ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ಕಿವಿ ಹಿಂಡುವ ಸಮನ್ವಯ ಸಮಿತಿಗೆ ಸಿದ್ದರಾಮಯ್ಯ ನೇತೃತ್ವ

By Manjunatha
|
Google Oneindia Kannada News

ಬೆಂಗಳೂರು, ಜೂನ್ 01: ಸಮ್ಮಿಶ್ರ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡಲು ಸಮನ್ವಯ ಸಮಿತಿ ರಚಿಸಲಾಗಿದ್ದು ಇದರ ಮುಖಂಡತ್ವವನ್ನು ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ.

ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಪ್ರಮುಖ ಮುಖಂಡರು ಇರುವ ಈ ಸಮನ್ವಯ ಸಮಿತಿಯು ಸರ್ಕಾರದ ನೀತಿಗಳು, ಪ್ರಮುಖ ನಿರ್ಧಾರಗಳು, ಯೋಜನೆಗಳ ಬಗ್ಗೆ ಚರ್ಚಿಸಿ ಸಲಹೆ, ಸೂಚನೆಗಳನ್ನು ನೀಡಲಿದೆ.

ಪುಟ ವಿಸ್ತರಣೆ: ಯಾವ ಖಾತೆ ಯಾರಿಗೆ? ಇಲ್ಲಿದೆ ಸಂಪೂರ್ಣ ಪಟ್ಟಿ ಪುಟ ವಿಸ್ತರಣೆ: ಯಾವ ಖಾತೆ ಯಾರಿಗೆ? ಇಲ್ಲಿದೆ ಸಂಪೂರ್ಣ ಪಟ್ಟಿ

ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಪರಮೇಶ್ವರ್ ಸಹ ಈ ಸಮಿತಿಯ ಸದಸ್ಯರಾಗಿದ್ದು, ಸಿದ್ದರಾಮಯ್ಯ ಅವರು ಇದರ ಮುಖ್ಯಸ್ಥರಾಗಿದ್ದಾರೆ. ಜೆಡಿಎಸ್‌ನ ಡಾನಿಶ್ ಅಲಿ ಸೇರಿದಂತೆ ಕೆಲವು ಮುಖಂಡರುಗಳು ಸಮಿತಿಯಲ್ಲಿದ್ದಾರೆ.

Siddarmaiah is the leader of Coordination Committee

ಸಮಿತಿಯು ಕಡ್ಡಾಯವಾಗಿ ತಿಂಗಳಿಗೊಮ್ಮೆ ಸಭೆ ಸೇರಿ, ಸರ್ಕಾರ ನಡೆಯುತ್ತಿರುವ ಹಾದಿಯ ವಿಮರ್ಶೆ ಮಾಡುತ್ತದೆ ಅಲ್ಲದೆ, ನೀತಿಗಳು, ಯೋಜನೆಗಳು, ಪ್ರಮುಖ ನಿರ್ಧಾರಗಳ ಬಗ್ಗೆ ಚರ್ಚಿಸಿ ಸಲಹೆ ನೀಡಲಿದೆ.

English summary
Coordination Committee is formed for give advice to the Karnataka Government. Siddarmaiah will be the head of the Coordination Committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X