ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಸಿದ್ದರಾಮಯ್ಯ ಟ್ವೀಟ್: ಪರೋಕ್ಷ ಸಂದೇಶ ಡಿಕೆಶಿಗೆ?

|
Google Oneindia Kannada News

ಕಳೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ, ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ 2018ರಲ್ಲಿ ಅಧಿಕಾರಕ್ಕೆ ಬಂದಾಗಲೇ, ಕಳೆದ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆಯೂ ಮಾತುಕತೆ ನಡೆದಿತ್ತು ಎಂದು ಸುದ್ದಿಯಾಗಿತ್ತು.

ಬೆಂಗಳೂರು ಬಿಡುತ್ತಿರುವ ಜನರಿಗೆ ವಿಶ್ವಾಸ ತುಂಬಬೇಕಿತ್ತು. ಆದರೆ...ಬೆಂಗಳೂರು ಬಿಡುತ್ತಿರುವ ಜನರಿಗೆ ವಿಶ್ವಾಸ ತುಂಬಬೇಕಿತ್ತು. ಆದರೆ...

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಆಗಿನ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿಯ ನಡುವೆ, ಸಮ್ಮಿಶ್ರ ಸರಕಾರದ ರಚನೆಯ ವೇಳೆ ನಡೆಯುತ್ತಿದ್ದ ಮಾತುಕತೆಯಲ್ಲಿ ಈ ವಿಚಾರವನ್ನು ಗೌಡ್ರು ಪ್ರಸ್ತಾವಿಸಿದ್ದರು.

ಕರ್ನಾಟಕ ಬಿಜೆಪಿಯ ಒಳಗುಟ್ಟನ್ನು ಟ್ವೀಟ್ ಮೂಲಕ ಬಹಿರಂಗಗೊಳಿಸಿದ ಸಿದ್ದರಾಮಯ್ಯಕರ್ನಾಟಕ ಬಿಜೆಪಿಯ ಒಳಗುಟ್ಟನ್ನು ಟ್ವೀಟ್ ಮೂಲಕ ಬಹಿರಂಗಗೊಳಿಸಿದ ಸಿದ್ದರಾಮಯ್ಯ

ಬಿಜೆಪಿಯನ್ನು ಸೋಲಿಸಲು ಜೆಡಿಎಸ್-ಕಾಂಗ್ರೆಸ್ ಒಂದಾಗಿ, ಲೋಕಸಭಾ ಚುನಾವಣೆಗೆ ಹೋಗುವುದೇ ಸೂಕ್ತ. ಇದರಿಂದ ಮತ ವಿಭಜನೆಯಾಗುವುದು ತಪ್ಪುತ್ತದೆ ಎನ್ನುವುದು ರಾಹುಲ್ ಗಾಂಧಿಯ ಬಲವಾದ ನಂಬಿಕೆಯಾಗಿತ್ತು. ಮೈತ್ರಿ ಬಗ್ಗೆ ಸಿದ್ದರಾಮಯ್ಯ ನೇರವಾಗಿ ಹದಿನಾಲ್ಕು ತಿಂಗಳ ನಂತರ ಬೇಸರ ವ್ಯಕ್ತ ಪಡಿಸಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ

ಜೆಡಿಎಸ್-ಕಾಂಗ್ರೆಸ್ ಮೈತ್ರಿ

ಜೆಡಿಎಸ್-ಕಾಂಗ್ರೆಸ್ ಮೈತ್ರಿಯಂತೆ, ಕಾಂಗ್ರೆಸ್ 22 ಮತ್ತು ಜೆಡಿಎಸ್ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಕಾಂಗ್ರೆಸ್ಸಿನಿಂದ ಡಿ.ಕೆ.ಸುರೇಶ್ ಮತ್ತು ಜೆಡಿಎಸ್ಸಿನಿಂದ ಪ್ರಜ್ವಲ್ ರೇವಣ್ಣ ಗೆದ್ದದ್ದನ್ನು ಬಿಟ್ಟರೆ, ಎರಡೂ ಪಕ್ಷಗಳು ಬಿಜೆಪಿಯ ಎದುರು ತೀವ್ರ ಮುಖಭಂಗ ಎದುರಿಸಿತ್ತು.

ದಿನೇಶ್ ಗುಂಡೂರಾವ್ ಅಭಿಪ್ರಾಯ

ದಿನೇಶ್ ಗುಂಡೂರಾವ್ ಅಭಿಪ್ರಾಯ

ಕೆಪಿಸಿಸಿ ಅಧ್ಯಕ್ಷರ ಮತ್ತು ಕಾರ್ಯಾಧ್ಯಕ್ಷರ ಪದಗ್ರಹಣದ ವೇಳೆ, ನಿರ್ಗಮಿತ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ಕೂಡಾ ಮೈತ್ರಿ ಮಾಡಿಕೊಂಡಿದ್ದು ತಪ್ಪು ಎಂದು, ಸಭೆಯಲ್ಲಿ ನೇರವಾಗಿ ಹೇಳಿದ್ದರು. "ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಹೀನಾಯವಾಗಿ ಸೋಲಲು ಜೆಡಿಎಸ್‌ ಜೊತೆಗಿನ ಮೈತ್ರಿಯೇ ಕಾರಣ. ಮೈತ್ರಿ ಬೇಡ ಅಂತ ಸಿದ್ದರಾಮಯ್ಯ ಸಹ ಹೇಳಿದ್ದರು. ಆದರೂ ನಾವು ಮೈತ್ರಿಯಿಂದ ಚುನಾವಣೆ ಎದುರಿಸಿದ್ದೆವು. ಆದರೆ, ಜನರಿಗೆ ಇದು ಇಷ್ಟವಾಗಲಿಲ್ಲ" ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.

ಸಿದ್ದರಾಮಯ್ಯ ಬೇಸರ

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಚುನಾವಣಾಪೂರ್ವ ಮೈತ್ರಿ ಬೇಡ ಎಂದು ನಾನೂ ಹೇಳಿದ್ದೆ. ಇದರಿಂದ ನಿರೀಕ್ಷಿಸಿದ ಹಾಗೆ ಮತ ಧ್ರುವೀಕರಣ ಆಗುವುದಿಲ್ಲ ಎಂಬುದು ನನ್ನ ಲೆಕ್ಕಾಚಾರವಾಗಿತ್ತು. ಮೈತ್ರಿ ಮಾಡಿಕೊಳ್ಳದೆ ಇದ್ದಿದ್ದರೆ ಕನಿಷ್ಠ 7-8 ಸ್ಥಾನಗಳನ್ನು ಗೆಲ್ಲುತ್ತಿದ್ದೆವು" ಇದು ಅವರು ಮಾಡಿರುವ ಟ್ವೀಟ್.

ಡಿ.ಕೆ.ಶಿವಕುಮಾರ್ ಗೆ ಪರೋಕ್ಷ ಸಂದೇಶ

ಡಿ.ಕೆ.ಶಿವಕುಮಾರ್ ಗೆ ಪರೋಕ್ಷ ಸಂದೇಶ

ಕಳೆದ ಒಂದು ವಾರದಲ್ಲಿ ಕಾಂಗ್ರೆಸ್ಸಿನ ಇಬ್ಬರು ಹಿರಿಯ ಮುಖಂಡರು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು ತಪ್ಪು ಎನ್ನುವ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ನೂತನವಾಗಿ ಪದಗ್ರಹಣ ಮಾಡಿರುವ ಡಿ.ಕೆ.ಶಿವಕುಮಾರ್ ಗೆ ಈ ಮೂಲಕ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಸಂದೇಶ ಕಳುಹಿಸುತ್ತಿದ್ದಾರೆಯೇ ಎನ್ನುವುದಿಲ್ಲಿ ಪ್ರಶ್ನೆ.

English summary
Karnataka Opposition Leader Siddaramaiah Tweet On Aliance With JDS During Loksabha Election. Message To DK Shivakumar?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X