ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಾಂತಿಯೋಗಿ ಅಣ್ಣ ಬಸವಣ್ಣ ಇಂದಿಗೂ ಪ್ರಸ್ತುತ ಹೇಗೆ?

ನಾಡಿನೆಲ್ಲೆಡೆ ಜಾತಿ ಧರ್ಮಗಳ ಅಸಮಾನತೆ ತಾಂಡವವಾಡುತ್ತಿದ್ದಾಗ 12ನೇ ಶತಮಾನದಲ್ಲಿ ಅಲ್ಲೊಂದು ಜ್ಯೋತಿ ಉದಯಿಸಿತು. ಅದೊಂದು ಮಹಾನ್ ಶಕ್ತಿ, ಅದೊಂದು ಮಹಾನ್ ಚೇತನ. ಅವರೇ ನಮ್ಮ ನಾಡಿನ ಮಹಾನ್ ಕ್ರಾಂತಿಯೋಗಿ ಬಸವಣ್ಣ

By ಸುಮಾ ಮುದ್ದಾಪುರ
|
Google Oneindia Kannada News

ಜಗಜ್ಯೋತಿ ಬಸವಣ್ಣ
ಚನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇವರಿಬ್ಬರೂ ಹೊಲದಲ್ಲಿ ಬೆರಣಿಗೆ ಹೋಗಿ
ಸಂಗವ ಮಾಡಿದರು
ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲಸಂಗಮದೇವ ಸಾಕ್ಷಿಯಾಗಿ...

ಹೊಲೆಯುಂಟೆ ಲಿಂಗವಿದ್ದಡೆಯಲ್ಲಿ?
ಕುಲವುಂಟೆ ಜಂಗಮವಿದ್ದಡೆಯಲ್ಲಿ?
ಎಂಜಲುಂಟೆ ಪ್ರಸಾದವಿದ್ದಡೆಯಲ್ಲಿ?
ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ.
ನಿಷ್ಕಳಂಕ ನಿಜೈಕ್ಯ ತ್ರಿವಿಧನಿರ್ಣಯ,
ಕೂಡಲಸಂಗಮದೇವಾ, ನಿಮ್ಮ ಶರಣರಿಗಿಲ್ಲದಿಲ್ಲ...

ನಾಡಿನೆಲ್ಲೆಡೆ ಜಾತಿ ಧರ್ಮಗಳ ಅಸಮಾನತೆ ತಾಂಡವವಾಡುತ್ತಿದ್ದಾಗ 12ನೇ ಶತಮಾನದಲ್ಲಿ ಅಲ್ಲೊಂದು ಜ್ಯೋತಿ ಉದಯಿಸಿತು. ಅದೊಂದು ಮಹಾನ್ ಶಕ್ತಿ, ಅದೊಂದು ಮಹಾನ್ ಚೇತನ. ಅವರೇ ನಮ್ಮ ನಾಡಿನ ಮಹಾನ್ ಕ್ರಾಂತಿಯೋಗಿ, ನಾಡಿನ ತುಂಬೆಲ್ಲಾ ಸಮಾನತೆಯ ಮಂತ್ರ ಪಠಿಸಿದ ಬಸವಣ್ಣ.

Socio religious reformer Basavanna's work are more relevant today

1134ರಲ್ಲಿ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ಗ್ರಾಮದಲ್ಲಿ ಬ್ರಾಹ್ಮಣ ಕುಟುಂಬದ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದ ಶಿಶುವೇ ಈ ಬಸವಣ್ಣ. ಬಸವಣ್ಣನವರು ತಮ್ಮ ಚಿಕ್ಕ ವಯಸ್ಸಿನಿಂದಲೇ ವೈದಿಕ ಸಂಸ್ಕೃತಿಯ ವಿರೋಧಿಯಾಗಿದ್ದರು. ಬ್ರಾಹ್ಮಣ ಸಂಪ್ರದಾಯದಂತೆ ಅವರಿಗೆ 18ನೇ ವಯಸ್ಸಿನಲ್ಲಿ ಜನಿವಾರವನ್ನು ಹಾಕಲು ಬಂದಾಗ, ತನಗಿಂತ ಹಿರಿಯಳಾಗಿರುವ ತನ್ನಕ್ಕನಿಗೆ ಜನಿವಾರ ಹಾಕುವಂತೆ ಹಠ ಹಿಡಿಯುತ್ತಾರೆ ಬಸವಣ್ಣ.

ಬ್ರಾಹ್ಮಣ ಸಮುದಾಯದಲ್ಲಿ ಇದು ಪುರುಷರಿಗೆ ಮಾತ್ರ ಹಾಕಲಾಗುತ್ತದೆ, ಮಹಿಳೆಯರಿಗೆ ಇದನ್ನು ಹಾಕುವುದಿಲ್ಲವೆಂದಾಗ ಸ್ತಿ - ಪುರುಷರ ಬಗೆಗೆ ನಡೆಯುತ್ತಿರುವ ಅಸಮಾನತೆಯನ್ನು ಪ್ರಶ್ನಿಸಿ ಮನೆ ಬಿಟ್ಟು ಹೊರನಡೆಯುತ್ತಾರೆ. ಮನೆ ತೊರೆದ ಆ ಜಗಜ್ಯೋತಿ ಬಸವಣ್ಣ ಸತ್ಯಾನ್ವೇಷಣೆಗಾಗಿ ಮಹಾಕ್ಷೇತ್ರ ಕೂಡಲಸಂಗಮಕ್ಕೆ ಬಂದು ನೆಲೆಸುತ್ತಾರೆ.

ಕೂಡಲಸಂಗಮದಲ್ಲಿ ಸತತ 12ವರ್ಷಗಳ ಕಾಲ ತಮ್ಮ ವಿದ್ಯಾಭ್ಯಾಸವನ್ನು ಮುಗಿಸುವ ಬಸವಣ್ಣ, ಜಾತಿ, ಮತ, ಲಿಂಗ ಭೇದಗಳನ್ನು ತಿರಸ್ಕರಿಸಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡುತ್ತಾರೆ. ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು
ಸ್ವೀಕರಿಸುವ ಮತ್ತು ಆಚರಿಸುವವರು ಶಿವಶರಣರಾಗಬಹುದು ಎಂಬುದನ್ನು ಇಡೀ ಜಗತ್ತಿಗೆ ಸಾರಿ ಹೇಳುತ್ತಾರೆ.

ತ್ರಿಮೂರ್ತಿಗಳನ್ನು ಮೀರಿದ ಸೃಷ್ಠಿಕರ್ತನೇ ಶ್ರೇಷ್ಠ ದೈವವೆಂದು ಘೋಷಿಸಿ, ಆ ದೇವನನ್ನು ಲಿಂಗವೆಂದು ಕರೆಯುತ್ತಾರೆ. ಜಾತಿ ಅಸಮಾನತೆಯನ್ನು ಸೃಷ್ಠಿದ್ದ ಪುರೋಹಿತಶಾಹಿ ವರ್ಗವನ್ನು ವಿರೋಧಿಸುತ್ತಾರೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ವಚನ ಸಾಹಿತ್ಯ ಆರಂಭಿಸುತ್ತಾರೆ. ತಮ್ಮ ವಚನಗಳ ಮೂಲಕ ಸಾಮಾಜಿಕ ಓರೆ-ಕೋರೆಗಳನ್ನು ತಿದ್ದುತ್ತಾರೆ. ಬಸವಣ್ಣನವರ ಪ್ರಭಾವಕ್ಕೆ ಒಳದ ಹರಿಜನ ಮತ್ತು ಬ್ರಾಹ್ಮಣ ಕುಟುಂಬಗಳ ನಡುವೆ ವಿವಾಹ ಕಲ್ಯಾಣದ ಕ್ರಾಂತಿ ನಡೆಯುತ್ತವೆ.

ಹೀಗೆ ಬಸವಣ್ಣ ಮಾಡಿದ ಸಮಾಜಮುಖಿ ಕಾರ್ಯಗಳು ಇಡೀ ಮನುಕುಲವನ್ನ ಹೊಸ ಮನ್ವಂತರದತ್ತ ಮುನ್ನಡೆಸಿತ್ತು. 12 ನೇ ಶತಮಾನದಲ್ಲಿ ಬಸವಣ್ಣ ಮಾಡಿದ ಕ್ರಾಂತಿಗೆ ಇಂದಿಗೂ ಸಾಕ್ಷಿಯಾಗಿ ನಿಂತಿದೆ ಬಸವನ ಬಾಗೇವಾಡದಲ್ಲಿರುವ ಅನುಭವ ಮಂಟಪ.

ಬಸವಣ್ಣನ ಆಲೋಚನೆಗಳು ಚಿಂತನೆಗಳು, ಇಂದಿಗೂ ಕೂಡ ಪ್ರಸ್ತುತ. ವಿಶ್ವಮಾನ್ಯ ಪಡೆದ ಸಂತ ಇಂದು ಧರ್ಮಕ್ಕೆ ಸೀಮಿತವಾಗಿ, ಕೆಲವರ ಆಸ್ತಿ ಆಗಿ ಉಳಿದಿರೋದು ದುರ್ದೈವ.

ಕ್ಷಮೆ ಇರಲಿ ಬಸವಣ್ಣ ನಿನ್ನ ದೇವರು ಮಾಡಿದ್ದಕ್ಕೆ..
ಕ್ಷಮೆ ಇರಲಿ ಬಸವಣ್ಣ ನಿನಗೆ ಗುಡಿ ಕಟ್ಟಿದ್ದಕ್ಕೆ..
ಕ್ಷಮೆ ಇರಲಿ ಬಸವಣ್ಣ ನಿನ್ನನೇ ಜಾತಿ ಮಾಡಿದ್ದಕ್ಕೆ
ಕ್ಷಮೆ ಇರಲಿ ಬಸವಣ್ಣ ನಿನ್ನ ವಚನಗಳು ಕೇವಲ ಗೋಡೆಗಳ ಮೇಲೆ ಮಾತ್ರವೇ ಉಳಿದಿದ್ದಕ್ಕೆ

ನೀನು ಹುಟ್ಟಿದ್ದ ಕ್ಷೇತ್ರ ತೀರ್ಥಕ್ಷೇತ್ರವಾಯ್ತು
ನೀನು ಇದ್ಧ ಸ್ಥಳವೇ ದೇಗುಲವಾಯ್ತು
ಮೂರ್ತಿ ಪೂಜೆ ಬೇಡವೆಂದ ನಿನ್ನನೇ
ಮೂರ್ತಿ ಮಾಡಿ ದೇಗುಲದಲ್ಲಿ ಸ್ಥಾಪಿಸಿದರು

ನಿನ್ನ ಹೆಸರಲ್ಲಿ ಸಂಶೋಧನೆಗಳು, ಮಠಗಳು,
ವಿಶ್ವ ಪ್ರಸಿದ್ಧ ಉದ್ಯಮಗಳು ಉನ್ನತಿ ಪಡೆಯುತ್ತಿವೆ
ಆದ್ರೆ ಬಸವಣ್ಣ...
ನೀನು ಕಂಡ ಕನಸ್ಸು ಮಾತ್ರ ಇಂದಿಗೂ ನನಸಾಗಲಿಲ್ಲ.

ನಿನ್ನ ಕನಸಿನ ಸಮಾನತೆ ಸಾಧ್ಯವಾಗಲಿಲ್ಲ
ಜಾತಿ ವ್ಯವಸ್ಥೆ ನಾಶವಾಗಲಿಲ್ಲ
ಮನುಜಮತಂ ವಿಶ್ವ ಪಥಂ ಅನ್ನೋ ಸಮಾಜ ನಿರ್ಮಾಣವಾಗಲಿಲ್ಲ

ಮೌಡ್ಯ ವಿಜ್ಞಾನವನ್ನೇ ನುಂಗುತ್ತಿದೆ
ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ
ಅನ್ನೋ ಮಾತು ಸುಳ್ಳಾಗಿ
ಸ್ಥಾವರ ಶಾಶ್ವತವಾಗಿ, ಜಂಗಮ ಅಳಿಸಿದೆ
ಸಮಾನತೆಯ ಹಾರಿಕಾರನೇ ಮತ್ತೆ ಹುಟ್ಟಿ ಬಾ..
ಜಾತಿಯ ಭೂತವನ್ನ ಸಂಹಾರ ಮಾಡಲು,
ಅಸಮಾನತೆಯಿಂದ ಮೆರೆಯುವ ಮೌಡ್ಯರಿಗೆ ಅಂಕುಶ ಹಾಕಲು..

English summary
Basavanna - 12th-century philosopher, statesman, Kannada poet and a social reformer's works are more relevant today in Karnataka. He played a crucial role in moulding religious and social values of our country
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X