ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ನಿವಾಸಕ್ಕೆ ಅತೃಪ್ತ ಶಾಸಕರು, ಮಹತ್ವದ ಚರ್ಚೆ

|
Google Oneindia Kannada News

Recommended Video

ಇಂದು ಸಿದ್ದರಾಮಯ್ಯ ನಿವಾಸಕ್ಕೆ ದೌಡಾಯಿಸಿದ ಅತೃಪ್ತ ಶಾಸಕರು | Oneindia Kannada

ಬೆಂಗಳೂರು, ಸೆಪ್ಟೆಂಬರ್ 17: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೂರೋಪ್‌ನಿಂದ ವಾಪಸ್ಸಾದ ಕೂಡಲೇ ಮತ್ತೆ ರಾಜ್ಯ ರಾಜಕರಣ ಗರಿಗೆದರಿದೆ.

ನಿನ್ನೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಸಭೆ ಮಾಡಿದ್ದ ಸಿದ್ದರಾಮಯ್ಯ ಅವರು ಇಂದು ಕೆಲವು ಅತೃಪ್ತ ಕಾಂಗ್ರೆಸ್‌ ಶಾಸಕರನ್ನು ಭೇಟಿ ಮಾಡಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಸಹ ಸಿದ್ದರಾಮಯ್ಯ ಭೇಟಿಗೆ ಆಗಮಿಸುತ್ತಿದ್ದಾರೆ.

ಕಾಂಗ್ರೆಸ್‌ ಹೈಕಮಾಂಡ್‌ಗೆ ಸಿದ್ದರಾಮಯ್ಯ ನೀಡಿದ 4 ಭರವಸೆಗಳು!ಕಾಂಗ್ರೆಸ್‌ ಹೈಕಮಾಂಡ್‌ಗೆ ಸಿದ್ದರಾಮಯ್ಯ ನೀಡಿದ 4 ಭರವಸೆಗಳು!

ಇಂದು ಮುಂಜಾನೆಯೇ ಕೆಲವು ಅತೃಪ್ತ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರ ನಿವಾಸ ಕಾವೇರಿಗೆ ಭೇಟಿ ನೀಡಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿಗಳಾದ ಎಂ.ಟಿ.ಬಿ.ನಾಗರಾಜು, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹಾಗೂ ಇನ್ನೂ ಕೆಲವು ಶಾಸಕರು ಅವರು ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸುತ್ತಿದ್ದಾರೆ.

ಸಚಿವ ಸ್ಥಾನ ಆಕಾಂಕ್ಷಿಗಳು

ಸಚಿವ ಸ್ಥಾನ ಆಕಾಂಕ್ಷಿಗಳು

ಮೊದಲ ಬಾರಿ ಸಂಪುಟ ವಿಸ್ತರಣೆ ಮಾಡಿದಾಗ ಸಚಿವ ಸ್ಥಾನ ಕೈತಪ್ಪಿದ್ದ ಶಾಸಕರು ಬಂಡಾಯದ ಬಾವುಟ ಹಾರಿಸಿದ್ದರು. ಆ ನಂತರ ಸಿದ್ದರಾಮಯ್ಯ ಅವರು ಮನವೊಲಿಸಿದ ನಂತರ ಬಾವುಟ ಕೆಳಗಿಳಿಸಿದ್ದರು. ಈಗ ಮತ್ತೆ ಸಂಪುಟ ವಿಸ್ತರಣೆ ನಡೆಯುತ್ತಿದ್ದು ಹಾಗಾಗಿ ಸಿದ್ದರಾಮಯ್ಯ ಅವರ ಬಳಿ ಲಾಭಿ ನಡೆಸಲು ಶಾಸಕರು ಬಂದಿದ್ದಾರೆ ಎನ್ನಲಾಗಿದೆ.

ಸಂಪುಟ ವಿಸ್ತರಣೆ : ಸಂಪುಟ ಸೇರುವ ಕಾಂಗ್ರೆಸ್‌ ಶಾಸಕರ ಪಟ್ಟಿ!ಸಂಪುಟ ವಿಸ್ತರಣೆ : ಸಂಪುಟ ಸೇರುವ ಕಾಂಗ್ರೆಸ್‌ ಶಾಸಕರ ಪಟ್ಟಿ!

ಡಜನ್‌ಗೂ ಹೆಚ್ಚು ಆಕಾಂಕ್ಷಿಗಳು ಇದ್ದಾರೆ

ಡಜನ್‌ಗೂ ಹೆಚ್ಚು ಆಕಾಂಕ್ಷಿಗಳು ಇದ್ದಾರೆ

ಕಾಂಗ್ರೆಸ್ ಆರು ಮಂತ್ರಿ ಸ್ಥಾನ ಹೊಂದಿದ್ದು, ಆರು ಸಚಿವರಿಗಷ್ಟೆ ಸಚಿವ ಸ್ಥಾನ ಈ ಬಾರಿ ಸಿಗಲಿದೆ. ಆದರೆ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇದ್ದು. ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಎಂಟಿಬಿ ನಾಗರಾಜು, ಎಚ್‌ಕೆ ಪಾಟೀಲ್, ರಾಮಲಿಂಗಾರೆಡ್ಡಿ ಅವರಂತಹ ಹಿರಿಯರ ಜೊತೆಗೆ ಬಿಸಿ ಪಾಟೀಲ್, ಸುಧಾಕರ್, ಮುನಿಯಪ್ಪ, ಶ್ರೀಮಂತ ಪಾಟೀಲ್ ಇನ್ನೂ ಹಲವು ಶಾಸಕರು ಸಚಿವ ಸ್ಥಾನಕ್ಕೆ ಭೇಡಿಕೆ ಇಟ್ಟಿದ್ದಾರೆ.

ಸಿದ್ದರಾಮಯ್ಯ ವಾಪಸ್, ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ! ಸಿದ್ದರಾಮಯ್ಯ ವಾಪಸ್, ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ!

ಬಂಡಾಯ ಶಮನ ಮಾಡುವ ಜವಾಬ್ದಾರಿ ಸಿದ್ದರಾಮಯ್ಯಗೆ

ಬಂಡಾಯ ಶಮನ ಮಾಡುವ ಜವಾಬ್ದಾರಿ ಸಿದ್ದರಾಮಯ್ಯಗೆ

ನಿನ್ನೆ ಕೆ.ಸಿ.ವೇಣುಗೋಪಾಲ್, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಸಿದ್ದರಾಮಯ್ಯ ಇಷ್ಟೂ ಜನ ಸಭೆ ನಡೆಸಿ ಸಂಪುಟ ಸೇರಲಿರುವ ಆರು ಜನ ಕಾಂಗ್ರೆಸ್ ಶಾಸಕರ ಪಟ್ಟಿ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಪಟ್ಟಿ ಬಿಡುಗಡೆ ಮಾಡುವ ಮೊದಲೇ ಸ್ಥಾನ ವಂಚಿತರು ಬಂಡಾಯ ಏಳದಂತೆ ತಡೆಯುವ ಜವಾಬ್ದಾರಿ ಸಿದ್ದರಾಮಯ್ಯ ಅವರ ಮೇಲೆ ಇರುವ ಕಾರಣ ಸಿದ್ದರಾಮಯ್ಯ ಅವರೇ ಅತೃಪ್ತ ಶಾಸಕರನ್ನು ಆಹ್ವಾನಿಸಿದ್ದಾರೆ ಎಂದೂ ಸಹ ಈ ಭೇಟಿಯನ್ನು ವಿಶ್ಲೇಷಿಸಲಾಗಿದೆ.

ರಮೇಶ್ ಜಾರಕಿಹೊಳಿ ಭೇಟಿ

ರಮೇಶ್ ಜಾರಕಿಹೊಳಿ ಭೇಟಿ

ರಾಜ್ಯ ರಾಜಕಾರಣದಲ್ಲಿ ಪ್ರಸ್ತತ ಎದ್ದಿರುವ ಅಶಾಂತ ಅಲೆಗಳಿಗೆ ಕಾರಣವಾಗಿರುವ ಜಾರಕಿಹೊಳಿ ಸಹೋದರರಲ್ಲಿ ಒಬ್ಬರಾದ ರಮೇಶ್ ಜಾರಕಿಹೊಳಿ ಅವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿ ಭಾರಿ ಮಹತ್ವ ಪಡೆದಿದ್ದು, ಸರ್ಕಾರವನ್ನು ಅಸ್ಥಿರಗೊಳಿಸುತ್ತಿದ್ದಾರೆ ಎನ್ನಲಾಗುತ್ತಿರುವ ರಮೇಶ್ ಜಾರಕಿಹೊಳಿ ಅವರ ಕಿವಿ ಹಿಂಡಲಿದ್ದಾರಾ ಸಿದ್ದರಾಮಯ್ಯ ಎಂಬುದನ್ನು ಕಾದುನೋಡಬೇಕಿದೆ.

ಸಿದ್ದರಾಮಯ್ಯ ಮುಂದಿರುವ 4 ಸವಾಲುಗಳು: ವಾಪಸ್ ಬಂದಮೇಲೆ ಏನೇನಾಗುತ್ತೆ?ಸಿದ್ದರಾಮಯ್ಯ ಮುಂದಿರುವ 4 ಸವಾಲುಗಳು: ವಾಪಸ್ ಬಂದಮೇಲೆ ಏನೇನಾಗುತ್ತೆ?

English summary
Some congress dissident MLA's visit Siddaramaiah today. MLA Sudhakar, Bhima Naik, MTB Nagraj met Siddaramaiah today. minsiter Ramesh Jarkiholi also meeting Siddaramaiah today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X