• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಾಕ್ ಡೌನ್: ಸಿದ್ದರಾಮಯ್ಯನವರ ಈ ಮಾತು ನೂರಕ್ಕೆ ನೂರು ಸತ್ಯ

|

ದೇಶಾದ್ಯಂತ ಮೂರನೇ ಹಂತದ ಲಾಕ್ ಡೌನ್ ಘೋಷಣೆಯಾಗಿದೆ. ಮೇ ನಾಲ್ಕರಿಂದ ಎರಡು ವಾರಗಳ ಕಾಲ ಇದು ವಿಸ್ತರಣೆಯಾಗಿದೆ. ಎಲ್ಲಾ ಮೂರು ವಿಭಾಗಗಳಲ್ಲಿ (ಗ್ರೀನ್, ಆರೆಂಜ್, ರೆಡ್) ಲಾಕ್ ಡೌನ್ ನಲ್ಲಿ ಕೆಲವೊಂದು ಸಡಿಲಿಕೆಯನ್ನು ಕೇಂದ್ರ ಸರಕಾರ ಘೋಷಿಸಿದೆ.

ಈಗಾಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ಘಟಕಗಳಿಂದ ಮೊದಲ ಹಂತದ ಬಸ್ ಸಂಚಾರ ಆರಂಭವಾಗಿ, ಪರ ಊರಿನಲ್ಲಿ ಸಿಲುಕಿಕೊಂಡಿರುವ ಜನರನ್ನು ಅವರವರ ಊರಿಗೆ ತಲುಪಿಸುವ ಕೆಲಸ ನಡೆದಿದೆ.

ಲಾಕ್ ಡೌನ್ 3.0: ಯಾವುದಕ್ಕೆ, ಎಲ್ಲೆಲ್ಲಿ ವಿನಾಯಿತಿ? ಗೊಂದಲವಿಲ್ಲದ ಮಾಹಿತಿ ಇಲ್ಲಿದೆ

ಎರಡನೇ ಹಂತದ ಲಾಕ್ ಡೌನ್ ನಲ್ಲಿ ಕೆಲವೊಂದು ನಿಯಮಗಳು ಸಡಿಲಿಕೆಯಾದರೂ, ಮೊದಲ ಹಂತದಲ್ಲಿ ಮಾತ್ರ ಕಟ್ಟುನಿಟ್ಟಿನ ಕ್ರಮಗಳನ್ನು ಸರಕಾರ ತೆಗೆದುಕೊಂಡಿತ್ತು. ಈ ವೇಳೆ ಕಾರ್ಮಿಕರು, ದಿನಗೂಲಿ ನೌಕರರ ಪಾಡು ಹೇಳತೀರದಂತಾಗಿತ್ತು.

ಇಂತಹ ಸಮಯದಲ್ಲಿ ಪ್ರಮುಖವಾಗಿ, ಒಂದು ಹೊತ್ತಿನ ಊಟಕ್ಕೂ ತೊಂದರೆಯಾಗುತ್ತಿದ್ದಂತಹ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ತೋರಿದ ಸಮಾಜಮುಖಿ ಕೆಲಸ ಮೆಚ್ಚುವಂತದ್ದು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈ ವಿಚಾರವನ್ನು ಟ್ವಿಟ್ಟರ್ ನಲ್ಲಿ ಪ್ರಸ್ತಾವಿಸಿದ್ದಾರೆ.

ಬೂದುಗುಂಬಳದಿಂದ ಆಗ್ರಾಪೇಟ; ತೀರ್ಥಹಳ್ಳಿ ರೈತರ ನಷ್ಟ ನೀಗಿದ ಹೊಸ ಐಡಿಯಾ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್

ಕಾರ್ಮಿಕರ ದಿನದಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು ಹೀಗೆ, "ಚುನಾಯಿತ ಪ್ರತಿನಿಧಿಗಳು, ಸಂಘ- ಸಂಸ್ಥೆಗಳು ಹಸಿದವರಿಗೆ ಅನ್ನ ನೀಡುವ ಕೆಲಸ ಮಾಡದೇ ಹೋಗಿದ್ದರೆ ರಾಜ್ಯದಲ್ಲಿ ಹಾಹಾಕಾರ ಉಂಟಾಗಿ, ಜನ ಬೀದಿಗಿಳಿದು ಹೋರಾಟ ಮಾಡುವಂತಾ ಸ್ಥಿತಿ ನಿರ್ಮಾಣವಾಗುತ್ತಿತ್ತು. ಅಂತಹ ಪರಿಸ್ಥಿತಿ ಎದುರಾಗದಂತೆ ಶ್ರಮಿಸಿದ ಎಲ್ಲರಿಗೂ ನಾನು ಕೃತಜ್ಞ.".

ಮೂರು ವಾರದ ಲಾಕ್ ಡೌನ್

ಮೂರು ವಾರದ ಲಾಕ್ ಡೌನ್

ಮೊದಲ ಹಂತದ ಅಂದರೆ ಮೂರು ವಾರದ ಲಾಕ್ ಡೌನ್ ವೇಳೆ, ಜನಪ್ರತಿನಿಧಿಗಳು, ಅವರ ಹಿಂಬಾಲಕರು, ಸಂಘ ಸಂಸ್ಥೆಗಳು ಮೂರೂ ಹೊತ್ತು ಊಟ ನೀಡುವ ಮೂಲಕ, ಹಸಿವು ನೀಗಿಸುವ ಕೆಲಸವನ್ನು ಮಾಡಿದ್ದವು. ಕಲ್ಯಾಣ ಮಂಟಪವನ್ನು ಬಾಡಿಗೆ ತೆಗೆದುಕೊಂಡು, ಪ್ಯಾಕೆಟ್ ಮೂಲಕ ಜನರಿಗೆ ಊಟವನ್ನು ವಿತರಿಸಿದ್ದವು.

ಊಟ, ತಿಂಡಿ, ಹಣ್ಣುಹಂಪಲು, ಮಾಸ್ಕ್ ವಿತರಿಸುವ ಕೆಲಸ

ಊಟ, ತಿಂಡಿ, ಹಣ್ಣುಹಂಪಲು, ಮಾಸ್ಕ್ ವಿತರಿಸುವ ಕೆಲಸ

ಸಿದ್ದರಾಮಯ್ಯ ಹೇಳಿದಂತೆ, ಒಂದು ವೇಳೆ ಸಂಘ ಸಂಸ್ಥೆಗಳು ಇಂತಕ ಕ್ಲಿಷ್ಟ ಸಮಯದಲ್ಲಿ ಕೈಜೋಡಿಸದೇ ಇದ್ದಿದ್ದರೆ, ರಾಜ್ಯದಲ್ಲಿ ನಿಜವಾಗಿಯೂ ಹಾಹಾಕಾರ ಉಂಟಾಗುತ್ತಿತ್ತು. ಒಂದೊಂದು ಪ್ರದೇಶದ ಜವಾಬ್ದಾರಿಯನ್ನು ತೆಗೆದುಕೊಂಡು, ಊಟ, ತಿಂಡಿ, ಹಣ್ಣುಹಂಪಲು, ಮಾಸ್ಕ್ ವಿತರಿಸುವ ಕೆಲಸವನ್ನು ಬಹುತೇಕ ಎಲ್ಲಾ ಕಡೆ ಅಚ್ಚುಕಟ್ಟಾಗಿ ಸಂಘ ಸಂಸ್ಥೆ, ಜನಪ್ರತಿನಿಧಿಗಳು ನಿರ್ವಹಿಸಿಕೊಂಡು ಬಂದರು.

ಮೊದಮೊದಲು ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ

ಮೊದಮೊದಲು ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ

ಮೊದಮೊದಲು ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ, ತಿಂಡಿ ನೀಡಿದ ಸರಕಾರ ನಂತರ ಅಕ್ರಮದ ಆರೋಪ ಕೇಳಿಬಂದ ನಿಂತರ, ಫ್ರೀ ಊಟ ನೀಡುವುದನ್ನು ನಿಲ್ಲಿಸಿತು. ಪ್ರಮುಖವಾಗಿ, ಸಾವಿರಾರು ಸಂಖ್ಯೆಯಲ್ಲಿ ಊಟ ಕೊಡುವ ಜನಪ್ರತಿನಿಧಿಗಳು/ಸಂಘ ಸಂಸ್ಥೆಗಳು, ನೇರವಾಗಿ ರೈತರ ಬಳಿಯಿಂದಲೇ ತರಕಾರಿ ಖರೀದಿಸಿದರು. ಇದರಿಂದ ಹಲವು ಕಡೆ ರೈತರ ಸಂಕಷ್ಟಕ್ಕೂ ನೆರವಾದಂತಾಯಿತು.

English summary
During Lock Down Food Served By Various Politicians And Organization: Siddaramaiah Tweet,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X