ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವೇಶ್ವರಯ್ಯನವರ ಜೀವನ ಮತ್ತು ಸಾಧನೆಗಳು

By ಬಿ.ವಿ.ಕುಲಕರ್ಣಿ
|
Google Oneindia Kannada News

ವಿಶ್ವೇಶ್ವರಯ್ಯನವರು ಕರಾಚಿ ಮತ್ತು ಮುಂಬೈ ಮಹಾನಗರ ಪಾಲಿಕೆಗಳಲ್ಲಿ ಆಡಳಿತ ಸುಧಾರಣೆ ಮತ್ತು ಸ್ಥಳೀಯ ಸಂಸ್ಥೆಗಳ ಸುಧಾರಣೆಗಾಗಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸ್ವಾತಂತ್ರ ಸಂಗ್ರಾಮಕ್ಕಾಗಿ, ದೇಶದ ನಾಯಕರುಗಳು ಬ್ರಿಟಿಷ್ ಸರ್ಕಾರದೊಂದಿಗೆ ಹೋರಾಡುತ್ತಿದ್ದರು. ವಿಶ್ವೇಶ್ವರಯ್ಯನವರು ಭಾರತಕ್ಕೆ ಸ್ವಾತಂತ್ರ ಬಂದಾಗ ದೇಶವನ್ನು ಯಾವರೀತಿಯಲ್ಲಿ ಮುನ್ನಡೆಸಬೇಕು ಎನ್ನುವ ಬಗ್ಗೆ ಚಿಂತನೆಯನ್ನು ಮಾಡಿದ್ದರಿಂದಲೇ, ಪಂಡಿತ್ ನೆಹರೂರವರು ವಿಶ್ವೇಶ್ವರಯ್ಯನವರ ಕಾರ್ಯಸೂಚಿಯನ್ನು ಅಳವಡಿಸಿಕೊಂಡು, ದೇಶ ಸ್ವಾತಂತ್ರ ಕಂಡಾಗ ಪ್ರಥಮ ಆದ್ಯತೆಯಿಂದ ಯೋಜನಾ ಆಯೋಗವನ್ನು ಪ್ರಾರಂಭಿಸಿದರು.

ನಮ್ಮ ಪಂಚವಾರ್ಷಿಕ ಯೋಜನೆಗಳಿಗೆ, ರಷ್ಯಾ ದೇಶವೇ ಪ್ರೇರಣೆ ಎಂದು ಸಾಮಾನ್ಯವಾಗಿ ನಂಬಲಾಗುತ್ತಿದೆ. ಆದರೆ, ಇದಕ್ಕೆ ವಿಶ್ವೇಶ್ವರಯ್ಯನವರ ಚಿಂತನೆಯೇ ಕಾರಣ ಎಂದು ಹೇಳಬಹುದು. ವಿಶ್ವೇಶ್ವರಯ್ಯನವರು ರಾಷ್ಟ್ರವನ್ನು ಮುನ್ನಡೆಸುವ ಕಾರ್ಯಕ್ರಮದಡಿ, ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಗೆ ಕೈತುಂಬಾ ಕೆಲಸ, ಪ್ರತಿಯೊಬ್ಬ ವ್ಯಕ್ತಿಗೆ ಸೇವಾಮನೋಭಾವನೆ ನೀಡುವ ಶಿಕ್ಷಣ ಇವುಗಳನ್ನು ಪ್ರತಿಪಾದಿಸಿದ್ದರು. ಅವರು ಬಂಡವಾಳಶಾಹಿ ನೀತಿ ಅಥವಾ ಎಡಪಂಥೀಯ ನಿಲುವನ್ನು ತಳೆಯಲಿಲ್ಲ. ಕಾರ್ಖಾನೆಗಳ ಪ್ರಾರಂಭಿಸುವ ಅವಶ್ಯಕತೆಯನ್ನು ಹೇಳಿದಾಗಲೂ, ಗೃಹ ಕೈಗಾರಿಕೆ, ಗ್ರಾಮೀಣ ಕೈಗಾರಿಕೆ ಮತ್ತು ಕೌಶಲ್ಯ ಅಭಿವೃದ್ಧಿ ಕುರಿತಾಗಿ ಒಂದು ಶತಮಾನದ ಹಿಂದೆ, ತಮ್ಮ ನಿಲುವನ್ನು ಪ್ರತಿಪಾದಿಸಿದ್ದರು.

ವಿಶ್ವೇಶ್ವರಯ್ಯನವರ ದಿವಾನ ಅವಧಿಯಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ಭಾರತ ವಿಜ್ಞಾನ ಮಂದಿರದಲ್ಲಿ (ಇಂಡಿಯನ್ ಇನ್ಸ್‍ಟ್ಯೂಟ್ ಆಫ್ ಸೈನ್ಸ್) ಪ್ರಪ್ರಥಮವಾಗಿ ಕೈಕೊಂಡ ಸಂಶೋಧನೆಯಿಂದಾಗಿ ಗಂಧದ ಎಣ್ಣೆಯನ್ನು ತಯಾರಿಸುವ ಯೋಜನೆಯನ್ನು ರೂಪಿಸಿ ಗಂಧದ ಎಣ್ಣೆ ಕಾರ್ಖಾನೆಯನ್ನು ಪ್ರಾರಂಭಿಸಿದರು. ಭದ್ರಾವತಿಯಲ್ಲಿ ಉಕ್ಕಿನ ಕಾರ್ಖಾನೆಯನ್ನು ಪ್ರಾರಂಭಿಸಿದರು. ವಿಶ್ವೇಶ್ವರಯ್ಯನವರು ದಿವಾನ ಹುದ್ದೆಗೆ ರಾಜಿನಾಮೆ ಕೊಟ್ಟ ನಂತರವೂ ಉಕ್ಕಿನ ಕಾರ್ಖಾನೆಯ ಅಧ್ಯಕ್ಷರಾಗಿ ಕೆಲವು ವರ್ಷಗಳ ಕಾಲ ಕೆಲಸ ನಿರ್ವಹಿಸಿದರು. ಇವರ ಅಧ್ಯಕ್ಷಗಿರಿಯ ಅವಧಿಯಲ್ಲಿ ಕಂಪನಿಯವರು ನೀಡಿದ ಗೌರವಧನ ಬಳಸಿ ಶ್ರೀಚಾಮರಾಜೇಂದ್ರ ಪಾಲಿಟೆಕ್ನಿಕ್‍ದಲ್ಲಿ ವೃತ್ತಿ ಶಿಕ್ಷಣವನ್ನು ಪ್ರಾರಂಭಿಸುವಂತೆ ಸೂಚಿಸಿದರು.

Vishweshwaraiah

ವಿಶ್ವೇಶ್ವರಯ್ಯನವರು ಇಂಡಿಯನ್ ಇನ್ಸ್‍ಟ್ಯೂಟ್ ಆಫ್ ಸೈನ್ಸ್‍ನ ಆಡಳಿತ ಮಂಡಳಿಗೆÀ 1938 ರಿಂದ 1947 ರವರೆಗೆ ಅಧ್ಯಕ್ಷರಾಗಿದ್ದರು ಇವರ ಅವಧಿಯಲ್ಲಿ ಇಂಡಿಯನ್ ಇನ್ಸ್‍ಟ್ಯೂಟ್ ಆಫ್ ಸೈನ್ಸ್ ಬಹು ದೊಡ್ಡ ಪ್ರಮಾಣದಲ್ಲಿ ಬೆಳೆಯಿತು. ವೈಮಾನಿಕ ತಂತ್ರಜ್ಞಾನ (Aerospace) ಇವರ ಅವಧಿಯಲ್ಲಿ ಪ್ರಾರಂಭವಾಯಿತು. ಇದರಿಂದಾಗಿಯೇ ಪ್ರೋ ಸತೀಶ್ ಧಾವನ್‍ರಂತಹ ಮಹಾನ್ ಮೇಧಾವಿಗಳು ಬೆಂಗಳೂರಿನಲ್ಲಿ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಪ್ರಾರಂಭಿಸುವುದಕ್ಕೆ ಸಾಧ್ಯವಾಯಿತು. ವಿಶ್ವೇಶ್ವರಯ್ಯನವರು ಇದಕ್ಕೆ ಪರೋಕ್ಷವಾಗಿ ಕಾರಣರು ಎಂದು ಹೇಳಬಹುದು.

ವಿಶ್ವೇಶ್ವರಯ್ಯನವರು ದಿವಾನ ಅವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ನಿರ್ವಹಿಸಿದ್ದರೂ ಕೂಡಾ ಕೆಲವೊಂದು ವಿಷಯಗಳ ಬಗ್ಗೆ ಮಹಾರಾಜರೊಂದಿಗೆ ಬಿನ್ನಾಭಿಪ್ರಾಯಗಳು ಮೂಡಿದ್ದರಿಂದ ರಾಜೀನಾಮೆ ನೀಡಿದರು. ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದಲ್ಲಿ ಮುಖ್ಯ ಇಂಜಿನಿಯರ್ ಮತ್ತು ದಿವಾನರಾಗಿ ಕೆಲಸ ನಿರ್ವಹಿಸಿದ ಅವಧಿ ಕೇವಲ 9 ವರ್ಷ. ಈ ಅವಧಿಯಲ್ಲಿ ಅವರು ಮಾಡಿದ ಕೆಲಸ, ಭವಿಷ್ಯದಲ್ಲಿ ಮೈಸೂರು ಸಂಸ್ಥಾನದಲ್ಲಿ ಮಾಡಬಹುದಾದ ಯೋಜನೆಗಳೆಲ್ಲಕ್ಕೂ ರೂಪುರೇಷೆ ಹಾಕಿದ್ದರು.

ವಿಶ್ವೇಶ್ವರಯನವರು ಮುಂಬೈ ಸರ್ಕಾರ, ಮೈಸೂರು ಸಂಸ್ಥಾನ ಹಾಗೂ ಹೈದ್ರಾಬಾದ್ ನಿಜಾಮರ ಬಳಿ ಸೇವೆ ಸಲ್ಲಿಸಿ ಯಾವ ರೀತಿ ಭಾರತ ದೇಶವನ್ನು ಪುನರ್ ನಿರ್ಮಾಣ ಮಾಡುವುದಕ್ಕೆ ಸಾಧ್ಯ ಎನ್ನುವ ಬಗ್ಗೆ ರೂಪುರೇಷೆಗಳನ್ನು Reconstructing India ಪುಸ್ತಕವನ್ನು 1920ರಲ್ಲಿ ಬರೆದಿದ್ದಾರೆ. ಇವತ್ತಿಗೂ ಈ ಪುಸ್ತಕ ನಾಡಿನ ಯುವಕರಿಗೆ ನಾಯಕರಿಗೆ ದಾರಿದೀಪವಾಗಿದೆ. ಮಹಾತ್ಮ ಗಾಂಧಿಯವರು ವಿಶ್ವೇಶ್ವರಯ್ಯನವರಿಗಿಂತ 8 ವರ್ಷ ಚಿಕ್ಕವರಾಗಿದ್ದರೂ ಕೂಡ ಬಹುತೇಕ ವಿಷಯಗಳಲ್ಲಿ ಮಹಾತ್ಮ ಗಾಂಧಿಯವರು ವಿಶ್ವೇಶ್ವರಯ್ಯನವರ ಯೋಜನೆ, ವಿಚಾರಧಾರೆಯನ್ನು ಒಪ್ಪಿಕೊಳ್ಳುತ್ತಿದ್ದರು. ಮಹಾತ್ಮ ಗಾಂಧಿಯವರು ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ಸಹ ವಿಶ್ವೇಶ್ವರಯ್ಯನವರು ಅವರನ್ನು ಮಹಾತ್ಮ ಎಂದೇ ಸಂಭೋಧಿಸುತ್ತಿದ್ದರು.

ವಿಶ್ವೇಶ್ವರಯ್ಯನವರು Reconstructing India (ಭಾರತಕ್ಕಾಗಿ ಯೋಜನಾಬದ್ಧ ಆರ್ಥಿಕತೆ) ಈ ಪುಸ್ತಕವನ್ನು 1934 ರಲ್ಲಿ ಬರೆದಿದ್ದು, ಭಾರತ ದೇಶದ ಅಭಿವೃದ್ಧಿಗೆ ಒಂದು ಯೋಜನೆಯ ರೂಪುರೇಷೆಗಳನ್ನು ಇದರಲ್ಲಿ ಹೇಳಿದ್ದರು. ಇದನ್ನು ಆಧರಿಸಿ 1938 ರಲ್ಲಿ ಸುಭಾಷ್‍ಚಂದ್ರ ಬೋಸ್‍ರವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾಗ ರಾಷ್ಟ್ರೀಯ ಯೋಜನಾ ಮಂಡಳಿ (ನ್ಯಾಷನಲ್ ಪ್ಲಾನಿಂಗ್ ಕಮಿಟಿ) ಯನ್ನು ರಚಿಸಿದ್ದರು. ಈ ಮಂಡಳಿಗೆ ಪಂಡಿತ್ ಜವಾಹರಲಾಲ್ ನೆಹರು ಅಧ್ಯಕ್ಷರಾಗಿದ್ದರು. ವಿಶ್ವೇಶ್ವರಯ್ಯನವರು ಸದಸ್ಯರಾಗಿದ್ದರು.

90 ವರ್ಷದವರಾಗಿದ್ದಾಗ ವಿಶ್ವೇಶ್ವರಯ್ಯನವರು ತಮ್ಮ ಜೀವನದ ಮಹತ್ವದ ಅಂಶಗಳನ್ನು ಆಳವಡಿಸಿಕೊಂಡು "Planned Economy for India"Reconstructing India ಎಂಬ ಪುಸ್ತಕವನ್ನು 1951ರಲ್ಲಿ ಬರೆದರು. ತಮ್ಮ ಇಡೀ ಜೀವನವನ್ನು ನಾಡಿನ ಅಭ್ಯುದಯಕ್ಕಾಗಿ ಮುಡುಪಿಟ್ಟಿದ್ದ ವಿಶ್ವೇಶ್ವರಯ್ಯನವರು ಶತಾಯುಷಿಗಳಾಗಿ 1962ರ ಏಪ್ರಿಲ್ 14ರಂದು ನಿಧನರಾದರು. ಅತ್ಯುನ್ನತ ನಾಗರೀಕ ಪ್ರಶಸ್ತಿ "ಭಾರತರತ್ನ" ಪಡೆದಿದ್ದ ವಿಶ್ವೇಶ್ವರಯ್ಯನವರ ಜೀವನ ಸಾಧನೆ ನಮಗೆ ಮಾರ್ಗದರ್ಶಿಯಾಗಿದೆ.

English summary
Engineer's Day is observed in India on September 15 in honour of Sir Mokshagundam Visvesvaraya who was born on the day in 1860. He was the chief designer of the flood protection system designed and built for the city of Hyderabad, as well as the chief engineer responsible for the construction of the Krishna Raja Sagara dam in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X