• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

BTS2020: ಮೇಳದಲ್ಲಿ ಥ್ರೀ ಈಡಿಯಟ್ಸ್ ನೈಜ ಹೀರೋ!

|

ಬೆಂಗಳೂರು, ನ.21: ದಶಕದ ಹಿಂದೆ ತೆರೆ ಕಂಡಿದ್ದ ಥ್ರೀ ಇಡಿಯಟ್ಸ್‌ ಹಿಂದಿ ಚಲನಚಿತ್ರಕ್ಕೆ ಪ್ರೇರಣೆಯಾಗಿದ್ದ ಹಲವು ವಿಷಯಗಳ ತಜ್ಞ ಸೋನಮ್ ವಾಂಗ್‌ಚುಕ್ ಅವರು ಬೆಂಗಳೂರು ತಂತ್ರಜ್ಞಾನ ಮೇಳ-2020ಯಲ್ಲಿ ಭಾಗವಹಿಸಿದ್ದಾರೆ.

ಬಿಟಿಎಸ್ ಮೇಳದ ಮೂರನೇ ದಿನದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಕಂಪನಿಗಳು ವಾಣಿಜ್ಯ ದೃಷ್ಟಿಕೋನದಿಂದ ಕೇವಲ ಐಷಾರಾಮಿ ಜೀವನ ಶೈಲಿ ಉತ್ತೇಜಿಸುವ ತಾಂತ್ರಿಕ ಪರಿಕರಗಳನ್ನು ಉತ್ಪಾದಿಸಿದರೆ ಯಶಸ್ಸು ಅಲ್ಪಕಾಲ ಮಾತ್ರವೇ ಉಳಿಯುತ್ತದೆ. ಭಾರತದ ಭೌಗೋಳಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮಸ್ಯೆಗಳನ್ನು ನಿವಾರಿಸಲು ಅನುವಾಗುವ ಪರಿಕರಗಳನ್ನು ಉತ್ಪಾದಿಸಿದರೆ ಯಶಸ್ಸು ದೀರ್ಘಕಾಲ ಉಳಿಯುತ್ತದೆ ಎಂದು ನವೋದ್ಯಮಗಳಿಗೆ ಸಲಹೆ ನೀಡಿದರು.

BTS2020: ಟೊಮ್ಯಾಟೊ ಚೆಲ್ಲುವುದು ತಪ್ಪಲಿದೆ, ಸೋಯಾ ತೈಲದಂಶ ಹೆಚ್ಚಲಿದೆ!

ಶಿಕ್ಷಣ ಸುಧಾರಕ, ಎಂಜಿನಿಯರ್ ಹಾಗೂ ಸ್ಟೂಡೆಂಟ್ಸ್ ಎಜುಕೇಷನಲ್ ಆ್ಯಂಡ್ ಕಲ್ಚರಲ್ ಮೂವ್‌ಮೆಂಟ್ ಆಫ್ ಲಡಾಖ್‌ (ಎಸ್ಇಸಿಎಂಒಎಲ್)ನ ನಿರ್ದೇಶಕ ವಾಂಗ್‌ಚುಕ್‌ ಅವರ ಸಂಪೂರ್ಣ ಭಾಷಣದ ಸಾರಾಂಶ ಹೀಗಿದೆ.

ಕುತೂಹಲ ನಿಜವಾದ ಸಾಫ್ಟ್‌ವೇರ್

ಕುತೂಹಲ ನಿಜವಾದ ಸಾಫ್ಟ್‌ವೇರ್

ಕೌತುಕದ ಮನಸ್ಸಿನೊಂದಿಗೆ ಭಿನ್ನವಾಗಿ ಯೋಚಿಸಿದಾಗ ತಂತ್ರಜ್ಞಾನದ ಅನುಕೂಲಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಸಾಧ್ಯವಾಗುತ್ತದೆ. ಕುತೂಹಲವೇ ನಿಜವಾದ ಸಾಫ್ಟ್‌ವೇರ್ ಆಗಿದೆ. ಹೇಗೆ? ಏಕೆ? ಎಂಬ ಪ್ರಶ್ನಾರ್ಥಕ ಮನಸ್ಸಿನಿಂದ ಯೋಚಿಸಿದಾಗಲೇ ಆವಿಷ್ಕಾರದ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಈ ಆವಿಷ್ಕಾರಗಳು ಸಮಾಜಮುಖಿಯಾಗಿರಬೇಕೇ ಹೊರತು ಕಂಟಕವಾಗಬಾರದು ಎಂದು ಸೋನಮ್ ವಾಂಗ್‌ಚುಕ್ ಹೇಳಿದರು.

ಕಂಪನಿಗಳು, ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಉತ್ಪನ್ನಗಳನ್ನು ನೀಡುವಾಗಲೂ ಅವರ ಅಪೇಕ್ಷೆಗಳಿಗೆ ಸ್ಪಂದಿಸುವಂತೆ ಮಾರ್ಕೆಟಿಂಗ್ ಮಾಡುವುದು ಅಗತ್ಯ, ಜನರಿಗೆ ದುಬಾರಿ ಎನ್ನಿಸದ ಉತ್ಪನ್ನಗಳನ್ನು ನೀಡಿದಾಗಲೂ ಅವರ ಮನಸ್ಸಿನಲ್ಲಿ ತಮ್ಮ ಜೀವನಶೈಲಿಯಲ್ಲಿ ಮಹತ್ವದ ಸುಧಾರಣೆಯಾಗುತ್ತಿದೆ ಎಂಬ ಭಾವನೆ ಬರುವಂತಿರಬೇಕು ಎಂದು ಅವರು ಸಲಹೆ ನೀಡಿದರು.

ಪಠ್ಯಗಳಿಂದಲೇ ಎಲ್ಲ ಕಲಿಕೆ ಅಸಾಧ್ಯ

ಪಠ್ಯಗಳಿಂದಲೇ ಎಲ್ಲ ಕಲಿಕೆ ಅಸಾಧ್ಯ

ಕೇವಲ ಪಠ್ಯಪುಸ್ತಕಗಳಿಂದ ಮಕ್ಕಳು ಎಲ್ಲವನ್ನೂ ಕಲಿಯಲು ಸಾಧ್ಯವಿಲ್ಲ. ಪ್ರಕೃತಿಯೇ ಮಕ್ಕಳಿಗೆ ಅದೆಷ್ಟೋ ಸಂಗತಿಗಳನ್ನು ಕಲಿಸಿಕೊಡುತ್ತದೆ ಎನ್ನುವ ವಾಂಗ್ಚುಲಕ್, ವಿಭಿನ್ನ ಪ್ರಯೋಗಗಳ ಮೂಲಕ ಮಕ್ಕಳಲ್ಲಿ ಕಲಿಯುವ ಆಸಕ್ತಿ ಬೆಳೆಸಲು ಲಡಾಕ್ನುಲ್ಲಿ ದಶಕಗಳಿಂದ ತಾವು ಕೈಗೊಂಡ ಕ್ರಮಗಳನ್ನು ವಿವರಿಸಿದರು. ಬೇಸಿಗೆಯಲ್ಲಿ 35 ಡಿಗ್ರಿ ಸೆಲ್ಸಿಯಸ್, ಚಳಿಗಾಲದಲ್ಲಿ ಮೈನಸ್ 25 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವಂತಹ ಪರ್ವತ ಪ್ರದೇಶ ಲಡಾಕ್.

ಶತದಡ್ಡರು ಎಂಬ ಕಲ್ಪನೆ

ಶತದಡ್ಡರು ಎಂಬ ಕಲ್ಪನೆ

ಇಲ್ಲಿನ ಮಕ್ಕಳು ಗಣಿತ ಮತ್ತು ವಿಜ್ಞಾನದಲ್ಲಿ ಶತದಡ್ಡರು ಎಂಬ ಕಲ್ಪನೆ ಬಹುತೇಕರಲ್ಲಿತ್ತು. ಈ ಅಪನಂಬಿಕೆ ದೂರಮಾಡಬೇಕೆಂಬ ಉದ್ದೇಶದಿಂದ ಪಠ್ಯಪುಸ್ತಕದಲ್ಲಿನ ಸರಳ ವಿಜ್ಞಾನ ಮತ್ತು ಗಣಿತದ ಸೂತ್ರಗಳನ್ನು ಪ್ರಾಯೋಗಿಕವಾಗಿ ತಿಳಿಸಲೆಂದೇ ಭಿನ್ನ ಮಾದರಿಯ ಶಾಲೆಗಳನ್ನು ತೆರೆದೆ.

ಅಲ್ಲಿ ಸೌರಶಕ್ತಿ ಬಳಕೆಯಿಂದ ಹಿಡಿದು ಗ್ರೀನ್‍ಹೌಸ್ವ ರೆಗೆ ಎಲ್ಲವನ್ನೂ ಪ್ರಾಯೋಗಿಕವಾಗಿ ಮಕ್ಕಳಿಂದ ಮಾಡಿಸುವ ವ್ಯವಸ್ಥೆ ಕೈಗೊಳ್ಳಲಾಯಿತು. ಕ್ರಮೇಣ ಅವರ ಬುದ್ಧಿಶಕ್ತಿಯೂ ಹೆಚ್ಚಿತು. ಇದರ ಪರಿಣಾಮ ಹಲವು ವರ್ಷಗಳ ಹಿಂದೆ 10ನೇ ತರಗತಿಯಲ್ಲಿ ಗಣಿತ, ವಿಜ್ಞಾನದಲ್ಲಿ ಶೇಕಡ 5ರಷ್ಟು ಪಾಸಾಗುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ 2015ರ ಹೊತ್ತಿಗೆ ಶೇಕಡ 75ಕ್ಕೆ ಏರಿಕೆಗೊಂಡಿತು ಎಂದು ವಿವರಿಸಿದರು. ತಾಂತ್ರಿಕ ಅನ್ವೇಷಣೆಯಷ್ಟೇ ಅಲ್ಲದೇ ಇಂತಹ ಸಾಮಾಜಿಕ ಬದಲಾವಣೆಯೂ ಮುಖ್ಯ ಎಂದರು.

ಥ್ರೀ ಇಡಿಯಟ್ಸ್‌ ಚಿತ್ರಕ್ಕೆ ಪ್ರೇರಣೆ

ಥ್ರೀ ಇಡಿಯಟ್ಸ್‌ ಚಿತ್ರಕ್ಕೆ ಪ್ರೇರಣೆ

ಹಿಂದಿ ಭಾಷೆಯ ಥ್ರೀ ಇಡಿಯಟ್ಸ್‌ ಸಿನಿಮಾದಲ್ಲಿ ಅಮೀರ್ ಖಾನ್ ಅವರು ಪುನ್ಸುಕ್ ವಾಂಗ್ಡು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರದ ನಿಜರೂಪವೇ ಸೋನಮ್ ವಾಂಗ್ಚುಕ್. ಮೂಲತಃ ಮೆಕ್ಯಾನಿಕಲ್ ಎಂಜಿನಿಯರ್ ಆದ ಇವರು ಲಡಾಕ್ನದಲ್ಲಿ ವಿಭಿನ್ನ ಮಾದರಿಯ ಶಾಲೆಗಳನ್ನು ತೆರೆಯುವ ಮೂಲಕ ಶಿಕ್ಷಣ ಕ್ರಾಂತಿಯನ್ನೇ ಮಾಡಿದರು. ಲಡಾಕ್ನಯ ಭೌಗೋಳಿಕ ವಾತಾವರಣವನ್ನೇ ಅಸ್ತ್ರವಾಗಿಸಿಕೊಂಡು ಕೃತಕ ಮಂಜುಗಡ್ಡೆಯ ಸ್ತೂಪಗಳನ್ನು ಆವಿಷ್ಕರಿಸಿ ಬೇಸಿಗೆಯಲ್ಲಿ ಕೃಷಿಗೆ ನೀರು ಹರಿಸಿದ ವಾಂಗ್ಚುೇಕ್ ಅವರಿಗೆ ಅಮೆರಿಕದ ಪ್ರತಿಷ್ಠಿತ ರೋಲೆಕ್ಸ್ ನಾವೀನ್ಯಾತಾ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ಸಂದಿವೆ.

English summary
Sonam Wangchuk, an expert on many things that inspired the Hindi film Three Idiots a decade ago, has participated in the Bangalore Technology Fair -2020. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X