India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Miss India 2022 : ಫೆಮಿನಾ ಮಿಸ್ ಇಂಡಿಯಾ ಕಿರೀಟ ಕರ್ನಾಟಕದ ಸಿನಿ ಶೆಟ್ಟಿಗೆ ಮುಡಿಗೆ

|
Google Oneindia Kannada News

ಮುಂಬೈ ಜು. 4: ಮುಂಬೈನ ಜಿಯೋ ವಲ್ಡ್‌ ಕನ್ವೆಂನ್ಷನ್ ಸೆಂಟರ್ ನಲ್ಲಿ ಭಾನುವಾರ ನಡೆದ 'ಫೆಮಿನಾ ಮಿಸ್ ಇಂಡಿಯಾ ವರ್ಲ್ಡ -2022'ನಲ್ಲಿ ಕರ್ನಾಟಕದ ಸಿನಿ ಶೆಟ್ಟಿ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡರು.

ಈ ಕುರಿತು ಫೆಮಿನಾ ಮಿಸ್ ಇಂಡಿಯಾವು ಭಾನುವಾರ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಂಚಿಕೊಂಡಿದೆ. ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ ವಿನ್ನರ್ ಆದರೆ, ಮೊದಲ ರನ್ನರ್ ಅಪ್ ಆಗಿ ರೂಬಲ್ ಶೇಖಾವತ್ ಮತ್ತು ಶಿನಾತಾ ಚೌಹಾನ್ ಅವರು ಎರಡನೇ ರನ್ನರ್ ಆಗಿ ಹೊರ ಹೊಮ್ಮಿದ್ದಾರೆ.

ಫೆಮಿನಾ ಮಿಸ್ ಇಂಡಿಯಾ ವಿಜೇತ ಮಹಿಳೆಯರು ಗಟ್ಟಿ ಧ್ವನಿ ಹೊಂದಿದ್ದಾರೆ. ಅವರ ಬದುಕಿನ ಅನೇಕ ಕಾರಣಗಗಳಿಗೆ, ಶ್ರಮಕ್ಕೆ ಉತ್ತಮ ಉದ್ದೇಶಕ್ಕಾಗಿ ಇಂದು ವೇದಿಕೆ ಸಾಕ್ಷಿಯಾಗಿದೆ. ಈ ಸಾಧನೆಯ ಪ್ರತಿ ಕ್ಷಣಕ್ಕೂ ಅವು ಅರ್ಹರಾಗಿದ್ದು, ಹೇಳಲು ಹರ್ಷ ವೆನಿಸುತ್ತದೆ ಎಂದು ಫೆಮಿನಾ ಮಿಸ್ ಇಂಡಿಯಾವು ಬರೆದುಕೊಂಡಿದೆ.

21 ವರ್ಷದ ಸಿನಿ ಶೆಟ್ಟಿ

21 ವರ್ಷದ ಸಿನಿ ಶೆಟ್ಟಿ

ವರ್ಷದ ಮಿಸ್ ಇಂಡಿಯಾ ಆಗಿರುವ ಕರ್ನಾಟಕದ ಸಿನಿ ಶೆಟ್ಟಿ ಅವರ ಬಗೆಗಿನ ಒಂದಷ್ಟು ವಿಷಯಗಳನ್ನು ಹಂಚಿಕೊಳ್ಳಲಾಗಿದೆ. ಕರ್ನಾಟಕದ ಸಿನಿ ಶೆಟ್ಟಿ ಅವರಿಗೆ 21 ವರ್ಷ. ಮುಂಬೈನಲ್ಲಿ ಜನಿಸಿರುವ ಅವರು, ಅಕೌಂಟ್ ಮತ್ತು ಫೈನಾನ್ಸ್ ನಲ್ಲಿ ಎಂಎ ಪದವಿ ಪಡೆದಿದ್ದಾರೆ. ಸದ್ಯ ಅವರು ಸಿಎಫ್ ಎ ವೃತ್ತಿಪರ ಕೋರ್ಸನಲ್ಲಿ ವ್ಯಾಸಂಗ ನಡೆಸುತ್ತಿದ್ದಾರೆ. ಭರತನಾಟ್ಯ, ನೃತ್ಯದಲ್ಲೂ ಅವರ ಆಸಕ್ತಿ ಹೊಂದಿದ್ದಾರೆ.

ರಾಜಸ್ಥಾನ ಮೂಲದ ಶೇಖಾವತ್:

ರಾಜಸ್ಥಾನ ಮೂಲದ ಶೇಖಾವತ್:

ಇನ್ನು ಫೆಮಿನಾ ಮಿಸ್ ಇಂಡಿಯಾದಲ್ಲಿ ಮೊದಲ ರನ್ನರ್ ಅಪ್ ಆಗಿರುವ ರೂಬಲ್ ಶೇಖಾವತ್ ಅವರು ರಾಜಸ್ಥಾನ ಮೂಲದವರು. ಅವರದ್ದು ರಾಜಮನೆತನವಾಗಿದ್ದು, ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಶೇಖಾವತ್ ಅವರು ನೃತ್ಯ, ನಟನೆ ಮತ್ತು ಚಿತ್ರಕಲೆ ಸೇರಿದಂತೆ ವಿವಿಧ ಹಲವು ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ಉಳ್ಳವರಾಗಿದ್ದಾರೆ. ಮುಖ್ಯವಾಗಿ ಅವರು ಬ್ಯಾಡ್ಮಿಂಟನ್ ಕ್ರೀಡೆ ಇಷ್ಟಪಡುತ್ತಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ರನ್ನರ್ ಅಪ್

ಶೈಕ್ಷಣಿಕ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ರನ್ನರ್ ಅಪ್

ಫೆಮಿನಾ ಮಿಸ್ ಇಂಡಿಯಾದ ಎರಡನೇ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡ ಶಿನಾತಾ ಚೌಹಾಣ್ ಅವರು ಉತ್ತರ ಪ್ರದೇಶದವರು. ಈ ಸೌಂದರ್ಯವತಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಶಿನಾತಾ ಅವರು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುವ ಉತ್ಸಾಹ ಅವರಲ್ಲಿದೆ. ಈ ಕುರಿತು ವಿಜೇತರ ಬಗ್ಗೆ ಫೆಮಿನಾ ಮಿಸ್ ಇಂಡಿಯಾದ ಮುಖ್ಯಸ್ಥರು ಕೆಲವು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಹೆಮ್ಮೆ ಸಿನಿ

ಕರ್ನಾಟಕದ ಹೆಮ್ಮೆ ಸಿನಿ

ಸಿನಿ ಶೆಟ್ಟಿ ಅವರ ಗೆಲುವು ಕರ್ನಾಟಕದ ಪಾಲಿಗೆ ಮತ್ತೊಂದು ಕೀರ್ತಿ, ಹೆಮ್ಮೆಯ ರತ್ನದ ಸೇರ್ಪಡೆಯಾಗಿದೆ ಎನ್ನಬಹುದು. ಸಿನಿ ಶೆಟ್ಟಿ ಅವರಿಗಿಂತ ಈ ಮೊದಲು ಕರ್ನಾಟಕ ರಾಜ್ಯದ 'ಲಾರಾ ದತ್ತಾ, ಸಾರಾ ಜೇನ್ ಡಯಾಸ್ ಮತ್ತು ಸಂಧ್ಯಾ ಚಿಬ್, ನಫೀಸಾ ಜೋಸೆಫ್, ರೇಖಾ ಹಂದೆ ಹಾಗೂ ಲೈಮರೈನಾ ಡಿಸೋಜಾ ಮೊದಲಾದ ಕನ್ನಡತಿಯರು, ಸುಂದರಿಯರು ಸುಂದರಿಯರು ಇದೇ ಕ್ಷೇತ್ರದಲ್ಲಿ ಮೈಲಿಗಲ್ಲುನ್ನು ಸ್ಥಾಪಿಸಿದ್ದಾರೆ.

ಈಗಾಗಲೇ ಪ್ರತಿ ವರ್ಷ ನಡೆಯುವ ಈ ಪ್ರತಿಷ್ಠಿತ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಬಾಲಿವುಡ್ ನಟಿ ನೇಹಾ ಧೂಪಿಯಾ, ಕೃತಿ ಸನೋನ್ ಮತ್ತು ಲಾರೆನ್ ಗಾಟ್ಲೀಬ್ ಅವರ ಮುಡಿಗೇರಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಭಾರಿ ಸಿನಿ ಶೆಟ್ಟಿ ಕರ್ನಾಟಕದಿಂದ ದೇಶದ ಸೌಂದರ್ಯವತಿ ಎನ್ನಿಸಿಕೊಂಡಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿ.

ಸಿನಿ ಶೆಟ್ಟಿ ಅವರಿಗೆ ಆಪ್ತ ವಲಯಗಳಿಂದ ಶುಭಾಯಗಳ ಮಹಾಪೂರವೇ ಹರಿದು ಬಂದಿದೆ.

English summary
Karnataka's Sini Shetty Crowned Femina Miss India 2022 on Sunday at Mumbai, Sini is out of a new beauty queen of the india, Rubal Shekhawat is 1st runner up and Shinath Chauhan she is 2nd runner up
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X