ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರು ಗಿಣಿ, ಯಾರು ಹದ್ದು: ಸಿದ್ದರಾಮಯ್ಯ ಟ್ವೀಟ್ ಸೂಚಿಸುತ್ತಿರುವುದು ಏನು?

|
Google Oneindia Kannada News

Recommended Video

ಹದ್ದು ಗಿಣಿ ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದು ಯಾರಿಗೆ ? | Oneindia Kannada

ಬೆಂಗಳೂರು, ಸೆಪ್ಟೆಂಬರ್ 24: ಉಪಚುನಾವಣೆ ಆರಂಭವಾಗುತ್ತಿದ್ದಂತೆ ಮಾಜಿ ಗೆಳೆಯರಾದ ಸಿದ್ದರಾಮಯ್ಯ-ಕುಮಾರಸ್ವಾಮಿ ನಡುವೆ ಮಾತಿನ ಯುದ್ಧ ಆರಂಭವಾಗಿದೆ.

ನಿನ್ನೆ ಮಾತನಾಡಿದ್ದ ಕುಮಾರಸ್ವಾಮಿ, 'ಸಿದ್ದರಾಮಯ್ಯ ಸಾಕಿದ ಗಿಣಿಗಳೇ ಹದ್ದಾಗಿ ಕುಕ್ಕಿದವು' ಎಂದು ಹೇಳಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ಅಕ್ಷರಸ: ಬೇಸ್ತು ಬೀಳುವಂತೆ ಮಾಡಿದ ಕುಮಾರಸ್ವಾಮಿ ಆರೋಪಸಿದ್ದರಾಮಯ್ಯ ಅಕ್ಷರಸ: ಬೇಸ್ತು ಬೀಳುವಂತೆ ಮಾಡಿದ ಕುಮಾರಸ್ವಾಮಿ ಆರೋಪ

'ಹೌದು ನಾನು ನಂಬಿದ ಗಿಣಿಗಳೇ ಹದ್ದಾಗಿ ಕಾಡಿದ್ದು ನಿಜ, ನಾಲ್ಕು ದಶಕಗಳ ರಾಜಕೀಯ ಒಡನಾಟದ ಅನುಭವದ ನಂತರವೂ ಹದ್ದನ್ನು ಗಿಣಿಯೆಂದು ಭ್ರಮಿಸಿ ಮೈತ್ರಿ ಮಾಡಿಕೊಂಡೆವು. ಕುಕ್ಕದೇ ಬಿಡುತ್ತಾ? ಅನುಭವಕ್ಕಿಂತ ದೊಡ್ಡ ಪಾಠ ಏನಿದೆ ಹೇಳಿ?' ಎಂದು ಕುಮಾರಸ್ವಾಮಿ ಅವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

Siddaramaiah Tweet Reply To Kumaraswamy

ಸಿದ್ದರಾಮಯ್ಯ ಅವರು ನಾಲ್ಕು ದಶಕದ ರಾಜಕೀಯ ಒಡನಾಟವನ್ನು ದೇವೇಗೌಡ ಕುಟುಂಬ ಹಾಗೂ ಜೆಡಿಎಸ್‌ನೊಂದಿಗೆ ಹೊಂದಿದ್ದರು, ಅವರ ರಾಜಕೀಯ ಶೈಲಿಯ ಬಗ್ಗೆ ಸಿದ್ದರಾಮಯ್ಯ ಅವರಿಗೆ ಅರಿವಿತ್ತು. ಹಾಗಿದ್ದೂ ಮೈತ್ರಿ ಮಾಡಿಕೊಂಡರು. ಇದೇ ವಿಷಯವನ್ನೇ ತಮ್ಮ ಟ್ವೀಟ್‌ನಲ್ಲಿ ಪರೋಕ್ಷವಾಗಿ ಪ್ರಸ್ತಾಪಿಸಿ ದೇವೇಗೌಡ ಕುಟುಂಬದ ರಾಜಕೀಯದ ಅರಿವಿದ್ದು ಮೈತ್ರಿ ಮಾಡಿಕೊಂಡಿದ್ದು ತಮ್ಮ ತಪ್ಪೇ ಎಂದು ಸಿದ್ದರಾಮಯ್ಯ ಸೂಚ್ಯವಾಗಿ ಹೇಳಿದ್ದಾರೆ.

ನನ್ನ ಸಿದ್ದರಾಮಯ್ಯ ನಡುವಿನ ಜಗಳಕ್ಕೆ ಸಾಕ್ಷ್ಯ ಕೊಡಿ: ಪರಮೇಶ್ವರ್ನನ್ನ ಸಿದ್ದರಾಮಯ್ಯ ನಡುವಿನ ಜಗಳಕ್ಕೆ ಸಾಕ್ಷ್ಯ ಕೊಡಿ: ಪರಮೇಶ್ವರ್

ಹೊಸಕೋಟೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಮಂಡ್ಯದಲ್ಲಿ ಜನರು ಸ್ವಾಭಿಮಾನಕ್ಕಾಗಿ ಮತ ಚಲಾಯಿಸಿದರು. ಅಲ್ಲಿ ಹಣ, ಜಾತಿಯನ್ನು ನೋಡಲಿಲ್ಲ' ಎಂದಿದ್ದರು. ಇದು ಕುಮಾರಸ್ವಾಮಿ ಅವರನ್ನು ಕೆರಳಿಸಿತ್ತು. 'ಮೈಸೂರು, ಕೋಲಾರ, ತುಮಕೂರಿನಲ್ಲಿ ಮೈತ್ರಿ ಸೋಲಲು ಸಿದ್ದರಾಮಯ್ಯ ಕಾರಣ' ಎಂದು ಕುಮಾರಸ್ವಾಮಿ ನಿನ್ನೆ ಆರೋಪಿಸಿದ್ದರು.

ಉಪ ಚುನಾವಣೆ; ಮಿಷನ್ 12 ಜೊತೆ ಕಣಕ್ಕಿಳಿದ ಸಿದ್ದರಾಮಯ್ಯ!ಉಪ ಚುನಾವಣೆ; ಮಿಷನ್ 12 ಜೊತೆ ಕಣಕ್ಕಿಳಿದ ಸಿದ್ದರಾಮಯ್ಯ!

ಉಪಚುನಾವಣೆ ಘೊಷಣೆಗೂ ಮುನ್ನಾ ಮಂದಗತಿಯಲ್ಲಿದ್ದ ಮಾಜಿ ಮೈತ್ರಿಗಳ ಕಚ್ಚಾಟ, ಚುನಾವಣೆ ಘೋಷಣೆ ನಂತರ ನಿಧಾನಕ್ಕೆ ಮೇಲೇರುತ್ತಿದ್ದು, ಇದರ ಲಾಭ ಬಿಜೆಪಿಗೆ ಆಗುತ್ತದೆಯೇ ನೋಡಬೇಕಿದೆ.

English summary
Former CM Siddaramaiah gave reply Kumaraswamy. Siddaramaiah said that congress should not join hands with jds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X