ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ರೆಸಾರ್ಟಿಗೆ ಹೋದ ಬೆನ್ನಲ್ಲೇ ಬಿಜೆಪಿ ಪತ್ರಿಕಾ ಪ್ರಕಟಣೆ

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ರೆಸಾರ್ಟ್ ಗೆ ಹೋದ ಬೆನ್ನಲ್ಲೇ ಬಿಜೆಪಿ ಪತ್ರಿಕಾ ಪ್ರಕಟಣೆ

ಬೆಂಗಳೂರು, ಏ 29: ಮುಖ್ಯಮಂತ್ರಿ ಕುಮಾರಸ್ವಾಮಿ, ಉಡುಪಿ ಬೀಚ್ ರೆಸಾರ್ಟಿಗೆ ತೆರಳಿದ ಬೆನ್ನಲ್ಲೇ ಬಿಜೆಪಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ರಾಜ್ಯ ಬರಗಾಲದಿಂದ ತತ್ತರಿಸಿ ಹೋಗಿರುವಾಗ, ದೊರೆ ಮೋಜುಮಸ್ತಿ ಮಾಡಲು ಹೋಗಿದ್ದಾರೆಂದು ಟೀಕಿಸಿದೆ. ಬಿಜೆಪಿಯ ಪತ್ರಿಕಾ ಪ್ರಕಟಣೆ ಈ ರೀತಿಯಿದೆ:

ಚುನಾವಣೆ ಮುಗಿದ ನಂತರ ಸರಕಾರ ಎಚ್ಚೆತ್ತುಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತದೆ ಎಂದು ಭಾವಿಸಿದ್ದೆವು. ಆದರೆ, ಸರಕಾರ ಮಸ್ತಿ ಮೋಜಿನಲ್ಲಿದೆ. ರಾಜ್ಯದಲ್ಲಿ ತೀವ್ರ ಬರಗಾಲವಿದ್ದು 162 ತಾಲೂಕುಗಳಲ್ಲಿ ಜನ, ಜಾನುವಾರುಗಳು ಬರಗಾಲದ ಸುಳಿಯಲ್ಲಿ ಸಿಕ್ಕಿ ನಲುಗಿದ್ದಾರೆ.

ಹಿಟ್ಲರ್ ಜೊತೆ ಮೋದಿ ಹೋಲಿಕೆ ಚಿತ್ರ, ರಮ್ಯಾ ಕಿವಿಹಿಂಡಿದ ಟ್ವಿಟ್ಟಿಗರುಹಿಟ್ಲರ್ ಜೊತೆ ಮೋದಿ ಹೋಲಿಕೆ ಚಿತ್ರ, ರಮ್ಯಾ ಕಿವಿಹಿಂಡಿದ ಟ್ವಿಟ್ಟಿಗರು

ರಾಜ್ಯದ 2,157 ಹಳ್ಳಿಗಳು ತೀವ್ರವಾದ ನೀರಿನ ಸಂಕಷ್ಟವನ್ನು ಎದುರಿಸುತ್ತಿದ್ದು ಈ ಎಲ್ಲಾ ಹಳ್ಳಿಗಳ ಜನರು ಮತ್ತು ಜಾನುವಾರುಗಳು ವಲಸೆ ಹೋಗುವ ಪರಿಸ್ಥಿತಿಯಲ್ಲಿದ್ದಾರೆ. ರಾಜ್ಯದ ನೈಸರ್ಗಿಕ ವಿಕೋಪ ವೀಕ್ಷಣೆ ಕೇಂದ್ರ ಮಾಹಿತಿ ಪ್ರಕಾರ ಏಪ್ರಿಲ್ 9ರಿಂದ ಏಪ್ರಿಲ್ 15 ರವರೆಗೆ ಅಂದರೆ 7 ದಿನಗಳಲ್ಲಿ 350 ಹಳ್ಳಿಗಳು ತೀವ್ರ ನೀರಿನ ಕೊರತೆ ಇರುವ 2150 ಹಳ್ಳಿಗಳ ಪಟ್ಟಿಗೆ ಸೇರಿವೆ.

Soon CM Kumaraswamy went to resort, BJP press release stating drought situation

ಈ ಕೇಂದ್ರದ ವರದಿ ಪ್ರಕಾರ ಸಾವಿರಾರು ಕೊಳವೆ ಬಾವಿಗಳು ಬತ್ತಿಹೋಗಿವೆ ಮತ್ತು ಇನ್ನೂ ಹದಿನೈದು ದಿನಗಳಲಿ ಪರಿಸ್ಥಿತಿ ತೀವ್ರ ಗಂಭೀರ ಸ್ವರೂಪಕ್ಕೆ ತೆರಳುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ. ರಾಜ್ಯದ ಎಲ್ಲಾ ಕೊಳವೆ ಬಾವಿಗಳಲ್ಲಿ ಶೇ. 80ರಷ್ಟು ನೀರಿನ ಪ್ರಮಾಣ ಬತ್ತಿ ಹೋಗಿದೆ. 25ರಷ್ಟು ಕೊಳವೆ ಬಾವಿಗಳಲ್ಲಿ ನೀರೇ ಇಲ್ಲ.

ದುರಂತದ ಮಾತೆಂದರೆ, ಮುಖ್ಯಮಂತ್ರಿಗಳು ಮತ್ತು ಅನೇಕ ಮಂತ್ರಿಗಳು ದಣಿವಾರಿಸಿಕೊಳ್ಳಲು ರೆಸಾರ್ಟ್ ಮತ್ತು ವಿದೇಶಗಳಿಗೆ ತೆರಳಿದ್ದಾರೆ. ಮುಖ್ಯಮಂತ್ರಿಗಳೇ ರೆಸಾರ್ಟ್‍ನಲ್ಲಿ ವಿಶ್ರಾಂತಿಗೆ ಮೊರೆಹೋದರೆ, ರಾಜ್ಯದ ಆಡಳಿತ ವಿಧಾನಸಭೆಯಲ್ಲಿ ನಿದ್ದೆಗೆ ಜಾರುವುದು ಖಚಿತ.

ಸಿಎಂ ಕುಮಾರಸ್ವಾಮಿ ಸುಬ್ರಹ್ಮಣ್ಯನಿಗೆ ಚಿನ್ನದ ರಥ ನೀಡುತ್ತಿರುವುದೇಕೆ?ಸಿಎಂ ಕುಮಾರಸ್ವಾಮಿ ಸುಬ್ರಹ್ಮಣ್ಯನಿಗೆ ಚಿನ್ನದ ರಥ ನೀಡುತ್ತಿರುವುದೇಕೆ?

ಬೆಂಗಳೂರು ನಗರದಲ್ಲಿ ಕೂಡ ಇದೇ ಭೀಕರ ಪರಿಸ್ಥಿತಿ ಇದೆ, ಕೂಡಲೇ ಮುಖ್ಯ ಕಾರ್ಯದರ್ಶಿಗಳಾದರು ಪರಿಸ್ಥಿತಿಯ ಅವಲೋಕನ ಮಾಡಬೇಕು ಮತ್ತು ತುರ್ತು ಕ್ರಮಗಳನ್ನು ಜರುಗಿಸಬೇಕು ಇಲ್ಲದಿದ್ದರೆ ರಾಜ್ಯದ ಜನ ನಿಮ್ಮನ್ನು ಕ್ಷಮಿಸುವುದಿಲ್ಲ.

English summary
Soon Chief Minister HD Kumaraswamy went to Udupi resort, BJP press release lambasting drought situation of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X