ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಗಾವಣೆಗೆ ಈಗ ಸಾಫ್ಟ್‌ವೇರ್ ಸಮಸ್ಯೆ: ಸಾವಿರಾರು ಶಿಕ್ಷಕರಿಗೆ ನಿರಾಸೆ

|
Google Oneindia Kannada News

Recommended Video

ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೆ ನಿರಾಸೆ | Oneindia Kannada

ಬೆಂಗಳೂರು, ಅಕ್ಟೋಬರ್ 16: ದೇವರು ಕೊಟ್ಟರೂ ವರ ಪೂಜಾರಿ ಕೊಡುವುದಿಲ್ಲ ಎನ್ನುವಂತಾಗಿದೆ ನಮ್ಮ ರಾಜ್ಯದ ಶಿಕ್ಷಕರ ಪರಿಸ್ಥಿತಿ. ಇಷ್ಟು ದಿನಗಳ ಕಾಲ ವರ್ಗಾವಣೆಗಾಗಿ ಸತತ ಹೋರಾಟ ನಡೆಸಿದರೂ ಅಂತಿಮ ಹಂತದಲ್ಲಿ ಸಾಫ್ಟ್‌ವೇರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡು ಶಿಕ್ಷಕರು ಪರಿತಪಿಸುವಂತಾಗಿದೆ.

ವರ್ಗಾವಣೆ ಮಾಡುವಂತೆ ಎಷ್ಟೇ ಬಾರಿ ಸರ್ಕಾರದ ಮೊರೆ ಹೋಗಿದ್ದರೂ ಕೂಡ ಏನು ಪ್ರಯೋಜನವಾಗಿರಲಿಲ್ಲ, ಅಂತಿಮವಾಗಿ ಶಿಕ್ಷಕರ ವರ್ಗಾವಣೆಗೆ ಸಮ್ಮಿಶ್ರ ಸರ್ಕಾರ ಅಸ್ತು ಎಂದಿತ್ತು. ಬಳಿಕ ಲೋಕಸಭೆ ಚುನಾವಣೆ ನೀತಿ ಸಂಹಿತೆ ಶಿಕ್ಷಕರ ಕೌನ್ಸಲಿಂಗ್‌ಗೆ ಅಡ್ಡಿಯಾಗುತ್ತದೆ ಎನ್ನಲಾಗಿತ್ತು.

ನಿಂತು ಹೋದ ಶಿಕ್ಷಕರ ವರ್ಗಾವಣೆ: ಈ ಬಾರಿ ಶಿಕ್ಷಣ ಸಚಿವರೇ ತಡೆದರು! ನಿಂತು ಹೋದ ಶಿಕ್ಷಕರ ವರ್ಗಾವಣೆ: ಈ ಬಾರಿ ಶಿಕ್ಷಣ ಸಚಿವರೇ ತಡೆದರು!

ಬಳಿಕ ಚುನಾವಣಾ ಆಯೋಗವು ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್‌ಗೆ ಯಾವುದೇ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದೀಗ ಸಾಫ್ಟ್‌ವೇರ್ ಸಮಸ್ಯೆ ಎದುರಾಗಿದ್ದು, ಶಿಕ್ಷಕರಿಗೆ ನಿರಾಸೆ ಉಂಟು ಮಾಡಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ಟಿಡಿಎಸ್ ವರ್ಗಾವಣೆ ತಂತ್ರಾಂಶದಲ್ಲಿ ನಮೂದಾಗಿರುವ ಶಿಕ್ಷಕರ ಸಂಖ್ಯೆಗೂ, ಕೌನ್ಸೆಲಿಂಗ್ ಗೆ ಹಾಜರಾರಿದ್ದ ಶಿಕ್ಷಕರ ಸಂಖ್ಯೆಗೆ ತಾಳೆಯಾಗುತ್ತಿರಲಿಲ್ಲ. ಇದರಿಂದ ಕಾರವಾರ ಸೇರಿದಂತೆ ಹಲವೆಡೆ ಕೌನ್ಸೆಲಿಂಗ್ ಪ್ರಕ್ರಿಯೆಗಳು ಸ್ಥಗಿತಗೊಂಡವು. ಹಾಗಾಗಿ ಕೌನ್ಸೆಲಿಂಗ್‌ಗೆ ಹಾಜರಾಗಿದ್ದ ಶಿಕ್ಷಕರು ತೆರಳಿದರು.

 ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್

ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್

ಜಿಲ್ಲಾ ಮಟ್ಟದಲ್ಲಿ ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಆನ್‌ಲೈನ್ ಕೌನ್ಸೆಲಿಂಗ್ ಅ.30ರಿಂದ ನವೆಂಬರ್ 5 ರವರೆಗೆ ನಡೆಯಲಿದೆ. ಹೆಚ್ಚುವರಿ ಪ್ರೌಢಶಾಲಾ ಶಿಕ್ಷಕರ ತಾತ್ಕಾಲಿಕ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಈ ಪೆಟ್ಟಿಗೆ ಅ.22ರಿಂದ 26ರವರೆಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.

ಛೆ, ಇದೆಂಥ ವಿಡಿಯೋ ನೋಡಿ! ವಿದ್ಯಾರ್ಥಿಗಳ ಕಾಲಿಗೆ ಬಿದ್ದ ಗುರು! ಛೆ, ಇದೆಂಥ ವಿಡಿಯೋ ನೋಡಿ! ವಿದ್ಯಾರ್ಥಿಗಳ ಕಾಲಿಗೆ ಬಿದ್ದ ಗುರು!

ಕೋರಿಕೆ ವರ್ಗಾವಣೆ ಶಿಕ್ಷಕರ ಅಂತಿಮ ಆದ್ಯತಾ ಪಟ್ಟಿ

ಕೋರಿಕೆ ವರ್ಗಾವಣೆ ಶಿಕ್ಷಕರ ಅಂತಿಮ ಆದ್ಯತಾ ಪಟ್ಟಿ

ಕೋರಿಕೆ ವರ್ಗಾವಣೆ ಶಿಕ್ಷಕರ ಅಂತಿಮ ಆದ್ಯತಾ ಪಟ್ಟಿ ನ.11ರಂದು ಹಾಗೂ ಪರಸ್ಪರ ವರ್ಗಾವಣೆ ಶಿಕ್ಷಕರ ಅಂತಿಮ ಪಟ್ಟಿ ನ.10ರಂದು ಬಿಡುಗಡೆಯಾಗಲಿದ್ದು, ನ.29ರಂದು ಕೌನ್ಸೆಲಿಂಗ್ ನಡೆಯಲಿದೆ.

3 ವರ್ಷಗಳಿಂದ ವರ್ಗಾವಣೆ ಸ್ಥಗಿತ: ಉಪವಾಸಕ್ಕೆ ಮುಂದಾದ ಶಿಕ್ಷಕರು 3 ವರ್ಷಗಳಿಂದ ವರ್ಗಾವಣೆ ಸ್ಥಗಿತ: ಉಪವಾಸಕ್ಕೆ ಮುಂದಾದ ಶಿಕ್ಷಕರು

ವರ್ಗಾವಣೆ ಪಟ್ಟಿ ಪ್ರಕಟ

ವರ್ಗಾವಣೆ ಪಟ್ಟಿ ಪ್ರಕಟ

ಶಿಕ್ಷಣ ಇಲಾಖೆಯು ರಾಜ್ಯ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅ.22ರಿಂದ ವರ್ಗಾವಣೆ ಪ್ರಕ್ರಿಯೆಗಳು ಆರಂಭವಾಗಲಿದೆ. ಇಲಾಖೆಯ ವೆಬ್‌ಸೈಟ್ http://www.schooleducation.kar.nic.inನಲ್ಲಿ ಪ್ರಕಟಿಸಲಾಗಿದೆ.

ಶಿಕ್ಷಕರ ವರ್ಗಾವಣೆಯನ್ನು ಶಿಕ್ಷಣ ಸಚಿವರೇ ತಡೆದರು

ಶಿಕ್ಷಕರ ವರ್ಗಾವಣೆಯನ್ನು ಶಿಕ್ಷಣ ಸಚಿವರೇ ತಡೆದರು

ಈ ವರ್ಷವೂ ಕೂಡ ಶಿಕ್ಷಕರ ವರ್ಗಾವಣೆ ಕನಸಾಗಿಯೇ ಉಳಿಯಲಿದೆ ಎನ್ನುವ ಭಾವನೆ ಮೂಡಿತ್ತು. ಯಾಕೆಂದರೆ ಆದರೆ ಕಳೆದ ಒಂದು ತಿಂಗಳಿಂದ ಈ ವರ್ಷವಾದರೂ ವರ್ಗಾವಣೆ ಭಾಗ್ಯ ಸಿಗಬಹುದು ಎಂದು ಶಿಕ್ಷಕರು ಕಾಯುತ್ತಿದ್ದರು. ಮೂರ್ನಾಲ್ಕು ವರ್ಷಗಳಿಂದ ಒಂದಲ್ಲಾ ಒಂದು ಕಾರಣದಿಂದ ರಾಜ್ಯ ಸರ್ಕಾರಿ ಶಾಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯನ್ನು ಸರ್ಕಾರ ಮುಂದೂಡುತ್ತಲೇ ಬಂದಿತ್ತು.

English summary
Hundreds of primary school teachers were disappointed as counseling process was canceled in the last minute as officials of school education department were unable to do the same due to error occurred in software.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X