ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#AskSiddaramaiah ಟ್ವೀಟರ್‌ನಲ್ಲಿ ಸಿದ್ದರಾಮಯ್ಯ ಸಂವಾದ

|
Google Oneindia Kannada News

ಬೆಂಗಳೂರು, ಮಾರ್ಚ್ 25 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಜನರೊಂದಿಗೆ ಟ್ವಿಟರ್‌ನಲ್ಲಿ ಸಂವಾದ ನಡೆಸಲಿದ್ದಾರೆ. #AskSiddaramaiah ಎಂಬ ಹ್ಯಾಷ್ ಟ್ಯಾಗ್ ಬಳಸಿ ಪ್ರಶ್ನೆಗಳನ್ನು ಜನರು ಕೇಳಬಹುದಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 26ರಂದು ಟ್ವಿಟರ್‌ನಲ್ಲಿ ಜನರ ಜೊತೆ ಸಂವಾದ ನಡೆಸಲಿದ್ದಾರೆ. ಜನರ ಪ್ರಶ್ನೆಗೆ ಉತ್ತರಿಸಲಿದ್ದಾರೆ.

ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ 10 ಪ್ರಶ್ನೆಗಳುಯಡಿಯೂರಪ್ಪನವರಿಗೆ ಸಿದ್ದರಾಮಯ್ಯ 10 ಪ್ರಶ್ನೆಗಳು

Siddaramaiah will be live on twitter on March 26

ಮಾರ್ಚ್ 26 ರಂದು ಮಧ್ಯಾಹ್ನ 2.30ಕ್ಕೆ ಟ್ವಿಟ್ಟರ್ ಲೈವ್‌ ಬರಲಿದ್ದು ನಿಮ್ಮೊಂದಿಗೆ ಸಂವಾದ ನಡೆಸಲಿದ್ದೇನೆ. ನಿಮ್ಮ ಪ್ರಶ್ನೆಗಳನ್ನು #AskSiddaramaiah ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಕೇಳಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು @siddaramaiah ಖಾತೆ ಮೂಲಕ ಟ್ವಿಟರ್‌ನಲ್ಲಿ ಸಕ್ರಿಯವಾಗಿದ್ದಾರೆ. ದಿನನಿತ್ಯದ ಕಾರ್ಯಕ್ರಮಗಳ ಬಗ್ಗೆ ಅವರು ಈ ಖಾತೆ ಮೂಲಕ ಮಾಹಿತಿ ಹಂಚಿಕೊಳ್ಳುತ್ತಾರೆ.

ಬಿಜೆಪಿಯವರಿಗೆ ಪೈಪೋಟಿ ನೀಡುವಂತೆ ಅವರು ಟ್ವಿಟರ್ ಬಳಕೆ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಹಲವು ಪ್ರಶ್ನೆಗಳನ್ನು ಅವರು ಟ್ವಿಟರ್ ಮೂಲಕವೇ ಕೇಳಿದ್ದಾರೆ.

ಸಿದ್ದರಾಮಯ್ಯ ಅವರು ಇದುವರೆಗೂ 2222 ಟ್ವೀಟ್‌ಗಳನ್ನು ಮಾಡಿದ್ದಾರೆ. 74 ಜನರನ್ನು ಅವರು ಫಾಲೋ ಮಾಡುತ್ತಿದ್ದು, 206ಕೆ ಹಿಂಬಾಲಕರನ್ನು ಹೊಂದಿದ್ದಾರೆ.

English summary
Former Chief Minister Siddaramaiah will be live on twitter on March 26, 2019 from 2.30PM. People can tweet questions with the hashtag #AskSiddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X