ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಒತ್ತಾಯಿಸಿ ಕೈಗೊಂಡ ಬಂದ್ ಯಶಸ್ವಿ

By Vanitha
|
Google Oneindia Kannada News

ರಾಯಚೂರು, ಜುಲೈ, 24 : ಐಐಟಿ ಸ್ಥಾಪನೆ ಕುರಿತು ಸರ್ಕಾರದ ತೀರ್ಮಾನವನ್ನು ಖಂಡಿಸಿದ ಐಐಟಿ ಹೋರಾಟ ಸಮಿತಿ ಸಿಂಧನೂರಿನಲ್ಲಿ ಗುರುವಾರ ಕರೆನೀಡಿದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಸರ್ಕಾರವು ಐಐಟಿಯನ್ನು ರಾಯಚೂರು, ಮೈಸೂರು, ಧಾರವಾಡದಲ್ಲಿ ಸ್ಥಾಪಿಸಲು ನಿರ್ಧಾರ ತೆಗೆದುಕೊಂಡು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ಇದನ್ನು ವಿರೋಧಿಸಿದ ಐಐಟಿ ಹೋರಾಟ ಸಮಿತಿ ರಾಯಚೂರಿನಲ್ಲಿ ಮಾತ್ರ ಐಐಟಿ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ ಹೋರಾಟ ಕೈಗೊಂಡಿತ್ತು.[ಮೊದಲ ಬಾರಿ ವೈದ್ಯ ಶಿಕ್ಷಣ ಪ್ರಾರಂಭಿಸಿದ ಐಐಟಿ]

Sindhanur observes bandh demanding IIT in Raichur

ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಐಐಟಿ ಸಂಸ್ಥೆಯನ್ನು ಸ್ಥಾಪಿಸಬೇಕೆಂದು ಜನತೆ ತಮ್ಮ ಅಭಿಪ್ರಾಯವನ್ನು ಸೂಚಿಸಿದ್ದರು. ಇದನ್ನು ಒಪ್ಪಿದ ಜಗದೀಶ್ ಶೆಟ್ಟರ್ ಈ ಮನವಿಯನ್ನು 2012ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಐಐಟಿ ಸಂಸ್ಥೆ ನಿರ್ಮಾಣಕ್ಕೆ
ಬೇಕಾದ ಎಲ್ಲಾ ನಿಯಮಾವಳಿಗಳನ್ನು ರೂಪಿಸಿ ಒಪ್ಪಿಗೆ ನೀಡಿತ್ತು

ಆದರೆ ಸಿದ್ದರಾಮಯ್ಯ ಸರ್ಕಾರ ಐಐಟಿ ಸಂಸ್ಥೆಯನ್ನು 3 ಜಿಲ್ಲೆಗಳಲ್ಲಿ ಸ್ಥಾಪಿಸಲು ಹೊರಟು ನಿಯಮ ಮುರಿಯಲು ಹೊರಟಿದೆ. ಇದು ಸರಿಯಲ್ಲ. ಕೇಂದ್ರ ಸರ್ಕಾರಕ್ಕೆ ಕಳುಹಿಸಿದ ಪ್ರಸ್ತಾವನೆಯನ್ನು ತಕ್ಷಣ ವಾಪಾಸು ಪಡೆಯಬೇಕು. ಇಲ್ಲದಿದ್ದರೆ ಇನ್ನಷ್ಟು ಉಗ್ರವಾದ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಐಐಟಿ ಹೋರಾಟ ಸಮಿತಿಯ ಮುಖ್ಯಸ್ಥ ಬಸವರಾಜ್ ಕಳಸ ಎಚ್ಚರಿಕೆ ನೀಡಿದ್ದಾರೆ.

English summary
State government for proposing three names, Raichur, Dharwad and Mysuru, to Union Government for establishing IIT. They demanded to withdraw the proposal and send a fresh one recommending Raichur alone for the premier institute.Jagadish Shettar has government sent a letter to Union Government in 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X