ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹೆಸರು ಅಂತಿಮ: ಅಧಿಕೃತ ಘೋಷಣೆಯೊಂದೇ ಬಾಕಿ

|
Google Oneindia Kannada News

Recommended Video

ರಾಜ್ಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹೆಸರು ಅಂತಿಮ | Oneindia Kannada

ರಾಜ್ಯ ಅಸೆಂಬ್ಲಿಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹೆಸರನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಹುತೇಕ ಅಂತಿಮಗೊಳಿಸಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ, ಅಧಿಕೃತ ಘೋಷಣೆಯೊಂದೇ ಬಾಕಿ.

ಹಲವು ಆಯಾಮಗಳಲ್ಲಿ ಅಳೆದುತೂಗಿ, ಹಲವು ಮುಖಂಡರ ಜೊತೆ ಚರ್ಚಿಸಿ, ಸೋನಿಯಾ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿಯಿದೆ.

ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್, ಇಡಿ ಕುಣಿಕೆಯಲ್ಲಿ ಇರುವುದರಿಂದ, ಪ್ರಭಾವೀ ಮತ್ತು ವರ್ಚಸ್ವೀ ನಾಯಕರೊಬ್ಬರನ್ನೇ ಸೋನಿಯಾ ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ದೆಹಲಿಗೆ ಹಾರಲಿದ್ದಾರೆ ಕೈ ನಾಯಕರು: ಸೋನಿಯಾ ಜೊತೆ ಸಭೆದೆಹಲಿಗೆ ಹಾರಲಿದ್ದಾರೆ ಕೈ ನಾಯಕರು: ಸೋನಿಯಾ ಜೊತೆ ಸಭೆ

ಉಪಚುನಾವಣೆ ಎದುರಾಗುತ್ತಿರುವುದರಿಂದ, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ, ಪ್ರಬಲ ಮುಖಂಡರೊಬ್ಬರಿಗೆ ಪಕ್ಷದ ಈ ಆಯಕಟ್ಟಿನ ಜವಾಬ್ದಾರಿಯನ್ನು ನೀಡಲು ಸೋನಿಯಾ ನಿರ್ಧರಿಸಿದ್ದಾರೆ. ಫೈನಲ್ ಆಗಿರುವ ಹೆಸರು, ಮುಂದೆ ಓದಿ..

ಹಲವು ಹಿರಿಯ ಮುಖಂಡರು, ಎಚ್.ಕೆ.ಪಾಟೀಲ್ ಪರ ಲಾಬಿ

ಹಲವು ಹಿರಿಯ ಮುಖಂಡರು, ಎಚ್.ಕೆ.ಪಾಟೀಲ್ ಪರ ಲಾಬಿ

ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ, ರಮೇಶ್ ಕುಮಾರ್, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಹೆಸರು ಕೇಳಿಬರುತ್ತಿತ್ತು. ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವು ಹಿರಿಯ ಮುಖಂಡರು, ಎಚ್.ಕೆ.ಪಾಟೀಲ್ ಪರ ಲಾಬಿ ನಡೆಸಿದ್ದರು ಎಂದು ವರದಿಯಾಗಿತ್ತು.

ಸಿದ್ದರಾಮಯ್ಯ ಆಯ್ಕೆಯಾಗುವುದು ಬಹುತೇಕ ಖಚಿತ.

ಸಿದ್ದರಾಮಯ್ಯ ಆಯ್ಕೆಯಾಗುವುದು ಬಹುತೇಕ ಖಚಿತ.

ಈಗ ಲಭ್ಯವಿರುವ ಮಾಹಿತಿಯ ಪ್ರಕಾರ, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಆಯ್ಕೆಯಾಗುವುದು ಬಹುತೇಕ ಖಚಿತ. ಇನ್ನೊಂದೆರಡು ದಿನಗಳಲ್ಲಿ ಈ ಬಗ್ಗೆ ಅಧಿಕೃತ ಹೇಳಿಕೆ, ಎಐಸಿಸಿ ಕಚೇರಿಯಿಂದ ಹೊರಬೀಳಬಹುದು.

ಅತ್ತ, ಡಿಕೆಶಿ ಜೈಲುಪಾಲು: ಇತ್ತ, ಸಿದ್ದರಾಮಯ್ಯ ವಿರುದ್ದ ಸ್ವಪಕ್ಷೀಯರ 'ಚಕ್ರವ್ಯೂಹ'ಅತ್ತ, ಡಿಕೆಶಿ ಜೈಲುಪಾಲು: ಇತ್ತ, ಸಿದ್ದರಾಮಯ್ಯ ವಿರುದ್ದ ಸ್ವಪಕ್ಷೀಯರ 'ಚಕ್ರವ್ಯೂಹ'

ದೇವೇಗೌಡ ಮತ್ತು ಕುಮಾರಸ್ವಾಮಿ

ದೇವೇಗೌಡ ಮತ್ತು ಕುಮಾರಸ್ವಾಮಿ

ಕುಮಾರಸ್ವಾಮಿ ನೇತೃತ್ವದ ಸರಕಾರ ಪತನಗೊಂಡ ನಂತರ ದೇವೇಗೌಡ ಮತ್ತು ಕುಮಾರಸ್ವಾಮಿಯವರು, ಸಿದ್ದರಾಮಯ್ಯನವರೇ ಸರಕಾರ ಉರುಳಲು ಕಾರಣ ಎಂದು ಹೇಳಿದ್ದರು. ಗೌಡ್ರು ಮತ್ತು ಸಿದ್ದರಾಮಯ್ಯನವರ ನಡುವೆ ಮಾತಿನ ಸಮರವೇ ನಡೆದಿತ್ತು.

ಅತೃಪ್ತ ಶಾಸಕರಲ್ಲಿ ಬಹುತೇಕರು ಕಾಂಗ್ರೆಸ್ ಪಕ್ಷದವರು

ಅತೃಪ್ತ ಶಾಸಕರಲ್ಲಿ ಬಹುತೇಕರು ಕಾಂಗ್ರೆಸ್ ಪಕ್ಷದವರು

ಮುಂಬರುವ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸೀಟು ಬರುವಂತೆ ನೋಡಿಕೊಳ್ಳುವುದು ಪ್ರಮುಖವಾಗಿದೆ. ಯಾಕೆಂದರೆ, ಅತೃಪ್ತ ಶಾಸಕರಲ್ಲಿ ಬಹುತೇಕರು ಕಾಂಗ್ರೆಸ್ ಪಕ್ಷದವರು. ಹಾಗಾಗಿ, ಪಕ್ಷಕ್ಕೆ ಇದು ಮರ್ಯಾದೆಯ ಪ್ರಶ್ನೆ. ಡಿಕೆಶಿ ಮೇಲೆ ಇಡಿ ಕುಣಿಕೆ ಇನ್ನೆಷ್ಟು ದಿನ ಮುಂದುವರಿಯುತ್ತದೆ ಎನ್ನುವುದು ಖಚಿತವಾಗಿಲ್ಲ. ಹಾಗಾಗಿ, ಸಿದ್ದರಾಮಯ್ಯನವರೇ ವಿರೋಧ ಪಕ್ಷದ ನಾಯಕನಾಗುವುದು ಖಚಿತ ಎಂದು ಹೇಳಲಾಗುತ್ತಿದೆ.

ರಮೇಶ್ ಕುಮಾರ್ ಹೆಸರು ಮುನ್ನಲೆಗೆ ಬಂದಿತ್ತು

ರಮೇಶ್ ಕುಮಾರ್ ಹೆಸರು ಮುನ್ನಲೆಗೆ ಬಂದಿತ್ತು

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯನವರನ್ನು, ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲು, ಪಕ್ಷದ ಹಲವು ಮುಖಂಡರ ಆಕ್ಷೇಪಣೆ ಇದ್ದಿತ್ತು. ಆ ಹಂತದಲ್ಲಿ, ರಮೇಶ್ ಕುಮಾರ್ ಹೆಸರು ಮುನ್ನಲೆಗೆ ಬಂದಿತ್ತು. ಈಗ, ಸಿದ್ದರಾಮಯ್ಯ ಹೆಸರು ಅಂತಿಮವಾಗುವುದು ಬಹುತೇಕ ಗ್ಯಾರಂಟಿ.

English summary
AICC Interim President Sonia Gandhi All Set To Announce Opposition Leader Name For Karnataka Assembly. CLP Leader Siddaramaiah name finalized as per sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X