ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ 'ತಲ್ಲಣ'ಗೊಳ್ಳುವ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ

|
Google Oneindia Kannada News

ಚಾಮಾರಾಜನಗರ, ಮೇ 29: ಕರ್ನಾಟಕ ಬಿಜೆಪಿ ಘಟಕದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸುದ್ದಿಯ ನಡುವೆ, ಜಲಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ಸಿಗೆ ಶಾಕ್ ನೀಡುವ ಹೇಳಿಕೆಯನ್ನು ನೀಡಿದ್ದಾರೆ.

Recommended Video

ನೀವು ಸೈಲೆಂಟ್ ಆಗಿಲ್ಲ ಅಂದ್ರೆ, ನಾನು ವೈಲೆಂಟ್ ಆಗಬೇಕಾಗುತ್ತದೆ | Ravi d channannavar | Oneindia Kannada

ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣರಾದ ಜಾರಕಿಹೊಳಿ ಸಾಹೇಬ್ರು, ರಾಜಕೀಯದಲ್ಲಿ ತಮ್ಮ ಪ್ರಮುಖ ಎದುರಾಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬಿಸಿಮುಟ್ಟಿಸುವ ಹೇಳಿಕೆಯನ್ನು ನೀಡಿದ್ದಾರೆ.

"ಬಿಜೆಪಿ ಶಾಸಕರ ರಹಸ್ಯ ಮೀಟಿಂಗ್‌; ಮಾಧ್ಯಮಗಳ ತಪ್ಪು ಕಲ್ಪನೆ'

ಅಧಿಕೃತವಾಗಿ ಡಿಕೆಶಿ, ಕೆಪಿಸಿಸಿ ಅಧ್ಯಕ್ಷ ಪದಗ್ರಹಣ ಮಾಡುವ ಮೊದಲೇ, ಕಾಂಗ್ರೆಸ್ಸಿಗೆ ಭರ್ಜರಿ ಶಾಕ್ ನೀಡಲು ಸಿದ್ದರಾದಂತಿರುವ ರಮೇಶ್ ಜಾರಕಿಹೊಳಿ, ಇದಕ್ಕೆ ಬಿಜೆಪಿಯ ಅನುಮತಿ ಬೇಕು ಎಂದಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯ ಸನಿಹದಲ್ಲಿರುವ ಸಂತೋಷ್ ಯಾರು?ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯ ಸನಿಹದಲ್ಲಿರುವ ಸಂತೋಷ್ ಯಾರು?

ಬಿಜೆಪಿಯ ಹೈಕಮಾಂಡ್ ಅನುಮತಿ ನೀಡಿದರೆ, ಕಾಂಗ್ರೆಸ್ಸಿನ ಶಾಸಕರನ್ನು ಬಿಜೆಪಿಗೆ ಕರೆತರುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬಿಜೆಪಿಗೆ ಬರಲು ಸಿದ್ದರಿರುವ ಕಾಂಗ್ರೆಸ್ಸಿಗರು ಯಾರು?

ರಮೇಶ್ ಜಾರಕಿಹೊಳಿ - ಡಿಕೆಶಿ ಸಂಬಂಧ ಅಷ್ಟಕಷ್ಟೇ

ರಮೇಶ್ ಜಾರಕಿಹೊಳಿ - ಡಿಕೆಶಿ ಸಂಬಂಧ ಅಷ್ಟಕಷ್ಟೇ

ಕಾಂಗ್ರೆಸ್ ನಲ್ಲಿ ರಮೇಶ್ ಜಾರಕಿಹೊಳಿ ಇದ್ದಾಗಲೂ, ಡಿಕೆಶಿ ಜೊತೆ ಅವರ ಸಂಬಂಧ ಅಷ್ಟಕಷ್ಟೇ. ಈಗ, ಜೂನ್ ಹತ್ತನೇ ತಾರೀನೊಳಗೆ ಡಿಕೆಶಿ, ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹ ಮಾಡುವ ಸಾಧ್ಯತೆ ಇರುವುದರಿಂದ, ಅಷ್ಟರೊಳಗೆ ಡಿಕೆಶಿಗೆ ಶಾಕ್ ನೀಡಲು ಜಾರಕಿಹೊಳಿ ಮುಂದಾದಂತಿದೆ.

ಯಡಿಯೂರಪ್ಪ ನೇತೃತ್ವದ ಸರಕಾರ ಸುಭದ್ರ

ಯಡಿಯೂರಪ್ಪ ನೇತೃತ್ವದ ಸರಕಾರ ಸುಭದ್ರ

ಯಡಿಯೂರಪ್ಪ ನೇತೃತ್ವದ ಸರಕಾರ ಸುಭದ್ರವಾಗಿದೆ. ನಮ್ಮ ಬೆಂಬಲ ಎಂದಿಗೂ ಮುಖ್ಯಮಂತ್ರಿಗಳಿಗಿದೆ. ಮುಂದಿನ ಮೂರು ವರ್ಷ ಯಾಕೆ, ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕೆಲವರು, ಸಭೆ ನಡೆಸಿದರೆ, ಅದರಿಂದ ಸರಕಾರಕ್ಕೆ ತೊಂದರೆ ಎಂದು ಹೇಳಲು ಸಾಧ್ಯವಿಲ್ಲ.

ಟ್ರಯಲ್ ರನ್ ಎನ್ನುವಂತೆ, ಐವರನ್ನು ಬಿಜಿಪಿಗೆ ಸೇರಿಸುತ್ತೇನೆ

ಟ್ರಯಲ್ ರನ್ ಎನ್ನುವಂತೆ, ಐವರನ್ನು ಬಿಜಿಪಿಗೆ ಸೇರಿಸುತ್ತೇನೆ

ಇಪ್ಪತ್ತು ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲು ಸಿದ್ದರಿದ್ದಾರೆ. ಮೊದಲು ಟ್ರಯಲ್ ರನ್ ಎನ್ನುವಂತೆ, ಐವರನ್ನು ಬಿಜಿಪಿಗೆ ಸೇರಿಸುತ್ತೇನೆ. ಬಿಜೆಪಿಯ ವರಿಷ್ಠರು ನನಗೆ ಅನುಮತಿ ನೀಡದರಷ್ಟೇ ಸಾಕು, ಮಿಕ್ಕಿದ್ದನ್ನು ನಾನು ನೋಡಿಕೊಳ್ಳುತ್ತೇನೆ ಎನ್ನುವ ಮೂಲಕ, ಜಾರಕಿಹೊಳಿ, ಕಾಂಗ್ರೆಸ್ಸಿಗೆ ಭರ್ಜರಿ ಶಾಕ್ ನೀಡಿದ್ದಾರೆ.

ಇದನ್ನು ಭಿನ್ನಮತ ಎನ್ನುವುದು ತಪ್ಪು

ಇದನ್ನು ಭಿನ್ನಮತ ಎನ್ನುವುದು ತಪ್ಪು

ಕೊರೊನಾ ಹಾವಳಿಯಿಂದಾಗಿ ಮುಖಂಡರುಗಳಿಗೆ ಒಬ್ಬರನ್ನೊಬ್ಬರು ಭೇಟಿಯಾಗಲು ಸಾಧ್ಯವಾಗಲಿಲ್ಲ, ಇದನ್ನು ಭಿನ್ನಮತ ಎನ್ನುವುದು ತಪ್ಪು. ಬಿಜೆಪಿಯ ಹಿರಿಯರು ಅನುಮತಿ ನೀಡಿದರೆ, ಒಂದು ವಾರದೊಳಗೆ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೇರಿಸುವ ಜವಾಬ್ದಾರಿ ನನ್ನದು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

English summary
Some Of The Congress MLAs Ready To Join BJP: Minister Ramesh Jarkiholi Shocking Statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X