ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮೀ ಮಾಜಿ ಮುಖ್ಯಮಂತ್ರಿಗಳು ಮತ್ತೆ ಗೆದ್ದು ಬರುತ್ತಾರಾ?

By Srinath
|
Google Oneindia Kannada News

ಬೆಂಗಳೂರು, ಮಾರ್ಚ್ 18: ಈ ಬಾರಿ ರಾಜ್ಯದಲ್ಲಿ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ 5 ಕ್ಷೇತ್ರಗಳು/ 6 ಅಭ್ಯರ್ಥಿಗಳು ವಿಶೇಷವಾಗಿ ಗಮನ ಸೆಳೆದಿದ್ದಾರೆ. ಇವರ ಪೈಕಿ ಎಷ್ಟು ಮಂದಿ ಸಂಸದರಾಗಿ ಆಯ್ಕೆಯಾಗುತ್ತಾರೆ ಎಂಬುದು ರಾಜ್ಯದ ಮಟ್ಟಿಗೆ ನಿಜಕ್ಕೂ ಕುತೂಹಲಕಾರಿಯಾಗಿದೆ.

ಯಾರಪ್ಪಾ ಈ ಪಂಚ ನಾಯಕರು ಅಂದರೆ 1) ಎಚ್ ಡಿ ದೇವೇಗೌಡ, 2) ವೀರಪ್ಪಮೊಯ್ಲಿ, 3) ಧರಂ ಸಿಂಗ್, 4) ಬಿಎಸ್ ಯಡಿಯೂರಪ್ಪ ಮತ್ತು 5) ಡಿವಿ ಸದಾನಂದಗೌಡ ಅವರುಗಳು. ಸ್ವಲ್ಪ ತಾಳಿ, ಇದಕ್ಕೆ ಇನ್ನೂ ಒಬ್ಬರ ಹೆಸರು ಸೇರ್ಪಡೆಯಾಗುವ ಎಲ್ಲ ಲಕ್ಷಣಗಳೂ ಇವೆ. ಇನ್ನೂ ಇಂಟರೆಸ್ಟಿಂಗ್ ಅಂದರೆ ಇವರ ಪೈಕಿ ಇಬ್ಬರು ನೇರಾನೇರ ಎದುರಾಳಿಗಳಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಯಾರಪ್ಪ ಈ ಆರನೆಯವರು ಅಂದ್ರೆ, 6) ಎಚ್ ಡಿ ಕುಮಾರಸ್ವಾಮಿ. (ತಾಜಾ ವರದಿಗಳ ಪ್ರಕಾರ ಇವರ ಹೆಸರು ಅಖೈರಾಗಿದೆ)

ಸಹಜವಾಗಿಯೇ ಇವರುಗಳು ಸ್ಪರ್ಧಿಸುತ್ತಿರುವ ಆರೂ ಕ್ಷೇತ್ರಗಳು ಪ್ರತಿಷ್ಠಿತ ಕಣಗಳಾಗಿ ಮಾರ್ಪಟ್ಟಿವೆ. ಹಾಸನ, ಚಿಕ್ಕಬಳ್ಳಾಪುರ, ಬೀದರ್, ಶಿವಮೊಗ್ಗ ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳ ಮತದಾರರು '6 ಮಾಜಿ ಮುಖ್ಯಮಂತ್ರಿಗಳ ಪೈಕಿ ಎಷ್ಟು ಆರು ಹಿತವರು?' ಎಂಬುದಕ್ಕೆ ಏಪ್ರಿಲ್ 17ರಂದು ಉತ್ತರ ನೀಡಬೇಕಿದೆ.

ಗಮನಾರ್ಹವೆಂದರೆ ಬೀದರ್ ಹೊರತು ಪಡಿಸಿ ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ ಹಾಗೂ ಶಿವಮೊಗ್ಗ ಕ್ಷೇತ್ರಗಳ ಅಭ್ಯರ್ಥಿಗಳು ಸ್ಥಳೀಯರಲ್ಲ. ಆದರೆ ಇತ್ತಿತ್ಲಾಗೆ ಬಿಡಿ, ಯಾರು ಎಲ್ಲಿ ಬೇಕಾದ್ರು ನಿಂತು ಕ್ಷೇತ್ರವನ್ನು ದಕ್ಕಿಸಿಕೊಳ್ಳಬಹುದಾಗಿದೆ.

ನಾಲ್ವರು ಸಾಲು ಸಾಲು ಮುಖ್ಯಮಂತ್ರಿಗಳು

ನಾಲ್ವರು ಸಾಲು ಸಾಲು ಮುಖ್ಯಮಂತ್ರಿಗಳು

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ 2004ರಲ್ಲಿ ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಅದಾದ ಮೇಲೆ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು. ಇನ್ನು, 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯ ನೇತೃತ್ವ ವಹಿಸಿದ್ದ ಯಡಿಯೂರಪ್ಪ 110 ಸ್ಥಾನಗಳನ್ನು ಪಡೆದು ಪಕ್ಷೇತರರ ನೆರವಿನೊಂದಿಗೆ ಅಧಿಕಾರದ ಗದ್ದುಗೆ ಏರಿದ್ದರು. ಅದಾದ ನಂತರ, ಮೂರೂವರೆ ವರ್ಷಗಳಿಗೆ ಡಿವಿ ಸದಾನಂದಗೌಡರೂ ಮುಖ್ಯಮಂತ್ರಿಯಾದರು.

ಶಾಸಕರಾಗದೆ ಮುಖ್ಯಮಂತ್ರಿಯಾಗಿ ಇದೀಗ ಮತ್ತೆ ಸಂಸದರು

ಶಾಸಕರಾಗದೆ ಮುಖ್ಯಮಂತ್ರಿಯಾಗಿ ಇದೀಗ ಮತ್ತೆ ಸಂಸದರು

ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಫಲವಾಗಿ ರಾಜ್ಯ ಅಲ್ಪಾವಧಿಗಳಿಗೆಲ್ಲಾ ಸರಸರನೆ ನಾಲ್ಕು ಮುಖ್ಯಮಂತ್ರಿಗಳನ್ನು ಕಾಣುವಂಣತಾಯಿತು. ಇದರಿಂದ ಕರ್ನಾಟಕದ ರಾಜಕೀಯವೂ ಕುಖ್ಯಾತಿ ಗಳಿಸುವುದರ ಜತೆಗೆ ಈ ಮುಖ್ಯಮಂತ್ರಿಗಳಿಗೆ ಪುರೋಭಿವೃದ್ಧಿ ಎಂಬುದು ನಗಣ್ಯವಾಯಿತು ಎಂಬುದೇ ಖೇದಕರ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸರಾಗಿದ್ದ ಸದಾನಂದ ಗೌಡರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ವಿಧಾನಪರಿಷತ್ತಿಗೆ ನೇಮಕಗೊಳ್ಳುವ ಮೂಲಕ ರಾಜ್ಯದ ಮುಖ್ಯಮಂತ್ರಿಯಾದರು. ಅಲ್ಲಿಗೆ ಕೆಳಮನೆಯ ಶಾಸಕರಾಗದೆ ಮುಖ್ಯಮಂತ್ರಿ ಪಟ್ಟ ಗಿಟ್ಟಿಸಿದರು. ಇದೀಗ ಮತ್ತೆ ಸಂಸದರಾಗಲು ಹೊರಟಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಅಧಿಕೃತ

ಎಚ್ ಡಿ ಕುಮಾರಸ್ವಾಮಿ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಅಧಿಕೃತ

ಇನ್ನು, ಎಚ್ ಡಿ ಕುಮಾರಸ್ವಾಮಿ ಅವರ ಕಥೆಯೂ ಭಿನ್ನವೇನೂ ಅಲ್ಲ. ಕುಮಾರಸ್ವಾಮಿ ಈ ಬಾರಿ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸುತ್ತಾರೆ ಎಂದು ಪರಿಗಣಿಸಿ ಹೇಳುವುದಾದರೆ ರಾಜ್ಯ ರಾಜಕಾರಣ/ ರಾಷ್ಟ್ರಕಾರಣ ಕುಮಾರಸ್ವಾಮಿಗೆ ಹೊಸದೇನೂ ಅಲ್ಲ. ಬೆಂಗಳೂರು ಗ್ರಾಮಾಂತರದ ಸಂಸದರಾಗಿದ್ದವರು ತಮ್ಮದೇ ಕಾರಣಕ್ಕಾಗಿ ರಾಜೀನಾಮೆ ನೀಡಿ, ಶಾಸಕರಾದವರು. ತನ್ಮೂಲಕ ತಮ್ಮ ಕುಟುಂಬದ ರಾಜಕೀಯ ಎದುರಾಳಿಗೆ ಆ ಕ್ಷೇತ್ರವನ್ನು ಬೆಳ್ಳಿತಟ್ಟೆಯಲ್ಲಿಟ್ಟು ಕೊಡುಗೆಯಾಗಿ ನೀಡಿದರು. ಇದೀಗ ರಾಮನಗರ ಶಾಸಕರಾಗಿರುವ ಎಚ್ಡಿಕೆ ಮತ್ತೆ ತಮ್ಮದೇ ಕಾರಣಕ್ಕಾಗಿ ಲೋಕಸಭೆಗೆ ಹೊರಡಲು ಅನುವಾದಂತಿದೆ.

ಮುಖ್ಯಮಂತ್ರಿ ವೀರಪ್ಪಮೊಯ್ಲಿ ಅವರ ಕಾಲವೂ ಹೀಗೇ

ಮುಖ್ಯಮಂತ್ರಿ ವೀರಪ್ಪಮೊಯ್ಲಿ ಅವರ ಕಾಲವೂ ಹೀಗೇ

ಇನ್ನು ವೀರಪ್ಪಮೊಯ್ಲಿ ಅವರು ಮುಖ್ಯಮಂತ್ರಿಯಾದ ಕಾಲವೂ ಹೀಗೇ ರಾಜಕೀಯ ಕಾರಣಗಳಿಗೆ ಬಲಿಯಾಗಿತ್ತು. 1992ರಿಂದ 1994ರವರೆಗೆ ವೀರಪ್ಪಮೊಯ್ಲಿ ಅವರು ಮುಖ್ಯಮಂತ್ರಿಯಾವುದಕ್ಕೂ ಮುನ್ನ ವೀರೇಂದ್ರ ಪಾಟೀಲ್ ಮತ್ತು ಬಂಗಾರಪ್ಪ ಅವರು ಅಲ್ಪಾವಧಿಗೆ ಮುಖ್ಯಮಂತ್ರಿಯಾಗಿದ್ದರು.

ಪಿಎಂ ಆಗುವ ಮುನ್ನ ದೇವೇಗೌಡರು ಸಿಎಂ ಆಗಿದ್ದರು

ಪಿಎಂ ಆಗುವ ಮುನ್ನ ದೇವೇಗೌಡರು ಸಿಎಂ ಆಗಿದ್ದರು

ಇನ್ನು ಎಚ್ ಡಿ ದೇವೇಗೌಡರು ಮಾಜಿ ಪ್ರಧಾನಿ ಆಗುವುದಕ್ಕೆ ಮುನ್ನ ಮುಖ್ಯಮಂತ್ರಿಯಾಗಿದ್ದವರು. 1994ರ ಡಿಸೆಂಬರಿನಲ್ಲಿ ರಾಜ್ಯದ 14ನೆಯ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದವರು. ಜೂನ್ 1996ರವರೆಗೂ ಮುಖ್ಯಮಂತ್ರಿಯಾಗಿದ್ದರು. ಅದಾದ ನಂತರ ಪಿಎಂ ಆದರು.

English summary
Lok Sabha Polls 2014- Six former Chief Ministers to contest from 5 LS constituencies: They are HD Deve Gowda (Hassan), Veerappa Moily (Chickballapur), Dharam Singh (Bidar), HD Kumaraswamy (Chickballapur), BS Yeddyurappa (Shimoga) and DV Sadananda Gowda (Bangalore North). Out of these six HD Kumaraswamy's candidature has not yet been finalised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X