ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೈರಪ್ಪ ಹೊಗಳಿದ 'ಕರ್ಮ' ಕೃತಿ ವಿಶ್ವದೆಲ್ಲೆಡೆ ಲಭ್ಯ

By Mahesh
|
Google Oneindia Kannada News

ಬೆಂಗಳೂರು, ಏ.26: ಯುವ ನಾಟಕಕಾರ ಕರಣಂ ಪವನ್ ಪ್ರಸಾದ್ ಅವರ 'ಕರ್ಮ' ಕಾದಂಬರಿಯನ್ನು ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್.ಎಲ್ ಭೈರಪ್ಪ ಅವರು ಓದಿ ವಿಮರ್ಶಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಜತೆಗೆ ಕಾದಂಬರಿಗೆ ಮುನ್ನಡಿ ಬರೆದಿದ್ದಾರೆ. ಈಗ ಈ ಕಾದಂಬರಿಯನ್ನು ವಿಶ್ವದೆಲ್ಲೆಡೆ ಇರುವ ಓದುಗರಿಗೆ ತಲುಪಿಸುವ ಕಾರ್ಯವನ್ನು ಅಫೋರ್ಡಬಲ್ ವೆಬ್ ಸೈಟ್ ಹೊತ್ತುಕೊಂಡಿದೆ.

ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ಕಾರ್ಯಕರ್ತ ಸುನೀಲ್ ಎಸ್. ಪಾಟೀಲ್ ಹಾಗೂ ಬೆಂಗಳೂರಿನ ಸಚಿನ್ ಕುಡ್ತುರಕರ್ ಅವರು ಹಳೆ ಪುಸ್ತಕಗಳ ಮಾರಾಟಕ್ಕೆ ಆನ್ ಲೈನ್ ಅಂಗಡಿ ಆರಂಭಿಸಿದ್ದರ ಬಗ್ಗೆ ನಮ್ಮಲ್ಲಿ ಈ ಹಿಂದೆ ಲೇಖನ ಬರೆಯಲಾಗಿತ್ತು. [ಇದು ಹಳೆ ಪುಸ್ತಕಗಳ ಆನ್ ಲೈನ್ ಅಂಗಡಿ]

ಕಥೆ ಪುಸ್ತಕ, ಕಾದಂಬರಿ, ಮ್ಯಾಗಜೀನ್, ಇಂಜಿನಿಯರಿಂಗ್, ಮೆಡಿಕಲ್ ಪುಸ್ತಕಗಳ ಮಾರಾಟಕ್ಕೆ ಅಫೋರ್ಡಬಲ್ (a4dable.in) ಎಂಬ ಹೆಸರಿನ ವೆಬ್ ತಾಣ ಆರಂಭಿಸಿದ್ದಲ್ಲದೆ ಮೊಬೈಲ್ ಮೂಲಕ ಪುಸ್ತಕ ಖರೀದಿಯ ಹೊಸ ಸೌಲಭ್ಯ ನೀಡಿದ್ದರು. ಬೆಂಗಳೂರಿನವರಿಗೆ cash on delivery ಸೌಲಭ್ಯವನ್ನೂ ಒದಗಿಸಲಾಗಿದೆ. ಈಗ 'ಕರ್ಮ' ಕಾದಂಬರಿ ಮೂಲಕ ಆನ್ ಲೈನ್ ಮೂಲಕ ವಿಶ್ವದೆಲ್ಲೆಡೆ ಇರುವ ಆಸಕ್ತರು ಪುಸ್ತಕ ಖರೀದಿಸಬಹುದಾಗಿದೆ. [ವಿವರ ಇಲ್ಲಿ ಕ್ಲಿಕ್ ಮಾಡಿ]

ಒನ್ ಇಂಡಿಯಾ ಕನ್ನಡ ಓದುಗರಿಗಾಗಿ 'ಕರ್ಮ' ಕಾದಂಬರಿಯ ಒಂದು ಭಾಗ ನಾವಿಲ್ಲಿ ಪ್ರಕಟಿಸುತ್ತಿದ್ದೇವೆ. ಇದರ ಜತೆಗೆ ಭೈರಪ್ಪ ಅವರಾಡಿರುವ ಮೆಚ್ಚುಗೆ ಮಾತುಗಳು, ಕರ್ಮ ಕಾದಂಬರಿ ಲಭ್ಯವಿರುವ ಮಳಿಗೆಗಳ ವಿವರಗಳು ಮುಂದೆ ಸಿಗಲಿದೆ...

ಲೇಖಕ ಕರಣಂ ಪವನ್ ಪ್ರಸಾದ್ ಅವರ ಮಾತು

ಲೇಖಕ ಕರಣಂ ಪವನ್ ಪ್ರಸಾದ್ ಅವರ ಮಾತು

ಮಲೆನಾಡಿನ ವಾತಾವರಣ ಮತ್ತು ನಗರ ಜೀವನದ ಬೆತ್ತಲೆ ದರ್ಶನ ಕಾದಂಬರಿಯಲ್ಲಿದೆ.ಧಾರ್ಮಿಕತೆ, ಆಚರಣೆ ಮತ್ತು ಶ್ರದ್ಧೆಎಲ್ಲವೂ ಬೇರೆ ಎಂಬ ತರ್ಕವಿದೆ. ಮಾನವ ಸಹಜತುಮುಲ, ಉದ್ರೇಕಗಳಿಗೆ ಬಲಿಯಾಗಿ ಮನಸ್ಥಿತಿಯ ವಿನಾಶಕ್ಕೆ ಬಲಿಯಾಗುವ ಸಾಧ್ಯತೆಗಳ ನಿರೂಪಣೆಯಿದೆ.ಯುಆರ್ ‍ಅನಂತ ಮೂರ್ತಿಯವರ ಸಂಸ್ಕಾರ, ಎಸ್ ‍ಎಲ್ ಭೈರಪ್ಪರ ನೆಲೆ ಈ ಕಾದಂಬರಿಗಳು ಕೂಡ ಇದೇ ಹಾದಿಯಲ್ಲಿದ್ದರೂ ಸಹ ಅವತ್ತಿನ ಕಾಲಕ್ಕೆ ಸರಿದೂಗಿದೆ.ಪ್ರಸ್ತುತೆಯ ಆಧಾರದಲ್ಲಿ ಕರ್ಮ ಮತ್ತು ಕ್ರಿಯೆಗಳ ಪೂರ್ಣತಾಂತ್ರಿಕ ವಿಶ್ಲೇಷಣೆ ಮತ್ತು ವಾಸ್ತವಿಕ ಪ್ರಜ್ಞೆಯನ್ನು ಸವಿವರವಾಗಿ ಕಾದಂಬರಿ ಚಿತ್ರಿಸಿಕೊಟ್ಟಿದೆ.ಸದ್ಯ ಸಂದರ್ಭದಲ್ಲಿ ಈ ರೀತಿಯ ಅವ್ಯಕ್ತ ವಿಚಾರಗಳ ಆಳವನ್ನು ಮುಟ್ಟಿರುವ ಕಾದಂಬರಿ ಕರ್ಮಎನ್ನಬಹುದು.ಕನ್ನಡದ ಓದುಗರಿಗೆಇದು ಹೊಸ ಅನುಭೂತಿಯನ್ನು ನೀಡುತ್ತದೆ ಎಂಬ ವಿಶ್ವಾಸವಿದೆ.

ಶತವಾಧಾನಿ ಆರ್. ಗಣೇಶರಿಂದ ಕಾದಂಬರಿ ಬಿಡುಗಡೆ

ಶತವಾಧಾನಿ ಆರ್. ಗಣೇಶರಿಂದ ಕಾದಂಬರಿ ಬಿಡುಗಡೆ

concave media ಈ ಕಾದಂಬರಿಯನ್ನು ಹೊರತಂದಿದೆ. ನಾಟಕಕಾರರಾದ ಕರಣಂ ಪವನ್ ಪ್ರಸಾದರ ಮೊದಲ ಕಾದಂಬರಿಯಿದು. ಖ್ಯಾತ ಕಾದಂಬರಿಕಾರರಾದ ಎಸ್ ‍ಎಲ್ ಭೈರಪ್ಪನವರು ಈ ಕಾದಂಬರಿಯ ಪ್ರಥಮ ಪ್ರತಿಯನ್ನು ಓದಿ ಮೆಚ್ಚಿಕೊಂಡಿದ್ದಾರೆ. ಕಳೆದ ವಾರ ಶತವಾಧಾನಿ ಆರ್. ಗಣೇಶರು ಕಾದಂಬರಿಯನ್ನು ಬಿಡುಗಡೆಗೊಳಿಸಿದರು. ನಗರ ಜೀವನದ ಅಭದ್ರ ಭಾವಸ್ಥಿತಿಯಿಂದ ಒಮ್ಮೆಲೆ ತಂದೆಯ ಸಾವಿನ ನಂತರದ ಕಾರ್ಯದಲ್ಲಿ ತೊಡಗುವ ಟೆಕ್ಕಿಯ ಮೂಲಕ ಕಥೆ ಹರಡುಕೊಳ್ಳುತ್ತದೆ. ನಂತರದ ಹದಿನೈದು ದಿನಗಳಲ್ಲಿ ಆತನಲ್ಲಾಗುವ ನಂಬಿಕೆ ಮತ್ತು ಶ್ರದ್ಧೆಯ ನಡುವಿನ ತೊಳಲಾಟ ಮತ್ತು ಸ್ಥಿತ್ಯಂತರದ ಯಾನವೇ ‘ಕರ್ಮ'

ನಾಟಕಕಾರ ಪಿಪಿ ಶರ್ಮ ಲೇಖಕ ಕರಣಂ ಪವನ್ ಆಗಿದ್ದು

ನಾಟಕಕಾರ ಪಿಪಿ ಶರ್ಮ ಲೇಖಕ ಕರಣಂ ಪವನ್ ಆಗಿದ್ದು

ಸದ್ಯ ಕಾನ್ ಕೇವ್ ಮೀಡಿಯಾ ಸಂಸ್ಥೆಯಲ್ಲಿ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪವನ್ ಪ್ರಸಾದ್ ಶರ್ಮ ಅವರು ಕಳೆದ ಏಳು ವರ್ಷಗಳಿಂದ ಸೃಜನಾತ್ಮಕ ವಿನ್ಯಾಸಗಾರರಾಗಿದ್ದಾರೆ. ಕಸ್ತೂರಿ ಮೀಡಿಯಾ. ಪ್ರೈ.ಲಿ ನಲ್ಲಿ ಪೊಗ್ರಾಂ ಕಾನ್ಸೆಪ್ಟ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ವಂದೇಮಾತರಂ ಟ್ರಸ್ಟ್ ನ ಜನಗಣ ರಂಗ ತಂಡದ ಸಂಚಾಲಕರಾಗಿದ್ದರು. ಬೀದಿ ಬಿಂಬ ರಂಗದ ತುಂಬ, ಪುರಹರ ಸೇರಿದಂತೆ ಐದಾರು ಜನಪ್ರಿಯ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಇವರ ಎರಡು ಕೃತಿಗಳು ಈವರೆಗೂ ಪ್ರಕಟಗೊಂಡಿವೆ.

ಕರ್ಮ ಹೊಸ ಕಾದಂಬರಿಯ ಒಂದು ಭಾಗ

ಕರ್ಮ ಹೊಸ ಕಾದಂಬರಿಯ ಒಂದು ಭಾಗ

ಅಚಾನಕ್ಕಾಗಿ ಅಪ್ಪಳಿಸಿದ ತಂದೆಯ ಸಾವಿನ ಸುದ್ದಿ ತನಗೆ ಏನೂ ಅಘಾತವನ್ನ ನೀಡದ್ದನ್ನು ಕಂಡು ಕಥಾನಾಯಕ ಮೊದಲಿನಿಂದಲೂ ಗೊಂದಲದಲ್ಲೇಎದುರಾಗುತ್ತಾನೆ. ಪ್ರತಿ ಪ್ರಸಂಗದಲ್ಲೂತನ್ನನ್ನುತಾನೇ ಕೆಡವಿಕೊಂಡುಅನುಭವಿಸುತ್ತಾನೆ. ತನ್ನ ಹುಟ್ಟೂರಿಗೆ ಹೋಗಿ ತನ್ನ ತಮ್ಮ ನರಹರಿ, ತಾಯಿಯನ್ನು ಕೂಡಿ ತಂದೆಯಕ್ರಿಯೆಯಲ್ಲಿ ಪಾಲ್ಗೊಳ್ಳುವಲ್ಲಿಯಿಂದ ಕರ್ಮ ಮಜಲು ಬದಲಿಸಿ ತನ್ನ ಮೂಲವಾದವಾದ ನಂಬಿಕೆ ಮತ್ತು ಶ್ರದ್ಧೆ ಎರಡೂ ತೀರ ಬೇರೆ. ನಂಬಿಕೆ ಚಂಚಲ, ಶ್ರದ್ಧೆ ಅಚಲ, ನಂಬಿಕೆಗೆ ಘಾಸಿಯಾಗುತ್ತದೆ, ಶ್ರದ್ಧೆಗೆ ಎಂದೂ ಘಾಸಿಯಾಗುವುದಿಲ್ಲ ಎಂಬಲ್ಲಿಗೆ ಬಂದು ನಿಲ್ಲುತ್ತದೆ. ಕ್ರಿಯೆ ಮಾಡಿಸುವತಂದೆಯ ಸ್ನೇಹಿತ ಶ್ರೀಕಂಠಜೋಯಿಸರು ಮತ್ತುಕಥಾ ನಾಯಕನ ಸಂಭಾಷಣೆಯಒಂದು ಪ್ರಸಂಗ ಹೀಗಿದೆ.

'ಇವೆಲ್ಲಾ ನಿಜಾನಾ?'''ಅಳುಕಿನಿಂದಲೇ ಸುರೇಂದ್ರ ಪ್ರಶ್ನಿಸಿದ. ಭಟ್ಟರು ಹಿಂದಿರುಗಿ ನೋಡುವ ಹೊತ್ತಿಗೆ ಇವನ ಕಂಠ ಕುಸಿದುಹೋಯಿತು. ಅಲ್ಲೇ ಅಡಕೆ ಮರಕ್ಕೆ ಹಬ್ಬಿಸಿದ್ದ ಏಲಕ್ಕಿ ಗಿಡವನ್ನು ಪರೀಕ್ಷಿಸುತ್ತಾ ನಿಂತ.'ತೋಟ ಮಾರ್ತಾ ಇದೀನಿ ತಗೋತ್ಯಾ ಮಾರಾಯಾ?'ಗಿಡವನ್ನು ಮೂಸುತ್ತಿದ್ದ ಸುರೇಂದ್ರ 'ನನಗ್ಯಾಕೆ ಭಟ್ಟರೇ?'ಎಂದ.

'ಈಗ ಅದೇ ಹೊಸ ವಿಚಾರ ಈ ವಾಣಿ ಗಂಡ ಎಲ್ಲಾ ಮುಂಡುಮೋಚಿ ಈಗ ಇಲ್ಲಿ ತೋಟಗೀಟ ಮಾಡ್ಕೊಂಡು ಅದನ್ನೇ ಕಂಪೆನಿ ಮಾಡಿ ದುಡ್ಡು ಮಾಡ್ತಾ ಇದಾನೆ ಅವನು ನಿನ್ನಥರಾನೆ ಯಾವುದೋ ಇಂಜಿನಿಯರ್ ನನಗೆ ಸರಿ ಗೊತ್ತಿಲ್ಲ.
'ಭರತನ ಮೇಲಿನ ಉರಿಗೆ ಗಿಡದ ಎಲೆಯನ್ನು ಚಿವುಟಿದ.

'ಎಲೆ ಎಂತ ಮಾಡ್ತೋ ನಿಂಗೆ? ಅದೇನೋ ವಿಷಯ ಅಂದ್ಯಲ್ಲ ಏನು?'ಆಗಲೇ ಕೇಳಿದೆನೆಲ್ಲ ಅದೇ ಎಂದು ಸುರೇಂದ್ರ ಉತ್ತರಿಸಿದ.

ಪಟ್ಟಣವಾಸಿ ನಾಯಕನ ಪ್ರಶ್ನೆ

ಪಟ್ಟಣವಾಸಿ ನಾಯಕನ ಪ್ರಶ್ನೆ

"ನಿಜವಾ ಅಂತ ಕೇಳಿದೆ.ಏನು ನಿಜ. ನಾನು ಇರೋದ, ನೀ ಇರೋದ ಅಥವಾ ನಾ ಮನುಷ್ಯಾನ ಏನು? ಸ್ವಷ್ಟ ಕೇಳು, ಈ ಮೈಗಳ್ಳ ಮುಂಡೇವು ಇದಾವಲ್ಲ ಇವರಿಂದ ಅಡಕೆ ಇಳಿಸಕ್ಕೆ ಆಗಿಲ್ಲ. ದುಡ್ಡುಕೊಟ್ರೂ ಜನ ಬರಲ್ಲ. ದಿನದಗಂಜಿ ನಂಬಿದೋರಿಗೆ ಒಂದುರೂಪಾಯಿ ಅಕ್ಕಿ ಕೊಟ್ರೆ ಇನ್ನೇನ್ ಆಗತ್ತೆ ಹೊಲದ ಕೆಲಸ ತೋಟದ ಕೆಲಸಕ್ಕೆ ಆಳುಗಳೇ ಇಲ್ಲ. ವಯಸ್ಸಲ್ಲಿ ನಾನೇ ಇಳಿಸ್ತಿದ್ದೆ. ಈಗ ಆಗಲ್ಲ ಮಾರಾಯ.ಆ ಏನು ನಿಜ ಕೇಳು 'ತೋಟದಲ್ಲಿ ಸಿಕ್ಕಸಣ್ಣ ಕೊಂಬೆಯನ್ನು ಕೈಯಲ್ಲಿ ಆಡಿಸುತ್ತಾ ಸುರೇಂದ್ರ 'ಅದೇ ಈ ತಿಥಿ, ಗರುಡಪುರಾಣ, ಇವೆಲ್ಲಾ ನಿಜಾನ ಅಥವಾ ಬ್ರಾಹ್ಮಣರು ಹೊಟ್ಟೆ ಪಾಡಿಗೆ ಮಾಡಿಕೊಂಡಿದ್ದ?'ವೆಂಕಟೇಶ ಭಟ್ಟರು ಶಲ್ಯವನ್ನು ಹೆಗಲಿನಿಂದ ತೆಗೆದರು.

ಈ ತಿಥಿ, ಗರುಡಪುರಾಣ, ಇವೆಲ್ಲಾ ನಿಜಾನ

ಈ ತಿಥಿ, ಗರುಡಪುರಾಣ, ಇವೆಲ್ಲಾ ನಿಜಾನ

ಸುರೇಂದ್ರ ಧೈರ್ಯತಂದುಕೊಂಡು ಭಟ್ಟರನ್ನು ದಿಟ್ಟಿಸಿದ.'ಮೊದಲನೇ ಪ್ರಶ್ನೆಗೆ ನಿಜ ಅಂತೀನಿ, ಎರಡನೇ ಪ್ರಶ್ನೆಗೂ ನಿಜ ಅಂತೀನಿ' ಸುರೇಂದ್ರ ಗೊಂದಲದಲ್ಲಿ ಸಿಲುಕಿದ. ಭಟ್ಟರು ಮಂಡಿಯೂರಿ ಅನಾನಸ್ ಗಿಡದಲ್ಲಿದ್ದ ಅನಾನಸ್ ಹುಡುಕಿ ತೆಗೆಯಲುಕೂತರು.'ನನಗೆ ಇದರಲ್ಲಿ ನಂಬಿಕೆ ಇಲ್ಲ' ಸುರೇಂದ್ರನ ಈ ಮಾತಿಗೆ ಮಂಡಿಯೂರಿ ಕುಳಿತಿದ್ದ ಭಟ್ಟರು ತಿರುಗಿ 'ನಿನ್ನ ನಂಬಿಕೆ ಯಾವ ಮುಂಡೇಮಗನಿಗೆ ಬೇಕೋ?'ಮತ್ತೆ ಕತ್ತಾಳೆ ಗಿಡದ ಸಣ್ಣ ಪೊದೆಯಂತಿದ್ದ ಅನಾನಸ್ ‍ಗಿಡವನ್ನುಕೆದಕುತ್ತಾ ಭಟ್ಟರು ಉಸಿರನ್ನು ಹತೋಟಿಗೆ ತೆಗೆದುಕೊಂಡರು

'ಸಮಸ್ಯೆ ಹೇಳ್ ‍ಕೊಳ್ತಾ ಇದೀನಿ ಭಟ್ರೇ ನಂಬಿಕೆ ಇಲ್ಲದೀರ ಯಾವುದನ್ನು ಮಾಡಬಾರದು ಅಲ್ಲವೇ?ಇವಕ್ಕೆಲ್ಲಾ ಏನಾದರೂ ಸೈಂಟಿಫಿಕ್ ‍ರೀಸನ್ಸ್ ‍ಇದೀಯಾ?' ಕೆದಕುವುದನ್ನು ನಿಲ್ಲಿಸಿ ಭಟ್ಟರು ಮೇಲೆದ್ದರು 'ಅದು ಯಾಕೆ ಎಂದು ಗೊತ್ತಿಲ್ಲ ಈಗಿನ ಜನ ಎಲ್ಲವನ್ನೂ ವೈಜ್ಞಾನಿಕ ತಳಹದಿ ಮೇಲೆ ನಿರ್ಧಾರ ತೆಗೆದು ಕೊಳ್ತಾರೆ, ಸಾಮಾಜಿಕ ವ್ಯವಸ್ಥೆ ಮೊದಲು ಬಂತ?ಅಥವಾ ವಿಜ್ಞಾನ ಮೊದಲು ಬಂತ?ಜೀವನದಲ್ಲಿ ಶ್ರದ್ಧಾ ಭಾಗ ಬೇರೆ ಪ್ರಯೋಗ ಭಾಗ ಬೇರೆ ಎಲ್ಲಕ್ಕೂ ವಿಜ್ಞಾನ ಪ್ಯಾರಾಮೀಟರ್ ‍ಆಗಬೇಕಾಗಿಲ್ಲ. ಈ ಗೊಂದಲ ಬಂದಿದ್ದಕ್ಕೆ ಕ್ರೈಸ್ತರು ಫೇತ್ ಬೇರೆ ಸೈನ್ಸ್ ಬೇರೆ ಅಂದುಬಿಟ್ರು.

ನಮ್ಮಜನ ಒಬ್ರೇ ಎಲ್ಲವನ್ನೂ ವಿಜ್ಞಾನದ ಪ್ಯಾರಾ ಮೀಟರ್ ‍ನಲ್ಲಿ ನೋಡಿ ನಮನ್ನ ನಾವು ಗೇಲಿ ಮಾಡಿಕೊಳ್ತಾ ಇರೋರು' 'ಕ್ಷಣಕ್ಕೆ ಸುರೇಂದ್ರ ಮಾತನಾಡಲಿಲ್ಲ ನಂತರ 'ನನ್ನ ಪ್ರಶ್ನೆಗೆ ಉತ್ತರ ಇದಲ್ಲ'ಎಂದ.

ನೀನು ನಂಬಿಕೆ ಪದದಿಂದ ಹೇಳುತ್ತೀಯಾ

ನೀನು ನಂಬಿಕೆ ಪದದಿಂದ ಹೇಳುತ್ತೀಯಾ

'ಐನ್ ‍ಸ್ಟೀನನ ಒಂದು ಸಿದ್ಧಾಂತದ ಪ್ರಕಾರ ಯಾವುದೇ ವಸ್ತು ಬೆಳಕಿನ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವ್ಯೋಮದಲ್ಲಿ ಹೋದರೆ ತಿರುಗಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿಬಿಡುತ್ತದೆ ಎಂದು. ಅವನು ಹಾಳೆ ಮೇಲೆ ಇದನ್ನು ಸಾಧಿಸಿ ತೋರಿಸಿದ್ದಾನೆ. ಅದು ಸರಿ ಎಂದು ಹೇಳಬೇಕು ಎಂದರೆ ವಾಸ್ತವವಾಗಿ ಬೆಳಕಿನ ವೇಗಕ್ಕಿಂತ ವೇಗವಾಗಿ ಕಣವನ್ನು ಕಳಿಸಬೇಕು. ಬೆಳಕಿನ ವೇಗಕ್ಕಿಂತ ಯಾವುದನ್ನೂ ವೇಗವಾಗಿ ಕಳಿಸಲು ಸಾಧ್ಯವಿಲ್ಲ ಆದ್ದರಿಂದ ಸಿದ್ಧಾಂತವನ್ನು ಸರಿ ಎನ್ನಲೂ ವಾಸ್ತವ ಪ್ರಯೋಗ ಸಾಧ್ಯವಿಲ್ಲ ತಪ್ಪು ಎನ್ನಲೂ ಸಾಕ್ಷ್ಯವಿಲ್ಲ.

ನೀನು ನಂಬಿಕೆ ಬಗ್ಗೆ ಮಾತಾಡ್ದೆ, ನೋಡು ಇಲ್ಲಿ ಇದು ಅನಾನಸ್, 'ಇದು ಇಲ್ಲಿದೆ ಎಂದು ನಾನು ನಂಬುತ್ತೇನೆ' ಅಂತ ನೀನು ಹೇಳ್ತೀಯಾ? ಇಲ್ಲ, ನೀನು ಸ್ಪಷ್ಟವಾಗಿ ಹೇಳ್ತೀಯಾ "ಅನಾನಸ್ ‍ಇಲ್ಲಿದೆ"ಅಂತ, ಏಕೆಂದರೆ ನಿನಗೆ ಅದು ಕಾಣಸಿಗುತ್ತಿದೆ.ನಂಬಿಕೆ ಪದಕ್ಕೆಅರ್ಥವೇಇಲ್ಲ. ಏನು ನಿನಗೆ ಕಾಣಿಸಿವುದಿಲ್ಲವೋ ಯಾವುದು ನಿನಗೆ ನಿಲುಕದ್ದೋ ಅದನ್ನು ನೀನು ನಂಬಿಕೆ ಪದದಿಂದ ಹೇಳುತ್ತೀಯಾ.

ಲಿವಿಂಗ್ ‍ಟು ಗೆದರ್ ಬಗ್ಗೆ ಭಟ್ಟರ ಮಾತುಗಳು

ಲಿವಿಂಗ್ ‍ಟು ಗೆದರ್ ಬಗ್ಗೆ ಭಟ್ಟರ ಮಾತುಗಳು

ನಿನ್ನ ವಿಚಾರಕ್ಕೆ ಬರೋಣ ಲಿವಿಂಗ್ ‍ಟು ಗೆದರ್ ‍ನಲ್ಲಿದ್ದು ನಂತರಯಾಕೆ ಮದುವೆಯಾದೆ.ಜೀವನ ಪೂರ್ತಿ ನಿನ್ನಜೊತೆ ನಿನ್ನವಳು ಇರುತ್ತಾಳೆ ಎಂದು ನೀನು ನಂಬಲಿಲ್ಲ. ಇಂದೂ ಕೂಡ ಅವಳು ಜೀವನ ಪೂರ್ತಿ ನಿನ್ನೊಡನೆ ಇರುತ್ತಾಳೆ ಎಂಬ ನಂಬಿಕೆ ಇಲ್ಲ. ಇಲ್ಲದ್ದನ್ನುಇದೇ ಅಂದುಕೊಳ್ಳೋದೆ ನಂಬಿಕೆ.ನಮ್ಮ ಸಮಾಜ ಸಿದ್ಧಾಂತಗಳನ್ನು ನಂಬಲಿಲ್ಲ. ತರ್ಕ ಮಾಡಿತು. ವಿಶ್ಲೇಷಿಸಿತು.

ನಂಬಿಕೆಯ ಸಮಾಜವಲ್ಲ ಶ್ರದ್ಧೆಯ ಸಮಾಜ

ನಂಬಿಕೆಯ ಸಮಾಜವಲ್ಲ ಶ್ರದ್ಧೆಯ ಸಮಾಜ

ನಮ್ಮದು ನಂಬಿಕೆಯ ಸಮಾಜವಲ್ಲ ಶ್ರದ್ಧೆಯ ಸಮಾಜ, ದೇವರು, ಕ್ರಿಯೆ ಆಚರಣೆಎಲ್ಲವೂ ನಿಂತಿರೋದು ನಂಬಿಕೆಯ ಮೇಲಲ್ಲ ಶ್ರದ್ಧೆಯ ಮೇಲೆ ಶ್ರದ್ಧೆಗೂ ನಂಬಿಕೆಗೂ ಬಹಳ ವ್ಯತ್ಯಾಸವಿದೆ ನಮ್ಮವರಿಗೂ ಇನ್ನುಇದು ತಿಳಿದಿಲ್ಲ. ನಿನ್ನ ಹೆಂಡತಿ ನಿನ್ನೊಬ್ಬನನ್ನೇ ಗಂಡ ಎಂದುಕೊಳ್ಳುತ್ತಾಳೆ ಎಂಬುದು ನಿನ್ನ ನಂಬಿಕೆ. ಆದರೆ ಅವಳನ್ನು ಹೆಂಡತಿಯಂತೆ ನಡೆಸುಕೊಂಡು ಹೋಗುತ್ತೇನೆಎಂಬುದು ಶ್ರದ್ಧೆ' ಎಷ್ಟು ಕೆದಕಿಕೊಂಡರೂ ಭಟ್ಟರ ಕೊನೆಯ ಮಾತುಗಳು ಸುರೇಂದ್ರನಿಗೆ ಅರಿವಾಗಲಿಲ್ಲ.

ಪ್ರತಿ ಮಾತಿಗೂ ನೇಹಾಳ ಉದಾಹರಣೆ ನೀಡಿದ್ದನ್ನು ನೋಡಿ ಇವರಿಗೆ ನಾ ಕೇಳಬೇಕೆಂದಿದ್ದ ವಿಚಾರ ಹೇಗೆ ತಿಳಿಯಿತು ಎಂಬ ಗೊಂದಲ ಅವನಿಗಾಯಿತು.ಗೊಂದಲದಲ್ಲೇ ನಿಂತಿದ್ದ ಭಟ್ಟರುಎರಡುಅನಾನಸ್ ಕತ್ತರಿಸಿ ಕೈಯಲ್ಲಿಡಿದು ಮುಂದೆ ನಡೆದರು.ಸುರೇಂದ್ರ, ಭಟ್ಟರೇ ಎಂದು ಕೂಗಿದ. ಭಟ್ಟರು ಹಿಂತಿರುಗಿದರು.ಸುರೇಂದ್ರನಿಗೆ ಪ್ರಶ್ನೆ ಹೊಳೆಯಲಿಲ್ಲ. ಗೊಂದಲ ಸರಿಪಡಿಸಿ ಎಂದು ಕೇಳಬೇಕು ಎಂಬುದೂ ಹೊಳೆಯಲಿಲ್ಲ. ವಯಸ್ಸಾದವರು ಎನೋ ಹೋಲಿಕೆಯಿಲ್ಲದೆ ಮಾತನಾಡಿದಂತೆ ಸುರೇಂದ್ರನಿಗೆ ಭಾಸವಾಯಿತು.ನಿಮ್ಮ ಮಾತಿಗೆ ಅರ್ಥವೇ ಇಲ್ಲ ಎಂಬಂತೆ ದಿಟ್ಟಿಸಿದ.

ಶ್ರದ್ಧೆಗೂ ನಂಬಿಕೆಗೂ ಇರುವ ವ್ಯತ್ಯಾಸ'

ಶ್ರದ್ಧೆಗೂ ನಂಬಿಕೆಗೂ ಇರುವ ವ್ಯತ್ಯಾಸ'

'ಬೇರೆಯವರ ಮೇಲಿನ ನಿನ್ನ ಅವಲಂಬನೆ ನಂಬಿಕೆ, ನಿನ್ನ ಮೇಲಿನ ನಿನ್ನ ಅವಲಂಬನೆ ಶ್ರದ್ಧೆ ಇದೇ ಶ್ರದ್ಧೆಗೂ ನಂಬಿಕೆಗೂ ಇರುವ ವ್ಯತ್ಯಾಸ'ಕೈಯ್ಯಲ್ಲಿದ್ದಕೊಂಬೆಯನ್ನು ಸುರೇಂದ್ರ ಬಿಸಾಡಿದ. 'ಈಗ ನನಗೆ ತರ್ಕ ಮಾಡೋ ಸಮಯ ಇಲ್ಲ. ಇನ್ನರ್ಧಗಂಟೇಲಿ ಹೊರಡೋಣಐದನೇ ದಿನದ್ದು ಇವತ್ತು ಆಗಬೇಕು ನೆನಪಿರಲಿ'ತೋಟದಿಂದ ಮನೆಯ ಬಾಗಿಲು ತಲುಪಿದಾಗ ಭಟ್ಟರು ಗಡಸಾಗಿ ಹೇಳಿದರು.

English summary
SL Bhyrappa praises Karma kannada novel by Karanam Pavan Prasad. Karma is a contemporary novel, dealing with urban life against ritual orthodoxy. And alsorevealing the phenomenon and difference between faith and belief with prospective to after death ritual. Karma book is now available purchase through online
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X