ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಸಿː ಕಳವೆಯಲ್ಲಿ ಒಂದು ದಿನದ ಯಕ್ಷಗಾನ ಕಾರ್ಯಾಗಾರ

|
Google Oneindia Kannada News

ಶಿರಸಿ, ನ.11 : ಮಲೆನಾಡಿನ ತಪ್ಪಲು ಶಿರಸಿ ಸಮೀಪದ 'ಕಳವೆ ಕಾನ್ಮನೆ'ಯಲ್ಲಿ ನವೆಂಬರ್ ನ.30 ಭಾನುವಾರ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಕಳವೆ ಆಶ್ರಯದಲ್ಲಿ ಒಂದು ದಿನದ ಭಾಷಾ ಕಲಿಕೆ ಹಾಗೂ ಯಕ್ಷಗಾನ ಕುರಿತ ಒಂದು ದಿನದ ಮಾಧ್ಯಮ ಕಾರ್ಯಾಗಾರ ನಡೆಯಲಿದೆ.

ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತರು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದು ಪ್ರಜಾವಣಿ ಪ್ರಧಾನ ಸಂಪಾದಕ ಕೆ.ಎನ್ .ಶಾಂತಕುಮಾರ್ , ಪ್ರಜಾವಣಿ ಹಿರಿಯ ವರದಿಗಾರ ರವೀಂದ್ರ ಭಟ್ ಪಾಲ್ಗೊಳ್ಳಿದ್ದಾರೆ.[ಶಿರಸಿ ಸೋಂದಾ ಮಠದಲ್ಲಿ ಕೆರೆ ಸಮ್ಮೇಳನ 2014]

media

ಈ ಬಗ್ಗೆ ಮಾಹಿತಿ ನೀಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಶಿವಾನಂದ ಕಳವೆ, ಮಾಧ್ಯಮದಲ್ಲಿನ ಭಾಷಾ ಬಳಕೆಯೇ ಕಾರ್ಯಾಗಾರದ ಪ್ರಮುಖ ವಸ್ತು. ಯಕ್ಷಗಾನದಲ್ಲಿ ಇಂದಿಗೂ ಒಂದೇ ಒಂದು ಆಂಗ್ಲ ಪದ ಬಳೆ ಮಾಡುತ್ತಿಲ್ಲ. ಆದರೂ ಸುಲಭ ಸಂವಹನ ಸಾಧ್ಯವಾಗುತ್ತದೆ. ಇದನ್ನೇ ಮಾಧ್ಯಮಗಳಿಗೆ ಅಳವಡಿಸಿದರೆ ಹೇಗೆ? ಎಂಬ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಕನ್ನಡದ ಅನೇಕ ಪದಗಳು ಪ್ರತಿದಿನ ಕಾಣೆಯಾಗುತ್ತಿವೆ. ಅಲ್ಲದೇ ಕಳೆದು ಹೋಗಿರುವ ಕನ್ನಡ ಪದಗಳನ್ನು ಹುಡುಕುವ ಕೆಲಸವೂ ಆಗಬೇಕಾಗಿದೆ. ಇದು ಒಂದು ಪ್ರಾಯೋಗಿಕ ಪ್ರಯತ್ನವಾಗಿದ್ದು ಪ್ರತಿಕ್ರಿಯೆ ಆಧರಿಸಿ ಮುಂದಿನ ಕಾರ್ಯಚಟುವಟಿಕೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.[ರಾಜ್ಯೋತ್ಸವ : ಯಾವ್ಯಾವ ಕ್ಷೇತ್ರಗಳಲ್ಲಿ ಯಾರ್ಯಾರಿಗೆ ಪ್ರಶಸ್ತಿ?]

kalave

ದಿವಾಕರ ಹೆಗಡೆ, ನಾ ಕಾರಂತ ಪರಾಜೆ, ಪ್ರಥ್ವಿರಾಜ್ ಕವತ್ತಾರ್, ದೇವೆಂದ್ರ ಬೆಳೆಯೂರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ನಾಗರಾಜ್ ಮತ್ತೀಗಾರ್ ಮತ್ತು ಪೂರ್ಣಪ್ರಜ್ಞ ಬೇಳೂರು ಸಹಕಾರ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಸೀಮಿತ ಅವಕಾಶವಿದ್ದು ಮಾಹಿತಿಗೆ ಶಿವಾನಂದ ಕಳವೆ(9448023715) ಸಂಪರ್ಕಿಸಬಹುದು.

English summary
Sirsi: Madyama Samskrati kendra kalave will conduct a workshop on 'Media and Yakshagana. Number of things which are related to Media language will discus on November 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X