• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜಕೀಯ ನಿವೃತ್ತಿ ಘೋಷಿಸಿದ ಕಾಗೋಡು ತಿಮ್ಮಪ್ಪ!

By Nayana
|

ಬೆಂಗಳೂರು, ಜುಲೈ 31: ಹಿರಿಯ ಕಾಂಗ್ರೆಸ್‌ ನಾಯಕ, ಸಮಾಜವಾದಿ ಚಿಂತಕ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. 'ಚುನಾವಣಾ ರಾಜಕೀಯ ಸಾಕಾಗಿದೆ ಇಷ್ಟು ವರ್ಷ ಹೋರಾಟ ಮಾಡಿದ್ದು ಸಾಕು, ಈಗ ನನಗೆ ವಯಸ್ಸಾಗಿದೆ, ಇನ್ನು ಮುಂದೆ ಹೋರಾಟ ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಚಳವಳಿಗಳ ಮೂಲಕವೇ ಸಮ ಸಮಾಜದ ಕನಸು ಕಂಡ, ದಮನಿತರ ಧ್ವನಿಯಾಗಿ ಹಕ್ಕುಗಳ ರಕ್ಷಣೆಗೆ ಟೊಂಕ ಕಟ್ಟಿ ನಿಂತ‌ ನಿಸ್ಪೃಹ ವ್ಯಕ್ತಿತ್ವದ ಹಿರಿಯ ರಾಜಕಾರಣಿ ಸಾಗರದ ಕಾಗೋಡು ತಿಮ್ಮಪ್ಪ ಅವರು ಮಂಗಳವಾರ ಸಕ್ರಿಯ ರಾಜಕಾರಣಕ್ಕೆ‌ ವಿದಾಯ ಹೇಳಿದ್ದಾರೆ.

ಚುನಾವಣಾ ಫಲಿತಾಂಶ: ಪಾಪ ಕಣ್ರಿ ಇವರು ಸೋಲಬಾರದಿತ್ತು

ಮಂಗಳವಾರ ವಿಧಾನಸೌಧದ ಕಾರಿಡಾರ್ ನಲ್ಲಿ ಏಕಾಂಗಿಯಾಗಿ ಹೊರಟಿದ್ದ ಮುತ್ಸದ್ದಿ ರಾಜಕಾರಣಿ ಕಾಗೋಡು ಅತ್ಯಂತ ಭಾರವಾದ ಮನಸಿನಿಂದ ಮುಂಚೂಣಿ ರಾಜಕಾರದಿಂದ ಹಿಂದೆ ಸರಿಯುವ ತಮ್ಮ ನಿರ್ಧಾರ ಪ್ರಕಟಿಸಿದರು.

ಈ ಮೂಲಕ ಹೋರಾಟದ ಹಿನ್ನೆಲೆ, ಜನಪರ ‌ಕಾಳಜಿ ಹಾಗೂ ಮೌಲ್ಯಧಾರಿತ ರಾಜಕಾರಣದ ಹಿರಿಯ ತಲೆಮಾರಿನ ಪ್ರಮುಖ ‌ನಾಯಕ ಮುಖ್ಯವಾಹಿನಿಯಿಂದ ನೇಪಥ್ಯಕ್ಕೆ ಸರಿದಂತಾಗಿದೆ.

ಕಾಗೋಡು ತಿಮ್ಮಪ್ಪ ಬಾಲ್ಯ, ವಿದ್ಯಾಭ್ಯಾಸ

ಕಾಗೋಡು ತಿಮ್ಮಪ್ಪ ಬಾಲ್ಯ, ವಿದ್ಯಾಭ್ಯಾಸ

ಶ್ರೀ ಕಾಗೋಡು ತಿಮ್ಮಪಪ್ಪನವರು ಸಾಗರ ತಾಲ್ಲೂಕಿನಲ್ಲಿ ಕಳೆದ ಮೂರು ದಶಕಗಳಿಂದ ತಾಲ್ಲೂಕಿನ ಅಭಿವೃದ್ಧಿಗೆ ನಿರಂತರವಾಗಿ ದುಡಿಯುತ್ತಿದ್ದಾರೆ. ಕಾಗೋಡು ಸಾಗರಪಟ್ಟಣದಿಂದ 18 ಕಿಲೋಮೀಟರ್ ದೂರವಿರುವ ಒಂದು ಚಿಕ್ಕ ಹಳ್ಳಿ . 1951ಏಪ್ರಿಲ್ 18 ರಂದು ಭೂಮಾಲಿಕರ ವಿರುದ್ಧ, ಕಾಗೋಡು ಸತ್ಯಾಗ್ರಹ ಎಂಬ ಹೆಸರಿನಲ್ಲಿ ಹೋರಾಟ ಮಾಡಿದ ಕೇಂದ್ರ ಸ್ಥಳ.ಈ ರೈತ ಹೋರಾಟದ ಭೂಮಿಯಾದ ಕಾಗೋಡಿನಲ್ಲಿ ತಿಮ್ಮಪ್ಪನವರು 1932 ಸೆಪ್ಟಂಬರ್ 10 ರಂದು,

ಸವಾಜಿ ಬೀರಾನಾಯ್ಕ ಮತ್ತು ಬೈರಮ್ಮ ದಂಪತಿಗಳಿಗೆ 3 ನೇ ಮಗನಾಗಿ ದಿ.10-9-1932 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣ ಪ್ರೌಢ ಶಾಲಾ ಶಿಕ್ಷಣಗಳನ್ನು ಹಿರೇನೆಲ್ಲೂರು ಮತ್ತು ಸಾಗರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಬಿ.ಕಾಂ. ಬಿ.ಎಲ್ ಪದವಿ ಮುಗಿಸಿ. ಸಾಗರದಲ್ಲಿ ನ್ಯಾಯವಾದಿಗಳಾಗಿ ವೃತ್ತಿಯನ್ನು ಪ್ರಾರಂಭಿಸಿದರು.

ಕಾಗೋಡು ತಿಮ್ಮಪ್ಪ ಅವರ ಸಮಾಜಸೇವೆ

ಕಾಗೋಡು ತಿಮ್ಮಪ್ಪ ಅವರ ಸಮಾಜಸೇವೆ

ಸಾಗರ ಪಟ್ಟಣಕ್ಕೆ ದಿ. ಗೋಪಾಲಗೌಡರ ಕ್ರೀಡಾಂಗಣ, ಕುಡಿಯುವ ನೀರಿನ ಯೋಜನೆ, ಮಹಿಳಾ ಪದವಿ ಕಾಲೇಜು, ಹಿಂದುಳಿದ ಹೆಣ್ಣು ಮಕ್ಕಳಿಗೆ ಕಾಲೇಜು ವಿದ್ಯಾರ್ಥಿ ನಿಲಯ, ಮುಂತಾದ ಅನೇಕ ಶಿಕ್ಷಣ ಸಂಸ್ಥೆಗಳನ್ನು ಮತ್ತು ಕಾಮಗಾರಿಗಳನ್ನು ಮಂಜೂರು ಮಾಡಿಸಿದ್ದಾರೆ.ಆರ್ಯ ಈಡಿಗ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಸಮಾಜ ಬಾಂಧವರ ಸಹಕಾರದಿಂದ ನಿರ್ಮಾಣಮಾಡಿದ್ದಾರೆ.

ಸಂಪೂರ್ಣ ಜೀರ್ಣವಾಗಿದ್ದ ಸಮಾಜದ ಛತ್ರವನ್ನು ಜೀರ್ಣೋದ್ಧಾರ ಮಾಡಿ ಇದರಿಂದ ಬಂದ ಬಾಡಿಗೆ ಹಣದಿಂದ ವಿದ್ಯಾರ್ಥಿನಿಲಯ ನಿರಂತರವಾಗಿ ನಡೆಯುವಂತೆ ಮಾಡಿದ್ದಾರೆ.ಸಾಗರದಲ್ಲಿರುವ ಜನತಾ ವಿದ್ಯಾವರ್ಧಕ ಸಂಸ್ಥೆ , ರಾಷ್ತ್ರೀಯ ವಿದ್ಯಾ ವರ್ಧಕ ಸಂಸ್ಥೆ ಗಳ ಅಧ್ಯಕ್ಷ ಉಪಾದ್ಯಕ್ಷರಾಗಿ, ಈ ಸಂಸ್ಥೆಗಳಿಂದ ಸ್ಥಾಪಿಸಲ್ಪಟ್ಟ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ.

ಕಾಗೋಡು ತಿಮ್ಮಪ್ಪ ಅವರ ರಾಜಕೀಯ ಜೀವನ

ಕಾಗೋಡು ತಿಮ್ಮಪ್ಪ ಅವರ ರಾಜಕೀಯ ಜೀವನ

ಇವರು ಸಾಗರದಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ ಮೇಲೆ ಇವರಿಗೆ ಹೆಚ್ಚಾಗಿ ಗೇಣಿ ರೈತರ ಸಮಸ್ಯೆಯ ಕೇಸುಗಳೇ ಬರುತ್ತಿದ್ದವು. ಹಣಕ್ಕೆ ಒತ್ತಾಯಿಸದೇ ಅವುಗಳನ್ನು ನಡೆಸುತ್ತಿದ್ದರು. ಜೊತೆಗೆ ಸಮಾಜವಾದೀ ರೈತ ಪರ ಹೋರಾಟಕ್ಕಾಗಿ ಹಳ್ಳಿ ಹಳ್ಳಿಗಳಿಗೆ ಸೈಕಲ್ ಮೇಲೆ ಸಮಾಜವಾದೀ ಪ್ರಮುಖರೊಡನೆ ಪ್ರವಾಸಮಾಡಿ ಜನ ಜಾಗ್ರತಿಗಳಿಸಿದ್ದರು. ಸಮಾಜವಾದೀ ಪಕ್ಷವು 1962 ರಲ್ಲಿ ಶ್ರೀ ತಿಮ್ಮಪ್ಪನವರನ್ನು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಲ್ಲಿಸಿತು ; ಅದರಲ್ಲಿ ,ಕಾಂಗ್ರೆಸ್ಸಿನ ಲಕ್ಷ್ಮಿಕಾಂತಪ್ಪನವ ರಿಂದ ಕೇವಲ 4848 ಮತಗಳಿಂದ ಸೋಲನ್ನು ಅನುಭವಿಸಿದರು.

1962 ರಲ್ಲಿ ಪುನಃ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತು.ಆದರೆ ಸಾಗರ ತಾಲ್ಲೂಕು ಬೋರ್ಡ್ ಚುನಾಣೆಯಲ್ಲಿ ಸಮಾಜವಾದೀ ಪಕ್ಷದಿಂದ 15 ಸ್ಥಾನಗಳಲ್ಲಿ 12 ಸ್ಥಾನಗಳಿಸುವಲ್ಲಿ ಯಶಸ್ವಿಯಾಗಿ, ಸಾಗರ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಅದ್ಯಕ್ಷರಾದರು. ಆ ಸಮಯದಲ್ಲಿ ವಿರೋಧಿ ಚಳುವಳಿಯನ್ನು ಸಂಘಟಿಸಿದ್ದಲ್ಲದೆ ಗೇಣೀದಾರರ, ಕೃಷಿ ಕಾರ್ಮಿಕರ , ಹರಿಜನ,ಗಿರಿಜನರ, ದ್ವನಿಯಾಗಿ ಜನಪ್ರಿಯರಾದರು. 1972ರ ವಿಧಾನಸಭೆಯ ಚುನಾವನೆಯಲ್ಲಿ ಪುನಃ ಸ್ಪರ್ಧಿಸಿ ಕಾಂಗ್ರಸ್ಸಿನ ಎದುರು ಜಯಗಳಿಸಿದರು.

ಲಕ್ಷಾಂತರ ಅರಣ್ಯ ಸಾಗುವಳಿದಾರರಿಗೆ ಹಕ್ಕುಪತ್ರ ಕೊಟ್ಟರೂ ದಕ್ಕದ ಜಯ

ಲಕ್ಷಾಂತರ ಅರಣ್ಯ ಸಾಗುವಳಿದಾರರಿಗೆ ಹಕ್ಕುಪತ್ರ ಕೊಟ್ಟರೂ ದಕ್ಕದ ಜಯ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ‌ ಅವರ ವಿರುದ್ಧ ಕಾಗೋಡು ತಿಮ್ಮಪ್ಪ ಅವರು ಸೋಲನುಭವಿಸ ಬೇಕಾಯಿತು. ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿದ್ದ ಲಕ್ಷಾಂತರ ಬುಡಕಟ್ಟು ಜನಾಂಗದ, ದಲಿತ ಹಾಗೂ ಬಡ ಫಲಾನುಭವಿಗಳಿಗೆ ಸಾಗುವಳಿ ಹಕ್ಕು ಪತ್ರ ಕೊಡಿಸಿದ ಹೊರತಾಗಿಯೂ ಕಾಗೋಡು ಸೋಲುಂಡಿದ್ದುದು ಅವರಿಗೆ ಭಾರಿ ನೋವುಂಟು‌ ಮಾಡಿತ್ತು. ಹೀಗಾಗಿ ಸಕ್ರಿಯ ರಾಜಕಾರಣಕ್ಕೆ ತಿಲಾಂಜಲಿ ನೀಡಲು ಕಾಗೋಡು ಅನಿವಾರ್ಯವಾಗಿ ಮುಂದಾಗಿದ್ದಾರೆ.

English summary
Senior Congress leader and socialist Kagodu Thimmappa has announced retirement to active politics on Tuesday. Recently he was defeated in assembly elections in Sagara constituency against Bjp candidate Harathalu Halappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more