ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್‌ಟಿ ಬದಲಿಗೆ 33 ಸಾವಿರ ಕೋಟಿ ರೂ. ಸಾಲ ಮಾಡಲು ತೀರ್ಮಾನ!

|
Google Oneindia Kannada News

ಬೆಂಗಳೂರು, ಸೆ. 15: ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ಕಡಿತದ ಹಿನ್ನೆಲೆಯಲ್ಲಿ 33 ಸಾವಿರ ಕೋಟಿ ರೂ. ಸಾಲ ಮಾಡಲು ಇಂದಿನ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಲಾಗಿದೆ. ಅದಕ್ಕಾಗಿ ವಿತ್ತೀಯ ಹೊಣೆಗಾರಿಕೆ ಕಾಯಿದೆಯ ಸೆಕ್ಷನ್ 4ಕ್ಕೆ ತಿದ್ದುಪಡಿ ತರಲು ತೀರ್ಮಾನ ಮಾಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದರು.

ಸದ್ಯ ವಿತ್ತಿಯ ಹೊಣೆಗಾರಿಕೆ ಕಾಯಿದೆ ಪ್ರಕಾರ ಶೇಕಡಾ 3ರಷ್ಟು ಸಾಲ ಪಡೆಯಬಹುದಾಗಿದೆ. ಕಾಯಿದೆಯ ಸೆಕ್ಷನ್ 4ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಒಪ್ಪಗೆ ಸೂಚಿಸಿದ್ದು ಅದರಂತೆ ಜಿಡಿಪಿಯ ಶೇಕಡಾ 5ರಷ್ಟು ಅಂದರೆ ಸುಮಾರು 36 ಸಾವಿರ ಕೋಟಿ ರೂ. ಸಾಲ ಪಡೆಯಬಹುದಾಗಿದೆ. ಆದರೆ ರಾಜ್ಯ ಸರ್ಕಾರ 33 ಸಾವಿರ ಕೋಟಿ ರೂ. ಸಾಲ ಮಾಡಲು ತೀರ್ಮಾನ ಮಾಡಲಾಗಿದೆ. ಜೊತೆಗೆ ಜಿಎಸ್‌ಟಿಯಿಂದ 11 ಸಾವಿರ ಕೋಟಿ ರೂಪಾಯಿಗಳಿಗೆ ನಾವು ಕೇಂದ್ರ ಸರ್ಕಾರದ ಎದುರು ಈಗಲೂ ಬೇಡಿಕೆ ಇಟ್ಟಿದ್ದೇವೆ ಎಂದು ಮಾಧುಸ್ವಾಮಿ ಮಾಹಿತಿ ಕೊಟ್ಟಿದ್ದಾರೆ. ಇದರೊಂದಿಗೆ ಹಲವು ತೀರ್ಮಾನಗಳನ್ನು ಇಂದಿನ ಸಂಪುಟ ಸಭೆಯಲ್ಲಿ ಮಾಡಲಾಗಿದೆ.

significant decisions have been taken in todays Karnataka government Cabinet meeting

* ಭೂಸುಧಾರಣಾ ಕಾಯಿದೆ ಸೆಕ್ಷನ್ 64/2 ರಲ್ಲಿ ತಿದ್ದುಪಡಿ ಮಾಡಲು ತೀರ್ಮಾನ. ನಗರ ಪ್ರದೇಶದಲ್ಲಿ ಬಿ. ಕರಾಬ್ ಭೂಮಿಯನ್ನು ಮಾರಾಟ ಮಾಡಲು ಮಾರ್ಗಸೂಚಿ. ಬೆಲೆಯ ಮೇಲೆ ಮೇಲೆ 4 ಪಟ್ಟು ಹೆಚ್ಚಳಕ್ಕೆ ಮಾರಾಟ ಮಾಡಲು ತೀರ್ಮಾನ ಮಾಡಲಾಗಿದೆ. ಈಗಾಗಲೇ ಮನೆ, ಅಪಾರ್ಟ್ ಮೆಂಟ್ ಕಟ್ಟಿಕೊಂಡಿದ್ದರೆ, ಅವರಿಂದ ಮಾರಾಟ ಮಾಡಲು ತೀರ್ಮಾನ. ಗ್ರಾಮೀಣ ಪ್ರದೇಶದಲ್ಲಿ ಯಾವುದೇ ರೀತಿ ಮಾರಾಟ ಮಾಡಲು ಅವಕಾಶ ಇಲ್ಲ.

ರಾಜ್ಯಗಳಿಗೆ ಕೊಡಬೇಕಾದ ಜಿಎಸ್‌ಟಿ ಪರಿಹಾರ 1.51 ಲಕ್ಷ ಕೋಟಿ ರೂಪಾಯಿರಾಜ್ಯಗಳಿಗೆ ಕೊಡಬೇಕಾದ ಜಿಎಸ್‌ಟಿ ಪರಿಹಾರ 1.51 ಲಕ್ಷ ಕೋಟಿ ರೂಪಾಯಿ

* ಸರ್ಕಾರಿ ಆಸ್ಪತ್ರೆಗಳಲ್ಲಿ ಎಇಆರ್ ಬಿ ಎಕ್ಸ್ ರೇ ಪ್ಲಾಂಟ್‌ಗೆ ಸೆಕ್ಯುರಿಟಿ ಆ್ಯಕ್ಟ್ ಪ್ರಕಾರ ಸೆಫ್ಟಿ ಮೇಜರ್ ಅಳವಡಿಸಲು ಎಕ್ಸ್ ಇರುವ ಆಸ್ಪತ್ರೆಗಳಿಗೆ 11.66 ಕೋಟಿ ರೂ.ಗಳ ಅನುದಾನ.

* ಮೈಸೂರು ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ 84.69 ಕೋಟಿ ರೂ. ಮಂಜೂರು ಮಾಡಲು ತೀರ್ಮಾನ. ವಿನ್ಯಾಸ ದಲ್ಲಿ ಆಗಿರುವ ವ್ಯತ್ಯಾಸದಿಂದ ವೆಚ್ಚ ಹೆಚ್ಚಳ

significant decisions have been taken in todays Karnataka government Cabinet meeting

* ನೆಲಮಂಗಲ ತಾಲೂಕು ಎಲಚಗೆರೆ ಹೋಬಳಿ ಸಿದ್ದಗಂಗಾ ಮಠಕ್ಕೆ 9.7 ಎಕರೆ ಸರ್ಕಾರಿ ಜಮೀನು ಮಂಜೂರು ರಿಯಾಯ್ತಿ ದರದಲ್ಲಿ ನೀಡಲು ತೀರ್ಮಾನಿಸಿದೆ.

* ಬೆಳಗಾಗಿ ತಾಲೂಕಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ 87.31 ಎಕರೆ ಜಮೀನು ಮಂಜೂರು.

* ಬೆಂಗಳೂರು ಗ್ರಾಂ ಗುರುದೇವ ಸಂಸ್ಥೆಗೆ ಸಮಾಧಾನ 3 ಎಕರೆ ಜಮೀನು ಮಂಜೂರು

* ಲಕ್ಕುಂಡಿ ಪ್ರಾಧಿಕಾರ ರಚನೆಗೆ ಒಪ್ಪಿಗೆ

* ದಾವಣಗೆರೆ ಹರಿಹರ ನಗರಾಭಿವೃದ್ದಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಮಾಚೇನಹಳ್ಳಿ ಗುರುಕುಲ ವಿದ್ಯಾ ಸಂಸ್ಥೆಗೆ ವಿದ್ಯಾರ್ಥಿ ನಿಲಯ ಕಟ್ಟಲು ಪ್ರತಿ ಚದುರ ಅಡಿಗೆ 100 ರೂ ಗೆ ನೀಡಲು ತೀರ್ಮಾನ

* ಹಾಸನ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಎಸ್. ಎಂ.ಕೃಷ್ಣ ಬಡಾವಣೆಯಲ್ಲಿ ಅಭಿವೃದ್ಧಿ 15.34 ಕೋಟಿ ಮಂಜೂರು

* ಮೈಸೂರು ನಗರದಲ್ಲಿ ಎಲ್‌ಇಡಿ ಲೈಟ್ ವ್ಯವಸ್ಥೆ ಅಳವಡಿಸಲು ಏಳು ವರ್ಷಗಳ ಗುತ್ತಿಗೆ 109 ಕೋಟಿ ರೂ. ನಿಗದಿ. ಪಿಪಿಪಿ ಮಾದರಿಯಲ್ಲಿ ಯೋಜನೆ ಜಾರಿಗೆ ತೀರ್ಮಾನಿಸಿಸಲಾಗಿದ್ದು, ಯಸ್ವಿಯಾದರೆ ರಾಜ್ಯಾದ್ಯಂತ ಯೋಜನೆ ವಿಸ್ತರಣೆ.

* ಆಗರ ಕೆರೆಯಿಂದ 35 MLD ನೀರನ್ನು ಆನೇಕಲ್‌ಗೆ ನೀರು ಸರಬರಾಜು ಮಾಡುವ ಯೋಜನೆಗೆ 30 ಕೋಟಿ ರೂ. ಅನುದಾನ ಬಿಡುಗಡೆ.

* ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಎನ್ ಎಚ್ಮೆಂ ಕಾರ್ಯಕ್ರಮದಲ್ಲಿ ಔಷಧ ಖರೀದಿಗೆ 24.90 ಕೋಟಿ.

* ಎಸ್ಕಾಂ ಗಳು ಬಹಳಷ್ಟು ಕಾರ್ಯಕ್ರಮಗಳನ್ನು ಮಾಡಿ ನಷ್ಟ ಉಂಟಾಗಿದ್ದು 5500 ಕೋಟಿ ಸಾಲ ಮಾಡಲು ಸರ್ಕಾರದ ಖಾತ್ರಿ.

* 2020-25 ಪ್ರವಾಸೋದ್ಯಮ ನೀತಿ ತಾಂತ್ರಿಕವಾಗಿ ಒಪ್ಪಿಗೆ ಸೆ. 27 ರಂದು ಪ್ರವಾಸೋದ್ಯಮ ದಿನ ಬಿಡುಗಡೆ.

* ದೆಹಲಿಯಲ್ಲಿ ಹೊಸ ಕರ್ನಾಟಕ ಭವನ ನಿರ್ಮಾಣಕ್ಕೆ ಒಪ್ಪಿಗೆ 89 ಕೋಟಿ ರೂ. ವೆಚ್ಚದಲ್ಲಿ ಮಾಡಲು ನಿರ್ಧರಿಸಲಾಗಿತ್ತು. ಈಗ 120 ಕೋಟಿಗೆ ಹೆಚ್ಚಿಸಲಾಗಿದೆ.

* ಸಿಎಂ ಹಾಗೂ ಕೇಂದ್ರ ಗಣಿ ಸಚಿವರಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆ ಹರಿಸಿದ್ದಾರೆ. ಗಣಿ ಕಾರ್ಯ ಆರಂಭಿಸಲು ತೀರ್ಮಾನ. ಸಂಡೂರು ತಾಲೂಕು ದೋಣಿ ಮಲೈ ಪ್ರದೇಶದಲ್ಲಿ ಮತ್ತೆ ಗಣಿಗಾರಿಕೆ ನಡೆಸಲು ತೀರ್ಮಾನ.

Recommended Video

ನಿಮ್ ಕಥೆ ಮುಗೀತು , Chinaಗೆ ಎಚ್ಚರಿಕೆ ಮಾಡಿದ Rajnath Singh | Oneindia Kannad

* ಬಿಬಿಎಂಪಿ ಹೊಸ ಕಾಯ್ದೆ ತಿದ್ದುಪಡಿ ಇದೇ ಅಧಿವೇಶನದಲ್ಲಿ ಮಂಡನೆ.

English summary
Significant decisions have been taken in today's Karnataka government Cabinet meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X