ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ತಪ್ಪು ಉಚ್ಚಾರಣೆ: ರಾಹುಲ್ ಆಯ್ತು ಈಗ ಮೋದಿ ಸರದಿ

|
Google Oneindia Kannada News

Recommended Video

ನರೇಂದ್ರ ಮೋದಿ ಕನ್ನಡದಲ್ಲಿ ತಪ್ಪು ಮಾತಾಡಿದ್ದಕ್ಕೆ ಸಿದ್ದರಾಮಯ್ಯ ಏನಂದ್ರು ಗೊತ್ತಾ? | Oneindia Kannada

ಬೆಂಗಳೂರು, ಮೇ 1: ಈ ಹಿಂದೆ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕನ್ನಡದ ಪದಗಳನ್ನು ಉಚ್ಚಾರ ಮಾಡಲು ಹೆಣಗಾಡಿದ್ದು ಲೇವಡಿಗೆ ಗುರಿಯಾಗಿತ್ತು. ಈಗ ಆ ಜಾಗಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಿದ್ದಾರೆ.

ಬಸವಣ್ಣನ ವಚನ 'ಇವನಾರವ ಇವನಾರವ. ಇವ ನಮ್ಮವ ಇವ ನಮ್ಮವ' ಎಂಬುದನ್ನು ರಾಹುಲ್, 'ಇವ ನರ್ವ ಇವ ನರ್ವ, ಇವ ನಮ್ವ, ಇವ ನಮ್ವ' ಎಂದು ತೊದಲುತ್ತಾ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.

ಅದರ ಬಳಿಕ ಕೆಲವೇ ದಿನಗಳಲ್ಲಿ ಮತ್ತೊಂದು ಭಾಷಣದಲ್ಲಿ ರಾಹುಲ್ ಗಾಂಧಿ, ಸರ್ ಎಂ. ವಿಶ್ವೇಶ್ವರಯ್ಯ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರುಗಳನ್ನು ಹೇಳಲು ತಡಕಾಡಿದ್ದರು. ಈ ಎರಡೂ ವಿಡಿಯೋಗಳನ್ನು ರಾಹುಲ್ ಗಾಂಧಿ ಅವರನ್ನು ಟೀಕಿಸಲು ವ್ಯಾಪಕವಾಗಿ ಬಳಸಲಾಗಿತ್ತು.

'ಕನ್ನಡಿಗ' ಮೋದಿಗೆ ಮತ್ತೆ ಪಂಚ ಪ್ರಶ್ನೆ ಕೇಳಿದ ಸಿದ್ದರಾಮಯ್ಯ'ಕನ್ನಡಿಗ' ಮೋದಿಗೆ ಮತ್ತೆ ಪಂಚ ಪ್ರಶ್ನೆ ಕೇಳಿದ ಸಿದ್ದರಾಮಯ್ಯ

ಕನ್ನಡ ತಪ್ಪು ತಪ್ಪಾಗಿ ಉಚ್ಚಾರ ಮಾಡಿದ್ದ ರಾಹುಲ್ ಗಾಂಧಿ, ವಿರೋಧಿಗಳ ಲೇವಡಿಗೆ ಗುರಿಯಾಗಿದ್ದರು. ಹೊರ ರಾಜ್ಯಗಳ ನಾಯಕರು ಇಲ್ಲಿಗೆ ಬಂದಾಗ ಇಲ್ಲಿನ ಕೆಲವು ಜನಪ್ರಿಯ ಮಾತುಗಳನ್ನು ಅಥವಾ ಹೆಸರುಗಳನ್ನು ಹೇಳುವುದು ಸಾಮಾನ್ಯ.

ಇದೇ ರೀತಿ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದ ಕೆಲವು ಪದಗಳನ್ನು ಕನ್ನಡದಲ್ಲಿ ಉಚ್ಚರಿಸಿದ್ದಾರೆ. ಕೆಲವು ಪ್ರಸಿದ್ಧ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ. ಈ ಹೆಸರುಗಳನ್ನು ತಪ್ಪಾಗಿ ಉಚ್ಚರಿಸಿರುವ ಮೋದಿ, ವಿರೋಧಿಗಳ ಟೀಕೆಗೆ ಗುರಿಯಾಗಿದ್ದಾರೆ. ರಾಹುಲ್ ಅವರ ಕನ್ನಡವನ್ನು ಆಡಿಕೊಂಡಿದ್ದ ಬಿಜೆಪಿಗರಿಗೆ ಅದೇ ಈಗ ತಿರುಗುಬಾಣವಾಗಿದೆ.

ಕನ್ನಡಿಗನಾಗುವುದೆಂದರೆ...

ಕನ್ನಡಿಗನಾಗುವುದೆಂದರೆ ಎಂದು ಸರಣಿ ಟ್ವೀಟ್‌ಗಳನ್ನು ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ಅವರ ಕನ್ನಡವನ್ನು ಟೀಕಿಸಿ ಪೋಸ್ಟ್‌ ಒಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮೋದಿ 2+1 ಹೇಳಿಕೆಗೆ ಸಿದ್ದರಾಮಯ್ಯ ಟ್ವಿಟ್ಟರ್‌ ಪ್ರತಿಕ್ರಿಯೆಮೋದಿ 2+1 ಹೇಳಿಕೆಗೆ ಸಿದ್ದರಾಮಯ್ಯ ಟ್ವಿಟ್ಟರ್‌ ಪ್ರತಿಕ್ರಿಯೆ

ಕನ್ನಡಿಗನಾಗುವುದೆಂದರೆ ಖಂಡಿತಾ ಇದಲ್ಲ. ಇಂತಹ ಕನ್ನಡಿಗರಿಂದ ಕನ್ನಡವನ್ನು ರಕ್ಷಿಸಿ ಎಂದು ಮೋದಿ ಅವರನ್ನು ವ್ಯಂಗ್ಯವಾಡಿದ್ದಾರೆ.

ಚಾಮರಾಜನಗರದಲ್ಲಿ ಮೋದಿ ಅವರು ಮಾಡಿದ ಭಾಷಣದ ಅಂಶಗಳನ್ನು ಪ್ರಸ್ತಾಪಿಸಿರುವ ಮೀಮ್‌ ಅನ್ನು ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ. ಅದರಲ್ಲಿ ಮೋದಿ ಉಚ್ಚರಿಸಿರುವ ಕೆಲವು ಕನ್ನಡ ಪದಗಳು ಹೀಗಿವೆ.

ಭಗವಾನ್ ಮಂತೆಸ್ವಾಮಿ, ಮಲ ಮೇವದೇಸ್ವರ್, ಬಿಲ್ಲಿಗಿರಿ ರಂಗ, ಚಾಮರಾಜೇಶ್ವರ್, ಹಿಮ್ಮದ್ ಗೋಪಾಲಸ್ವಾಮಿ, ಎಲ್ಲಾ ದೇವರುಗಲಿಗ್ ನನ್ ಭಕ್ತಿಪೂರ್ವಕ್ ಪ್ರನಾಮ್‌ಗಳು.

ಸಿದ್ದರಾಮಯ್ಯಗೆ ತರಾಟೆ

ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಅವರ ವಿರೋಧಿಗಳು ಮತ್ತು ಮೋದಿ ಅಭಿಮಾನಿಗಳು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿ ಅವರು ಇದೇ ರೀತಿ ತಪ್ಪು ತಪ್ಪಾಗಿ ಕನ್ನಡ ಮಾತನಾಡುವಾಗ ಎಲ್ಲಿ ಹೋಗಿದ್ದಿರಿ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಇನ್ನು ಅನೇಕರು, ಕನ್ನಡದ ನೆಲದಲ್ಲೇ ನಿಂತು ಮರಾಠಿ ಬರುವುದಿಲ್ಲ ಕ್ಷಮಿಸಿ ಎಂದು ಹೇಳಿರುವ ನೀವು ಹೇಗೆ ಕನ್ನಡಿಗರಾಗುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರು, ಮೊದಲು ಕನ್ನಡದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಎಂದು ಸಲಹೆ ನೀಡಿದ್ದಾರೆ.

English summary
Chief Minister Siddaramaiah has shared a meme in twitter which trolled PM narendra Modi's kannada pronunciation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X