ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ವರ್ಷದ ನಂತರ ಸಿದ್ದರಾಮಯ್ಯ ಕನಸಿನ ಯೋಜನೆ ಚಾಲನೆ ಹಂತಕ್ಕೆ

|
Google Oneindia Kannada News

ಬೆಂಗಳೂರು, ಮೇ 04: ಎರಡು ವರ್ಷಗಳ ನಂತರ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯೊಂದು ಚಾಲನೆ ಹಂತಕ್ಕೆ ಬಂದಿದೆ.

ಎರಡು ವರ್ಷದ ಹಿಂದೆ ಸಿದ್ದರಾಮಯ್ಯ ಅವರು ಘೋಷಿಸಿದ್ದ ಬೆಂಗಳೂರಿನ ಬಡವರಿಗೆ ಒಂದು ಲಕ್ಷ ಸೂರು ನಿರ್ಮಾಣದ ಯೋಜನೆಯು ಈಗ ಚಾಲನೆ ಹಂತ ತಲುಪಿದ್ದು, ಎರಡು ತಿಂಗಳ ಒಳಗಾಗಿ ಕಾಮಗಾರಿಗೆ ಅಧಿಕೃತ ಚಾಲನೆ ದೊರೆಯುವ ಸಾಧ್ಯತೆ ಹೆಚ್ಚಿದೆ.

ಮೈಸೂರಿನಲ್ಲಿ ಕಾಂಗ್ರೆಸ್ ಸೋಲ್ತು ಅನ್ಕೊಳ್ಳಿ, ಸಮ್ಮಿಶ್ರ ಸರಕಾರದ ಕಥೆ? ಮೈಸೂರಿನಲ್ಲಿ ಕಾಂಗ್ರೆಸ್ ಸೋಲ್ತು ಅನ್ಕೊಳ್ಳಿ, ಸಮ್ಮಿಶ್ರ ಸರಕಾರದ ಕಥೆ?

ಸಿದ್ದರಾಮಯ್ಯ ಅವರ ಈ ಕನಸಿನ ಯೋಜನೆಗೆ 2017 ರಲ್ಲಿಯೇ ಸಂಪುಟ ಸಭೆ ಒಪ್ಪಿಗೆ ಸೂಚಿಸಿತ್ತು, ಆದರೆ ಒಂದು ಲಕ್ಷ ಮನೆ ನಿರ್ಮಿಸಲು ಬೆಂಗಳೂರಿನಲ್ಲಿ ಸ್ಥಳದ ಅಭಾವ ಇದ್ದ ಕಾರಣ ಯೋಜನೆ ಆಮೆಗತಿಯಲ್ಲಿತ್ತು. ಈ ಯೋಜನೆ ಸಂಪುಟ ಸಭೆಯಲ್ಲಿ ಅಂಗೀಕಾರವಾದ ಬಳಿಕ ಮೂವರು ವಸತಿ ಸಚಿವರು ಬದಲಾಗಿದ್ದರು, ಆದರೂ ಯೋಜನೆ ಆರಂಭವಾಗಿರಲಿಲ್ಲ.

ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ಸಿದ್ದರಾಮಯ್ಯ ಅವರ ಈ ಕನಸಿನ ಯೋಜನೆಗೆ ಅಲ್ಪ-ಸ್ವಲ್ಪ ಬದಲಾವಣೆ ಮಾಡಿ ಕಾರ್ಯಾರಂಭ ಮಾಡಲು ಸಿದ್ಧತೆ ನಡೆಸಿಕೊಳ್ಳಲಾಗಿದೆ. ಸಿದ್ದರಾಮಯ್ಯ ಅವರು ಯೋಜಿಸಿದ್ದ ಯೋಜನೆಗೆ 1500 ಎಕರೆ ಸ್ಥಳದ ಅವಶ್ಯಕತೆ ಇತ್ತು, ಇದು ಬೆಂಗಳೂರಿನಲ್ಲಿ ಕಷ್ಟಸಾಧ್ಯವಾದ್ದರಿಂದ ಯೋಜನೆಯಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ.

ಮನೆಗಳ ಬದಲು ಅಪಾರ್ಟ್‌ಮೆಂಟ್‌

ಮನೆಗಳ ಬದಲು ಅಪಾರ್ಟ್‌ಮೆಂಟ್‌

ಒಂಟು ಮನೆಗಳನ್ನು ನಿರ್ಮಿಸುವ ಬದಲಿಗೆ ಅಪಾರ್ಟ್‌ಮೆಂಟ್‌ಗಳನ್ನು ಸರ್ಕಾರವೇ ನಿರ್ಮಿಸಿ ಅವನ್ನು ಫಲಾನುಭವಿಗಳಿಗೆ ಹಚು ರೀತಿಯನ್ನು ಯೋಜನೆಯನ್ನು ಬದಲಾಯಿಸಲಾಗಿದ್ದು, 14 ಮಹಡಿಯ ಕಟ್ಟಡಗಳನ್ನು ನಿರ್ಮಿಸಲು ಸಕಲ ನೀಲನಕ್ಷೆ ಪೂರ್ಣವಾಗಿದೆ.

ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ

ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ

ಆದರೆ ಇಲ್ಲಿಯೂ ಕೆಲವು ಮುಖ್ಯ ಸಮಸ್ಯೆಗಳು ಸರ್ಕಾರವನ್ನು ಕಾಡುತ್ತಿವೆ. ಈ ಯೋಜನೆಗೆಂದು ಸರ್ಕಾರವು 1014 ಎಕರೆ ಜಮೀನನ್ನು ವಸತಿ ಇಲಾಖೆಗೆ ಮಂಜೂರು ಮಾಡಿದೆ, ಆದರೆ ಇದರಲ್ಲಿ ಕೇವಲ 331 ಎಕರೆ ಜಮೀನು ಮಾತ್ರವೇ ಯಾವುದೇ ಒತ್ತುವರಿ ಇಲ್ಲದೆ ಮುಕ್ತವಾಗಿದೆ, ಇನ್ನುಳಿದ ಅಷ್ಟೂ ಸರ್ಕಾರಿ ಜಮೀನಿನಲ್ಲಿ ಒತ್ತುವರಿ ಆಗಿದೆ, ಕೆಲವು ಕಡೆ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿವೆ. ಈ ಎಲ್ಲ ಒತ್ತುವರಿಯನ್ನು ತೆರವುಗೊಳಿಸಿ ಮನೆ ನಿರ್ಮಿಸುವುದು ಸರ್ಕಾರದ ಮುಂದಿರುವ ಸವಾಲು.

ಕುಮಾರಸ್ವಾಮಿ ಕಟ್ಟಾ ವಿರೋಧಿಗಳ ಜೊತೆ ಏನದು ಸಿದ್ದರಾಮಯ್ಯನವರ ಚರ್ಚೆ? ಕುಮಾರಸ್ವಾಮಿ ಕಟ್ಟಾ ವಿರೋಧಿಗಳ ಜೊತೆ ಏನದು ಸಿದ್ದರಾಮಯ್ಯನವರ ಚರ್ಚೆ?

ವಿವಾದಮುಕ್ತ ಜಾಗದಲ್ಲಿ ಕಾಮಗಾರಿಗೆ ಚಾಲನೆ

ವಿವಾದಮುಕ್ತ ಜಾಗದಲ್ಲಿ ಕಾಮಗಾರಿಗೆ ಚಾಲನೆ

ನಗರದ ಕಾಡು ಅಗ್ರಹಾರ, ಕೊಡಿಗೇಹಳ್ಳಿ, ಹೊರಮಾವು, ದೇವಗೆರೆ ಇನ್ನಿತರ ಬೆಂಗಳೂರು ನಗರ ವ್ಯಾಪ್ತಿಯ ಪ್ರದೇಶಗಳಲ್ಲಿ 46000 ಮನೆಗಳನ್ನು ನಿರ್ಮಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಈಗ ವಿವಾದ ಮುಕ್ತ ಜಾಗದಲ್ಲಿ ಇವುಗಳನ್ನು ಮೊದಲಿಗೆ ನಿರ್ಮಿಸಲಾಗುತ್ತದೆ ಎಂದು ವಸತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ರೀತಿಯ ಮನೆಗಳ ನಿರ್ಮಾಣ

ಎರಡು ರೀತಿಯ ಮನೆಗಳ ನಿರ್ಮಾಣ

ಒಂದು ಕೊಠಡಿ, ಹಾಲ್ ಮತ್ತು ಅಡಿಗೆ ಮನೆ ಹೊಂದಿದ ಮತ್ತು ಎರಡು ಕೊಠಡಿ , ಹಾಲ್ ಮತ್ತು ಅಡಿಗೆ ಮನೆ ಹೊಂದಿದ ಮನೆಗಳನ್ನು ನಿರ್ಮಿಸಲು ನೀಲನಕ್ಷೆ ತಯಾರಿಸಲಾಗಿದೆ. ಪ್ರತಿ ಮನೆಗೆ 10.05 ಮತ್ತು 16 ಲಕ್ಷ ಖರ್ಚಾಗುವ ಅಂದಾಜು ಮಾಡಲಾಗಿದೆ. ಒಟ್ಟು ಯೋಜನೆಗೆ 4475 ಕೋಟಿ ಮೊತ್ತ ಅಂದಾಜಿಸಲಾಗಿದೆ.

ಜೆಡಿಎಸ್ ಮತ ಬಿಜೆಪಿಗೆ: ಜಿ.ಟಿ. ದೇವೇಗೌಡ ಹೇಳಿಕೆಗೆ ಸಿದ್ದರಾಮಯ್ಯ ಅಚ್ಚರಿಜೆಡಿಎಸ್ ಮತ ಬಿಜೆಪಿಗೆ: ಜಿ.ಟಿ. ದೇವೇಗೌಡ ಹೇಳಿಕೆಗೆ ಸಿದ್ದರಾಮಯ್ಯ ಅಚ್ಚರಿ

ಇನ್ನೆರಡು ತಿಂಗಳಲ್ಲಿ ಅಧಿಕೃತ ಚಾಲನೆ

ಇನ್ನೆರಡು ತಿಂಗಳಲ್ಲಿ ಅಧಿಕೃತ ಚಾಲನೆ

ವಿವಾದ ಮುಕ್ತ ಜಮೀನಿನಲ್ಲಿ ಯೋಜನೆ ಪ್ರಾರಂಭ ಮಾಡಲು ಸಕಲ ತಯಾರಿ ನಡೆದಿದ್ದು, ಇನ್ನೆರಡು ತಿಂಗಳ ಒಳಗಾಗಿ ಯೋಜನೆಗೆ ಅಧಿಕೃತ ಚಾಲನೆ ದೊರಕಲಿದೆ, ಕಾಮಗಾರಿ ಪ್ರಾರಂಭವಾದ 27 ತಿಂಗಳ ಒಳಗಾಗಿ ಕಾಮಗಾರಿಯನ್ನು ಮುಗಿಸುವ ಗುರಿಯನ್ನು ವಸತಿ ಇಲಾಖೆ ಅಧಿಕಾರಿಗಳು ಇರಿಸಿಕೊಂಡಿದ್ದಾರೆ.

English summary
Siddaramaiah's dream project house to poor is all set to begin after two years. Siddaramaiah announce and took cabinet approval on 2017 but still the project not started, It will start in two months saying officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X