ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆ ಕೊಡಿ, ಅನುದಾನ ಕೇಳಬೇಡಿ: ಕೇಂದ್ರದ ಧೋರಣೆಗೆ ಸಿದ್ದು ಕೆಂಡ!

|
Google Oneindia Kannada News

Recommended Video

ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಸಿ ಎಂ ಸಿದ್ದರಾಮಯ್ಯ | Oneindia Kannada

ನವದೆಹಲಿ, ಮಾರ್ಚ್ 17: 'ಅಭಿವೃದ್ಧಿ ಹೊಂದಿರುವ ದಕ್ಷಿಣ ಭಾರತ ಅತೀ ಹೆಚ್ಚು ತೆರಿಗೆ ಕಟ್ಟುತ್ತಿದ್ದರೂ ಕೇಂದ್ರದಿಂದ ಅದಕ್ಕೆ ಸಿಗುವ ಅನುದಾನ ಮಾತ್ರ ತೀರಾ ಕಡಿಮೆ. ಇದು ಮಲತಾಯಿ ಧೋರಣೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ಮೇಲೆ ಗೂಬೆ ಕೂರಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕೇಂದ್ರ ಸರ್ಕಾರ ಸದಾ ದಕ್ಷಿಣ ಭಾರತವನ್ನು ಕಡೆಗಣಿಸುತ್ತಿದೆ ಎಂಬ ಮಾತು ಇದೇ ಮೊದಲಲ್ಲ. ಅಧಿಕಾರದಲ್ಲಿದ್ದವರು, ಇಲ್ಲದವರು ಎಲ್ಲರೂ ಈ ಮಾತನ್ನು ಆಡುತ್ತಲೇ ಬಂದಿದ್ದಾರೆ. ಆದರೆ ಮೊಟ್ಟ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷವನ್ನು ಪ್ರತಿನಿಧಿಸುವ, ರಾಜ್ಯವೊಂದರ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಈ ವಿಷಯವಾಗಿ ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

ಕನ್ನಡ ಅಸ್ಮಿತೆಯೇ ಕರ್ನಾಟಕದ ಹೆಗ್ಗುರುತು : ಸಿದ್ದರಾಮಯ್ಯ ಕನ್ನಡ ಅಸ್ಮಿತೆಯೇ ಕರ್ನಾಟಕದ ಹೆಗ್ಗುರುತು : ಸಿದ್ದರಾಮಯ್ಯ

ಅತ್ತ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಎನ್ ಡಿಎ ಮೈತ್ರಿಕೂಟದಿಂದ ಹೊರಬಿದ್ದಿದ್ದಾರೆ, ಟಿಡಿಪಿ(ತೆಲುಗು ದೇಶಂ ಪಕ್ಷ)ಯ ಸಂಸದರಾದ ಮುರಳೀ ಮೋಹನ್ ಎನ್ನುವವರು ಇತ್ತೀಚೆಗೆ, ದಕ್ಷಿಣ ಭಾರತದ ಬಗೆಗಿನ ಕೇಂದ್ರದ ನಿರ್ಲಕ್ಷ್ಯದ ಕುರಿತು ಮಾತನಾಡುತ್ತ, 'ನಮ್ಮನ್ನು ನಿರ್ಲಕ್ಷಿಸಿದರೆ ದಕ್ಷಿಣ ಭಾರತ ಕ್ರಮೇಣ ಪ್ರತ್ಯೇಕ ರಾಷ್ಟ್ರವಾಗಬೇಕಾಗುತ್ತದೆ' ಎಂದಿದ್ದರು. ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆ ವಿರುದ್ಧ ಈಗ ದಕ್ಷಿಣ ಭಾರತದಾದ್ಯಂತ ಜೋರುದನಿ ಏಳುತ್ತಿದೆ.

ನಾಡ ಧ್ವಜ: ಸಿದ್ದು ಟ್ವೀಟಿಗೆ ಪ್ರತಾಪ್ ಹಾಗೂ ಪ್ರಜೆಗಳ ಪ್ರತಿಕ್ರಿಯೆ ನಾಡ ಧ್ವಜ: ಸಿದ್ದು ಟ್ವೀಟಿಗೆ ಪ್ರತಾಪ್ ಹಾಗೂ ಪ್ರಜೆಗಳ ಪ್ರತಿಕ್ರಿಯೆ

ತೆರಿಗೆ ಪಡೆವಾಗ ಉದಾರತೆ, ಅನುದಾನ ಕೊಡುವಾಗ ಚೌಕಾಸಿ!

ತೆರಿಗೆ ಪಡೆವಾಗ ಉದಾರತೆ, ಅನುದಾನ ಕೊಡುವಾಗ ಚೌಕಾಸಿ!

ಕೇಂದ್ರದಲ್ಲಿ ಎನ್ ಡಿಎ ಸರ್ಕಾರವಿರುವಾಗ ಎಂದಲ್ಲ, ಯುಪಿಎ ಸರ್ಕಾರವಿದ್ದಾಗಲೂ ಕರ್ನಾಟಕ ಮತ್ತು ದಕ್ಷಿಣ ಭಾರತದ ಇತರ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳು ಹೆಚ್ಚು ತೆರಿಗೆ ನೀಡುತ್ತಿದ್ದವು. ಆದರೆ ತೆರಿಗೆ ಸಂಗ್ರಹದ ನಂತರ, ಆಯಾ ರಾಜ್ಯಗಳ ಜನಸಂಖ್ಯೆಯ ಆಧಾರ ಮೇಲೆ ಅನುದಾನವನ್ನು ಕೇಂದ್ರ ಹಂಚುವುದರಿಂದ ಉತ್ತರ ಭಾರತದ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮುಂತಾದ ರಾಜ್ಯಗಳು ಹೆಚ್ಚಿನ ಅನುದಾನ ಪಡೆಯುತ್ತವೆ. ಆದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಅವುಗಳು ನೀಡುವ ತೆರಿಗೆ ಹಣ ತೀರಾ ಕಡಿಮೆ! ಒಟ್ಟಿನಲ್ಲಿ ತೆರಿಗೆ ಪಡೆವಾಗ ಉದಾರತೆ ತೋರುವ, ಅನುದಾನ ನೀಡುವಾಗ ಮಾತ್ರ ಚೌಕಾಸಿ ಮಾಡುವ ಕೇಂದ್ರ ಸರ್ಕಾರದ ನಡೆ ಚರ್ಚಾರ್ಹವಾಗಿದೆ.

ಇದೆಂಥ ಮೋಸ ನೋಡಿ..!

ಇದೆಂಥ ಮೋಸ ನೋಡಿ..!

"ಇತಿಹಾಸದ ಕಾಲದಿಂದಲೂ ಉತ್ತರ ಭಾರತಕ್ಕೆ ದಕ್ಷಿಣ ಭಾರತವೇ ಅನುದಾನ ನೀಡುತ್ತ ಬಂದಿದೆ. ಉತ್ತರ ಪ್ರದೇಶದಂಥ ಹಿಂದುಳಿದ ರಾಜ್ಯಗಳು 1 ರೂ. ತೆರಿಗೆ ನೀಡಿದರೆ, ಜನಸಂಖ್ಯೆಯ ಆಧಾರದ ಮೇಲೆ, ಒಂದು ರೂ.ಗೆ1.79 ರೂ. ಅನುದಾನ ಪಡೆಯುತ್ತವೆ. ಆದರೆ ಕರ್ನಾಟಕ ತಾನು ನೀಡುವ ಒಂದು ರೂ. ತೆರಿಗೆಗೆ ಕೇಂದ್ರದಿಂದ ಪಡೆವ ಅನುದಾನ ಎಷ್ಟು ಗೊತ್ತಾ? 0.49 ರೂ.(49 ಪೈಸೆ!) ಈ ರೀತಿಯ ತಾರತಮ್ಯ ಅಥವಾ ಅನುದಾನ ಹಂಚಿಕೆಯಲ್ಲಿನ ಅಸಮಾನತೆಯನ್ನು ತಡೆಯದಿದ್ದರೆ ಅಭಿವೃದ್ಧಿ ಹೊಂದುವುದು ಹೇಗೆ?" ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಶ್ನೆ.

ಜನಸಂಖ್ಯೆಯ ಆಧಾರದ ಮೇಲೆ ಅನುದಾನ

ಜನಸಂಖ್ಯೆಯ ಆಧಾರದ ಮೇಲೆ ಅನುದಾನ

ಪ್ರತಿ ರಾಜ್ಯಕ್ಕೂ ಜನಸಂಖ್ಯೆಯ ಆಧಾರ ಮೇಲೆ ಅನುದಾನ ನೀಡಲಾಗುತ್ತದೆ. ಆದರೆ ಜನಸಂಖ್ಯೆಯ ಹೆಚ್ಚಳ ದೇಶಕ್ಕೆ ಒಂದು ಸಮಸ್ಯೆ ಎಂಬುದನ್ನರಿತ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಕೆಲವು ರಾಜ್ಯಗಳು, ಅವುಗಳ ನಿಯಂತ್ರಣಕ್ಕೆ ಬದ್ಧವಾಗಿವೆ. ಆದರೆ ಉತ್ತರ ಪ್ರದೇಶದ ರಾಜ್ಯಗಳು ಮಾತ್ರ ಈ ಬಗ್ಗೆ ಕೊಂಚವೂ ಯೋಚಿಸುತ್ತಿಲ್ಲ. ಜನಸಂಖ್ಯೆಯ ಆಧಾರದ ಮೇಲೆ ಅನುದಾನ ನೀಡುವುದರಿಂದ ಸಹಜವಾಗಿಯೇ ಅನುದಾನ ನಮಗೆ ಕಡಿಮೆ ಬರುತ್ತದೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆತಂಕ.

ದಂಗೆ ಎಬ್ಬಿಸೀತಾ ಈ ಅಸಮತೋಲನ?!

ದಂಗೆ ಎಬ್ಬಿಸೀತಾ ಈ ಅಸಮತೋಲನ?!

ಈ ತಾರತಮ್ಯದ ಪರಿಣಾಮವನ್ನು ಕೇಂದ್ರ ಸರ್ಕಾರ ಅನುಭವಿಸಬೇಕಾಗಬಹುದು. ಈಗಾಗಲೇ ಟಿಡಿಪಿ ತನ್ನ ಬೆಂಬಲವನ್ನು ವಾಪಸ್ ಪಡೆದಿದ್ದೂ ಇದೇ ಕಾರಣಕ್ಕೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡುವ ಬೇಡಿಕೆಯ ಹಿಂದೆಯೂ ಪರೋಕ್ಷವಾಗಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯ ಬಗೆಗಿನ ಮುನಿಸು ಇದೆ ಎಂಬುದನ್ನು ಅಲ್ಲಗಳೆಯುವುದಕ್ಕಾಗುವುದಿಲ್ಲ. ದಕ್ಷಿಣ ಭಾರತದ ರಾಜ್ಯಗಳನ್ನು ಹೆಚ್ಚಿ ಪ್ರಾದೇಶಿಕ ಪಕ್ಷಗಳೇ ಆಳುತ್ತಿರುವುದರಿಂದ ಈ ಕುರಿತು ಕೇಂದ್ರ ಸರ್ಕಾರವನ್ನು ಓಲೈಸುವುದು ಸುಲಭದ ಮಾತಲ್ಲ. ಈ ಎಲ್ಲ ಕಾರಣದಿಂದ ಈ ಮಲತಾಯಿ ಧೋರಣೆ ದಕ್ಷಿಣ ಭಾರತೀಯರ ಕಣ್ಣು ಕೆಂಪಾಗಿಸಿದೆ. ಇದು ಮುಂದೊಮ್ಮೆ ದಂಗೆಯನ್ನೇ ಎಬ್ಬಿಸಿದರೂ ಅಚ್ಚರಿಯಿಲ್ಲ.

English summary
Karnataka chief minsiter Siddaramaiah blames, Union government's policy of distributing subsidies to the state on the basis of population. Many south indian states repeated his voice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X