ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸಿ. ಟಿ. ರವಿಗೆ ಕನ್ನಡ ಪಾಠ ಮಾಡಿದ ಸಿದ್ದರಾಮಯ್ಯ

|
Google Oneindia Kannada News

Recommended Video

C T Ravi Tweet Against Opposition Leader Siddaramaiah | Oneindia Kannada

ಬೆಂಗಳೂರು, ಅಕ್ಟೋಬರ್ 20 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿರುವ ಸಚಿವರಿಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೂ ವಾಕ್ಸಮರ ನಡೆಯುತ್ತಿದೆ. ಬಿ. ಶ್ರೀರಾಮುಲು, ಸಿ. ಟಿ. ರವಿಗೆ ಸಿದ್ದರಾಮಯ್ಯ ಟ್ವೀಟ್ ಬಾಣ ಚುಚ್ಚಿದೆ.

"ಕೊಲೆಗೂ ಅಪಘಾತಕ್ಕೂ ವ್ಯತ್ಯಾಸ ತಿಳಿದಿಲ್ಲವೆಂದರೆ ಸಿದ್ದರಾಮಯ್ಯ ವಕೀಲರಾಗಲು ನಾಲಾಯಕ್" ಎಂದು ಶನಿವಾರ ಕಾರವಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ. ಟಿ. ರವಿ ಹೇಳಿದ್ದರು. ಸಿದ್ದರಾಮಯ್ಯ ಟ್ವೀಟ್ ಮೂಲಕ ಇದಕ್ಕೆ ಉತ್ತರ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಅಂಥಹವರು ಈ ಭೂಮಿ ಮೇಲೆ ಇರಬಾರದು: ಶ್ರೀರಾಮುಲುಸಿದ್ದರಾಮಯ್ಯ ಅಂಥಹವರು ಈ ಭೂಮಿ ಮೇಲೆ ಇರಬಾರದು: ಶ್ರೀರಾಮುಲು

ರಸ್ತೆ ಅಪಘಾತವೊಂದರ ವಿಚಾರದಲ್ಲಿ ಸಿದ್ದರಾಮಯ್ಯ, ಸಿ. ಟಿ. ರವಿ ನಡುವೆ ವಾಕ್ಸಮರ ನಡೆಯುತ್ತಿದೆ. "ಸಿದ್ದರಾಮಯ್ಯ ಈ ಹಿಂದೆ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದು ದುರ್ದೈವ" ಎಂದು ಸಿ. ಟಿ. ರವಿ ಹೇಳಿಕೆ ನೀಡಿದ್ದರು.

ಅವರನ್ನು ಕ್ಷಮಿಸಿಬಿಡು ತಂದೆಯೇ; ಸಿದ್ದರಾಮಯ್ಯ ಟ್ವೀಟ್ಅವರನ್ನು ಕ್ಷಮಿಸಿಬಿಡು ತಂದೆಯೇ; ಸಿದ್ದರಾಮಯ್ಯ ಟ್ವೀಟ್

"ನಾನು ಒಳ್ಳೆಯ ವಕೀಲರಾಗಿರುವ ಕಾರಣಕ್ಕಾಗಿಯೇ ಆರೋಪಿಯನ್ನು ಹೆಸರಿಸಿಲ್ಲ. ಪ್ರತಿಕ್ರಿಯಿಸುವ ಮೊದಲು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅರಿವಿರಲಿ, ನೀವು ಆ ಖಾತೆಯ ಸಚಿವರು" ಎಂದು ಸಿದ್ದರಾಮಯ್ಯ ಸಿ. ಟಿ. ರವಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಬೆಂಕಿಯುಗುಳಿದ ರೇಣುಕಾಚಾರ್ಯ ಸಿದ್ದರಾಮಯ್ಯ ವಿರುದ್ಧ ಬೆಂಕಿಯುಗುಳಿದ ರೇಣುಕಾಚಾರ್ಯ

ಸಿದ್ದರಾಮಯ್ಯ ಟ್ವೀಟ್

ಸಿದ್ದರಾಮಯ್ಯ ಟ್ವೀಟ್

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಪ್ಪಾ!" ಎಂದು ಟ್ವೀಟ್ ಮಾಡಿದ್ದರು.

ಸಿ. ಟಿ. ರವಿ ಟ್ವೀಟ್

ಸಿ. ಟಿ. ರವಿ ಟ್ವೀಟ್

ಸಿದ್ದರಾಮಯ್ಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಸಿ. ಟಿ. ರವಿ, "ಮುಖ್ಯಮಂತ್ರಿ ಪದವಿ ಕಳೆದುಕೊಂಡ ಬಳಿಕ ನಿಮ್ಮ ಮಾನಸಿಕ ಸ್ವಾಥ್ಯ ಹಾಳಾಗಿದೆಯೇ?" ಎಂದು ಪ್ರಶ್ನಿಸಿದ್ದರು.

ವಕೀಲರಾಗಲು ನಾಲಾಯಕ್

ವಕೀಲರಾಗಲು ನಾಲಾಯಕ್

"ಕೊಲೆಗೂ ಅಪಘಾತಕ್ಕೂ ವ್ಯತ್ಯಾಸ ತಿಳಿದಿಲ್ಲವೆಂದರೆ ಸಿದ್ದರಾಮಯ್ಯ ವಕೀಲರಾಗಲು ನಾಲಾಯಕ್. ಸಿದ್ದರಾಮಯ್ಯ ಮನಸ್ಥಿತಿ ಇಷ್ಟು ಕೆಳಮಟ್ಟಕ್ಕೆ ಹೋಗಬಹುದೆಂದು ಭಾವಿಸಿರಲಿಲ್ಲ. ನನಗೆ ಮದ್ಯಪಾನದ ಅಭ್ಯಾಸವಿಲ್ಲ. ಇದು ಕ್ಷೇತ್ರದ ಜನರಿಗೂ ಗೊತ್ತು. ಕುಡಿದು ತೂರಾಡುತ್ತಿದ್ದವರು ಯಾರು ಎಂಬುವನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ" ಎಂದು ಸಿ. ಟಿ. ರವಿ ಕಾರವಾರದಲ್ಲಿ ಹೇಳಿದ್ದರು.

ಕನ್ನಡ ಪಾಠ ಮಾಡಿದ ಮಾಜಿ ಸಿಎಂ

ಕನ್ನಡ ಪಾಠ ಮಾಡಿದ ಮಾಜಿ ಸಿಎಂ

"ಕುಡಿದ ಮತ್ತಿನಲ್ಲಿ ಅಪಘಾತ ಮಾಡಿ ಸಾಯಿಸಿದವರ ಬಗ್ಗೆ ಹೇಳಿದರೆ ಸಿ. ಟಿ. ರವಿ ಯಾಕೆ ಹೆಗಲು ಮುಟ್ಟಿನೋಡಿಕೊಳ್ತಿದ್ದಾರೆ ಎಂದು ಅರ್ಥವಾಗಿಲ್ಲ. ನಾನು ಒಳ್ಳೆಯ ವಕೀಲರಾಗಿರುವ ಕಾರಣಕ್ಕಾಗಿಯೇ ಆರೋಪಿಯನ್ನು ಹೆಸರಿಸಿಲ್ಲ. ಪ್ರತಿಕ್ರಿಯಿಸುವ ಮೊದಲು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅರಿವಿರಲಿ, ನೀವು ಆ ಖಾತೆಯ ಸಚಿವರು" ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ.

English summary
Opposition leader of Karnataka Siddaramaiah tweet against minister C.T.Ravi who verbally attack the Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X