ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕಾಂಗ ಪಕ್ಷದ ನಾಯಕ: ಪರಮೇಶ್ವರ್‌ ಬದಲಿಸಿ ಸಿದ್ದರಾಮಯ್ಯಗೆ ಮಣೆ

By Manjunatha
|
Google Oneindia Kannada News

ಹೈದಬಾರಾದ್, ಮೇ 18: ಹೈದರಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಅಚ್ಚರಿಯ ಬೆಳವಣಿಗೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ನಿನ್ನೆಯಷ್ಟೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಶಾಸಕಾಂಗ ಪಕ್ಷದ ನಾಯರನ್ನಾಗಿ ಆರಿಸಲಾಗಿತ್ತು. ಆದರೆ ಇಂದು ಹೈದರಾಬಾದ್‌ನ ಹೊಟೆಲ್‌ನಲ್ಲಿ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಬೋಪಯ್ಯ ನೇಮಕ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಕಾಂಗ್ರೆಸ್ಬೋಪಯ್ಯ ನೇಮಕ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಕಾಂಗ್ರೆಸ್

ನಾಳೆ ಕಾಂಗ್ರೆಸ್‌ ಪಕ್ಷಕ್ಕೆ ಅತ್ಯಂತ ಮಹತ್ವದ ದಿನವಾಗಿದ್ದು, ನಾಳೆ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ವಿಶ್ವಾಸ ಮತ ಸಾಬೀತು ಮಾಡಬೇಕಿದೆ. ಹಾಗಾಗಿ ಹಿರಿಯರು ಅನುಭವಿಗಳಾದ ಹಾಗೂ ಉತ್ತಮ ವಾಕ್ಪಟು, ಹಠಮಾರಿಯೂ ಆಗಿರುವ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದರೆ ಸೂಕ್ತ ಎಂಬ ಅನಿಸಿಕೆಯಿಂದ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆರಿಸಲಾಗಿದೆ.

Siddarmaiah choosen as Legislative party leader

ರಾಜ್ಯಪಾಲರು ಬಿಜೆಪಿಯ ಕೆಜಿ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್‌ ಅನ್ನಾಗಿ ಆಯ್ಕೆ ಮಾಡುತ್ತಿದ್ದಂತೆ ಈ ಬೆಳವಣಿಗೆ ನಡೆದಿದ್ದು, ಸ್ಪೀಕರ್‌ ಮುಖಾಂತರ ನಾಳೆ ಏನಾದರೂ ಪಕ್ಷಪಾತ ನಡೆದಲ್ಲಿ ಅದನ್ನು ಎದುರಿಸಲು ಸಿದ್ದರಾಮಯ್ಯ ಸಮರ್ಥರು ಎಂಬ ಕಾರಣಕ್ಕೆ ಈ ನಿರ್ಣಯವನ್ನು ಕಾಂಗ್ರೆಸ್ ತಳೆದಿದೆ.

ನಾಳೆ ಸಂಜೆ ವಿಜಯೋತ್ಸ ಆಚರಿಸಿ: ಬಿಜೆಪಿ ಕಾರ್ಯಕರ್ತರಿಗೆ ಬಿಎಸ್‌ವೈ ಕರೆ ನಾಳೆ ಸಂಜೆ ವಿಜಯೋತ್ಸ ಆಚರಿಸಿ: ಬಿಜೆಪಿ ಕಾರ್ಯಕರ್ತರಿಗೆ ಬಿಎಸ್‌ವೈ ಕರೆ

ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ನಾಳೆ ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕರನ್ನು ಮುನ್ನಡೆಸಲಿದ್ದು, ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಅವರೇ ಕೂರಲಿದ್ದಾರೆ.

English summary
Ex CM Siddarmaiah choosen as Legislative party leader. yesterday KPCC president G.Parameshwar was choosen as Legislative party leader. Today Siddaramaiah choosen for that post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X