ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಸಹಭಾಗಿತ್ವದಲ್ಲಿ 6 ಬಂದರು ಅಭಿವೃದ್ಧಿ

|
Google Oneindia Kannada News

ಬೆಂಗಳೂರು, ನ. 18 : ಉತ್ತರ ಕನ್ನಡದ ಬೇಲೆಕೇರಿ ಸೇರಿದಂತೆ ಆರು ಬಂದರುಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ನಿರ್ಧರಿಸಿದೆ. ಬೇಲೆಕೇರಿ ಸೇರಿದಂತೆ ಐದು ಬಂದರುಗಳನ್ನು ಅಭಿವೃದ್ಧಿಗೊಳಿಸಲು ಖಾಸಗಿಯವರು ಆಸಕ್ತಿ ತೋರಿದ್ದು, ಇನ್ನೆರಡು ತಿಂಗಳಲ್ಲಿ ಈ ಬಗ್ಗೆ ಅಂತಿಮ ಆದೇಶ ಹೊರಬೀಳಲಿದೆ.

ಜವಳಿ ಮತ್ತು ಬಂದರು ಖಾತೆ ಸಚಿವ ಬಾಬುರಾವ್‌ ಚಿಂಚನಸೂರ್ ಅವರು ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ್ದು, ಮಲ್ಪೆ, ಮಂಕಿ, ಪಾವಿನಕುರ್ವೆ, ಬೇಲೆಕೇರಿ, ತದಡಿ ಮತ್ತು ಹೊನ್ನಾವರ ಬಂದರುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ.

Baburao Chinchansur

ಬೇಲೆಕೇರಿ ಬಂದರನ್ನು ದೆಹಲಿ ಮೂಲದ ಆಶ್ರಯ ಪೋರ್ಟ್‌ಗೆ ವಹಿಸಲಾಗುವುದು. ಈಗಾಗಲೇ ಕಂಪನಿ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮಂಕಿ ಬಂದರು ಅಭಿವೃದ್ಧಿ ಹೊಣೆಯನ್ನು ರೇಣುಕಾ ಶುಗರ್ ಮತ್ತು ಹೊನ್ನಾವರ ಬಂದರು ಅಭಿವೃದ್ಧಿ ಕೆಲಸವನ್ನು ಆಂಧ್ರಪ್ರದೇಶ ಮೂಲದ ಕಂಪನಿಯೊಂದಕ್ಕೆ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದರು. [ಬೇಲೇಕೇರಿ ಅಕ್ರಮ ಅದಿರು ಸಾಗಣೆ]

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಸರ್ಕಾರ ಈ ಕ್ರಮಗಳನ್ನು ಕೈಗೊಳ್ಳುತ್ತಿದೆ. 30 ವರ್ಷಗಳ ಅವಧಿಗೆ ಲೀಸ್‌ ಆಧಾರದ ಮೇಲೆ ಈ ಬಂದರುಗಳನ್ನು ಖಾಸಗಿಯವರಿಗೆ ವಹಿಸಲಾಗುತ್ತದೆ. ಅಭಿವೃದ್ಧಿಗೆ ಬೇಕಾದ ಪೂರ್ಣ ವೆಚ್ಚವನ್ನು ಅವರು ಭರಿಸುತ್ತಾರೆ. ಬಂದರು ಮೂಲಕ ಆಗುವ ವಹಿವಾಟಿನಲ್ಲಿ ಒಂದಷ್ಟು ಮೊತ್ತ ಸರ್ಕಾರಕ್ಕೆ ಪಾವತಿಸುತ್ತಾರೆ ಎಂದು ವಿವರಣೆ ನೀಡಿದರು.

ಬಂದರಿನ ವಹಿವಾಟು ನಿಯಂತ್ರಣ ಸರ್ಕಾರದ ಕೈಯಲ್ಲಿರುತ್ತದೆ. ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಈ ಎಲ್ಲಾ ಅಂಶಗಳನ್ನು ಅಂತಿಮಗೊಳಿಸಲಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಮಾತುಕತೆ ಅಂತಿಮ ಹಂತದಲ್ಲಿದ್ದು, ಒಂದು ತಿಂಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿರುವ 12 ಬಂದರುಗಳ ಪೈಕಿ 6 ಬಂದರುಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಈ ಯೋಜನೆ ತಯಾರಿಸಲಾಗಿದೆ. ಮೂರು ಬಂದರುಗಳನ್ನು ವಹಿಸಿಕೊಳ್ಳಲು ಕಂಪನಿಗಳು ಮುಂದೆ ಬಂದಿದ್ದು, ಇನ್ನೂ ಮೂರು ಬಂದರುಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಇನ್ನೆರಡು ತಿಂಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

English summary
Private entrepreneurs have come forward to develop six of the 12 minor ports in Karnataka said, Minister for Ports Baburao Chinchansur. Honnavar, Manki, Mavinakurve, Belekeri, Tadadi and Malpe ports will be developed under Public-Private Partnership (PPP) model.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X