ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ನಡೆದಿದ್ದು ಏನು?: ಸಿದ್ದರಾಮಯ್ಯ ಕೊಟ್ಟರು ಉತ್ತರ

|
Google Oneindia Kannada News

Recommended Video

ದೆಹಲಿಯಲ್ಲಿ ನಡೆದಿದ್ದು ಏನು?: ಸಿದ್ದರಾಮಯ್ಯ ಕೊಟ್ಟರು ಉತ್ತರ | Oneindia Kannada

ನವದೆಹಲಿ, ಜೂನ್ 21: ಪ್ರಸ್ತುತ ಮೈತ್ರಿ ಸರ್ಕಾರದ ನಡುವೆ ಎದ್ದಿರುವ ಹೊಸ ಭಿನ್ನಾಭಿಪ್ರಾಯ ಏಳಲು ಮೂಲ ಕಾರಣ ಸಿದ್ದರಾಮಯ್ಯ ಅವರ ದೆಹಲಿ ಭೇಟಿ. ಆದರೆ ಅಂದಿನ ಭೇಟಿಯ ಕಾರಣವನ್ನು ಸಿದ್ದರಾಮಯ್ಯ ಅವರು ಹೊರಗೆಡವುವ ಮೂಲಕ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ಕೆಲವು ದಿನಗಳ ಹಿಂದೆ ಮೂರು ದಿನಗಳ ಕಾಲ ದೆಹಲಿಯಲ್ಲಿ ಠಿಕಾಣಿ ಹೂಡಿದ್ದರು. ಜೂನ್ 19 ರಂದು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಹಲವು ಚರ್ಚೆಗಳನ್ನು ಮಾಡಿದ್ದರು. ಆ ಚರ್ಚೆಯೇ ಜೆಡಿಎಸ್-ಕಾಂಗ್ರೆಸ್ ನಡುವೆ ಅನುಮಾನದ ಬೀಜ ಬಿತ್ತಿರುವುದು.

ನಾವೇನೂ ಏಕಾಏಕಿ ಸರ್ಕಾರ ಮಾಡಿಲ್ಲ: ದಿನೇಶ್ ಗುಂಡೂರಾವ್ನಾವೇನೂ ಏಕಾಏಕಿ ಸರ್ಕಾರ ಮಾಡಿಲ್ಲ: ದಿನೇಶ್ ಗುಂಡೂರಾವ್

ಸಿದ್ದರಾಮಯ್ಯ ಅವರು ರಾಹುಲ್ ಅವರಿಗೆ ಜೆಡಿಎಸ್‌ ಬಗ್ಗೆ ದೂರು ನೀಡಿದ್ದಾರೆ. ಜೆಡಿಎಸ್ ಜೊತೆ ಮೈತ್ರಿಯಿಂದ ಕಾಂಗ್ರೆಸ್‌ಗೆ ತೊಂದರೆಯೇ ಆಗುತ್ತಿದೆ, ಇದಕ್ಕೆ ಲೋಕಸಭೆ ಚುನಾವಣೆ ಫಲಿತಾಂಶ ಕಾರಣ ಎಂದು ಸಿದ್ದರಾಮಯ್ಯ ಅವರು ರಾಹುಲ್‌ ಅವರಿಗೆ ವರದಿ ನೀಡಿದ್ದಾರೆ ಎಂದು ಬಹುತೇಕ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ದೇವೇಗೌಡ ಸುದ್ದಿಗೋಷ್ಠಿ ನಡೆಸುವಂತಾಗಿತ್ತು

ದೇವೇಗೌಡ ಸುದ್ದಿಗೋಷ್ಠಿ ನಡೆಸುವಂತಾಗಿತ್ತು

ಈ ಸುದ್ದಿಗಳಿಂದಲೇ ಜೆಡಿಎಸ್-ಕಾಂಗ್ರೆಸ್‌ ನಡುವೆ ಅನುಮಾನಗಳು ಇನ್ನಷ್ಟು ಹೆಚ್ಚಾಗಿ, ದೇವೇಗೌಡ ಅವರು ಸುದ್ದಿಗೋಷ್ಠಿ ಮಾಡಬೇಕಾಗಿ ಬಂತು. 'ಕಾಂಗ್ರೆಸ್ ನಮ್ಮ ಬಳಿ ಸರ್ಕಾರ ರಚಿಸಲು ಬಂದಿತ್ತೇ ವಿನಃ ನಾನು ಹೋಗಿರಲಿಲ್ಲ' ಎಂದು ಆಕ್ರೋಶದ ನುಡಿಗಳನ್ನಾಡುವಂತೆ ಮಾಡಿತ್ತು. ಇದಕ್ಕೆ ದಿನೇಶ್ ಗುಂಡೂರಾವ್, ಪರಮೇಶ್ವರ್ ಸಹ ಸಿಟ್ಟಿನ ಪ್ರತಿಕ್ರಿಯೆಯನ್ನೇ ನೀಡಿದರು.

ವಿರೋಧಿಗಳಿಗೆ ಗೌಡ್ರ ಕೇರಂ ಆಟ ಅರ್ಥವೇ ಆಗುವುದಿಲ್ಲ: ವೈ ಎಸ್ ವಿ ದತ್ತ ವಿರೋಧಿಗಳಿಗೆ ಗೌಡ್ರ ಕೇರಂ ಆಟ ಅರ್ಥವೇ ಆಗುವುದಿಲ್ಲ: ವೈ ಎಸ್ ವಿ ದತ್ತ

ವಾತಾವರಣ ತಿಳಿಗೊಳಿಸಲು ಸಿದ್ದರಾಮಯ್ಯ ಯತ್ನ

ವಾತಾವರಣ ತಿಳಿಗೊಳಿಸಲು ಸಿದ್ದರಾಮಯ್ಯ ಯತ್ನ

ಆದರೆ ಈಗ ಉದ್ವೇಗದ ವಾತಾವರಣವನ್ನು ತಿಳಿಗೊಳಿಸಲು ಸ್ವತಃ ಸಿದ್ದರಾಮಯ್ಯ ಅವರು ಕೈಹಾಕಿದ್ದು, ಟ್ವಿಟ್ಟರ್‌ ಮೂಲಕ ದೆಹಲಿ ಭೇಟಿ ಮಾಡಿದ ವಿವರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮಾಧ್ಯಮಗಳಿಗೆ ಬದ್ಧತೆಯ ಪಾಠವನ್ನೂ ಮಾಡಿದ್ದಾರೆ.

'ರಾಹುಲ್ ಜೊತೆ ಪಕ್ಷ ಸಂಘಟನೆಯ ಮಾತನಾಡಿದ್ದೆ ಅಷ್ಟೆ'

'ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಪಕ್ಷ ಸಂಘಟನೆಯ ಬಗ್ಗೆ ಮಾತುಕತೆ ನಡೆಸಿದ್ದೆ, ಆದರೆ ಮಾಧ್ಯಮಗಳಲ್ಲಿ ರಾಜ್ಯ ಸರ್ಕಾರದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದೇನೆ ಎಂದು ತೋರಿಸಲಾಗಿದೆ' ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಮಧ್ಯಂತರ ಚುನಾವಣೆ ಬಗ್ಗೆ ದೇವೇಗೌಡರ ಹೇಳಿಕೆಗೆ ಎಚ್‌ಡಿಕೆ ಪ್ರತಿಕ್ರಿಯೆ ಮಧ್ಯಂತರ ಚುನಾವಣೆ ಬಗ್ಗೆ ದೇವೇಗೌಡರ ಹೇಳಿಕೆಗೆ ಎಚ್‌ಡಿಕೆ ಪ್ರತಿಕ್ರಿಯೆ

ರಾಜ್ಯ ಸರ್ಕಾರ ಸುಭದ್ರವಾಗಿದೆ: ಸಿದ್ದರಾಮಯ್ಯ

ರಾಜ್ಯ ಸರ್ಕಾರ ಸುಭದ್ರವಾಗಿದೆ. ಮುಂದಿನ ನಾಲ್ಕು ವರ್ಷಗಳು ಕೂಡ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ಆಡಳಿತ ನಡೆಸಲಿದೆ. ಈ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ಬೇರೆಯವರಿಗೆ ಏಕೆ ಈ ಬಗ್ಗೆ ಆಗಾಗ್ಗೆ ಅನುಮಾನ ಮೂಡುತ್ತದೋ ನನಗೆ ತಿಳಿಯದು ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳ ಮೇಲೆ ಬೇಸರ

ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳ ಮೇಲೆ ಬೇಸರ

ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಎಲ್ಲೋ ಕುಳಿತು ಊಹೆಯ ಆಧಾರದ ಮೇಲೆ ಸುದ್ದಿ ಪ್ರಸಾರ ಮಾಡುವುದು ತಪ್ಪಲ್ಲವೇ? ಈ ರೀತಿಯ ಕಟ್ಟು ಕತೆ, ಊಹೆಗಳು ಇಂದಿನ ಪತ್ರಿಕೋದ್ಯಮಕ್ಕೆ ಮಾರಕವಾದುದ್ದು ಎಂದು ಆತಂಕವನ್ನು ಹೊರಹಾಕಿದ್ದಾರೆ.

English summary
Siddaramaiah tweeted and said, false news spread about my Delhi visit. I talked to Rahul Gandhi about state politics, not given any complaint about state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X