ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷದ ನಾಯಕರಲ್ಲಿದ್ದ ಅಸಮಾಧಾನ ಶಮನಗೊಂಡಿದೆ: ಡಿಕೆಶಿ

By Nayana
|
Google Oneindia Kannada News

ಬೆಂಗಳೂರು, ಜೂನ್ 10: ಪಕ್ಷದ ಕೆಲವು ನಾಯಕರಲ್ಲಿ ಇದ್ದ ಅಸಮಾಧಾನ ಅಂತ್ಯಗೊಂಡಿದೆ. ನಾವು ಎಲ್ಲಾ ಸಮಸ್ಯೆಗಳನ್ನು ಕುಳಿತು ಚರ್ಚೆ ನಡೆಸಿ ಬಗೆಹರಿಸಿದ್ದೇವೆ ಎಂದು ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನ ಎಲ್ಲಾ ಅತೃಪ್ತ ಶಾಸಕರ ಜೊತೆ ಸಂಪರ್ಕದಲ್ಲಿದ್ದೇನೆ. ಸರ್ಕಾರ ಸರಿಯಾಗಿಯೇ ಮುಂದುವರಿಯಲಿದೆ, ಏನೂ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದರು

ಸಂಪುಟ ಸಂಕಟ: ಕೈ ಪಾಳಯ ಸ್ವಲ್ಪ ನಿರಾಳ, ಜೆಡಿಎಸ್ ನಲ್ಲಿ ಕಾರ್ಮೋಡಸಂಪುಟ ಸಂಕಟ: ಕೈ ಪಾಳಯ ಸ್ವಲ್ಪ ನಿರಾಳ, ಜೆಡಿಎಸ್ ನಲ್ಲಿ ಕಾರ್ಮೋಡ

ಕಾಂಗ್ರೆಸ್ ಮತ್ತು ಜೆಡಿಎಸ್ ನ ಕೆಲವು ಅತೃಪ್ತ ಶಾಸಕರು ಬಿಜೆಪಿ ಸೇರಲು ಇಚ್ಛಿಸುತ್ತಿದ್ದಾರೆ ಎಂಬ ಬಿ ಎಸ್ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರು ತಮ್ಮ ಸೋಲನ್ನು ಒಪ್ಪಿಕೊಳ್ಳಬೇಕು, ಕರ್ನಾಟಕದ ಜನತೆ ಅವರ ಪರವಾಗಿ ಚುನಾವಣೆಯಲ್ಲಿ ತೀರ್ಪು ನೀಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿನ ಕೆಲವು ನಾಯಕರಲ್ಲಿದ್ದ ಭಿನ್ನಾಭಿಪ್ರಾಯ ಕೊನೆಯಾಗಿದೆ ಎಂದು ಹೇಳಿದರು.

Some leaders were unhappy but we have sorted the issues: DKS

'ರೆಬೆಲ್ ಸ್ಟಾರ್' ಎಂಬಿ ಪಾಟೀಲರಿಗೆ ರಾಹುಲ್ ಗಾಂಧಿ ಕಿವಿಮಾತು?'ರೆಬೆಲ್ ಸ್ಟಾರ್' ಎಂಬಿ ಪಾಟೀಲರಿಗೆ ರಾಹುಲ್ ಗಾಂಧಿ ಕಿವಿಮಾತು?

ಸಚಿವ ಸಂಪುಟ ಪುನರಚನೆ ಬಳಿಕ ಮಾಜಿ ಸಚಿವ ಎಂಬಿ ಪಾಟೀಲ್‌ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ಅಸಮಾಧಾನಗೊಂಡಿದ್ದರು. ಜತೆಗೆ ಹೈಕಮಾಂಡ್‌ಗೆ ಹೋಗಿ ಈ ಕುರಿತು ಚರ್ಚೆ ಕೂಡ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆದಿಯಾಗಿ ಅವರನ್ನು ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

English summary
Yeddyurappa has to accept the defeat, people haven't given him the mandate. I'm in touch with all MLAs nothing will go wrong minister DK Shivakumar said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X