ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವೀಟ್ ನಲ್ಲಿ ಯೋಗಿಯನ್ನು ಎಳೆದ ಸಿದ್ದರಾಮಯ್ಯ: ದುಶ್ಯಾಸನನನ್ನು ನೆನಪಿಸಿದ ಬಿಜೆಪಿ

|
Google Oneindia Kannada News

Recommended Video

ಯೋಗಿ ಆದಿತ್ಯನಾಥ್ ರನ್ನ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ | ತಿರುಗೇಟು ಕೊಟ್ಟ ಬಿಜೆಪಿ

ಬೆಂಗಳೂರು, ಮಾರ್ಚ್ 7: ನಾಮ ಕಂಡರೆ ಭಯ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ದ ತಿರುಗಿ ಬಿದ್ದಿದ್ದ ಟ್ವಿಟ್ಟಿಗರು, ಸಾಕುಸಾಕು ಅನಿಸುವಷ್ಟು ತಿಲಕ ಹಾಕಿಕೊಂಡ ಫೋಟೋವಿರುವ ಪೋಸ್ಟುಗಳನ್ನು ಹಾಕಿದ್ದರು.

ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವಾಗ ಸಿದ್ದರಾಮಯ್ಯ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೂ ಎಳೆದು ತಂದಿದ್ದರು. ಇದಕ್ಕೆ ಟ್ವಿಟ್ಟಿಗರು ಖಾರವಾದ ಪ್ರತಿಕ್ರಿಯೆಯನ್ನು ನೀಡಿದ್ದರು.

Siddaramaiah tweet on Tilak and referring Yogi Adityanath name, BJP bounced back with Dushyashana stroy

'ನಾಮ' ಕಂಡರೆ ಭಯವೆಂದ ಸಿದ್ದು ವಿರುದ್ಧ #SelfieWithTilak ಅಸ್ತ್ರ'ನಾಮ' ಕಂಡರೆ ಭಯವೆಂದ ಸಿದ್ದು ವಿರುದ್ಧ #SelfieWithTilak ಅಸ್ತ್ರ

ಸಿದ್ದರಾಮಯ್ಯನವರ ಈ ಪೋಸ್ಟಿಗೆ ಬಿಜೆಪಿ ತಿರುಗೇಟು ನೀಡಿದೆ. ಬಿಜೆಪಿ ಮಾಡಿರುವ ಟ್ವೀಟ್ ಹೀಗಿದೆ, "ಕರ್ನಾಟಕದಲ್ಲಿ ಒಬ್ಬರು ಬಿಳಿ ಅಂಗಿ ಬಿಳಿ ಪಂಚೆ ತೊಟ್ಟ ಮಾಜಿ ಮುಖ್ಯಮಂತ್ರಿ ಒಬ್ಬರು ಇದ್ದಾರೆ ನೋಡೋಕೆ ತುಂಬಾ ಸಂಭಾವಿತರ ರೀತಿ ಕಾಣುತ್ತಾರೆ ಆದರೆ ಸಭೆ ಸಮಾರಂಭಗಳಲ್ಲಿ ದುಶ್ಯಾಸನ ತರ ಹೆಣ್ಣುಮಕ್ಕಳ ಸೆರಗು ಎಳೆಯುತ್ತಾರೆ, ಸಾಮಾನ್ಯರ ತರ ಕಾಣುತ್ತಾರೆ ಆದರೆ ಕೋಟಿ ಬೆಲೆ ಬಾಳೋ ವಾಚ್ ಕಟ್ಟುತ್ತಾರೆ, ಯಾರಿವರು ಗೊತ್ತೇ?"

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ತನ್ನನ್ನು ಮೇಜುಕುಟ್ಟಿ ಪ್ರಶ್ನಿಸಿದ್ದ ಮಹಿಳೆಯ ವಿರುದ್ದ ಸಿಟ್ಟಾಗಿ ಸಿದ್ದರಾಮಯ್ಯ ಆಕೆಯಿಂದ ಮೈಕ್ ಎಳೆದುಕೊಂಡರು, ಆಗ ಅಚಾನಕ್ಕಾಗಿ, ಮೈಕ್ ಜೊತೆ ಮಹಿಳೆಯ ಸೆರಗೂ ಬಂದಿತ್ತು. ಇದು ರಾಷ್ಟ್ರ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು.

ತಿಲಕದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯತಿಲಕದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

ಈ ಘಟನೆಯನ್ನು ಪರೋಕ್ಷವಾಗಿ ಬಿಜೆಪಿಯವರು ಎಳೆದು ತಂದಿದ್ದಾರೆ. ಬಿಜೆಪಿ ಟ್ವೀಟಿಗೆ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ತಿಲಕ, ಉದ್ದ ನಾಮ ಇಟ್ಟವರನ್ನು ಕಂಡರೆ ನನಗೆ ಭಯವಾಗುತ್ತೆ ಎಂದು ಸಿದ್ದರಾಮಯ್ಯ ಹೇಳಿದ ಮಾತನ್ನು ಇಟ್ಟುಕೊಂಡು ಬಿಜೆಪಿ #selfiewiththilak ಎಂಬ ಅಭಿಯಾನವನ್ನು ಟ್ವಿಟ್ಟರ್ ನಲ್ಲಿ ನಡೆಸಿತ್ತು.

'ಉತ್ತರ ಪ್ರದೇಶದಲ್ಲೊಬ್ಬರು @BJP4India ಮುಖ್ಯಮಂತ್ರಿ ಇದ್ದಾರೆ. ಮೈತುಂಬಾ ಕಾವಿ ಬಟ್ಟೆ, ಮುಖತುಂಬಾ ಕುಂಕುಮ ಬಳಿದುಕೊಳ್ಳುತ್ತಾರೆ. ಆದರೆ ಅವರ ವಿರುದ್ಧ ಹತ್ತಾರು ಕ್ರಿಮಿನಲ್ ಕೇಸ್ ಗಳಿವೆ. ಈ ಕುಂಕುಮಧಾರಿಯನ್ನು ನೋಡಿದಾಗ ಜನರಿಗೆ ಭಯ ಹುಟ್ಟದೆ, ಗೌರವ ಹುಟ್ಟುತ್ತಾ?@INCKarnataka' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

English summary
Former CM Siddaramaiah tweet on Tilak and referring UP CM Yogi Adityanath name, BJP bounced back with Dushyashana stroy of Mahabharatha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X