ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮೋತ್ಸವ: ಕಾಂಗ್ರೆಸ್ಸಿಗೆ 6 ಪ್ರಶ್ನೆ ಕೇಳಿದ ಬಿಜೆಪಿ

|
Google Oneindia Kannada News

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಸಂಬಂಧ ಆಯೋಜಿಸಲಾಗಿದ್ದ ಸಿದ್ದರಾಮೋತ್ಸವ ಮತ್ತದರ ಭರ್ಜರಿ ಯಶಸ್ಸಿನಿಂದ ಬಿಜೆಪಿಯಲ್ಲಿ ನಡುಕ ಉಂಟಾಗಿದೆಯೇ?. ಕಾಂಗ್ರೆಸ್ ನಾಯಕರ ಪ್ರಕಾರ ಹೌದು.

ಕಾಂಗ್ರೆಸ್ಸಿನ ಹಲವು ನಾಯಕರು ಹೇಳುವ ಪ್ರಕಾರ, ಈ ರೀತಿಯ ಯಶಸ್ಸನ್ನು ಖುದ್ದು ಪಕ್ಷವೇ ನಿರೀಕ್ಷಿಸಿರಲಿಲ್ಲ. ಸಿದ್ದರಾಮಯ್ಯನವರು ಹೇಳುವ ಪ್ರಕಾರ, ಅವರನ್ನು ಕಂಡರೆ ಬಿಜೆಪಿಯವರಿಗೆ ಭಯವಂತೆ. ಕೋಲಾರ ಜಿಲ್ಲಾ ಪ್ರವಾಸದ ವೇಳೆ ಸಿದ್ದರಾಮಯ್ಯ ಈ ಮಾತನ್ನು ಹೇಳಿದ್ದಾರೆ.

ರಮೇಶ್ ಕುಮಾರ್ ವಿರುದ್ದ ಅಕ್ಷರಶಃ ಬೆಂಕಿ ಉಗುಳಿದ ಕುಮಾರಸ್ವಾಮಿರಮೇಶ್ ಕುಮಾರ್ ವಿರುದ್ದ ಅಕ್ಷರಶಃ ಬೆಂಕಿ ಉಗುಳಿದ ಕುಮಾರಸ್ವಾಮಿ

ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಕಾಂಗ್ರೆಸ್ಸಿಗೆ ಆರು ಪ್ರಶ್ನೆಗಳು ಕೇಳಿದೆ ಮತ್ತು ಉತ್ತರ ನೀಡಬೇಕಾಗಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಒತ್ತಾಯಿಸಿದೆ.

ಪ್ರಶ್ನೆ - 1: ಸಿದ್ದರಾಮೋತ್ಸವ ಸಂಬಂಧಿತ ಪ್ರಶ್ನೆಗಳು. ದೇಶದ ಆರ್ಥಿಕತೆ ಮತ್ತು ರಾಜಕೀಯ ಪಕ್ಷದ ಅರ್ಥಶಾಸ್ತ್ರದ ನಡುವೆ ಯಾವುದೇ ಸಂಬಂಧವಿಲ್ಲವೇ? ಒಂದುಕಡೆ ಬೆಲೆ ಏರಿಕೆ, ಬಡತನದ ವಿರುದ್ಧ ಪ್ರತಿಭಟನೆ ನಡೆಸುವ ಕಾಂಗ್ರೆಸ್‌ ಇನ್ನೊಂದು ಕಡೆ ಕೋಟಿಗಟ್ಟಲೆ ವ್ಯಯಿಸಿ ಜನ್ಮದಿನ ಆಚರಿಸಿಕೊಳ್ಳುವುದು ಎಷ್ಟು ಸರಿ? - ಇದು ಬಿಜೆಪಿ ಕೇಳಿದ ಮೊದಲ ಪ್ರಶ್ನೆ.

ಧ್ವಜಕ್ಕೆ ಅಗೌರವ ತೋರಿಸುವ ಬಿಜೆಪಿಗರದ್ದು ದೇಶದ್ರೋಹ; ಮಹದೇವಪ್ಪಧ್ವಜಕ್ಕೆ ಅಗೌರವ ತೋರಿಸುವ ಬಿಜೆಪಿಗರದ್ದು ದೇಶದ್ರೋಹ; ಮಹದೇವಪ್ಪ

 ಕಾಂಗ್ರೆಸ್ಸಿಗೆ ಬಿಜೆಪಿ ಕೇಳಿದ ಪ್ರಶ್ನೆಗಳು

ಕಾಂಗ್ರೆಸ್ಸಿಗೆ ಬಿಜೆಪಿ ಕೇಳಿದ ಪ್ರಶ್ನೆಗಳು

ಪ್ರಶ್ನೆ - 2: ಕಾಂಗ್ರೆಸ್‌ ಪಕ್ಷದ ಸುಪ್ರೀಂಕೋರ್ಟ್ ನಾಯಕರು ಭ್ರಷ್ಟಾಚಾರ ಸಂಬಂಧಿತವಾಗಿ ಕಾನೂನು ಕ್ರಮ ಎದುರಿಸುತ್ತಿರುವಾಗ ಕರ್ನಾಟಕ ಕಾಂಗ್ರೆಸ್ಸಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಈ ಮೂಲಕ ಗಾಂಧಿ ಕುಟುಂಬವನ್ನು ಧಿಕ್ಕರಿಸಲಾಗುತ್ತಿದೆಯೇ? #ಉತ್ತರಿಸಿಕಾಂಗ್ರೆಸ್

ಪ್ರಶ್ನೆ -3: ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತ ಮಹೋತ್ಸವ ಆಚರಿಸಿಕೊಳ್ಳುವ ಕಾಂಗ್ರೆಸ್‌ ನಾಯಕರು ಸೋನಿಯಾ ಗಾಂಧಿಗೂ 75 ತುಂಬಿರುವುದನ್ನು ಮರೆತದ್ದೇಕೆ?
ಸೋನಿಯಾ ಗಾಂಧಿ ಅವರನ್ನು ಕಡೆಗಣಿಸಲಾಗುತ್ತಿದೆಯೇ? #ಉತ್ತರಿಸಿಕಾಂಗ್ರೆಸ್

 ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಕೋಟಿ ಕೋಟಿ ಖರ್ಚು

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಕೋಟಿ ಕೋಟಿ ಖರ್ಚು

ಪ್ರಶ್ನೆ - 4: ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಕರಾವಳಿ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ನಮ್ಮ ಜನರು ಅನುಭವಿಸುತ್ತಿರುವ ನೋವುಗಳು ವಿರೋಧ ಪಕ್ಷದ ನಾಯಕರ ಆತ್ಮಸಾಕ್ಷಿಯನ್ನು ಚುಚ್ಚಿದಂತೆ ತೋರುತ್ತಿಲ್ಲ. ಸೂತಕದ ವಾತಾವರಣದಲ್ಲೂ ಸಂಭ್ರಮಿಸಿದ್ದೇಕೆ? #ಉತ್ತರಿಸಿಕಾಂಗ್ರೆಸ್

ಪ್ರಶ್ನೆ - 5: ರಾಜ್ಯ ಅತಿವೃಷ್ಟಿಯಿಂದ ತತ್ತರಿಸಿರುವಾಗ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಕೋಟಿ ಕೋಟಿ ಖರ್ಚು ಮಾಡಲಾಯಿತು. ಈ ದುಂದುವೆಚ್ಚದ ಲೆಕ್ಕವನ್ನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಾದರೂ ಕೇಳುವ ಸಮಯ ಬಂದಿದೆ. ಕಾಂಗ್ರೆಸ್‌ ಬಳಿ ಉತ್ತರವಿದೆಯೇ? #ಉತ್ತರಿಸಿಕಾಂಗ್ರೆಸ್

 ಹುಟ್ಟಿದ ದಿನಾಂಕದ ಬಗ್ಗೆ ಗೊಂದಲ ಇಟ್ಟುಕೊಂಡ ಸಿದ್ದರಾಮಯ್ಯ

ಹುಟ್ಟಿದ ದಿನಾಂಕದ ಬಗ್ಗೆ ಗೊಂದಲ ಇಟ್ಟುಕೊಂಡ ಸಿದ್ದರಾಮಯ್ಯ

ಪ್ರಶ್ನೆ - 6: ತಮ್ಮ ಹುಟ್ಟಿದ ದಿನಾಂಕದ ಬಗ್ಗೆ ಗೊಂದಲ ಇಟ್ಟುಕೊಂಡು ಸಿದ್ದರಾಮಯ್ಯ ಅವರು 75 ನೇ ವರ್ಷದ ಜನ್ಮದಿನ ಆಚರಣೆ ಮಾಡಿಕೊಂಡಿದ್ದು ರಾಜಕೀಯ ತೆವಲಿಗಾಗಿ ಅಲ್ಲವೇ ? ಚುನಾವಣಾ ಹೊಸ್ತಿಲಲ್ಲಿಯೇ ಜನ್ಮದಿನ ಆಚರಿಸಿಕೊಂಡಿದ್ದು ಡಿಕೆಶಿ ವಿರುದ್ಧದ ರಾಜಕೀಯ ದಾಳವೇ? #ಉತ್ತರಿಸಿಕಾಂಗ್ರೆಸ್

 ಬಿಜೆಪಿಯ ಟ್ವೀಟಿಗೆ ಹಲವು ಕಾಮೆಂಟುಗಳು

ಬಿಜೆಪಿಯ ಟ್ವೀಟಿಗೆ ಹಲವು ಕಾಮೆಂಟುಗಳು

ಬಿಜೆಪಿಯ ಟ್ವೀಟಿಗೆ ಹಲವು ಕಾಮೆಂಟುಗಳು ಬಂದಿದ್ದು, ಕೆಲವೊಂದು ಕಾಮೆಂಟುಗಳು ಹೀಗಿವೆ:
'ನಿಮ್ಮದೇ ಎರಡು ಸರಕಾರ ಆದರೂ ಇನ್ನೂ ಮಂತ್ರಿಗಳು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡದೆ ನಿದ್ದೆ ಮಾಡುತ್ತಿರುವುದು ವಿಪರ್ಯಾಸ.. ಬೆಲೆ ಏರಿಕೆ ಮಧ್ಯೆ ಅಕ್ಕಿ ಗೋಧಿ gst ತಂದಿದ್ದು ನೀವೇ ಅಲ್ಲವೇ . ಇದನ್ನು ಪ್ರಶ್ನೆ ಮಾಡುವ ತಾಕತ್ತು ಇಲ್ವಾ... ಬಿಜೆಪಿ ಇಂದ ರಾಜ್ಯಕ್ಕೆ ಶೂನ್ಯ ಲಾಭ..'

'ಲೋ ಅಡ್ಮಿನ್ ಯಾವ ಊರ್ಲಾ ನಿಂದು , ಜನಾನೆ ಬಂದಿರಲಿಲ್ಲ ಕೇವಲ 1 ಲಕ್ಷ ಬಂದಿರಬಹುದು ಅಂತಾರೆ. ನಿಮ್ಮ ಪಕ್ಷದ ಮುಖಂಡರು ಆ ಎಳಸು ಕಾರ್ಯಕರ್ತರು &
Social media ಶೂರರು. ಇನ್ನು ಕೋಟಿ ಎಂಗಲ ಖರ್ಚಾಯ್ತದೆ ದಡ್ಡ ಮುಂಡೆದೆ, ಅಷ್ಟಕ್ಕೂ ಅದೇನೂ ಸರ್ಕಾರದ ದುಡ್ಡಲ್ವಲ್ಲ. ನಿಮ್ಮ ವಿಶ್ವಗುರು ಥರ ಯೋಗಾಸನ ಮಾಡೋಕೆಲ್ಲ ದುಂದು ವೆಚ್ಚ ಮಾಡಿಲ್ಲವಲ್ಲ'.

English summary
Siddaramotshava: BJP Asks Six Questions To Karnataka Congress. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X