ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

CCD Owner VG Siddhartha Missing ; ಸಿದ್ಧಾರ್ಥ ಹುಡುಕಾಟಕ್ಕಾಗಿ 4 ವಿಶೇಷ ತಂಡಗಳ ರಚನೆ

|
Google Oneindia Kannada News

ಬೆಂಗಳೂರು, ಜುಲೈ 30: ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಅವರ ಅಳಿಯ ಖ್ಯಾತ ಉದ್ಯಮಿ ವಿ.ಜಿ.ಸಿದ್ಧಾರ್ಥ ಅವರು ನಿನ್ನೆ ರಾತ್ರಿ ಹಠಾತ್ತಾಗಿ ನಾಪತ್ತೆ ಆಗಿದ್ದಾರೆ.

ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಮಂಗಳೂರು-ಉಲ್ಲಾಳ ರಸ್ತೆಯ ನೇತ್ರಾವತಿ ನದಿಯ ಸೇತುವೆ ಬಳಿ ಕೊನೆಯದಾಗಿ ಸಿದ್ಧಾರ್ಥ ಅವರು ಕಾಣಿಸಿಕೊಂಡಿದ್ದರು. ಸಿದ್ಧಾರ್ಥ ಅವರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

ಎಸ್ಎಂ ಕೃಷ್ಣ ಅಳಿಯ, ಕಾಫಿ ಡೇ ಸ್ಥಾಪಕ ಸಿದ್ದಾರ್ಥ ನಾಪತ್ತೆ ಎಸ್ಎಂ ಕೃಷ್ಣ ಅಳಿಯ, ಕಾಫಿ ಡೇ ಸ್ಥಾಪಕ ಸಿದ್ದಾರ್ಥ ನಾಪತ್ತೆ

ಬೆಂಗಳೂರಿನಿಂದ ಮಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದರು, ನೇತ್ರಾವತಿ ಸೇತುವೆ ಬಳಿ ಇನ್ನೋವಾ ಕಾರು ಚಲಿಸುತ್ತಿದ್ದಂತೆ, ಚಾಲಕನಿಗೆ ವಾಹನ ನಿಲ್ಲಿಸುವಂತೆ ಸೂಚಿಸಿದ್ದಾರೆ. ಕಾರನ್ನು ಯೂ ಟರ್ನ್ ಮಾಡಿ ಬರುವಂತೆ ಹೇಳಿದ್ದಾರೆ. ಅಷ್ಟರಲ್ಲಿ ಸೇತುವೆ ಬಳಿಯಿಂದ ಕಣ್ಮರೆಯಾಗಿದ್ದಾರೆ ಎಂದು ಸಿದ್ದಾರ್ಥ್‌ ಅವರ ಕಾರಿನ ಚಾಲಕ ಪೊಲೀಸರಿಗೆ ತಿಳಿಸಿದ್ದಾರೆ.

SM Krishna Son In Law and CCD founder V.G. Siddhartha goes missing in Mangaluru

ಕೆಫೆ ಕಾಫಿ ಡೇ ಸೇರಿದಂತೆ ಹಲವು ಉದ್ಯಮಗಳ ಒಡೆಯರಾಗಿದ್ದ ಸಿದ್ಧಾರ್ಥ ಅವರು ಇತ್ತೀಚೆಗೆ ಹಣಕಾಸಿನ ಮುಕ್ಕಟ್ಟಿಗೆ ಸಿಲುಕಿದ್ದರು. ಹಾಗಾಗಿ ಸಿದ್ಧಾರ್ಥ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಲಾಗುತ್ತಿದೆ.

ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಸುಳಿವು ನೀಡದ ಡ್ರೈವರ್ ದೂರು ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಸುಳಿವು ನೀಡದ ಡ್ರೈವರ್ ದೂರು

ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಅತ್ಯುತ್ತಮ ಮುಳುಗು ತಜ್ಞರನ್ನು ಕರೆಸಲಾಗಿದ್ದು ಶೋಧ ಕಾರ್ಯ ನಡೆಯುತ್ತಿದೆ.

ಸಿದ್ಧಾರ್ಥ ಅವರ ನಾಪತ್ತೆ ಪ್ರಕರಣದ ಕ್ಷಣ-ಕ್ಷಣದ ಮಾಹಿತಿ ಒನ್‌ಇಂಡಿಯಾ ಕನ್ನಡದಲ್ಲಿ

Newest FirstOldest First
7:53 PM, 30 Jul

"ವಿ.ಜಿ. ಸಿದ್ಧಾರ್ಥ ನಿಗೂಢ ನಾಪತ್ತೆ ಪ್ರಕರಣದ ತನಿಖೆಗಾಗಿ 4 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಅವರ ಮೊಬೈಲ್ ಕರೆಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ" ಎಂದು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದರು.
7:51 PM, 30 Jul

ಮುಂಜಾನೆಯಿಂದ ಹುಡುಕಾಟ ನಡೆಸಿದರೂ ವಿ.ಜಿ. ಸಿದ್ಧಾರ್ಥ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ರಾತ್ರಿಯೂ ಹುಡುಕಾಟ ಮುಂದುವರೆಸಲು ಲೈಟ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
5:54 PM, 30 Jul

ಸಿದ್ಧಾರ್ಥ ಅವರು ನಾಪತ್ತೆಯಾಗಿ 24 ಗಂಟೆ ಆಗಿದೆ. ಸಿದ್ಧಾರ್ಥ ಅವರಿಗಾಗಿ ಶೋಧ ಕಾರ್ಯ ಆರಂಭಿಸಿ ಬರೋಬ್ಬರಿ 18 ಆಗಿದೆ. ಆದರೆ ಸಿದ್ಧಾರ್ಥ ಅವರ ಸಣ್ಣ ಸುಳಿವು ಸಹ ಯಾರಿಗೂ ದೊರೆತಿಲ್ಲ. ಶೋಧ ಕಾರ್ಯವನ್ನೂ ಇನ್ನೂ ಮುಂದುವರೆಸಲಾಗಿದೆ.
1:42 PM, 30 Jul

ಸಿದ್ಧಾರ್ಥ ಅವರು ತಮ್ಮ ಸಿಬ್ಬಂದಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಸಹಿ ಸಿದ್ಧಾರ್ಥ ಅವರದ್ದಲ್ಲ ಎನ್ನಲಾಗುತ್ತಿದೆ. ಸಿದ್ಧಾರ್ಥ ಅವರು ಕಂಪೆನಿಯ ವಾರ್ಷಿಕ ವರದಿಗೆ ಮಾಡಿದ ಸಹಿಗೂ, ಸಿಸಿಡಿ ಸಂಸ್ಥೆ ಸಿಬ್ಬಂದಿಗಳಿಗೆ ಬರೆದಿದ್ದಾರೆನ್ನಲಾದ 'ವಿದಾಯ ಪತ್ರ'ದಲ್ಲಿನ ಸಹಿಗೂ ಬಹಳ ಅಂತರವಿದೆ.
1:19 PM, 30 Jul

ಐಡಿಬಿಐ ಟ್ರಸ್ಟ್ ಶಿಪ್ ಸರ್ವಿಸಸ್ ಲಿಮಿಟೆಡ್- 4,475 ಕೋಟಿ ರೂ. ಅಕ್ಸಿಸ್ ಟ್ರಸ್ಟೀ ಸರ್ವಿಸಸ್ ಲಿಮಿಟೆಡ್- 915 ಕೋಟಿ ರೂ. ಅಕ್ಸಿಸ್ ಬ್ಯಾಂಕ್ ಲಿಮಿಟೆಡ್ -315 ಕೋಟಿ ರೂ. ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್- 278 ಕೋಟಿ ರೂ. ಯೆಸ್ ಬ್ಯಾಂಕ್ ಲಿಮಿಟೆಡ್ 273.63 ಕೋಟಿ ರೂ. ಪಿರಾಮಳ್ ಟ್ರಸ್ಟ್ ಶಿಪ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ 175 ಕೋಟಿ ರೂ. ಆರ್ ಬಿ ಎಲ್ ಬ್ಯಾಂಕ್ ಲಿಮಿಟೆಡ್ 174 ಕೋಟಿ ರೂ. ಇಸಿಎಲ್ ಫೈನಾನ್ಸ್ ಲಿಮಿಟೆಡ್ - 150 ಕೋಟಿ ರೂ. ಸ್ಟಾಂಡರ್ಡ್ ಚಾರ್ಟರ್ಡ್ ಲೋನ್ಸ್ ಅಂಡ್ ಇನ್ವೆಸ್ಟ್ ಮೆಂಟ್ಸ್(ಇಂಡಿಯಾ) ಲಿಮಿಟೆಡ್- 150 ಕೋಟಿ ರೂ. ಕ್ಲಿಕ್ಸ್ ಕ್ಯಾಪಿಟಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ 150 ಕೋಟಿ ರೂ. ಅಕ್ಸಿಸ್ ಫೈನಾನ್ಸ್ ಲಿಮಿಟೆಡ್ 125 ಕೋಟಿ ರೂ. ಕೋಟಾಕ್ ಮಹಿಂದ್ರಾ ಇನ್ವೆಸ್ಟ್ ಲಿಮಿಟೆಡ್ - 125 ಕೋಟಿ ರೂ. ಎ.ಕೆ.ಕ್ಯಾಪಿಟಲ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ -121 ಕೋಟಿ ರೂ. ಎಸ್ ಟಿಸಿಐ ಫೈನಾನ್ಸ್ ಲಿಮಿಟೆಡ್ 100 ಕೋಟಿ ರೂ. RABO ಇಂಡಿಯಾ ಫೈನಾನ್ಸ್ ಲಿಮಿಟೆಡ್ 80 ಕೋಟಿ ರೂ. ಶಾಪೂರ್ಜಿ ಪಲ್ಲೊಂಜಿ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ 80 ಕೋಟಿ ರೂ. ವಿಸ್ತಾರಾ ಐಟಿಸಿಎಲ್ (ಇಂಡಿಯಾ) ಲಿಮಿಟೆಡ್ 75 ಕೋಟಿ ರೂ. ರತನ್ ಇಂಡಿಯಾ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ 50 ಕೋಟಿ ರೂ. ಕ್ಲಿಕ್ಸ್ ಫೈನಾನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 50 ಕೋಟಿ ರೂ. ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್ ಲಿಮಿಟೆಡ್ 50 ಕೋಟಿ ರೂ. ಕೊಟಾಕ್ ಹೀಂದ್ರಾ ಪ್ರೈಮ್ ಲಿಮಿಟೆಡ್ 50 ಕೋಟಿ ರೂ. ಐಎಫ್ ಸಿಐ ಲಿಮಿಟೆಡ್ 50 ಕೋಟಿ ರೂ. ಬಜಾಜ್ ಫೈನಾನ್ಸ್ ಲಿಮಿಟೆಡ್ 45 ಕೋಟಿ ರೂ. ಎಡೆಲ್ವೆಸ್ ಫೈನಾನ್ಸ್ ಅಂಡ್ ಇನ್ವೆಸ್ಟ್ ಮೆಂಟ್ಸ್ ಲಿಮಿಟೆಡ್ 25 ಕೋಟಿ ರೂ. ಒಟ್ಟು ಸಾಲದ ಮೊತ್ತ 8,082.63 ಕೋಟಿ ರೂ.
1:19 PM, 30 Jul

ಸಿದ್ಧಾರ್ಥ ಅವರು ಒಟ್ಟು 8000 ಕೋಟಿ ಸಾಲವನ್ನು ಮಾಡಿದ್ದರು ಎನ್ನಲಾಗುತ್ತಿದೆ. ಸಿದ್ಧಾರ್ಥ ಅವರ ಸಾಲದ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಅವರ ಸಾಲದ ಮೊತ್ತಕ್ಕಿಂತಲೂ ಆಸ್ತಿಯ ಮೊತ್ತ ಹೆಚ್ಚಿಗಿದೆ ಎನ್ನಲಾಗುತ್ತಿದೆ.
1:00 PM, 30 Jul

ಅಳಿಯ ಸಿದ್ಧಾರ್ಥ ನಾಪತ್ತೆ ಪ್ರಕರಣ: ಎಸ್.ಎಂ.ಕೃಷ್ಣ ಅವರ ಮನೆಗೆ ಹಿರಿಯ ನಾಯಕ ದೇವೇಗೌಡ ಅವರು ಭೇಟಿ ನೀಡಿದರು. ಎಚ್‌.ಡಿ.ಕುಮಾರಸ್ವಾಮಿ ಸೇರಿ ಹಲವು ನಾಯಕರು ಈಗಾಗಲೇ ಕೃಷ್ಣ ಅವರನ್ನು ಭೇಟಿ ಆಗಿದ್ದಾರೆ.
Advertisement
12:15 PM, 30 Jul

ನಿಮ್ಮನ್ನು ಭೇಟಿ ಆಗಬೇಕಿತ್ತು, ಭೇಟಿ ಆಗಲು ಸಾಧ್ಯವೇ ಎಂದು ಸಿದ್ಧಾರ್ಥ ಅವರು ನನ್ನನ್ನು ಕೇಳಿದ್ದರು ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಿದ್ಧಾರ್ಥ ಹೆಸರಲ್ಲಿ ಹರಿದಾಡುತ್ತಿರುವ ಪತ್ರದ ತನಿಖೆ ಆಗಬೇಕೆಂದು ಒತ್ತಾಯಿಸಿದ್ದಾರೆ.
12:13 PM, 30 Jul

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ನಿನ್ನೆ ಸಂಜೆಯಿಂದ ನಾಪತ್ತೆ ಆಗಿದ್ದು, ನಾಪತ್ತೆ ಆಗುವ ಒಂದು ದಿನ ಮುನ್ನಾ ಅಂದರೆ ಭಾನುವಾರದಂದು ಅವರು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿ ಮಾತನಾಡಿದ್ದರು.
11:40 AM, 30 Jul

ವ್ಯಕ್ತಿಯೊಬ್ಬರು ನಿನ್ನೆ ಸಂಜೆ ನೇತ್ರಾವತಿ ಸೇತುವೆ ಮೇಲಿಂದ ಬಿದ್ದಿದ್ದು ನೋಡಿದೆ. ಉಳಿಸಲು ಸ್ವಲ್ಪ ದೂರ ಈಜಿ ಪ್ರಯತ್ನಪಟ್ಟೆ ಆದರೆ ಒಬ್ಬನೇ ಇದ್ದ ಕಾರಣ ಸಾಧ್ಯವಾಗಲಿಲ್ಲ ಎಂದು ಮೀನುಗಾರನೊಬ್ಬ ಹೇಳಿಕೆ ನೀಡಿದ್ದಾನೆ.
11:26 AM, 30 Jul

ವಿಜಿ ಸಿದ್ಧಾರ್ಥ ಅವರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ರಾಜ್ಯ ಸರಕಾರದ ಜೊತೆ ಕೇಂದ್ರ ಸರಕಾರದ ಸಹಾಯವನ್ನು ಕೋರಿ ರಾಜ್ಯದ ಬಿಜೆಪಿ ಸಂಸದರ ತಂಡವು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿ ಈ ಸಂಬಂಧ ಮನವಿ ಮಾಡಿದ್ದಾರೆ, ಸಂಸದ ನಳೀನ್ ಕಟಿಲ್ ಹಾಗೂ ಇತರೆ ಮುಖಂಡರು ಅವರು ಜೊತೆಗಿದ್ದರು.
11:24 AM, 30 Jul

ಎಸ್ ಎಂ ಕೃಷ್ಣ ಅವರ ಅಳಿಯ, ಕಾಫಿಯನ್ನು ಲೋಕದೆಲ್ಲೆಡೆ ಪಸರಿಸಿದ ಯಶಸ್ವಿ ಉದ್ಯಮಿ ವಿ ಜಿ ಸಿದ್ದಾರ್ಥ ಅವರು ಕಾಣೆಯಾಗಿರುವ ಸುದ್ದಿ ನಿಜಕ್ಕೂ ಬೇಸರ ತಂದಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕು.ಶೋಭಾ ಕರಂದ್ಲಾಜೆ ಹೇಳಿದ್ದಾರೆ.
Advertisement
11:20 AM, 30 Jul

ಸಿಸಿಡಿ ಮಾಲೀಕ ವಿಜಿ.ಸಿದ್ಧಾರ್ಥ ಅವರು ನಿನ್ನೆ ಸಂಜೆಯಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಪ್ರಕರಣದ ಸಂಬಂಧ ನಾವು ಸಂಬಂಧಪಟ್ಟ ಇಲಾಖೆಯವರೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ. ಇದು ನಮ್ಮ ವ್ಯವಹಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ, ನಮ್ಮ ಸೇವೆ ಜಾರಿಯಲ್ಲಿದೆ ಎಂದು ಸಿಸಿಡಿ ಪ್ರಕಟಣೆ ಹೊರಡಿಸಿದೆ.
10:37 AM, 30 Jul

ಒನ್‌ಇಂಡಿಯಾ ಕನ್ನಡ ಪ್ರತಿನಿಧಿ, ಕಿರಣ್ ಸಿರ್ಸಿಕರ್ ಅವರೊಂದಿಗೆ ಮಾತನಾಡಿದ ಸಿದ್ಧಾರ್ಥ ಅವರ ಗೆಳೆಯ ಹಾಲಪ್ಪ ಗೌಡ, "ನಿಜಕ್ಕೂ ಇದು ಆಘಾತಕಾರಿ ಸುದ್ದಿ, ಐಟಿ ದಾಳಿಯಿಂದ ಅವರಿಗೆ ತುಂಬಾ ನೋವಾಗಿತ್ತು. ಮಾನಸಿಕವಾಗಿ ಬೇಜಾರು ಮಾಡಿಕೊಂಡಿದ್ದರು. ಇಷ್ಟೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಿ, ಇಷ್ಟೆಲ್ಲ ಜನರಿಗೆ ಉದ್ಯೋಗ ಕೊಟ್ಟು, ದೇಶಕ್ಕೊಸ್ಕರ ದುಡಿದು, ಕೋಟ್ಯಂತರ ರುಪಾಯಿ ತೆರಿಗೆ ಕಟ್ಟಿ ಕೂಡಾ ಹಿಂದೆ ಆಯ್ತಲ್ಲ ಅಂತಾ ನೊಂದಿದ್ದರು. ಬಹಳ ಮೃದು ಸ್ವಭಾವದವರು, ಇಲ್ಲೆಲ್ಲ ತುಂಬಾ ಗೌರವವಿದೆ. ಆದರೆ, ಇದೆ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾದರು" ಎಂದು ಹೇಳಲಾಗದು ಎಂದಿದ್ದಾರೆ.
10:35 AM, 30 Jul

ಶಾಸಕ ಯುಟಿ.ಖಾದರ್ ಅವರು ಸ್ಥಳಕ್ಕೆ ಆಗಮಿಸಿದ್ದು, ಸ್ಥಳದಲ್ಲಿದ್ದು ಶೋಧ ಕಾರ್ಯದ ಪರಿಶೀಲನೆ ನಡೆಸುತ್ತಿದ್ದಾರೆ.
10:31 AM, 30 Jul

ಇ-ಮೇಲ್‌ ನಲ್ಲಿ '6 ತಿಂಗಳ ಹಿಂದೆ ನಡೆದ ವ್ಯವಹಾರವೊಂದರಲ್ಲಿ ಒಬ್ಬ ಸ್ನೇಹಿತ ತನ್ನ ಶೇರುಗಳನ್ನು ಬೈ ಬ್ಯಾಕ್ ಮಾಡುವಂತೆ ಒತ್ತಡ ಹಾಕುತ್ತಿದ್ದಾನೆ. ಇತರೆ ಸಾಲ ನೀಡಿದವರಿಂದಲೂ ತೀವ್ರ ಒತ್ತಡ ಸೃಷ್ಟಿಯಾಗಿದ್ದು ಇದರಲ್ಲೇ ನಾನು ಮುಳುಗಿ ಹೋಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ಹಿಂದೆ ಇದ್ದ ತೆರಿಗೆ ಇಲಾಖೆ ಡಿಜಿಯಿಂದಲೂ ಒತ್ತಡ ಹೆಚ್ಚಾಗತ್ತಿದೆ. ಇದರಿಂದ ವ್ಯವಹಾರ ಕಷ್ಟವಾಗುತ್ತಿದೆ,' ಎಂದು ಸಹ ಬರೆದಿದ್ದಾರೆ.
10:30 AM, 30 Jul

ಸಿದ್ಧಾರ್ಥ ಅವರು ತಮ್ಮ ಸಿಬ್ಬಂದಿಗಳಿಗೆ ಬರೆದಿದ್ದ ಇ-ಮೇಲ್ ದೊರೆತಿದ್ದು, ಲ್ಲಾ ತಪ್ಪುಗಳಿಗೆ ನಾನೊಬ್ಬನೇ ಹೊಣೆಗಾರ. ನನ್ನ ತಂಡವಾಗಲೀ, ನನ್ನ ಆಡಿಟರ್‌ಗಳಾಗಲೀ, ಹಿರಿಯ ವ್ಯವಸ್ಥಾಪಕರುಗಳಿಗಾಲೀ ಕೆಲವೊಂದು ಕೊಡು ಕೊಳ್ಳುವಿಕೆ ಬಗ್ಗೆ ಮಾಹಿತಿ ಇಲ್ಲ. ಕಾನೂನು ನನ್ನನ್ನು ಮಾತ್ರವೇ ಪ್ರಶ್ನಿಸಬೇಕು. ನನ್ನ ಕುಟುಂಬವನ್ನೂ ಈ ವ್ಯವಹಾರದಿಂದ ದೂರ ಇಟ್ಟಿದ್ದೆ' ಎಂದು ಬರೆದಿದ್ದಾರೆ.
10:26 AM, 30 Jul

ಸಿದ್ಧಾರ್ಥ ಅವರು ಕೊನೆಯ ಬಾರಿಗೆ ಯಾರೊಂದಿಗೆ ಫೋನಿನಲ್ಲಿ ಮಾತನಾಡಿದ್ದರು ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಅವರು ತಮ್ಮ ಆರ್ಥಿಕ ಸಲಹೆಗಾರರೊಂದಿಗೆ ಕೊನೆಯ ಬಾರಿ ಮಾತನಾಡಿದ್ದರು ಎನ್ನಲಾಗಿದೆ.
10:24 AM, 30 Jul

ಶೋಧ ಕಾರ್ಯವನ್ನು ತೀವ್ರವಾಗಿ ಪರಿಣಾಮಕಾರಿಯಾಗಿ ಮಾಡುವಂತೆ ಯಡಿಯೂರಪ್ಪ ಅವರು ಐಜಿ ನೀಲಮಣಿ ರಾಜು ಅವರಿಗೆ ಆದೇಶಿಸಿದ್ದು, ಅಗತ್ಯ ಬಿದ್ದರೆ ಕೇಂದ್ರದಿಂದ ಹಾಗೂ ನೌಕಾಪಡೆಯಿಂದ ನೆರವು ಪಡೆಯುವಂತೆ ಸೂಚಿಸಿದ್ದಾರೆ.
10:23 AM, 30 Jul

ಪ್ರಖ್ಯಾತ ಕೆಫೆ ಕಾಫಿ ಡೇ ಮಾಲೀಕರಾಗಿದ್ದ ಸಿದ್ಧಾರ್ಥ ಅವರ ಮೇಲೆ ಐಟಿ ದಾಳಿ ಆಗಿತ್ತು, ಆ ನಂತರ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಕೆಲವು ದಿನಗಳ ಹಿಂದಷ್ಟೆ ತಮ್ಮ ಒಡೆತನದ ಮೈಂಡ್ ಟ್ರೀ ಸಂಸ್ಥೆಯನ್ನು ಎಲ್‌ ಆಂಡ್ ಟೀ ಗೆ ಮಾರಾಟ ಮಾಡಿದ್ದರು. ಅದರ ಪ್ರತಿಕ್ರಿಯೆ ಇನ್ನೂ ಪೂರ್ಣವಾಗಿ ಮುಗಿದಿಲ್ಲ.
10:22 AM, 30 Jul

ನಿನ್ನೆ ರಾತ್ರಿಯಿಂದಲೇ ಸಿದ್ಧಾರ್ಥ ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ನುರಿತ ಮುಳುಗು ತಜ್ಞರು, ಅಗ್ನಿಶಾಮಕ ದಳ, ಪೊಲೀಸ್ ಅವರುಗಳು ಸ್ಥಳಕ್ಕೆ ಆಗಮಿಸಿ ತಂಡಗಳನ್ನು ರಚಿಸಿಕೊಂಡು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಿದ್ಧಾರ್ಥ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
10:21 AM, 30 Jul

ಸಿದ್ಧಾರ್ಥ ಅವರು ನಿನ್ನೆ ಸಂಜೆ 6 ಗಂಟೆ ವೇಳೆಗೆ ಬೆಂಗಳೂರಿನಿಂದ ಉಲ್ಲಾಳಕ್ಕೆ ಬರುವ ದಾರಿಯಲ್ಲಿ, ಡ್ರೈವರ್‌ ನಿಗೆ ನೇತ್ರಾವತಿ ಸೇತುವೆ ಕಡೆ ಗಾಡಿ ತಿರುಗಿಸುವಂತೆ ಹೇಳಿದ್ದರು. ಸೇತುವೆ ಬಳಿ ಕಾರಿನಿಂದ ಕೆಳಗೆ ಇಳಿದ ಸಿದ್ಧಾರ್ಥ ಒಬ್ಬರೇ ಫೋನಿನಲ್ಲಿ ಮಾತನಾಡಿಕೊಂಡು ಹೋದವರು ಅಲ್ಲಿಂದ ಏಕಾ-ಏಕಿ ಕಣ್ಮರೆ ಆಗಿದ್ದಾರೆ.

English summary
Former Chief minister SM Krishna's son in law and CCD owner Siddhartha goes missing yesterday near Mangaluru-Ullala highway. Check out the live updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X