ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ ಆರೋಪಕ್ಕೆ ಸಿದ್ದರಾಮಯ್ಯ ನೀಡಿದ ಸ್ಪಷ್ಟೀಕರಣವೇನು?

|
Google Oneindia Kannada News

ಬೆಂಗಳೂರು, ಡಿಸೆಂಬರ್ 8: ತಮ್ಮ ಸರ್ಕಾರದ ಅವಧಿಯಲ್ಲಿ 35 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂಬ ಬಿಜೆಪಿ ಆರೋಪವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ.

'ನಾನು ಆಡಳಿತ ನಡೆಸುವ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಬಿಜೆಪಿ ಆರೋಪ ಆಧಾರ ರಹಿತ. ನರೇಂದ್ರ ಮೋದಿ ಸರ್ಕಾರದ ಅದಕ್ಷತೆಯ ವಿವಾದಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ' ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಸಂಬಂಧ ಅವರು ನಾಲ್ಕು ಪುಟಗಳ ಆರೋಪಕ್ಕೆ ಉತ್ತರ ನೀಡಿರುವುದರ ಪ್ರತಿಯನ್ನು ಕೂಡ ತಮ್ಮ ಟ್ವೀಟ್‌ ಜೊತೆ ಹಂಚಿಕೊಂಡಿದ್ದಾರೆ.

ಸಿದ್ದರಾಮಯ್ಯ ಅವಧಿಯಲ್ಲಿ ಭ್ರಷ್ಟಾಚಾರ, ಬಿಜೆಪಿಯಿಂದ ವರದಿ ಬಹಿರಂಗ ಸಿದ್ದರಾಮಯ್ಯ ಅವಧಿಯಲ್ಲಿ ಭ್ರಷ್ಟಾಚಾರ, ಬಿಜೆಪಿಯಿಂದ ವರದಿ ಬಹಿರಂಗ

2016-17ನೇ ಸಾಲಿನ ಸಿಎಜಿ ವರದಿಯಲ್ಲಿ ಖರ್ಚು ಮತ್ತು ಸ್ವೀಕೃತಿ ಹೊಂದಾಣಿಕೆ ಆಗುತ್ತಿಲ್ಲ. ಸಿದ್ದರಾಮಯ್ಯ ಅವರು ಮಂಡಿಸಿದ್ದ 2016-17ರ ಬಜೆಟ್‌ನಲ್ಲಿ 35 ಸಾವಿರ ಕೋಟಿ ರೂ.ಗಳಿಗೆ ನೀಡಿರುವ ವೆಚ್ಚ ಮತ್ತು ಸ್ವೀಕೃತಿ ಲೆಕ್ಕ ತಾಳೆ ಆಗುತ್ತಿಲ್ಲ ಎಂದು ಬಿಜೆಪಿ ಆರೋಪಿಸಿತ್ತು.

ಸಿಎಜಿ ವರದಿಯಲ್ಲಿ ಉಲ್ಲೇಖಿಸಿದ್ದ ಲೋಪದೋಷಗಳ ಬಗ್ಗೆ ಅದು ಬಿಜೆಪಿ ಕಿರು ಪುಸ್ತಕವನ್ನು ಬಿಡುಗಡೆ ಮಾಡಿತ್ತು.

ಲೆಕ್ಕ ಹೊಂದಾಣಿಕೆ ನಿರಂತರ

ಶೇ19ರಷ್ಟು ಹಣದ ವಿವರ ತಾಳೆಯಾಗುತ್ತಿಲ್ಲ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಖಜಾನೆಯಿಂದ ವಿವಿಧ ಇಲಾಖೆಗಳ ಡಿಡಿಒಗಳು ವಿವಿಧ ಯೋಜನೆಗಳಿಗೆ ಹಣವನ್ನು ಸೆಳೆದ ಮೇಲೆ ಪ್ರತಿ ತಿಂಗಳ ಖಜಾನೆ/ಮಹಾಲೇಖಪಾಲರ ಕಚೇರಿಗೆ ಸೆಳೆದ ಮೊತ್ತಕ್ಕೆ ವೋಚರ್‌ಗಳನ್ನು ಸಲ್ಲಿಸಿ ಲೆಕ್ಕ ಹೊಂದಾಣಿಕೆ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ. ಇದು ನಿರಂತರ ಪ್ರಕ್ರಿಯೆಯಾಗಿರುತ್ತದೆ.

ರಾಜ್ಯ ಹಣಕಾಸು ವರದಿಯಲ್ಲಿ ಮಹಾಲೇಖಪಾಲರು ಇದರ ಬಗ್ಗೆ ವರದಿ ಮಾಡಿದ ಬಳಿಕ ಕೂಡ ಇಲಾಖೆಗಳು ಲೆಕ್ಕ ಹೊಂದಾಣಿಕೆ ಪ್ರಕ್ರಿಯೆಯನ್ನು ಮುಂದುವರಿಸಬಹುದು. ಇದು ಸಾಮಾನ್ಯ ಪ್ರಕ್ರಿಯೆ ಹೊರತು ಇದರಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಆಗಸ್ಟಾದಲ್ಲಿ ಮೋದಿಯೇ ಲಾಭ ಪಡೆದಿದ್ದಾರೆ : ಕಾಂಗ್ರೆಸ್ ಪ್ರತ್ಯಾರೋಪಆಗಸ್ಟಾದಲ್ಲಿ ಮೋದಿಯೇ ಲಾಭ ಪಡೆದಿದ್ದಾರೆ : ಕಾಂಗ್ರೆಸ್ ಪ್ರತ್ಯಾರೋಪ

ಹೊಂದಾಣಿಕೆಯಾದ ಲೆಕ್ಕದ ವಿವರ

ಹೊಂದಾಣಿಕೆಯಾದ ಲೆಕ್ಕದ ವಿವರ

2010-11, 2012-13ರ ಅವಧಿಯಲ್ಲಿ ಗರಿಷ್ಠ ಶೇ 42ರ ಮೊತ್ತಕ್ಕೆ ಲೆಕ್ಕ ಹೊಂದಾಣಿಕೆಯಾಗದ ಪರಿಸ್ಥಿತಿಯಿತ್ತು. ಹಿಂದಿನ ಎರಡು ವರ್ಷಗಳಲ್ಲಿ ಮಹಾಲೇಖಪಾಲರು ಸಿಎಜಿ ವರದಿಯನ್ನು ಬಿಡುಗಡೆಗೊಳಿಸುವ ವೇಳೆ ಕ್ರಮವಾಗಿ ಶೇ 17 ಮತ್ತು ಶೇ 19ರಷ್ಟು ಲೆಕ್ಕ ಹೊಂದಾಣಿಕೆಯಾಗಿದೆ ಎಂದು ವಿವರಿಸಿದ್ದಾರೆ.

ಕ್ರಿಶ್ಚಿಯನ್ ನಿಂದ ಕುಟುಂಬಕ್ಕೆ ಹಣ ಸಂದಾಯ! ಆ 'ಕುಟುಂಬ' ಯಾವುದು?ಕ್ರಿಶ್ಚಿಯನ್ ನಿಂದ ಕುಟುಂಬಕ್ಕೆ ಹಣ ಸಂದಾಯ! ಆ 'ಕುಟುಂಬ' ಯಾವುದು?

6057 ಕೋಟಿ ರೂ. ಭ್ರಷ್ಟಾಚಾರ ಆರೋಪ

6057 ಕೋಟಿ ರೂ. ಭ್ರಷ್ಟಾಚಾರ ಆರೋಪ

ಶಾಸಕಾಂಗದ ಅನುಮೋದನೆ ಇಲ್ಲದೆ ಕಾರ್ಯನಿರ್ವಾಹಕ ಅದೇಶಗಳ ಮೂಲಕ 6057 ಕೋಟಿ ರೂ. ಬಿಡುಗಡೆ ಮಾಡಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಪಿಎಸಿ ನಿಗದಿಪಡಿಸಿರುವ ನೂತನ ಸೇವಾ ಮಾನದಂಡಕ್ಕೆ ಅನುಗುಣವಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಅದರ ಮಿತಿಯನ್ನು ಮೀರಿಲ್ಲ. ಅತಿ ಅವಶ್ಯಕ ಪ್ರಕರಣಗಳಲ್ಲಿ ಈ ರೀತಿ ಕಾರ್ಯಾದೇಶ ಹೊರಡಿಸಲಾಗುವುದು ಸಾಮಾನ್ಯವಾಗಿದೆ. ಅಲ್ಲದೆ, ಇಷ್ಟೂ ಮೊತ್ತಕ್ಕೂ ಪೂರಕ ಅಂದಾಜುಗಳ ಮೂಲಕ ಶಾಸಕಾಂಗದ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.

ಅಕ್ರಮ ಆಸ್ತಿ ಸಂಪಾದಿಸಿ ಸಿಕ್ಕಿಬಿದ್ದ ತೆಲಂಗಾಣ ನ್ಯಾಯಾಧೀಶಅಕ್ರಮ ಆಸ್ತಿ ಸಂಪಾದಿಸಿ ಸಿಕ್ಕಿಬಿದ್ದ ತೆಲಂಗಾಣ ನ್ಯಾಯಾಧೀಶ

ಪ್ರಮಾಣಪತ್ರ ಸಲ್ಲಿಕೆ ವಿವಾದ

ಪ್ರಮಾಣಪತ್ರ ಸಲ್ಲಿಕೆ ವಿವಾದ

ಪೌರಾಡಳಿತ ನಿರ್ದೇಶಕರು 254.34 ಕೋಟಿ ರೂ. ಮೊತ್ತಕ್ಕೆ ಬಳಕೆ ಪ್ರಮಾಣಪತ್ರ ಸಲ್ಲಿಸಿಲ್ಲ. ಆದರೂ ನಿರ್ದೇಶಕರ ವಿರುದ್ಧ ಕ್ರಮ ಜರುಗಿಸಿಲ್ಲ ಎಂಬ ಆರೋಪಕ್ಕೆ, ಅನುದಾನ ಬಳಕೆ ಪ್ರಮಾಣಪತ್ರ ಸಲ್ಲಿಕೆಯನ್ನು ಸಿಎಜಿ ವರದಿ ಬಳಿಕವೂ ಮಾಡಬಹುದು. 2001ರಲ್ಲಿ ಬಿಡುಗಡೆ ಮಾಡಿದ ಅನುದಾನಗಳ ಬಳಕೆ ಪ್ರಮಾಣಪತ್ರವನ್ನು ಸಲ್ಲಿಸದ ಕೆಲವು ಪ್ರಕರಣಗಳೂ ಇವೆ ಎಂದು ಅವರು 2009-09ನೇ ಸಾಲಿನಿಂದ ವಿವಿಧ ವರ್ಷಗಳಲ್ಲಿ ಅನುದಾನ ಬಳಕೆ ಪ್ರಮಾಣಪತ್ರ ಸಲ್ಲಿಸದೆ ಇರುವ ಮೊತ್ತದ ವಿವರಗಳನ್ನು ನೀಡಿದ್ದಾರೆ.

ಮೋಸ ಮತ್ತು ಕಳ್ಳತನ ಪದ ಬಳಕೆ

ಮೋಸ ಮತ್ತು ಕಳ್ಳತನ ಪದ ಬಳಕೆ

ಆಯವ್ಯಯದ ಮೇಲೆ ಸಿಎಜಿ ವರದಿಯಲ್ಲಿ 'ಮೋಸ ಮತ್ತು ಕಳ್ಳತನ' ಎಂಬ ಪದಗಳು ಬಳಕೆಯಾಗಿರುವ ಬಗ್ಗೆ ಬಿಜೆಪಿ ಪ್ರಸ್ತಾಪಿಸಿತ್ತು.

ಸಿಎಜಿ ಪ್ರತಿ ವರ್ಷವೂ ಆ ವರ್ಷದ ರಾಜ್ಯ ಹಣಕಾಸು ವರದಿಯಲ್ಲಿ ಮೋಸ ಮತ್ತು ಕಳ್ಳತನ ಆಗಿದೆ ಎಂದು ಸಂಶಯ ವ್ಯಕ್ತಪಡಿಸುತ್ತಾರೆ. 2016-17ನೇ ಸಾಲಿನಲ್ಲಿ 18.11 ಕೋಟಿ ರೂ ಮೋಸ ಮತ್ತು ಕಳ್ಳತನ ಆಗಿರಬಹುದು ಎಂದು ಸಿಎಜಿ ಹೇಳಿದೆ.

2008-09ನೇ ಸಾಲಿನಿಂದ ವಿವಿಧ ವರ್ಷಗಳಲ್ಲಿ ಹಣಕಾಸು ವರದಿಗಳಲ್ಲಿ ಮೋಸ ಮತ್ತು ಕಳ್ಳತನ ಉಲ್ಲೇಖ ಮಾಡಿರುವ ವಿವರಗಳನ್ನು ಸಿದ್ದರಾಮಯ್ಯ ನೀಡಿದ್ದಾರೆ.

11,994 ಕೋಟಿ ರೂ ಅವ್ಯವಹಾರ

11,994 ಕೋಟಿ ರೂ ಅವ್ಯವಹಾರ

2016-17 ನೇ ಸಾಲಿನಲ್ಲಿ 11,994.81 ಕೋಟಿ ರೂ. ಬಳಕೆಯಾಗಿಲ್ಲ. ಈ ದುಡ್ಡು ಎಲ್ಲಿ ಹೋಗಿದೆ ಎಂದು ಪ್ರಶ್ನಿಸಲಾಗಿದೆ. ಪ್ರತಿ ವರ್ಷ ಬಜೆಟ್‌ನಲ್ಲಿ ಒದಗಿಸಿದ ಮೊತ್ತವನ್ನು ಅಧ್ಯರ್ಪಣೆ ಮಾಡಬೇಕಾಗುತ್ತದೆ. ಆದರೆ, ಇಲಾಖೆಗಳು ಅದಕ್ಕೆ ಆದೇಶ ಹೊರಡಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಹತ್ತು ವರ್ಷದ ಹಿಂದಿನಿಂದ ಇಲ್ಲಿಯವರೆಗೆ ಅಧ್ಯರ್ಪಣೆ ಆದೇಶ ಹೊರಡಿಸಿದ ವಿವರವನ್ನು ನೀಡಿದ್ದಾರೆ.

English summary
Former Chief Minister Siddaramaiah denied the allegations of corruption during his stint as CM by BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X