ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಡಿಕೆಗೆ ಉರುಳಾಗುತ್ತಾ ಜಂತಕಲ್ ಮೈನಿಂಗ್ ಕೇಸ್?

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿಗೆ ಈ ಕೇಸ್ ಉರುಳಾಗುತ್ತಾ? | Oneindia Kannada

ಬೆಂಗಳೂರು, ಸೆಪ್ಟೆಂಬರ್ 22: ಜಂತಕಲ್ ಮೈನಿಂಗ್ ಕಂಪನಿಗೆ ಗಣಿಗಾರಿಕೆ ನಡೆಸಲು ಪರವಾನಗಿಯನ್ನು ಅಕ್ರಮವಾಗಿ ನವೀಕರಣ ಮಾಡಲು ಅವಕಾಶ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಸರೂ ಕೇಳಿಬಂದಿತ್ತು.

2007ರಲ್ಲಿ ಗಣಿಗಾರಿಕೆ ನಡೆಸಲು ಅಕ್ರಮವಾಗಿ ಪರವಾನಗಿ ನೀಡಲಾಗಿತ್ತು, ಈ ಆರೋಪದ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ನಿರ್ದೇಶನದಂತೆ ತನಿಖೆ ನಡೆಸುತ್ತಿರುವ ಲೋಕಾಯುಕ್ತ ವಿಶೇಷ ತನಿಖಾ ದಳದ ಅಧಿಕಾರಿಗಳು, ಸುಪ್ರೀಂಕೋರ್ಟ್ ಗೆ ಶೀಘ್ರದಲ್ಲೇ ವರದಿ ಸಲ್ಲಿಸಲಿದೆ.

ಜಂತಕಲ್ ಅಕ್ರಮ ಗಣಿಗಾರಿಕೆ: 'ಎಸ್ಐಟಿ'ಗೆ ದಾಖಲೆ ಸಲ್ಲಿಸಿದ ಜನಾರ್ದನ ರೆಡ್ಡಿ ಜಂತಕಲ್ ಅಕ್ರಮ ಗಣಿಗಾರಿಕೆ: 'ಎಸ್ಐಟಿ'ಗೆ ದಾಖಲೆ ಸಲ್ಲಿಸಿದ ಜನಾರ್ದನ ರೆಡ್ಡಿ

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಹಿರಿಯ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಸೇರಿದಂತೆ ಕೆಲ ಐಎಎಸ್ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದರು ಎನ್ನಲಾಗಿದೆ.

ಈ ಜಂತಕಲ್ ಮೈನಿಂಗ್ ಎಲ್ಲಿದೆ?

ಈ ಜಂತಕಲ್ ಮೈನಿಂಗ್ ಎಲ್ಲಿದೆ?

ಚಿತ್ರದುರ್ಗ ಜಿಲ್ಲೆಯ ಪಟ್ಟಾ ಜಮೀನಿನಲ್ಲಿ ಜಂಕಲ್ ಮೈನಿಂಗ್ ಕಂಪನಿಯು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದೆ. ಪರವಾನಗಿ ನವೀಕರಣ ಮಾಡಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರೂ ಅವರಿಗೆ ಅಕ್ರಮವಾಗಿ ಪರವಾನಗಿ ನೀಡಲಾಗಿತ್ತು.

ಜಂತಕಲ್ ಗಣಿಗಾರಿಕೆ: ಎಚ್‌ಡಿಕೆ ನಿರೀಕ್ಷಣಾ ಜಾಮೀನು ಅವಧಿ ವಿಸ್ತರಣೆ ಜಂತಕಲ್ ಗಣಿಗಾರಿಕೆ: ಎಚ್‌ಡಿಕೆ ನಿರೀಕ್ಷಣಾ ಜಾಮೀನು ಅವಧಿ ವಿಸ್ತರಣೆ

ಜಂತಕಲ್ ಪರವಾನಗಿ ನವೀಕರಣೆ ಕುಮಾರಸ್ವಾಮಿ ಒಪ್ಪಗೆ ನೀಡಿದ್ದರೆ?

ಜಂತಕಲ್ ಪರವಾನಗಿ ನವೀಕರಣೆ ಕುಮಾರಸ್ವಾಮಿ ಒಪ್ಪಗೆ ನೀಡಿದ್ದರೆ?

ಭೂ ವಿಜ್ಞಾನ ಹಾಗೂ ಗಣಿ ಇಲಾಖೆಯುವ ಜಂತಕಲ್ ನಲ್ಲಿ ಮೈನಿಂಗ್ ಮಾಡಕೂಡದು ಅದು ಅಲ್ಲಿನ ಪರಿಸರವಷ್ಟೇ ಅಲ್ಲದೆ ಸುತ್ತಮುತ್ತಲಿನ ಜನರಿಗೆ ತೊಂದರೆ ಉಂಟು ಮಾಡುತ್ತದೆ ಎಂದು ಹೇಳಿದ್ದರೂ ಕೂಡ ಕುಮಾರಸ್ವಾಮಿಯವರು ಪರವಾನಗಿ ನೀಡಿದ್ದರು ಎನ್ನಲಾಗಿದೆ.

ಜಂತಕಲ್ ಕೇಸ್ : ಎಸ್ಐಟಿ ವಶಕ್ಕೆ ಐಎಎಸ್ ಅಧಿಕಾರಿ ಗಂಗಾರಾಮ್ ಜಂತಕಲ್ ಕೇಸ್ : ಎಸ್ಐಟಿ ವಶಕ್ಕೆ ಐಎಎಸ್ ಅಧಿಕಾರಿ ಗಂಗಾರಾಮ್

ಸಂತೋಷ್ ಹೆಗ್ಡೆ ಸಲ್ಲಿಸಿರುವ ಅಕ್ರಮ ಗಣಿಗಾರಿಕೆ ವರದಿಯಲ್ಲಿ ಉಲ್ಲೇಖ

ಸಂತೋಷ್ ಹೆಗ್ಡೆ ಸಲ್ಲಿಸಿರುವ ಅಕ್ರಮ ಗಣಿಗಾರಿಕೆ ವರದಿಯಲ್ಲಿ ಉಲ್ಲೇಖ

ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಸಲ್ಲಿಸಿರುವ ಅಕ್ರಮ ಗಣಿಗಾರಿಕೆ ವರದಿಯಲ್ಲಿ ಉಲ್ಲೇಖಿಸಿದ್ದಾರೆ, ಇದೇ ವರದಿ ಆಧರಿಸಿ ವಕೀಲ ವಿನೋದ್ ಕುಮಾರ್ ಮತ್ತು ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಾಹಂ ಅವರು ಲೋಕಾಯುಕ್ತಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

ಎಸ್‌ಎಂ ಕೃಷ್ಣ ಹೊರತುಪಡಿಸಿ ಉಳಿದವರ ಮೇಲೆ ದೂರು

ಎಸ್‌ಎಂ ಕೃಷ್ಣ ಹೊರತುಪಡಿಸಿ ಉಳಿದವರ ಮೇಲೆ ದೂರು

2017ರ ಮೇ ತಿಂಗಳಲ್ಲಿ ಟಿಜೆ ಅಬ್ರಾಹಂ ಅವರು ದೂರು ಕುರಿತು ಆದೇಶ ನೀಡಿದ್ದ ಸುಪ್ರೀಂಕೋರ್ಟ್, ಮಾಜಿ ಸಿಎಂ ಎಸ್‌ಎಂ ಕೃಷ್ಣ ಅವರನ್ನು ಹೊರತುಪಡಿಸಿ ಉಳಿದೆಲ್ಲಾ ಆರೋಪಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಒಂದು ವರ್ಷದಿಂದ ನಡೆಸುತ್ತಿರುವ ತನಿಖೆ ಇದೀಗ ಪೂರ್ಣಗೊಂಡಿದೆ ಎನ್ನಲಾಗಿದೆ.

English summary
Special Investigation Team will submit its investigation report to the supreme court on nmisapproppriation in Janthakal mining renewal case which alleged that the chief minister HD Kumaraswamy was involved.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X