• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆಯ ವೇಳೆ ಬೇಸರದ ಮಾತನ್ನಾಡಿದ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಜ 30: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆಯ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪರೋಕ್ಷವಾಗಿ ಬಿಜೆಪಿ ಮತ್ತು ಸಂಘ ಪರಿವಾರವನ್ನು ಜರಿದಿದ್ದಾರೆ.

"ತಮ್ಮ ದೇಶದ ಶತ್ರು ಎಂದು ಗಾಂಧೀಜಿ ಯಾರ ವಿರುದ್ದ ಹೋರಾಡಿದರೂ, ಅವರು ಗಾಂಧೀಜಿಯವರನ್ನು ಹತ್ಯೆ ಮಾಡಲಿಲ್ಲ. ದೇಶ ಭಕ್ತಿಯ ಪಾಠ ಮಾಡುವ ಸಂಘಟನೆಯ ಸದಸ್ಯ ಅವರನ್ನು ಹತ್ಯೆ ಮಾಡಿದ"ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತ ಪಡಿಸಿದರು.

ಒಂದಷ್ಟು ಸುಳ್ಳು,ಇನ್ನೊಂದಿಷ್ಟು ತಪ್ಪು ಮಾಹಿತಿ,ಇದೇ ರಾಜ್ಯಪಾಲರ ಭಾಷಣ: ಸಿದ್ದರಾಮಯ್ಯ ಒಂದಷ್ಟು ಸುಳ್ಳು,ಇನ್ನೊಂದಿಷ್ಟು ತಪ್ಪು ಮಾಹಿತಿ,ಇದೇ ರಾಜ್ಯಪಾಲರ ಭಾಷಣ: ಸಿದ್ದರಾಮಯ್ಯ

"ಇಂದು ದೇಶಕ್ಕಾಗಿ ಪ್ರಾಣ ತೆತ್ತವರನ್ನು ಸ್ಮರಿಸುತ್ತಾ ಹುತಾತ್ಮರ ದಿನವನ್ನಾಗಿ ಆಚರಿಸುತ್ತೇವೆ. ನಾಥೂರಾಂ ಗೋಡ್ಸೆ ಎನ್ನುವ ದೇಶದ್ರೋಹಿ ಗಾಂಧೀಜಿಯವರನ್ನು ಹತ್ಯೆ ಮಾಡಿದ. ಆ ಕೊಲೆ ಗಡುಕನನ್ನೇ ಕೆಲವರು ಆರಾಧಿಸುತ್ತಿರುವುದು ದುರ್ದೈವ"ಎಂದು ಸಿದ್ದರಾಮಯ್ಯ ಹೇಳಿದರು.

"ಗಾಂಧೀಜಿಯವರು ಹೇಗೆ ನಮಗೆ ಸ್ವಾತಂತ್ರ್ಯ ದೊರಕಿಸಿಕೊಡಲು ಪ್ರಮುಖ ಪಾತ್ರವಹಿಸಿದರೋ, ಅವರ ಹತ್ಯೆ ಕೂಡಾ ಇಡೀ ದೇಶಕ್ಕೆ ಪಾಠವಾಗಿದೆ. ದೇಶದಲ್ಲಿ ಕೋಮು ಸೌಹಾರ್ದತೆ ಇರಬೇಕೆಂದು ಗಾಂಧೀಜಿ ಬಯಸಿದ್ದರು. ಆದರೆ, ಅದು ಇನ್ನೂ ಪೂರ್ಣವಾಗಿಲ್ಲ"ಎಂದು ಕೆಪಿಸಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹೇಳಿದರು.

"ಕೋಮು ಸೌಹಾರ್ದತೆಗಾಗಿ ತನ್ನ ಜೀವವನ್ನು ಬಲಿದಾನಗೈದ ಮಹಾತ್ಮ ಗಾಂಧೀಜಿ ಬದುಕಿನಲ್ಲಿ ಮಾತ್ರವಲ್ಲ ಸಾವಿನಲ್ಲಿಯೂ ಹೇಳಿಹೋಗಿರುವ ಪಾಠವನ್ನು ಮರೆಯದಿರೋಣ. ಗಾಂಧೀಜಿ ಎಂಬ ಜಗದ್ಗರುವಿನ ತತ್ವಾದರ್ಶಗಳ ಅನುಷ್ಠಾನ ನಮ್ಮ ಗುರಿಯಾಗಿರಲಿ"ಎಂದು ಸಿದ್ದರಾಮಯ್ಯ ಹೇಳಿದರು.

ಅಮೆರಿಕದಲ್ಲಿ ದುಷ್ಕರ್ಮಿಗಳ ಕೃತ್ಯ: ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸಅಮೆರಿಕದಲ್ಲಿ ದುಷ್ಕರ್ಮಿಗಳ ಕೃತ್ಯ: ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ

   ಮ್ಯಾನ್ ಹೋಲ್ ಕ್ಲೀನ್ ಮಾಡೋಕೆ ರೋಬೋಟ್ ಬರ್ತಿದಾನೆ !! | Oneindia Kannada

   ಕೆಪಿಸಿಸಿ ಕಚೇರಿಯಲ್ಲಿ ಮಹಾತ್ಮ ಗಾಂಧಿಯವರ ಪುಣ್ಯಸ್ಮರಣೆ ಅಂಗವಾಗಿ ನಡೆದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರೀಖ್ ಅನ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ರಾಮಲಿಂಗಾರೆಡ್ಡಿ ಸೇರಿ ಹಲವರು ಭಾಗವಹಿಸಿದ್ದರು.

   ಇದಾದ ನಂತರ, ಕೃಷಿ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು "ಸಂಘರ್ಷದ ಸಂಕಲ್ಪ ದಿನ" ಹೆಸರಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಅವರ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದರು.

   English summary
   Some Of Them Treating Nathuram Godse As God, Said Opposition Leader Siddaramaiah,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X