ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಸಿದ್ದು ರಾಜಕೀಯದ ಆರಂಭ, ಅಂತ್ಯ ಎಲ್ಲಾ ಚಾಮುಂಡೇಶ್ವರಿಯಲ್ಲೇ!"

By ಮೈಸೂರು ಪ್ರತಿನಿಧಿ
|
Google Oneindia Kannada News

Recommended Video

ಸಿದ್ದರಾಮಯ್ಯ ರಾಜಕೀಯ ಜೀವನ ಅಂತ್ಯ ಆರಂಭ ಚಾಮುಂಡೇಶ್ವರಿಯಲ್ಲೇ ಎಂದ ಎಚ್ ಡಿ ಕೆ | Oneindia Kannada

"ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ಚರಿ ಕ್ಷೇತ್ರದ ಅಭಿವೃದ್ಧಿಗೆ ಸ್ಪರ್ಧೆ ಮಾಡುತ್ತಿಲ್ಲ. ಮಗನಿಗೆ ಕ್ಷೇತ್ರದ ಬಿಟ್ಟುಕೊಡಲು ಚಾಮುಂಡೇಶ್ಚರಿಗೆ ಬಂದಿದ್ದಾರೆ" ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, "ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಆರಂಭವಾದ ಕ್ಷೇತ್ರದಿಂದಲೇ ಅಂತ್ಯವಾಗಲಿದೆ" ಎಂದರು.

ಚಾಮುಂಡೇಶ್ವರಿ ಕ್ಷೇತ್ರದಿಂದ ಏ.23ರಂದು ನಾಮಪತ್ರ ಸಲ್ಲಿಸಲಿರುವ ಸಿಎಂ ಚಾಮುಂಡೇಶ್ವರಿ ಕ್ಷೇತ್ರದಿಂದ ಏ.23ರಂದು ನಾಮಪತ್ರ ಸಲ್ಲಿಸಲಿರುವ ಸಿಎಂ

"ಚಾಮುಂಡೇಶ್ವರಿ, ವರುಣಾ ಕ್ಷೇತ್ರಗಳಿಂದ ಮತದಾರ ಅಪ್ಪ ಮಕ್ಕಳನ್ನ ಮನೆಗೆ ಕಳುಹಿಸುತ್ತಾರೆ. ನಾನಾಗಲಿ, ಜಿ.ಟಿ.ದೇವೇಗೌಡರಾಗಲಿ ಸಿದ್ದರಾಮಯ್ಯ ಅವರನ್ನ ಸೋಲಿಸುತ್ತೇವೆ ಅಂತ ಹೇಳುತ್ತಿಲ್ಲ. ಜನರೇ ಸಿದ್ದರಾಮಯ್ಯ, ಯತೀಂದ್ರ ಅವರನ್ನ ಮನೆಗೆ ಕಳುಹಿಸುತ್ತಾರೆ" ಎಂದರು.

ಪಲಾಯನದಲ್ಲಿ ಸಿದ್ದು ನಂ.1!

ಪಲಾಯನದಲ್ಲಿ ಸಿದ್ದು ನಂ.1!

"ಕಾಂಗ್ರೆಸ್ ಪಕ್ಷದ ಬಹಳಷ್ಟು ಮುಖಂಡರು ಜೆಡಿಎಸ್ ಸೇರಿದ್ದಾರೆ. ಒಕ್ಕಲಿಗ ಸಮಾಜದ ಕೆಲವು ಮುಖಂಡರನ್ನು ಬಿಟ್ಟು ನಮ್ಮ ವಿರುದ್ಧ ಹೇಳಿಕೆ ಕೊಡಿಸಿದ್ದಾರೆ ಜಾತಿ ಮುಖಂಡರನ್ನು ಬಿಟ್ಟು ಒಡೆದು ಆಳುವ ನೀತಿ ಅನುಸರಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ವರುಣಗೆ ಹೋದ ಸಿದ್ದರಾಮಯ್ಯ ಪಲಾಯನ ಮಾಡಿದ್ದರು. ಈಗ ಇದೇ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದು ಮತ್ತೆ ಪಲಾಯನ ಮಾಡಿದ್ದಾರೆ" ಎಂದು ಕುಟುಕಿದರು. "ಡಿಸಿ ಮೇಲೆ ಹಲ್ಲೆ ಮಾಡಿದ ಮರಿಗೌಡ ನನಗೆ ಗೊತ್ತಿಲ್ಲ ಅಂತ ಹೇಳಿದ ಸಿದ್ದರಾಮಯ್ಯ ಈಗ ಅದೇ ಮರಿಗೌಡನನ್ನು ಬಾಡಿಗಾರ್ಡ್ ಆಗಿ ಮಾಡಿಕೊಂಡು ತಿರುಗುತ್ತಿದ್ದಾರೆ" ಎಂದರು.

ಕರ್ನಾಟಕ ರಾಜಕೀಯದ ಚಿತ್ರಣ ಬದಲಿಸಬಲ್ಲ ಆ 10 ಕ್ಷೇತ್ರಗಳು ಕರ್ನಾಟಕ ರಾಜಕೀಯದ ಚಿತ್ರಣ ಬದಲಿಸಬಲ್ಲ ಆ 10 ಕ್ಷೇತ್ರಗಳು

ರಾಮನಗರದಿಂದಲೂ ಸ್ಪರ್ಧೆ?

ರಾಮನಗರದಿಂದಲೂ ಸ್ಪರ್ಧೆ?

ಎರಡು ಕ್ಷೇತ್ರದಿಂದ ಸ್ಪರ್ಧಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, 'ನಾನು ರಾಮನಗರ, ಚೆನ್ನಪಟ್ಟಣ ಎರಡು ಕ್ಷೇತ್ರದಲ್ಲೂ ಸ್ಪರ್ಧೆ ಮಾಡುವೆ. ರಾಮನಗರ ರಾಜಕೀಯ ಜೀವನದ ಕರ್ಮಭೂಮಿ, ಪಕ್ಕದ ಚೆನ್ನಪಟ್ಟಣ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲು ಒತ್ತಡವಿದೆ. ಅನಿವಾರ್ಯವಾಗಿ ಎರಡು ಕ್ಷೇತ್ರಗಳಲ್ಲಿ ನಿಲ್ಲುವಂತಾಗಿದೆ." ಎಂದು ಖಚಿತಪಡಿಸಿದರು."ನಾನು ಸಿದ್ದರಾಮಯ್ಯ ರೀತಿ ಕ್ಷೇತ್ರದಲ್ಲಿ ಪ್ರಚಾರ ಮಾಡಲ್ಲ. ಐದು ದಿನಗಳ ಕಾಲ ಪ್ರಚಾರ ಮಾಡೋ ಕೆಲಸ ಮಾಡಲ್ಲ. ಸಿದ್ದರಾಮಯ್ಯ ರೆಸಾರ್ಟ್ ರಾಜಕೀಯ ಮಾಡಿದ್ದಾರೆ. ಒಕ್ಕಲಿಗ ಮುಖಂಡರನ್ನು ರೆಸಾರ್ಟ್ ಗೆ ಕರೆಸಿ ಹಣ ಕೊಟ್ಟು ಖರೀದಿ ಮಾಡ್ತಿದ್ದಾರೆ" ಎಂದು ಆರೋಪಿಸಿದರು.

ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

ಜಿಟಿಡಿ ಪರ ಪ್ರಚಾರ

ಜಿಟಿಡಿ ಪರ ಪ್ರಚಾರ

ಇದೇ ತಿಂಗಳ 15, 16 ರಿಂದ ಎರಡು ದಿನ ಚಾಮುಂಡೇಶ್ಚರಿ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತೇನೆ ಎಂದು ಸಹ ಇದೇ ಸಂದರ್ಭದಲ್ಲಿ ಅವರು ತಿಳಿಸಿದರು. ಚಾಮುಂಡೇಶ್ವರಿ ಕ್ಷೇತ್ರದ ಜನ ಖಂಡಿತವಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುದ್ಧಿ ಕಲಿಸುತ್ತಾರೆ. ನಾನು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಜೊತೆ ಸಾಧ್ಯವಾದಷ್ಟು ಹಳ್ಳಿಗಳಲ್ಲಿ ಸಂಚಾರ ಮಾಡುತ್ತೇನೆ ಎಂದರು.

ಬಿಜೆಪಿ ಜೊತೆ ಕೈಜೋಡಿಸೋಲ್ಲ!

ಬಿಜೆಪಿ ಜೊತೆ ಕೈಜೋಡಿಸೋಲ್ಲ!

"ಚಾಮುಂಡೇಶ್ಚರಿ ಕ್ಷೇತ್ರದಲ್ಲಿ ಬಿಜೆಪಿ ಜೊತೆ ಕೈ ಜೋಡಿಸುವ ಪ್ರಮೇಯ ಇಲ್ಲ" ಎಂದು ಅವರು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕು ಎಂಬ ಜಿದ್ದಿಗೆ ಬಿದ್ದಿರುವ ಜೆಡಿಎಸ್ ಮತ್ತು ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಳ ಒಪ್ಪಂದ ಮಾಡಿಕೊಳ್ಳುತ್ತವೆ ಎಂಬ ವದಂತಿ ಹಬ್ಬಿತ್ತು. ಜಿ ಟಿ ದೇವೇ ಗೌಡ ಅವರು ಸಹ ಪ್ರಬಲ ಅಭ್ಯರ್ಥಿಯಾಗಿರುವುದರಿಂದ ಸಿದ್ದರಾಮಯ್ಯ ವಿರುದ್ಧ ಅವರನ್ನು ಗೆಲ್ಲಿಸಬಹುದು ಎಂದು ಎರಡೂ ಪಕ್ಷಗಳು ಚಿಂತಿಸಿವೆ ಎನ್ನಲಾಗಿತ್ತು. ಆದರೆ ಈ ವದಂತಿಗೆ ಎಚ್ಡಿಕೆ ಬ್ರೇಕ್ ಹಾಕಿದ್ದಾರೆ. 224 ಕ್ಷೇತ್ರದಗಳಲ್ಲೂ ಬಿಜೆಪಿ ಜೊತೆ ಕೈ ಜೋಡಿಸಿಲ್ಲ.ಚುನಾವಣಾ ಆಯೋಗಕ್ಕಿಂತ ಸಿದ್ದರಾಮಯ್ಯ, ಕೆಂಪಯ್ಯ ಫವರ್ ಫುಲ್. ಚುನಾವಣಾ ಆಯೋಗದ ಯಾವುದೇ ಆದೇಶಕ್ಕೂ ಅವರು ಕ್ಯಾರೆ ಎನ್ನೋದಿಲ್ಲ ಎಂದು ಹರಿಹಾಯ್ದರು.

English summary
Karnataka assembly elections 2018: "Chief minister Siddaramaiah's political life started from Chamundeshwari constituency, and it will end in same constituency in this year" state JDS chief and former chief minister H D Kumaraswamy told in Mysuru today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X