಾವತಿ ಪೋರ್ಟಲ್ ಸಿದ್ಧವಾಗಬೇಕಿದೆ' ಎಂದು ತಿಳಿಸಿದ್ದಾರೆ.

ದೇವನಹಳ್ಳಿಯಲ್ಲಿ ಹೈಟೆಕ್ ಗ್ರಾಮ ಪಂಚಾಯಿತಿ!ದೇವನಹಳ್ಳಿಯಲ್ಲಿ ಹೈಟೆಕ್ ಗ್ರಾಮ ಪಂಚಾಯಿತಿ!

ಕಂದಾಯ ಇಲಾಖೆಯ 40ಕ್ಕೂ ಹೆಚ್ಚು ಸೇವೆಗಳು ಬಾಪೂಜಿ ಕೇಂದ್ರದಲ್ಲಿ ಸಿಗುತ್ತಿವೆ. ಈ ನೂತನ ಸೇವೆಯಿಂದ ಗ್ರಾಮೀಣ ಭಾಗದ ಜನರಿಗೆ ಸಮಯದ ಜನತೆ ಹಣವೂ ಉಳಿತಾಯವಾಗಲಿದೆ.

English summary
Rural development and Panchayatraj department of Karnataka soon will make arrangements to book KSRTC and train tickets in Bapuji Seva Kendra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X