ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿ ಹತ್ಯೆ: ಎಸ್‌ಐಟಿಯಿಂದ ಪುಣೆಯಲ್ಲಿ ಇಬ್ಬರು ಆರೋಪಿಗಳ ವಿಚಾರಣೆ

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್ 14: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಪೊಲೀಸರು ಮಹಾರಾಷ್ಟ್ರದ ಪುಣೆಯಲ್ಲಿ ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.

ಮಹಾರಾಷ್ಟ್ರ ಪೊಲೀಸರು (ಎಟಿಎಸ್) ಆಗಸ್ಟ್ 10 ರಂದು ಬಲಪಂಥೀಯ ಸಂಘಟನೆಗೆ ಸೇರಿದ ಮೂವರನ್ನು ಬಂಧಿಸಿದ್ದರು. ಅವರಿಂದ ಹಲವು ನಾಡ ಬಂದೂಕು ಮತ್ತು ನಾಡ ಬಾಂಬ್ ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಇಬ್ಬರಿಗೆ ಗೌರಿ ಹತ್ಯೆಯೊಂದಿಗೆ ನಿಕಟ ಸಂಬಂಧ ಇರುವ ಶಂಕೆ ಇದೆ.

ಗೌರಿ ಹತ್ಯೆ ಆರೋಪಿಗಳೇ ಕಲಬುರ್ಗಿ, ಪಾನ್ಸರೆ, ದಾಬೋಲ್ಕರ್‌ ಕೊಲೆಗಾರರು!ಗೌರಿ ಹತ್ಯೆ ಆರೋಪಿಗಳೇ ಕಲಬುರ್ಗಿ, ಪಾನ್ಸರೆ, ದಾಬೋಲ್ಕರ್‌ ಕೊಲೆಗಾರರು!

ಸುದಾನ್ವ ಗೊಂಡಾಲೆಕರ್ (39), ಶರದ್ ಕಲಸ್ಕರ್ (25) ಮತ್ತು ವೈಭವ್ ರಾವತ್‌ (40) ಅವರುಗಳನ್ನು ಮಹರಾಷ್ಟ್ರ ವಿಶೇಷ ಪೊಲೀಸ್ ದಳ ಆಗಸ್ಟ್‌ 10ರಂದು ಬಂಧಿಸಿತ್ತು. ಸುದನ್ವ ಗೊಂಡಾಲೆಕರ್ ನನ್ನು ಬಂಧಿಸಿದಾಗ ಆತನಿಂದ 11 ನಾಡ ಪಿಸ್ತೂಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಹಲವು ನಾಡ ಬಾಂಬ್‌ಗಳನ್ನೂ ವಶಪಡಿಸಿಕೊಂಡಿದ್ದರು. ಈತನಿಗೂ ಅಮೋಲ್ ಕಾಳೆಗೂ ಹತ್ತಿರದ ಸಂಬಂಧವಿರುವ ಕಾರಣ ಎಸ್‌ಐಟಿ ಈಗ ಸದನ್ವ ಗೊಂಡಾಲೆಕರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಗೌರಿ ಹತ್ಯೆಗೆ ಬಳಸಿದ್ದ ಬಂದೂಕು ಮಹರಾಷ್ಟ್ರದಲ್ಲಿ?

ಗೌರಿ ಹತ್ಯೆಗೆ ಬಳಸಿದ್ದ ಬಂದೂಕು ಮಹರಾಷ್ಟ್ರದಲ್ಲಿ?

ಗೊಂಡಾಲೆಕರ್ ಅವರಿಂದ ವಶಪಡಿಸಿಕೊಂಡ ಬಂದೂಕುಗಳಲ್ಲಿಯೇ ಒಂದು ಬಂದೂಕು ಗೌರಿ ಲಂಕೇಶ್ ಹತ್ಯೆಗೆ ಬಳಸಿರಬಹುದು ಎಂಬ ಅನುಮಾನವೂ ಎಸ್‌ಐಟಿಗೆ ಇದೆ. ಹಾಗಾಗಿ ಈ ನಿಟ್ಟಿನಲ್ಲಿಯೂ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈಗಾಗಲೇ ಹತ್ಯೆಗೆ ಬಳಸಿದ್ದ ಬೈಕ್ ಸಿಕ್ಕಿದ್ದು, ಬಂದೂಕು ಸಿಗುವುದು ಬಾಕಿ ಇದೆ. ಗೌರಿ ಹತ್ಯೆಗೆ 7.65 ಎಂಎಂ ಬಂದೂಕು ಬಳಸಲಾಗಿತ್ತು. ಇದಕ್ಕಾಗಿ ಎಸ್‌ಐಟಿ ಹುಡುಕಾಟ ನಡೆಸುತ್ತಿದ್ದಾರೆ.

ಕಂಟ್ರಿ ಮೇಡ್ ಪಿಸ್ತೂಲು ಎಂದರೇನು? ಅಂಡರ್ ವರ್ಲ್ಡ್ ಗೆ ಇದೇಕೆ ಇಷ್ಟ?ಕಂಟ್ರಿ ಮೇಡ್ ಪಿಸ್ತೂಲು ಎಂದರೇನು? ಅಂಡರ್ ವರ್ಲ್ಡ್ ಗೆ ಇದೇಕೆ ಇಷ್ಟ?

ಯಾರೀ ಗೊಂಡಾಲೆಕರ್‌?

ಯಾರೀ ಗೊಂಡಾಲೆಕರ್‌?

ಸುದಾನ್ವ ಗೊಂಡಾಲೆಕರ್‌, ಶಿವ ಪ್ರತಿಷ್ಠಾನ ಹಿಂದೂಸ್ಥಾನ ಮತ್ತು ಹಿಂದೂ ಜಾಗರಣ ಸಮಿತಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾನೆ. ಬ್ಯುಸಿನೆಸ್‌ಮ್ಯಾನ್ ಆಗಿರುವ ಈತ ಪಾಲುದಾರಿಕೆಯಲ್ಲಿ ಸಿಎಡಿ ಪ್ರೈವೆಟ್ ಲಿಮಿಟೆಡ್ ಹೆಸರಿನ ಜಾಹಿರಾತು ವಿನ್ಯಾಸ ಸಂಸ್ಥೆ ನಡೆಸುತ್ತಿದ್ದಾನೆ. ಈತನ ಸಂಸ್ಥೆ ಕಳೆದ ವರ್ಷವೊಂದರಲ್ಲೆ 40 ಲಕ್ಷಕ್ಕೂ ಹೆಚ್ಚಿನ ಲೇವಾದೇವಿ ನಡೆಸಿದೆ ಇದರ ಮೂಲದ ಬಗ್ಗೆಯೂ ಈಗ ತನಿಖೆ ನಡೆಯುತ್ತಿದೆ.

ಶರದ್ ಕಲಸ್ಕರ್‌ ಎಂಬುವನ ವಿಚಾರಣೆ

ಶರದ್ ಕಲಸ್ಕರ್‌ ಎಂಬುವನ ವಿಚಾರಣೆ

ಗೊಂಡಾಲೆಕರ್ ಜೊತೆಗೆ ಶರದ್ ಕಲಸ್ಕರ್ ಎಂಬುವನನ್ನೂ ಎಸ್‌ಐಟಿ ವಿಚಾರಣೆ ನಡೆಸುತ್ತಿದ್ದು, ಅಮೋಲ್ ಕಾಳೆ ಡೈರಿಯಲ್ಲಿ ಈತನ ಹೆಸರಿನ ಉಲ್ಲೇಖವಿದೆ. ಆದರೆ ಗೌರಿ ಹತ್ಯೆಯಲ್ಲಿ ಈತನ ಪಾತ್ರ ಏನು ಎಂಬುದು ಇನ್ನೂ ಖಚಿತವಾಗಿಲ್ಲ.

ಗೌರಿ ಲಂಕೇಶ್‌ ಹಂತಕರ ಮಾಸ್ಟರ್ ಪ್ಲಾನ್‌ಗೆ ಎಸ್‌ಐಟಿಯೇ ಕಂಗಾಲುಗೌರಿ ಲಂಕೇಶ್‌ ಹಂತಕರ ಮಾಸ್ಟರ್ ಪ್ಲಾನ್‌ಗೆ ಎಸ್‌ಐಟಿಯೇ ಕಂಗಾಲು

ಸುಜಿತ್‌ಗೆ ಆಶ್ರಯ ನೀಡಿದ್ದ ಶಂಕೆ

ಸುಜಿತ್‌ಗೆ ಆಶ್ರಯ ನೀಡಿದ್ದ ಶಂಕೆ

ಗೌರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬನಾದ ಸುಜಿತ್ ಅಲಿಯಾಸ್ ಪ್ರವೀಣ್, ಹತ್ಯೆಯ ನಂತರ ಹಲವು ದಿನ ಸೂರತ್‌ನಲ್ಲಿ ಅಡಗಿಕೊಂಡಿದ್ದ ಆಗ ಆತನಿಗೆ ಶರದ್ ಕಲಸ್ಕರ್‌ನೇ ಆಶ್ರಯ ನೀಡಿದ್ದ ಎಂಬ ಗುಮಾನಿ ಎಸ್‌ಐಟಿಗೆ ಇದೆ.

ಕಲಬುರ್ಗಿ, ಪಾನ್ಸರೆ, ದಾಬೋಲ್ಕರ್‌ ಕೊಲೆಗಾರರು ಇವರೇ?

ಕಲಬುರ್ಗಿ, ಪಾನ್ಸರೆ, ದಾಬೋಲ್ಕರ್‌ ಕೊಲೆಗಾರರು ಇವರೇ?

ಗೌರಿ ಹತ್ಯೆಯಲ್ಲಿ ಪ್ರಮುಖ ಆರೋಪಿಗಳಾಗಿರುವ ಅಮೋಲ್ ಕಾಳೆ, ಸುಜೀತ್, ಮನೋಹರ್ ಯಡವೆ, ರಾಜೇಶ್ ಬಂಗೇರಾ ಅವರುಗಳೇ ವಿಚಾರವಾದಿಗಳಾದ ಎಂಎಂ ಕಲಬುರ್ಗಿ, ಗೋವಿಂದ ಪಾನ್ಸರೆ, ನರೇಂದ್ರ ದಾಬೋಲ್ಕರ್ ಹತ್ಯೆಯಲ್ಲಿಯೂ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಎಸ್‌ಐಟಿಗೆ ಪ್ರಬಲ ಸಾಕ್ಷ್ಯಗಳೂ ದೊರೆತಿವೆ.

ನಿಹಾಲ್ ಅಲಿಯಾಸ್ ದಾದಾ ಪತ್ತೆಯಿಲ್ಲ

ನಿಹಾಲ್ ಅಲಿಯಾಸ್ ದಾದಾ ಪತ್ತೆಯಿಲ್ಲ

ಅಮೋಲ್ ಕಾಳೆಯನ್ನು ಮೇ 31ರಂದು ಬಂಧಿಸಿದಾಗ ಆತನ ಬಳಿ ಸಿಕ್ಕ ಡೈರಿಯಲ್ಲಿ ನಿಹಾಲ್ ಅಥವಾ ದಾದಾ ಹೆಸರು ಪದೇ ಪದೇ ಪ್ರಸ್ತಾಪವಾಗಿತ್ತು. ಅಲ್ಲದೆ ಪರಶುರಾಮ್ ವಾಘ್ಮೋರೆ ಸಹ ಈ ಹೆಸರನ್ನು ಪದೇ ಪದೇ ಕೇಳಿದ್ದಾಗಿ ಹೇಳಿದ್ದ. ಹಾಗಾಗಿ ದಾದಾ ಅಲಿಯಾಸ್ ನಿಹಾಲ್ ಗಾಗಿ ಸಹ ಎಸ್‌ಐಟಿ ಪೊಲೀಸರು ಶೋಧ ನಡೆಸಿದ್ದಾರೆ. ಆದರೆ ಈತ ತಲೆ ಮರೆಸಿಕೊಂಡಿದ್ದಾನೆ.

English summary
SIT police investigating two accused who were recently arrested by Maharashtra police in illegal arms case in Pune. Maharashtra police took 11 country made guns and bombs while arresting Sudhanva Gondhalekar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X