ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಢನಂಬಿಕೆ ವಿರೋಧಿ ಕಾಯ್ದೆ ಮೇಲೆ ಆಸೆ, ಚುನಾವಣೆ ಬಗ್ಗೆ ಪ್ರೀತಿ

By Sachhidananda Acharya
|
Google Oneindia Kannada News

ಬೆಂಗಳೂರು, ಜುಲೈ 3: 2018ರ ಚುನಾವಣೆಗೂ ಮೊದಲು ಮೂಢನಂಬಿಕೆ ವಿರೋಧಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಻ಅಭಿಲಾಷೆ. ಆದರೆ ಈ ಕಾಯ್ದೆಯನ್ನು ವಿರೋಧಿಸುವ ವಿಪಕ್ಷಗಳಿಂದಾಗಿ ಎಲ್ಲಿ ಚುನಾವಣೆಗೆ ಮುಳುವಾಗುತ್ತದೋ ಎಂಬುದು ಸಿದ್ದರಾಮಯ್ಯನವರ ಆತಂಕವಾಗಿದೆ.

ವಿಪಕ್ಷಗಳ ಜತೆಗೆ ಸ್ವಪಕ್ಷಗಳ ನಾಯಕರೂ ಇದನ್ನು ವಿರೋಧಿಸುತ್ತಿರುವುದು ಸಿದ್ದರಾಮಯ್ಯನರ ಕನಸಿನ ಮೂಢನಂಬಿಕೆ ವಿರೋಧಿ ಕಾಯ್ದೆಗೆ ಗಂಡಾಂತರ ತಂದಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಿಚ್ಚಳ ಬಹುಮತ!2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಿಚ್ಚಳ ಬಹುಮತ!

Siddaramaiah wants to table ‘Anti-superstition Bill’ before 2018 Elections

ಎಲ್ಲಿ ಮೂಢನಂಬಿಕೆ ವಿರೋಧಿ ಕಾಯ್ದೆ ತಂದರೆ ಜನ ಒಪ್ಪಿಕೊಳ್ಳದೆ ತಮ್ಮ ಮತಗಳಿಗೆ ಕುತ್ತು ಬೀಳುವುದೋ ಎಂಬುದು ಕಾಂಗ್ರೆಸ್ ನಾಯಕರ ಆತಂಕವಾಗಿದೆ. ಈ ಕಾರಣಕ್ಕೆ ಕಾಂಗ್ರೆಸ್ ನಾಯಕರೇ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ.

ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ವಿಧಾನಸಭೆ ಮುಂದೆ ಮಂಡಿಸಲು ಸರಕಾರ ಸಿದ್ಧತೆ ಮಾಡಿಕೊಂಡಿದೆ. ಆದರೆ ಈ ಕುರಿತು ಹೇಳಿಕೆ ನೀಡಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕೆಲವು ವರ್ಗದವರು ಇದನ್ನು ವಿರೋಧಿಸುತ್ತಿದ್ದಾರೆ. ಈ ರೀತಿಯಾದರೆ ಸಾಧ್ಯವಿಲ್ಲ. ದೊಡ್ಡ ಬೆಂಬಲ ಸಿಕ್ಕಿದರೆ ಮಾತ್ರ ಈ ಕಾಯ್ದೆ ಜಾರಿಗೆ ತರಬಹುದು ಎಂದು ಹೇಳಿದ್ದಾರೆ.

ಕೋಡಿಶ್ರೀಗಳು ನುಡಿದ ಭವಿಷ್ಯವೇನು: ಕುಮಾರಸ್ವಾಮಿ ಮುಂದಿನ ಸಿಎಂ?ಕೋಡಿಶ್ರೀಗಳು ನುಡಿದ ಭವಿಷ್ಯವೇನು: ಕುಮಾರಸ್ವಾಮಿ ಮುಂದಿನ ಸಿಎಂ?

"ಮೂಢನಂಬಿಕೆ ವಿರೋಧಿ ಕಾಯ್ದೆ ಜಾರಿಗೆ ತರುವುದು ಅಧಿಕಾರಕ್ಕೆ ಬಂದಂದಿನಿಂದ ಸಿದ್ದರಾಮಯ್ಯನವರ ಕನಸಾಗಿದೆ. ಜಾರಿಗೆ ತರುವುದು ಕಷ್ಟ ಎಂಬ ಕಾರಣಕ್ಕೆ ಮೂಲ ಕಾಯ್ದೆಯಿಂದ ಒಂದಷ್ಟು ಅಂಶಗಳನ್ನು ತೆಗೆದಿದ್ದೇವೆ. ಮಡೆ ಸ್ನಾನ, ಜ್ಯೋತಿಷ್ಯ, ಪ್ರಾಣಿ ಬಲಿಯಂಥ ಕೆಲವು ಪ್ರಮುಖ ಅಂಶಗಳನ್ನು ಕೈಬಿಟ್ಟಿದ್ದೇವೆ," ಎಂದು ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

English summary
Chief Minister of Karnataka Siddaramaiah wants to table ‘Anti-superstition Bill’ before the 2018 Assembly Elections. But this bill is facing resistance once again from the opposition and several Congress leaders also opposing the Bill as they fear it would alienate their voters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X