• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನಾರ್ದನ ಹೋಟೆಲ್‌ನಲ್ಲಿ ಬಿಸಿ-ಬಿಸಿ ದೋಸೆ ಸವಿದ ಸಿದ್ದರಾಮಯ್ಯ

|
   ಬೆಂಗಳೂರಿನ ಜನಾರ್ಧನ ಹೋಟೆಲ್ ಗೆ ಸಿದ್ದರಾಮಯ್ಯ ಭೇಟಿ | Oneindia Kannada

   ಬೆಂಗಳೂರು, ಅಕ್ಟೋಬರ್ 10 : ಮೂರು ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಕಾಂಗ್ರೆಸ್ ಪಕ್ಷದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಇದರ ನಡುವೆಯೇ ಸಿದ್ದರಾಮಯ್ಯ ಮತ್ತು ಇತರ ನಾಯಕರು ಜನಾರ್ದನ ಹೋಟೆಲ್‌ನಲ್ಲಿ ದೋಸೆ ಸವಿದರು.

   ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಮುಂತಾದವರು ಮಂಗಳವಾರ ರಾತ್ರಿ ಶಿವಾನಂದ ಸರ್ಕಲ್ ಬಳಿ ಇರುವ ಜನಾರ್ದನ ಹೋಟೆಲ್‌ನಲ್ಲಿ ದೋಸೆ ತಿಂದರು.

   ಜನಾರ್ಧನ ಹೋಟೆಲ್ ನಲ್ಲಿ ಉಪಹಾರ ಸ್ವೀಕರಿಸಿದ ಸಿದ್ದರಾಮಯ್ಯ

   ಜನಾರ್ದನ ಹೋಟೆಲ್ ಸಿದ್ದರಾಮಯ್ಯ ಅವರ ಬಹಳ ಇಷ್ಟದ ಹೋಟೆಲ್. ಮುಖ್ಯಮಂತ್ರಿಯಾಗಿದ್ದಾಗಲೂ ಅಲ್ಲಿಗೆ ಆಗಾಗ ಭೇಟಿ ನೀಡುತ್ತಿದ್ದರು. ಹೋಟೆಲ್‌ನಲ್ಲಿ ಮನಸಾಲೆ ದೋಸೆ ತಿಂದು, ಕಾಫಿ ಕುಡಿದು ಸಿಬ್ಬಂದಿಗಳ ಜೊತೆ ಅವರು ಮಾತುಕತೆಯನ್ನುನಡೆಸಿದರು.

   ಮಲ್ಲೇಶ್ವರದ ಸಿಟಿಆರ್ ನ ಬೆಣ್ಣೆ ಮಸಾಲೆ, ಮಂಗಳೂರು ಬಜ್ಜಿಗೆ ಸಾಟಿ ಎಲ್ಲಿದೆ?

   ದೋಸೆ ತಿಂದ ಬಳಿಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಜೊತೆ ನಾಯಕರು ಸಭೆ ನಡೆಸಿದರು. ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಕ್ಷೇತ್ರದ ಉಪ ಚುನಾವಣೆ, ರಾಮನಗರ, ಜಮಖಂಡಿ ವಿಧಾನಸಭೆ ಚುನಾವಣೆ ಕುರಿತು ಚರ್ಚೆ ನಡೆಸಿದರು.

   ಶೀಘ್ರದಲ್ಲೇ ಬದಲಾಗಲಿದೆ ಇಂದಿರಾ ಕ್ಯಾಂಟೀನ್ ಮೆನು

   ಸರಣಿ ಸಭೆಗಳು

   ಸರಣಿ ಸಭೆಗಳು

   ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ಬಂದಿದ್ದಾರೆ. ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸರಣಿ ಸಭೆಗಳು ನಡೆದವು. ಎಲ್ಲಾ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸಿದ್ದರಾಮಯ್ಯ ಅವರು ಜನಾರ್ದನ ಹೋಟೆಲ್‌ನಲ್ಲಿ ದೋಸೆ ಸವಿದರು.

   ಮಸಾಲೆ ದೋಸೆ, ಈರುಳ್ಳಿ ದೋಸೆ

   ಮಸಾಲೆ ದೋಸೆ, ಈರುಳ್ಳಿ ದೋಸೆ

   ಕೆ.ಸಿ.ವೇಣುಗೋಪಾಲ್, ಡ್ಯಾನಿಷ್ ಅಲಿ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಅವರು ಜೊತೆಗಿದ್ದರು. ಹೋಟೆಲ್‌ನಲ್ಲಿ ಮಸಾಲೆ ದೋಸೆ ಸವಿದ ಸಿದ್ದರಾಮಯ್ಯ ಅವರು ಕಾಫಿ ಕುಡಿದರು. ದಿನೇಶ್ ಗುಂಡೂರಾವ್, ವೇಣುಗೋಪಾಲ್ ಅವರು ಸಹ ದೋಸೆ ತಿಂದರು.

   ಸಿದ್ದರಾಮಯ್ಯ ಇಷ್ಟದ ಹೋಟೆಲ್

   ಸಿದ್ದರಾಮಯ್ಯ ಇಷ್ಟದ ಹೋಟೆಲ್

   ಜನಾರ್ದನ ಹೋಟೆಲ್ ಸಿದ್ದರಾಮಯ್ಯ ಅವರ ಇಷ್ಟದ ಹೋಟೆಲ್‌ಗಳಲ್ಲಿ ಒಂದು. ಹಲವಾರು ವರ್ಷಗಳಿಂದ ಅವರು ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿನ ಸಿಬ್ಬಂದಿಗಳ ಪರಿಚಯವೂ ಅವರಿಗೆ ಚೆನ್ನಾಗಿ ಇದೆ. ಮುಖ್ಯಮಂತ್ರಿಯಾಗಿದ್ದಾಗಲೂ ಹಲವು ಬಾರಿ ಹೋಟೆಲ್‌ಗೆ ಭೇಟಿ ನೀಡಿದ್ದರು.

   ಜನವರಿಯಲ್ಲಿ ಬಂದಿದ್ದರು

   ಜನವರಿಯಲ್ಲಿ ಬಂದಿದ್ದರು

   2018ರ ಜನವರಿ 26ರಂದು ಸಿದ್ದರಾಮಯ್ಯ ಅವರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಜನಾರ್ದನ ಹೋಟೆಲ್‌ಗೆ ಭೇಟಿ ನೀಡಿದ್ದರು. ಆಗ ಅವರು ಮುಖ್ಯಮಂತ್ರಿಯಾಗಿದ್ದರು. ಈಗ ಮಾಜಿ ಮುಖ್ಯಮಂತ್ರಿಯಾಗಿ ಭೇಟಿ ನೀಡಿದ್ದಾರೆ.

   ದೋಸೆ ಸವಿದ ಕ್ಷಣಗಳು

   ಸಿದ್ದರಾಮಯ್ಯ ಅವರು ದೋಸೆ ಸವಿದ ಬಗ್ಗೆ ಟ್ವೀಟ್ ಮಾಡಿದ್ದಾರೆ

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Former Chief Minister of Karnataka Siddaramaiah visited the Janardhana hotel near Shivananda circle, Bengaluru on October 9, 2018 night. Along with KPCC president Dinesh Gundu Rao he taste Masala dose.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more